Monday, April 4, 2011

"ಲಕ್ಕಿ ರಂಗಣ್ಣ"


ನಾನು ಹಿಂದಿನ ಬ್ಲಾಗಿನಲ್ಲಿ ಬರೆದ ಲೇಖನದ ಹೀರೋ 'ಲಕ್ಕಿ ರಂಗಣ್ಣನವರು' ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೈ ಆದ ಮ್ಯಾಚಿನಲ್ಲಿ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿರುವ ಚಿತ್ರಗಳು. ಕ್ರಿಕೆಟ್ ಬಗ್ಗೆ ಇಂತಹ ಕೋಟ್ಯಾಂತರ ಅಭಿಮಾನಿಗಳ ಉತ್ಕಟ ಪ್ರೀತಿ,ನಾವು ವಿಶ್ವ ಕಪ್ ಗೆಲ್ಲಲಿ ಎಂಬ ಹಾರೈಕೆ,ಅದಕ್ಕೊಸ್ಕರ ತಾವು ಎಂತಹ ಕಷ್ಟ ಪಡಲು ಸಿದ್ಧರಾಗಿದ್ದುದು ,ಗೆದ್ದೇ ಗೆಲ್ಲುತ್ತಾರೆ ಎಂಬ ಅಚಲವಾದ ನಂಬಿಕೆ,ಎಲ್ಲವೂ ಸೇರಿ ಒಂದು ಬೃಹತ್ ಶಕ್ತಿಯಾಗಿ ನಮ್ಮ ಟೀಮಿಗೆ ಬೆನ್ನೆಲುಬಾಗಿ ನಿಂತು ನಮ್ಮ ಟೀಂ ವಿಶ್ವ ಕಪ್ ಗೆದ್ದಿದೆ ಎಂಬುದು ನನ್ನ ಅನಿಸಿಕೆ.ರಂಗಣ್ಣ ನಂತಹ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ,ವಿಶ್ವ ಕಪ್ ಕಿರೀಟ ವನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಟೀಂ ಇಂಡಿಯಾಗೂ ಜೈ ಹೋ!!

17 comments:

  1. ಕೃಷ್ಣಮೂರ್ತಿಯವರೆ...

    ಎಂಥೆಂಥಹ ಅನುಭವಗಳು...!

    ಈ ಕ್ರಿಕೆಟ್ ನನಗೂ ಅಂಥಹ ಫಜೀತಿ ತಂದಿಟ್ಟಿತ್ತು...

    ನಾವು ಕಾಲೇಜಿಗೆ ಹೋಗುವಾಗ ಆಸ್ಟ್ರೇಲಿಯಾದಲ್ಲಿ ಒಂದು ಟೂರ್ನಮೇಂಟ್...
    ನಾವು ಗೆಳೆಯರೆಲ್ಲ ಕಾಮೆಂಟ್ರಿ ಕೇಳುತ್ತಿದ್ದೇವು..

    ಮಧ್ಯದಲ್ಲಿ ನಾನು ಟಾಯ್ಲೆಟ್ಟಿಗೆ ಹೋಗಬೇಕಾಯಿತು..

    ನಾನು ಟಾಯ್ಲೆಟ್ಟಿನ ಒಳಗೆ ಹೋದ ನಂತರ ರವಿಶಾಸ್ತ್ರಿ ಬ್ಯಾಟಿಂಗ್ ಮಾಡ್ತಿದ್ದ...

    ನನ್ನ ಗೆಳೆಯರು
    "ಪುಣ್ಯಾತ್ಮಾ..
    ನೀ ಅಲ್ಲೇ ಇರು..."
    ಅಂತ ಸುಮಾರು ಮುಕ್ಕಾಲು ಗಂಟೆ ಅಲ್ಲೇ ಕೂಡಿ ಹಾಕಿದ್ದರು !!

    ರವಿ ಶಾಸ್ತ್ರಿ ತುಂಬಾ ಸ್ಲೋ ಬ್ಯಾಟಿಂಗು... ಹ್ಹಾ.. ಹ್ಹಾ.. !

    ಹಳೆಯ ನೆನಪು ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸು....

    ReplyDelete
  2. ಪ್ರಕಾಶಣ್ಣ;ನಿಮ್ಮದು ಒಳ್ಳೇ ಫಜೀತಿ ಆಯ್ತಲ್ಲಾ!ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  3. ನಾನು ಟಿವಿ ಮುಂದೆ ಕೂತರೆ ನನ್ನ ಮಗ ಅವರು ೪,೬ ರನ್ ಹೊಡೆಯೋಲ್ಲಾ ನೀನೋ ಆಚೆ ಸ್ವಲ್ಪ ಹೊತ್ತು ಹೋಗಿ ಬಾ ಅಂತಾ ಇದ್ದ ಹಹಹ... ಒಟ್ಟಲ್ಲಿ ಜಯಲಕ್ಷ್ಮಿ ಭಾರತದ ಪರ ಇದ್ದಳು...
    ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  4. ಕೋಟ್ಯಂತರ ಭಾರತೀಯರ ಆಸೆ,ನಂಬಿಕೆಗಳನ್ನು ನಿಜವಾಗಿಸಿದ ನಮ್ಮ ಕ್ರಿಕೆಟ್ ತಂಡ ಗ್ರೇಟ್ ಕಣ್ರೀ...ನಿಮ್ಮ ಅನುಭವಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
    ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  5. ಮನಸು ಮೇಡಂ;ಕೆಲವರು ಒಳಗೆ ಬಂದರೆ ಔಟಾಗುತ್ತಾರೆ ಅಂತ ಒಳ ಬಂದು ಟಿ.ವಿ.ನೋಡೋಕು ಬಿಟ್ಟಿಲ್ಲ.ಪಾಪ.

    ReplyDelete
  6. ನಾಗರಾಜ್ ಭಟ್;ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ತಮಗೂ ಹಬ್ಬದ ಶುಭಾಶಯಗಳು.

    ReplyDelete
  7. ಹ್ಹ ಹ್ಹ ಹ್ಹ ... ....

    ಮೊನ್ನೆ ಮ್ಯಾಚ್ ನೋಡುತ್ತಾ ಇರುವಾಗ ಸಚಿನ್ ಔಟ್ ಆದ ತಕ್ಷಣ ನನ್ wife ಹೇಳಿದಳು.....ಟಿ.ವಿ. off ಮಾಡಿ ಸ್ವಲ್ಪ ಹೊತ್ತು ಸುಮ್ಮನೆ ಇರಿ...ಇಲ್ಲಾ ಅಂದ್ರೆ ಇನ್ನೂ ಬೇಗ ಬೇಗ ವಿಕೆಟ್ಗಳು ಹೋಗ್ತಾವೆ ಅಂತ....

    ReplyDelete
  8. ಅಶೋಕ್;ಎಷ್ಟೊಂದು ರೀತಿಯ ನಂಬಿಕೆಗಳು! ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಡಾಕ್ಟ್ರೇ,

    ಫೈನಲ್ ಪಂದ್ಯದಲ್ಲಿ ಸಚಿನ್ ಔಟ್ ಆಗುವ ಸಮಯದಲ್ಲಿ ನಾನು ಮನೆಯ ಸೈಕಲಿಂಗ್ ಮಾಡುತ್ತಿದ್ದೆ. ತಕ್ಷಣ ಟಿವಿ ಬಂದ್ ಮಾಡಿ ಅರ್ಧಗಂಟೆ ಚೆನ್ನಾಗಿ ಬೆವರಿಳಿಸಿದೆ.. ನಂತರ ನೋಡೋಣವೆಂದು ಮತ್ತರ್ಧಗಂಟೆ ಬಿಟ್ಟು ಟಿವಿ ಹಚ್ಚಿದರೆ ನಮ್ಮ ದೋನಿ ಮತ್ತು ಗಂಭೀರ್ ಚೆನ್ನಾಗಿ ಆಡುತ್ತಿದ್ದರು. ಮತ್ತೆ ಕುತೂಹಲ ಮತ್ತು ಆಸಕ್ತಿ ಹೆಚ್ಚಾಯಿತು..ಹೀಗೆ...ಪ್ರತಿಯೊಬ್ಬರಿಗೂ ಒಂದೊಂದು..ಅಲ್ವಾ ಸರ್..

    ReplyDelete
  10. ಶಿವು;ನೀವು ನಿಮ್ಮ ಬೆವರು ಇಳಿಸಿದಿರಿ!ನಮ್ಮವರು ಶ್ರೀಲಂಕಾ ಟೀಮಿನ ಬೆವರಿಳಿಸಿದರು!ನಿಮ್ಮ ಅನುಭವ ಹಂಚಿ ಕೊಂಡಿದ್ದಕ್ಕ ಧನ್ಯವಾದಗಳು.ಯುಗಾದಿ ಹಬ್ಬದ ಶುಭಾಶಯಗಳು.ಬರುತ್ತಿರಿ.ನಮಸ್ಕಾರ.

    ReplyDelete
  11. Cricket majane haage nodi,
    nodalla antivi, matte ade hucchu
    Jai India

    ReplyDelete
  12. ಗುರು ಸರ್;ಈ ಕ್ರಿಕೆಟ್ ಹುಚ್ಚು ಇಡೀ ದೇಶವನ್ನೇ ಹೇಗೆ ಆವರಿಸಿತಲ್ಲವೇ?!!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  13. ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು.

    ReplyDelete
  14. ಮನಮುಕ್ತಾ ಮೇಡಂ;ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  15. Jai ho! Congratulations to Team India

    ReplyDelete

Note: Only a member of this blog may post a comment.