Tuesday, March 23, 2010

ನಿರಂತರ ----ಹುಡುಕಾಟ

ಹೇಗೆ ಬೆಳೆಯಿತೋ ಕಾಣೆ !
ಗೊತ್ತೇ ಆಗದ ಹಾಗೆ,
ಕೆಲ ಸಂಬಂಧಗಳ ಸುತ್ತ ,
ಕಣ್ಣಿಗೆ ಕಾಣದ ----------,
ಶೀತಲ ಸಮರಗಳ ಹುತ್ತ !            
ಅದರೊಳಗೆ ಹೇಗೆ ಸೇರಿಕೊಂಡವೋ
ಹಾಲಾಹಲ ತುಂಬಿದ ಹಾವುಗಳು!                            
ಆ ಹಾವುಗಳ ಹೊರಬರಿಸಿ ,
ಪ್ರೀತಿ ಪುಂಗಿಯ ನಾದಕ್ಕೆ 
ಮೈ ಮರೆಸಿ -----,
ಸ್ನೇಹದ  ಬುಟ್ಟಿಯಲಿ,
ಹಾಕಿಕೊಂಡು  ಹೋಗುವ ,
ಗಾರುಡಿಗನಿಗಾಗಿ-------,
ನನ್ನ -----ನಿರಂತರ ,
ಹುಡುಕಾಟ.!

11 comments:

  1. ಅಂಥ ಗಾರುಡಿಗ ಸಿಕ್ಕಾಗ ನನಗೂ ಹೇಳಿ..ಹುಡುಕುವ ಬಳ್ಳಿ ಕಾಲಿಗೇ ತೊಡರಿದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವೇ.

    ReplyDelete
  2. :):)..ತುಂಬಾ ಚೆನ್ನಾಗಿದೆ ಸರ್ ಕವನ.

    ReplyDelete
  3. ತುಂಬಾ ಇಷ್ಟವಾಯಿತು ಈ ಕವನ. ಅಂತಹ ಗಾರುಡಿಗನ ಅವಶ್ಯಕತೆ ಈ ಜಗತ್ತಿಗೇ ಇದೆ ಅಲ್ಲವೇ? :)

    ReplyDelete
  4. ನಮಸ್ಕಾರ ಭಟ್ಟರೇ.ನನಗೆ ತಿಳಿದ ಹಾಗೆ ನಿಮಗೆ ಅಂತಹ ಗಾರುಡಿಗನ ಅವಶ್ಯಕತೆ ಇಲ್ಲ.ನಿಮ್ಮ ಒಳಗೇ ಆ ಗಾರುಡಿಗನಿದ್ದಾನೆ.ಸುಬ್ರಮಣ್ಯ ಅವರೇ ಧನ್ಯವಾದಗಳು.ತೇಜಸ್ವಿನಿಯವರೇ ಮತ್ತು ಗೌತಮ್ ಹೆಗಡೆ ಯವರೇ ನಿಮ್ಮಿಬ್ಬರಿಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮಗೆಲ್ಲಾ ಕವಿತೆ ಇಷ್ಟವಾದದ್ದುಸಂತೋಷ.ಅದರಲ್ಲೇ ಕವಿತೆಯ ಸಾರ್ಥಕತೆ .

    ReplyDelete
  5. ಸರ್
    ತುಂಬಾ ಚೆಂದದ ಕವನ
    ಮೊದಲ ಬಾರಿಗೆ ಬಂದೆ ನಿಮ್ಮ ಬ್ಲಾಗಿಗೆ
    ಕವನ ಓದಿ ಬಹಳ ಇಷ್ಟವಾಯಿತು

    ReplyDelete
  6. ಸಾಗದಾಚೆಯ ಇಂಚರ ಅವರೇ ತಮಗೆ ನನ್ನ ಬ್ಲಾಗಿಗೆ ಸ್ವಾಗತ.ಕವನ ಇಷ್ಟ ವಾದದ್ದು ಸಂತೋಷ .ಧನ್ಯವಾದಗಳು.

    ReplyDelete
  7. ಹಾಲಾಹಲ ತುಂಬಿದ ಹಾವುಗಳನ್ನು ಆಡಿಸಲು ಗಾರುಡಿಗ ಬಂದೇ ಬರುತ್ತಾನೆ ಬಿಡಿ!
    ಸುಂದರ ಕವನ,

    ReplyDelete
  8. ನಮಸ್ಕಾರ ಪ್ರವೀಣ್ .ಅಂತಹ ಗಾರುಡಿಗ ಎಲ್ಲರಿಗೂ ಸಿಗಲಿ,ಎಲ್ಲಾ ಸಂಬಧಗಳು ಸ್ನೇಹಪೂರ್ಣವೂ,ಅರ್ಥ ಪೂರ್ಣವೂ ,ಆಗಲಿ ಎನ್ನುವುದೇ ಕವನದ ಆಶಯ.

    ReplyDelete

Note: Only a member of this blog may post a comment.