Saturday, August 4, 2012

"ಎಲೇಲೆ ರಸ್ತೇ!!! ಏನೀ ಅವ್ಯವಸ್ತೆ!!!"

ನೀವು ನಂಬಲೇ ಬೇಕು!!
ಇದು ಹೆದ್ದಾರಿಯ ಒಂದು ರಸ್ತೆ !!
ಲಾರಿಯೊಂದು ಹಳ್ಳದಲ್ಲಿಯೇ
ಸಿಲುಕಿ ಹೊರಬರಲಾಗದೇ
ಅಲ್ಲೇ ಪಕ್ಕಕ್ಕೆಒರಗಿದೆ ಸುಸ್ತಾಗಿ!!
ದ್ವಿಚಕ್ರಿಗಳಿಗೆ ಈ ಹಳ್ಳಗಳ
ದಾಟುವುದು ಹೇಗೆಂಬ ಚಿಂತೆ!!
ಈ ಕೆಟ್ಟ ರಸ್ತೆಯೂ ಚಿರಾಯು !
ಪಾಪಿಯೊಬ್ಬನ ಹಾಗೆ !
ಒಂದು ಕಡೆಯಿಂದ
ಮರಮ್ಮತ್ತು ನಡೆಯುತ್ತಿದ್ದಂತೆ
ಮತ್ತೊಂದು ಕಡೆಯಿಂದ
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ
ಜಲ್ಲಿ ಕಲ್ಲಿನ ಹಿಂದೆ
ಕೋಟಿಗಟ್ಟಲೆ ಹಣದ
ಲೂಟಿಯ ಕಥೆ! ಟಾರಿನಂತೆಯೇ
ಕೊತ ಕೊತನೆ ಕುದಿವವರ
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ ! ಇದ್ದ ಬದ್ದ
ಇಂಚಿಂಚು ಜಾಗವನ್ನೂ
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ
ಕೆರೆ,ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು
ಧರಣಿ ಕೂತಿವೆಯೇ ಹೇಗೆ !?
ಇದು ತೀರದ, ಮುಗಿಯದ
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ
ಬವಣೆಗಳ ಹಾಗೆ !!!
ಈ ರಸ್ತೆಗಳು ನಮ್ಮ ದೇಶದ
ಹಣೆ ಬರಹವೇ ಹೇಗೆ?!!!
(ಚಿತ್ರ ಕೃಪೆ;UMESH VASHISHT .ಬಜ್ಜಿಗರು.)

9 comments:

  1. ನಮ್ಮ ಪಾಪಿಷ್ಠ ಕೆಟ್ಟ ರಸ್ತೆಗಳ ಬಗ್ಗೆ ಒಳ್ಳೆಯ ಕವಿತೆ ಸಾರ್.

    ಬೆಂಗಳೂರಿನ ಹಲವು ರಸ್ತೆಗಳ ಕಥೆಯೂ ಇದೇ. ಮೆಟ್ರೋ, ಕೆಳ ರಸ್ತೆ. ಮೇಲ್ ರಸ್ತೆ ಮತ್ತು ಕಾರಣವೇ ಇಲ್ಲದೆ ನಮ್ಮ ರಸ್ತೆಗಳು ಎಕ್ಕುಟ್ಟಿ ಹೋಗಿವೆ.

    ರಸ್ತೆ ಕಥೆ ಹೇಳುತ್ತ ರಾಜ ಕ ಲುವೆಗಳ ಒತ್ತುವರಿಯನ್ನೂ ವ್ಯಥೆಬರಿತವಾಗಿ ಹೇಳಿದ ಈ ಕವಿತೆ ಇಷ್ಟವಾಯಿತು.

    ಉಮೇಶ್ ವಶಿಷ್ಠರ ಚಿತ್ರವಂತೂ ಘೋರವಾಗಿದೆ.

    ReplyDelete
  2. ಪ್ರಕೃತಿ ಹೇಳುತ್ತೆ..ನೀವು ನಮ್ಮಣ್ಣ ಸವಾರಿ ಮಾಡಿ..
    ನಿಮಗೆ ನಾವು ಜಗದ ಹೊರಗೆ ಸವಾರಿ ಮಾಡಿಸುತ್ತೇವೆ..
    ಚಂದ ಸಾಲುಗಳು ಡಾಕ್ಟ್ರೆ

    ReplyDelete
  3. ಈ ಚಿತ್ರವನ್ನು ನೋಡಿ ಭಯಂಕರ ಆಶ್ಚರ್ಯವಾಯಿತು. ಇಂತಹ ರಸ್ತೆಯೂ ಇರಬಹುದೆ?
    ವಾಸ್ತವತೆಯ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು.

    ReplyDelete
  4. politician says ,holes in raods are new types of speed breaker.

    ReplyDelete
  5. ಹೊಲಸು ರಸ್ತೆಯ ಪಾಡನ್ನು ಬಿಂಬಿಸಿದ್ದೀರ.. ಮಹಾನಗರಪಾಲಿಕೆ ಮಲಗಿದ್ದರೆ ಎದ್ದೇಳಲಿ :)

    ReplyDelete
  6. ಚಿತ್ರ ನೋಡಿ ಬಹಳ ಆಶ್ಚರ್ಯವಾಯಿತು....
    ತೀರಾ ಇಷ್ಟೊಂದು ಕೆಟ್ಟಿರೋ ರಸ್ತೆಯ ಬಗ್ಗೆ ವಿಷಾದವಿದೆ....

    ReplyDelete
  7. Namaskara daktre..

    handanda salugalu..

    ಸೈಟಿಸಿ ,ಅಪಾರ್ಟ್ ಮೆಂಟಿಸಿ- pada prayoga ista aytu..

    ಹೇಗೆ ಮಲಗಿದೆ ನೋಡಿ.. ಮಳ್ಳಿಯ ಹಾಗೆ.. comparision tumba ista aytu..

    ReplyDelete
  8. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ಪ್ರೋತ್ಸಾಹಿಸುತ್ತಿರಿ.ನಮಸ್ಕಾರ.

    ReplyDelete

Note: Only a member of this blog may post a comment.