ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!
ವಾಹ್..!. ತುಂಬ ಚೆನ್ನಾಗಿದೆ.
ReplyDeletenice poem.
ReplyDeletethakyou Subramaya and manamuktaa for your kind comments.
ReplyDeleteತುಂಬಾ ಸುಂದರ ಕಲ್ಪನೆ. ಇಷ್ಟವಾಯಿತು.
ReplyDeletethank you Tejjasvini madame.thanks a lot.
ReplyDeleteಸರ್,
ReplyDeleteಎಂಥಹ ಸುಂದರ ಕಲ್ಪನೆ
ನಿಮ್ಮಲ್ಲಿನ ಕನಸುಗಾರ, ಬಹಳ ಸೊಗಸುಗಾರನೂ ಹೌದು
ಒಂದು ಅದ್ಭುತ ಕಾವ್ಯ ಕಲ್ಪನೆ
ಧನ್ಯ ವಾದಗಳು ದಾ.ಹೆಗಡೆಯವರೇ.ತಮ್ಮೆಲ್ಲರ ಪ್ರೀತಿ ಪೂರ್ವಕ ಪ್ರೋತ್ಸಾಹವೇ ನನ್ನ ಕಾವ್ಯಕ್ಕೆ ಸ್ಫೂರ್ತಿ .
ReplyDelete'ಕಿವಿ ಮೂಗು ಗಂಟಲು' ಬಿಟ್ಟು ' ಕೊಳಲಿ ' ಗೆ ಕೈ ಹಾಕಿದಿರಲ್ಲ ರಸವತ್ತಾಗಿ ಮಹಾನುಭಾವರೇ, ಚೆನ್ನಾಗಿದೆ ನಿಮ್ಮ ಕವನ, ನಿಮ್ಮ ಭಾವನೆ, ನೀವು ಹಲವು ಮುಖ ಹೊತ್ತ ವೈದ್ಯರೇ ಸರಿ !
ReplyDeleteಕೊಳಲಿನ ದನಿ ನಿಮಗೆ ಇಷ್ಟವಾದದ್ದು ಸಂತೋಷ.ಬ್ಲಾಗಿಗೆ ಬರುತ್ತಿರಿ .ಆತ್ಮೀಯರು ಮನೆಗೆ ಬಂದಷ್ಟು ಸಂತೋಷವಾಗುತ್ತದೆ ಮಾರಾಯ್ರೇ !
ReplyDeleteಒಂದು ಹಕ್ಕಿ ಮಕರಂದ ಹೀರಿ-ಹಾರುವ ಸಾಮಾನ್ಯ ಕ್ರಿಯೆಯಲ್ಲಿ ತನ್ನರಸಿಯನು ಅರಸಿ ಪುರ್ರನೆ ಹಾರಿದ ಪ್ರಣಯರಾಜನನ್ನು ಕಂಡ ರಸಿಕರು ನೀವು!
ReplyDeleteಧನ್ಯವಾದಗಳು ಭಟ್ಟರೇ .ನಿಮ್ಮಂತಹವರ ನಿರಂತರ ಪ್ರೋತ್ಸಾಹದಿಂದ ನನ್ನಂತಹವನೂ ಕವಿ ?ಯಾಗಬಹುದು .
ReplyDeletehakkiya aaraadhaneyannu
ReplyDeletepakshi sahaja bhavaneyanna
chennagi capture madidiri.
good one
thankyou Ashok .Thanks for your kind comments.please keep visiting the blog.
ReplyDeleteವಿನೂತನ ಕಲ್ಪನೆ!!!
ReplyDelete