Wednesday, March 10, 2010

ಕವಿತೆ -------ಲಾಭ,ನಷ್ಟ----ಒಂದು ಲಹರಿ

ಭಾವನೆಗಳಿಗೆ ಮಾತಿನ ಕುಂಚದಲ್ಲಿ ಬಣ್ಣ ಬಳಿದು ,ಕಾಗದದ ಮೇಲೆ ಅಕ್ಷರಗಳಲ್ಲಿ ಮೂಡಿಸುವುದಿದೆಯಲ್ಲ ,ಅದೊಂದು ಅದ್ಭುತ ಅನುಭಾವವೀಯುವ ಶಬ್ದ ಚಿತ್ರ!   ಕವಿತೆಗಳಲ್ಲಿ ಅವಿತಿರುವ ಶಬ್ಧಗಳನ್ನು ಹೊರ ತೆಗೆದು ,ಒರೆಗೆ ಹಚ್ಚಿ ನೋಡಿದಾಗ ಹೊಸ ಅರ್ಥವೊಂದು ಹೊಳೆದು ಖುಷಿ ಕೊಡುತ್ತದೆ .ಬರೆದವರಿಗೋ ಬರೆದ ಸಂತೋಷ !ಓದುವ ನೂರಾರು ಮಂದಿಗೆ ಅವರವರ ಭಾವಕ್ಕೆ ತಕ್ಕಂತೆ ನೂರಾರು ಅರ್ಥಗಳ ಹೊಳಹು !ಒಟ್ಟಿನಲ್ಲಿ ಇದೂ ಒಂದು ಸೌಂದರ್ಯೋಪಾಸನೆ. ಪ್ರತಿಯೊಂದರಲ್ಲಿಯೂ  ಬೆಡಗು ಕಾಣುವ ಮಗುವಿನ ಬೆರಗುಗಣ್ಣು  ಇಲ್ಲದಿದ್ದರೆ ಬದುಕು ಸಪ್ಪೆ ಎನಿಸುತ್ತದೆ. ಯಾಂತ್ರಿಕತೆ ಕಾಡುತ್ತದೆ.ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಬದುಕು ಬೋರ್ ಎನಿಸುತ್ತದೆ .ಎಲ್ಲರೂ ಒಂದಲ್ಲ ಒಂದು ಸಲ ಇದನ್ನು ಅನುಭವಿಸಿದವರೇ .ಕವಿತೆ ಬರೆಯುವುದರಿಂದ ಅಥವಾ ಓದುವುದರಿಂದ ಏನು ಲಾಭ ?ಅದರಿಂದೇನು ಹೊಟ್ಟೆ ತುಂಬುತ್ತದೆಯೇ ?ಎಂದು ಕೇಳುವವರಿದ್ದಾರೆ .ಅವರಿಗೆ ಹೊಟ್ಟೆಯೊಂದರ ಚಿಂತೆ ಬಿಟ್ಟು ಬೇರಾವಚಿಂತೆಯಿಲ್ಲ.
ಆದರೆ ನನ್ನಂತಹ ನೂರಾರು ಮಂದಿಯ ಸ್ಥಿತಿ ಹಾಗಿಲ್ಲವಲ್ಲ !ಹೊಟ್ಟೆ ತುಂಬಿಸಿ ಕೊಂಡರೆ ಆಯಿತೆ ?ಮನಸ್ಸಿಗೆ ಆಹಾರ ಬೇಡವೇ?ಸಂಗೀತ ,ಸಾಹಿತ್ಯ ,ಚಿತ್ರಕಲೆ ಇವೆಲ್ಲಾ ಮನಸ್ಸಿಗೆ ಮುದ ನೀಡುವಂತವು .ಮಾನಸಿಕ ಸ್ವಾಸ್ತ್ಯ ಕಾಪಾಡು ವಂತವು.ನಮ್ಮ ಇಂದಿನ ಒತ್ತಡ ತುಂಬಿದ ಜೀವನಕ್ಕೆ ಇವೆ ಮದ್ದು .ಬದುಕಿನ ಏರಿಳಿತಗಳ ,ಹೊಂಡಗಳು ತುಂಬಿದ ಹಾದಿಯಲ್ಲಿ ,ಜೀವನದ ಪಯಣವನ್ನು ಸುಗಮವಾಗಿಸುವ shock absorbers ಇದ್ದ ಹಾಗೆ.ಇದರಲ್ಲಿ ವ್ಯಾವಹಾರಿಕ ಲಾಭ ಅಥವಾ ನಷ್ಟದ ಪ್ರಶ್ನೆಯೇ ಬರುವುದಿಲ್ಲ .ಸದಾ ಸ್ಪಂದಿಸುತ್ತಿರುವ ಮುದಗೊಂಡ ಚೈತನ್ಯ ತುಂಬಿದ ಮನಸ್ಸೇ ಇದರ ಲಾಭ.! 

8 comments:

  1. ಖಂಡಿತ ಸತ್ಯ ಸರ್. ಸಾಹಿತ್ಯ, ಕಲೆ, ಕಾವ್ಯದಿಂದ ಹೊಟ್ಟೆ ತುಂಬುವುದಿಲ್ಲ ನಿಜ. ಆದರೆ ಬರೀ ವ್ಯಾವಹಾರಿಕ ಚಟುವಟಿಕೆಗಳು ಮಾತ್ರ ಮಾಡುತ್ತ ಇದ್ದರೆ ಅದು ಗೊಬ್ಬರ ಇಲ್ಲದೆ ಗಿಡ ಬೆಳೆಸಿದಂತೆ. ಇವು ಕೊಡುವ ಸಂತೋಷ, ನೆಮ್ಮದಿ ಎಷ್ಟು ಹಣ ಇದ್ದರೂ ಕೊಡುವುದಿಲ್ಲ. ನಿಮ್ಮ ಅನಿಸಿಕೆ ನನ್ನ ಅನಿಸಿಕೆ ಕೂಡ

    ReplyDelete
  2. ವಾಸ್ತವವನ್ನೇ ಹೇಳಿದ್ದೀರಿ ಸರ್ ನೀವು. ಅಂತರಾಳದ ಮಾತುಗಳನ್ನು ಹೇಳಲು ಸಾಹಿತ್ಯ ಚಟುವಟಿಕೆ ಉತ್ತಮ ಮಾರ್ಗ. ಧನ್ಯವಾದ

    ReplyDelete
  3. ಧನ್ಯವಾದ ದೀಪಸ್ಮಿತ ಅವರೇ,ಧನ್ಯವಾದಶಂಭುಲಿಂಗ ಅವರೇ .ಸಾಹಿತ್ಯ ,ಸಂಗೀತ ಮತ್ತಿತರ ಲಲಿತ ಕಲೆಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಅದನ್ನು ಸಮೃದ್ಧ ಗೊಳಿಸಿವೆ.ಅವು ಇಲ್ಲದ ಬದುಕನ್ನು ಊಹಿಸಿ ಕೊಳ್ಳುವುದೂ ಕಷ್ಟ .

    ReplyDelete
  4. Dear DTK,
    Sangeeta, saahitya... Baravanige ellavoo ondu tarahada huchchu! ondu reetiyalli chata! chataroodhiyaadare chadapadisuttevalla haageye bareyalaarade....haadalaarade....odalaarade iruva chadapadikeyuntalla adu vivaranege nilukaddu. eereetiya chatagalinda manasu mudagolluttade,higguttade....vikaasavaaguttade... mattinnenubeku badukina hudukaata munduvaresalu? tumba chennaagi abhivyaktisiddeeri. nimma jatege nannadoo sahamatavide.

    ReplyDelete
  5. ಚೆನ್ನಾಗಿದೆ ಸಾರ್..ನಿಮ್ಮ ಹತ್ತಿರ ಕ್ಷಣ ಹೊತ್ತು ಮಾತಾಡಿ ಮನಸ್ಸು ಪ್ರಫುಲ್ಲಗೊಂಡ ಹಾಗೆ.

    ReplyDelete
  6. channaagide...
    manakke svalpa haayenisalu kathe, kavite, saahitya beku.....nija.

    ReplyDelete
  7. ತುಂಬಾ ಥ್ಯಾಂಕ್ಸ್ ಭಟ್ಟರೇ .ನಿಮ್ಮ ಕಾಮೆಂಟ್ಸ್ ಒಳ್ಳೆಯ ಟಾನಿಕ್ ಇದ್ದ ಹಾಗೆ .ನಿಮಗೂ ಧನ್ಯವಾದಗಳು ಚುಕ್ಕಿ ಚಿತ್ತಾರ ಅವರೇ .

    ReplyDelete
  8. very fine sir thrugh your blogspot i came to know that hs ashok kumar is also a poet

    ReplyDelete

Note: Only a member of this blog may post a comment.