ಹೇಗೆ ಬೆಳೆಯಿತೋ ಕಾಣೆ !
ಗೊತ್ತೇ ಆಗದ ಹಾಗೆ,
ಕೆಲ ಸಂಬಂಧಗಳ ಸುತ್ತ ,
ಕಣ್ಣಿಗೆ ಕಾಣದ ----------,
ಶೀತಲ ಸಮರಗಳ ಹುತ್ತ !
ಅದರೊಳಗೆ ಹೇಗೆ ಸೇರಿಕೊಂಡವೋ
ಹಾಲಾಹಲ ತುಂಬಿದ ಹಾವುಗಳು!
ಆ ಹಾವುಗಳ ಹೊರಬರಿಸಿ ,
ಪ್ರೀತಿ ಪುಂಗಿಯ ನಾದಕ್ಕೆ
ಮೈ ಮರೆಸಿ -----,
ಸ್ನೇಹದ ಬುಟ್ಟಿಯಲಿ,
ಹಾಕಿಕೊಂಡು ಹೋಗುವ ,
ಗಾರುಡಿಗನಿಗಾಗಿ-------,
ನನ್ನ -----ನಿರಂತರ ,
ಹುಡುಕಾಟ.!
nice...:)
ReplyDeleteTHANK YOU FOR YOUR KIND COMMENTS.
ReplyDeleteಅಂಥ ಗಾರುಡಿಗ ಸಿಕ್ಕಾಗ ನನಗೂ ಹೇಳಿ..ಹುಡುಕುವ ಬಳ್ಳಿ ಕಾಲಿಗೇ ತೊಡರಿದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವೇ.
ReplyDelete:):)..ತುಂಬಾ ಚೆನ್ನಾಗಿದೆ ಸರ್ ಕವನ.
ReplyDeleteತುಂಬಾ ಇಷ್ಟವಾಯಿತು ಈ ಕವನ. ಅಂತಹ ಗಾರುಡಿಗನ ಅವಶ್ಯಕತೆ ಈ ಜಗತ್ತಿಗೇ ಇದೆ ಅಲ್ಲವೇ? :)
ReplyDeletesir really good:)
ReplyDeleteನಮಸ್ಕಾರ ಭಟ್ಟರೇ.ನನಗೆ ತಿಳಿದ ಹಾಗೆ ನಿಮಗೆ ಅಂತಹ ಗಾರುಡಿಗನ ಅವಶ್ಯಕತೆ ಇಲ್ಲ.ನಿಮ್ಮ ಒಳಗೇ ಆ ಗಾರುಡಿಗನಿದ್ದಾನೆ.ಸುಬ್ರಮಣ್ಯ ಅವರೇ ಧನ್ಯವಾದಗಳು.ತೇಜಸ್ವಿನಿಯವರೇ ಮತ್ತು ಗೌತಮ್ ಹೆಗಡೆ ಯವರೇ ನಿಮ್ಮಿಬ್ಬರಿಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮಗೆಲ್ಲಾ ಕವಿತೆ ಇಷ್ಟವಾದದ್ದುಸಂತೋಷ.ಅದರಲ್ಲೇ ಕವಿತೆಯ ಸಾರ್ಥಕತೆ .
ReplyDeleteಸರ್
ReplyDeleteತುಂಬಾ ಚೆಂದದ ಕವನ
ಮೊದಲ ಬಾರಿಗೆ ಬಂದೆ ನಿಮ್ಮ ಬ್ಲಾಗಿಗೆ
ಕವನ ಓದಿ ಬಹಳ ಇಷ್ಟವಾಯಿತು
ಸಾಗದಾಚೆಯ ಇಂಚರ ಅವರೇ ತಮಗೆ ನನ್ನ ಬ್ಲಾಗಿಗೆ ಸ್ವಾಗತ.ಕವನ ಇಷ್ಟ ವಾದದ್ದು ಸಂತೋಷ .ಧನ್ಯವಾದಗಳು.
ReplyDeleteಹಾಲಾಹಲ ತುಂಬಿದ ಹಾವುಗಳನ್ನು ಆಡಿಸಲು ಗಾರುಡಿಗ ಬಂದೇ ಬರುತ್ತಾನೆ ಬಿಡಿ!
ReplyDeleteಸುಂದರ ಕವನ,
ನಮಸ್ಕಾರ ಪ್ರವೀಣ್ .ಅಂತಹ ಗಾರುಡಿಗ ಎಲ್ಲರಿಗೂ ಸಿಗಲಿ,ಎಲ್ಲಾ ಸಂಬಧಗಳು ಸ್ನೇಹಪೂರ್ಣವೂ,ಅರ್ಥ ಪೂರ್ಣವೂ ,ಆಗಲಿ ಎನ್ನುವುದೇ ಕವನದ ಆಶಯ.
ReplyDelete