Tuesday, February 23, 2010

ತಿರುಪತಿ ----ಬೆಟ್ಟ

ಸಾಲು ಸಾಲು ---------------,
ಮುಗಿಲಿಗೇ ಏಣಿ ಹಾಕಿದ ಹಾಗೆ ,
ಮೂರು  ಸಾವಿರದ ಐದು ನೂರ ಐವತ್ತು ,
ತಿರುಪತಿಯ ಬೆಟ್ಟದ ಮೆಟ್ಟಿಲು !
ಕೋಟಿ ಕೋಟಿ ಹರಕೆಗಳ ತೊಟ್ಟಿಲು !
ಹತ್ತಿದವರಿಗೆ ಗೊತ್ತು -------,
ಹತ್ತುವುದರ ಕಷ್ಟ -----------!
ತೀರದ ಮುಗಿಯದ ಕಷ್ಟಗಳಂತೆ ,
ಒಂದಾದ ಮೇಲೊಂದರಂತೆ ---,
ಮೆಟ್ಟಿಲುಗಳ -----------ಸಂತೆ !
ನಾವು ಮೆಟ್ಟಿಲು ಏರಿದಂತೆ ---------,
ಅವೂ ಏರುತ್ತವೆ ಮೇಲೆ ಮೇಲೆ -----!
ಸುಖದ ಮೂಟೆ ಹೊತ್ತ ಕತ್ತೆ ಶರೀರಕ್ಕೆ ,
 ಕ್ಷಣ ಕ್ಷಣಕ್ಕೂ ಉಬ್ಬಸ, ಬೆವರು !
ಕಷ್ಟವೇನು ಎಂಬುದ ಅರಿಯದ ಶರೀರಕ್ಕೆ ,
ಕಷ್ಟವೋ ಕಷ್ಹ್ತ ----------------!
ನಮ್ಮ ದೇಹದ ಪೆಟ್ರೋಲು ಬೇಗನೆ ತೀರಿ,
ಮುಂದೆ ಮೆಟ್ಟಿಲು ಹತ್ತಿಸುವುದು -------,
ಗೋವಿಂದ ನಾಮ ಸ್ಮರಣೆಯ ಪೆಟ್ರೋಲು !
ಭವ ಸಾಗರವ ದಾಟಿಸುವ ---------,
ಭಗವನ್ನಾಮ ಸ್ಮರಣೆಯ-----,
---------ಹರಿಗೋಲು !!!

3 comments:

  1. ಮೆಟ್ಟಿಲು ಏರುವ ಕಷ್ಟ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ. ಪರಮಾತ್ಮನ ಅಂಶ ನಮ್ಮೊಳಗಿದ್ದರೂ, ಅವನ ದರ್ಶನಕ್ಕಾಗಿಯೇ ಹರಕೆ ಹೊತ್ತು ಮೆಟ್ಟಿಲು ಹತ್ತುತ್ತೇವೆ. ನಾವು ಒಂದೊಂದೇ ಮೆಟ್ಟಿಲು ಏರಿದಂತೆ ಅವೂ ಏರುತ್ತವೆ ಮೇಲೆ ಮೇಲೆ! ಭಗವಂತ ಹೇಗೆ ನಮ್ಮೊಳಗೊ ಹಾಗೆ ಮೆಟ್ಟಿಲುಗಳೂ ನಮ್ಮೊಳಗೇ ಅಂತ ಅಂದುಕೊಂಡರೂ ದೇವರ ದರ್ಶನಕ್ಕೆ ಮೆಟ್ಟಿಲು ಹತ್ತುವದು ನಡೆದೇ ಇರುತ್ತದೆ.

    ReplyDelete
  2. thanks for your kind comments and a wonderful insight.

    ReplyDelete
  3. sir
    thirupathi mettilu hattidira athava haage summane kavana na...

    thirupathi to thirumala
    mettilu hattoke beku naama smareneya petrola
    hattida melaste gottagotte
    nara naadigala "hari" gaala

    ReplyDelete

Note: Only a member of this blog may post a comment.