Saturday, February 6, 2010

ಚ್ಯುಯಿಂಗ್ ಗಮ್

ನಮ್ಮೆಲರ ಬದುಕು--------, ಚ್ಯುಯಿಂಗ್ ಗಮ್
ಇದ್ದ ಹಾಗೆ!
ಮೊದಮೊದಲು ಸಿಹಿಯಾಗಿದ್ದದ್ದು ,
ಜಗಿಯುತ್ತಾ-----ಜಗಿಯುತ್ತಾ,
ಕಡೆಗೆ--,ಬರೀ, ಸಪ್ಪೆ!
ಸಿಹಿಯಾದ ಹಣ್ಣು ಎಂದುಕೊಂಡದ್ದು,
ಅಯ್ಯೋ----ಬರೀ ಸಿಪ್ಪೆ!
ಈ ಬದುಕೆಂಬ ಚ್ಯುಯಿಂಗ್ ಗಮನ್ನು,
ಜಗಿದೂ, ಜಗಿದೂ,
ಜಗಿಯುವುದೇ ತಲೆ ನೋವಾದರೂ,
ಅದೇ, ಹಿತವಾಗಿ,
ಸಂಬಂಧಗಳು ರಾಡಿಯಾದರೂ,
ಅದೇ, ರೂಢಿಯಾಗಿ,
ನುಂಗಲೂ ಆಗದೆ,
ಉಗಿಯಲೂ ಆಗದೆ,
ಜಗಿಯುತ್ತಲೇ ಇರಬೇಕೆನಿಸುವ,
ಈ ನಮ್ಮೆಲರ ಬದುಕು,
ನಮ್ಮೆಲ್ಲರನ್ನೂ, ಎಡೆಬಿಡದೆ,
'ಚ್ಯೂ', ಮಾಡುವ----'ಗಮ್ಮು'.
ಕೊನೆ ಕೊನೆಗೆ,ಈ----ಬದುಕು
ಜಗಿದೂ,ಜಗಿದೂ ಬೇಸತ್ತು,
ಕೈಯಲ್ಲಿ ಹಿಡಿದು
ಬೀಸಿ ದೂರ ಒಗೆಯಬೇಕೆನಿಸಿದಾಗ, ------
ಅಂಟಂಟು.........,
ಅಯ್ಯೋ-----ಈ ಬದುಕಿನ ನಂಟು!

published in Tushara Feb 2010

6 comments:

  1. ಬದುಕನ್ನು ಚುಇಂಗ್-ಗಮ್' ಹೋಲಿಸಿದ್ದು ಅರ್ಥಗರ್ಭಿತ. ಕವನ ತುಂಬಾ ಹಿಡಿಸಿತು. ನಿಮ್ಮ ಇನ್ನಷ್ಟು ಕವಿತೆಗಳು ಪತ್ರಿಕೆಗಳಲ್ಲಿ ಬರಲಿ.

    ReplyDelete
  2. bhatjee thanks for yourkind words.sambhandagalu raadiyaadaroo ade roodhiyagi ennuva saalu type maaduvaaga bittu hogide.kelavomme barabarutta baduku ruchi kaledukonda chewing gum nante aadaroo adannu jagiyuttale irabekaada anivaaryate iruttadeyallave?

    ReplyDelete
  3. Chweing gum and life
    :-)
    ತುಂಬ ಇಷ್ಟ ಆಯ್ತು ಈ ಕವನ.
    Also liked Chitrasante and B.T.B kavana

    ಮಾಲತಿ ಎಸ್.
    a chingum lover, art lover and badane lover too, LOL

    ReplyDelete
  4. ಚ್ಯೂಯಿಂಗ್ ಗಮ್ಮಿನ ನೆಪದಲ್ಲಿ ಬದುಕಿನ ಸಮರ್ಥ ವಿಶ್ಲೇಷಣೆ.

    ಕವನ ತಮಾಷೆಯಾಗಿ, ಮಜಬೂತಾಗಿದೆ.

    ReplyDelete
  5. ಬಿಟ್ಟರೂ ಬಿಡದೀ ಮಾಯೆ..ಮಾಯೆಯನ್ನು ಗಮ್ ಗೆ ಹೋಲಿಸಿದ್ದು ಸೂಕ್ತವಾಗಿದೆ. ತಮಾಷೆಯ ಕವನದ ಮೂಲಕ ಗ೦ಭೀರ ವಿಚಾರವನ್ನು ಹರಿಯಬಿಟ್ಟ ಡಾ.ಗೆ ಅಭಿನ೦ದನೆಗಳು.

    ಅನ೦ತ್

    ReplyDelete

Note: Only a member of this blog may post a comment.