ಸಾಕಪ್ಪಾ ನಿನ್ನ ಸಹವಾಸ !
ಸಿಟ್ಟಿನಲ್ಲಿ ನೀ ಥೇಟ್ ದೂರ್ವಾಸನೇ!
ರಾತ್ರಿ-----------,
ಬಾಯಲ್ಲಿ ---ಮಿಂಟು ,
ಮೈಗೆಲ್ಲಾ ---ಸೆಂಟು ,
ಏನು ಹಾಕಿದರೂ ನೂರೆಂಟು ,
ತೂರಿ ಬರುವ ಹಾಳು ಘಾಟು !
ತೂರಾಡುತ್ತಾ ನೀ ಬರುವ ಮುನ್ನವೇ ,
ತಲಪುವ ಆ ನಿನ್ನ ---,
ಉಸಿರಿನ -----ದುರ್ವಾಸನೆ,
ಸಹಿಸಲು ಅಸಾಧ್ಯ ------!
ನೀ --------------ನಿಜಕ್ಕೂ ,
ದೂರ್----------ವಾಸನೆ !
ದೂರದಿಂದಲೇ ----------ವಾಸನೆ!
:):).....ದೂರದಿಂದಲೇ ತಿಳಿಯುವ ದುರ್ವಾಸನೆಯನ್ನು ಚೆನ್ನಾಗಿ ಹೇಳಿದ್ದೀರಿ..
ReplyDeleteದೂರ್ವಾಸರನ್ನಾದರೂ ಸಹಿಸಬಹುದು ದುರ್ವಾಸನೆಯನ್ನು ಸಹಿಸುವುದು ಅಸಾಧ್ಯ, ತಮಗೆ ಅರಿವಿರಬಹುದು, ಕೆಲವರು ಸಾಕ್ಸ್ ಎನ್ನುವುದನ್ನು ವಾರಗಟ್ಟಲೆ ತೊಳೆಯದೇ ಹಾಗೇ ಇರುತ್ತಾರೆ, ಅವರು ಶೂ ಬಿಚ್ಚಿಟ್ಟು ಕುಳಿತರೆ ಸತ್ತ ನಾಯಿ ಕೊಳೆತ ವಾಸನೆ ಬರುತ್ತದೆ! ಬೇರೆಯವರನ್ನು ಓಲೈಸಲು, ಕುಡಿದ ವಾಸನೆ ಮರೆಮಾಚಲು ನೀವು ಹೇಳಿದ ಹಾಗೇ ಮಾಡುತ್ತಾರೆ, ನಿಮ್ಮ ಅನಿಸಿಕೆ ನಮ್ಮ ನಿಸಿಕೆಯೂ ಕೂಡ,ಧನ್ಯವಾದಗಳು
ReplyDeleteಥ್ಯಾಂಕ್ಸ್ ಸುಬ್ರಮಣ್ಯ ಅವರೆ.ಥ್ಯಾಂಕ್ಸ್ ಭಟ್ ಜೀ.ನಾತ ಲೀಲೆಯ ಬಗ್ಗೆ ಚೆನ್ನಾಗಿ ಹೇಳಿದಿರಿ.
ReplyDeletekudukara durvaasaneya bagge
ReplyDeletebagallalli chucchuva kavana
chennagide.
doorvaasa rinda thappisikollo
upayanu thilisidare ?
ಧನ್ಯವಾದಗಳು ಅಶೋಕ್.ನೀವು ಬ್ಲಾಗಿಗೆ ಬಂದದ್ದು ಖುಷಿ ಆಯ್ತು .ದೂರ್ವಾಸರಿಂದ ದೂರವಿರುವ ದಾರಿಯ ಬಗ್ಗೆ ಮತ್ತೆ ಎಂದಾದರು ಬರೆಯುತ್ತೇನೆ.
ReplyDeleteದುರ್ವಾಸನೆಯನ್ನು ಸಹಿಸುವುದು ಅಸಾಧ್ಯ, ಚೆನ್ನಾಗಿ ಹೇಳಿದ್ದೀರಿ..
ReplyDelete:D Good one. "ದೂರ್ವಾಸನೇ ಹೌದು" ಎನ್ನುವುದಕ್ಕೆ ಇದೂ ಒಂದು ಅರ್ಥವಿರಬಹುದೆಂದು ಗೊತ್ತಾಗಿದೇ ಇಂದು :)
ReplyDeleteದುರ್ -ವಾಸ - ಅಂದರೆ ಕೆಟ್ಟದಾಗಿ ಬಟ್ಟೆ ತೊಟ್ಟವನು ಎಂದರ್ಥ. ನಮ್ಮ ಬೆಂಗಳೂರಿನಲ್ಲಿ ಅಂತ ಎಷ್ಟೋ ದೂರ್ವಾಸರು ಸಿಗುತ್ತಾರೆ.
ReplyDeleteಬಹಳಷ್ಟು ಜನ ಹೆಂಗಸರ ಪ್ರತಿನಿತ್ಯದ ಸಮಸ್ಯೆ ಇದು .ಕುಡಿದು ಬಂದು ಹೆಂಡತಿಯನ್ನು ಹೊಡಿಯುವ ರಾಕ್ಷಸರು ಇನ್ನೂ ಇದ್ದಾರೆ.ಅವರ ಹೊಡೆತದ ಜೊತೆಗೆ ಕುಡಿತದ ದುರ್ವಾಸನೆಯನ್ನೂ ಸಹಿಸಿಕೊಳ್ಳಬೇಕಲ್ಲ ಪಾಪ!ಬ್ಲಾಗಿಗೆ ಬಂದಿದಕ್ಕೆ ಧನ್ಯವಾದಗಳು ಕೂಸು ಮುಲಿಯಳಅವರೇ ,
ReplyDeleteತೇಜಸ್ವಿನಿ ಯವರೇ ಮತ್ತು ಶಿವರಾಂ ಅವರೇ
ಶಿವರಾಂ ಭಟ್ ಅವರೇ ನನ್ನ ಬ್ಲಾಗಿಗೆ ಸ್ವಾಗತ .ದುರ್ ---ವಾಸ ,ಎನ್ನುವುದಕ್ಕೆ ಕೆಟ್ಟ ಬಟ್ಟೆ ತೊಡುವುದು ಎಂಬ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು .
ReplyDeleteಇವರು ಬರೀ ಕೆಟ್ಟ ಬಟ್ಟೆ ತೊಟ್ಟಿದ್ದರೆ ಪರವಾಗಿರಲಿಲ್ಲ ,ಹೊಟ್ಟೆಯಲ್ಲೂ ಕೆಟ್ಟ ವಾಸನೆ ಇರುವುದನ್ನೇ ತುಂಬಿ ಕೊಂಡು ಬರುತ್ತಾರಲ್ಲ !ಅದೇ ಸಮಸ್ಯೆ !
ಸರ್,
ReplyDeleteಸದಾಶಯದಿಂದ ಕೂಡಿದ ತಮ್ಮ ಬರವಣಿಗೆಗೆ ಇನ್ನಷ್ಟು ಸೇರಿಸುವ ಮನಸ್ಸಾಯಿತು..
ನಾಭಿ ಅವರ ಪ್ರೋತ್ಸಾಹದಿಂದ ನಾನೂ ತೊದಲಲು ಶುರು ಮಾಡಿದ್ದೇನೆ.
ತಮಗೆ ನನ್ನ "ಸಂ-ವೇದನೆ"ಗೆ ಆತ್ಮೀಯ ಸ್ವಾಗತ.
http://shivarama-bhat.blogspot.com
ವಿನಮ್ರ,
ಶಿವರಾಂ
Thankyou seetaaram sir.
ReplyDelete