ಬಾಲ್ಯದ --------ಕನಸುಗಳು ,
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,
ಆ -------ನನ್ನ ಬಾಲ್ಯ !
ಚೆನ್ನಾಗಿದೆ...
ReplyDeleteಕಳೆದುದು ಸಿಕ್ಕಿದೆ ಅ೦ತಾ ಟೋಪೀ ಆಟ ನೆನಪಿದೆಯೆ..ಸರ್...? ಆದರೆ ಕಳೆದ ಬಾಲ್ಯ ಮಾತ್ರಾ ಕಳೆದುದು ಸಿಕ್ಕದು...
ನೆನಪು ಚ೦ದ...
ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು.ಕವನ ಓದಿ ನಿಮಗೆ ನಿಮ್ಮ ಬಾಲ್ಯದ ದಿನಗಳ ನೆನಪಾದರೆ ಸಂತೋಷ.ಅದೇ ಕವನದ ಆಶಯ .ಧನ್ಯವಾದಗಳು .
ReplyDeleteಬಾಲ್ಯದ ನೆನಪುಗಳಿ ಎಷ್ಟೊಂದು ಮಧುರ ಅಲ್ವಾ ಸರ್
ReplyDeleteತುಂಬಾ ಸುಂದರ ಕವಿತೆ
ನಮ್ಮನ್ನು ಬಾಲ್ಯಕ್ಕೆ ತೆಗೆದುಕೊಂಡು ಹೋದಿರಿ
ನನಗೆ ಸುಭಧ್ರಾಕುಮಾರಿ ಚೌಹಾಣ್ ರ "ಮೇರಾ ನಯಾ ಬಚಪನ್" ಕವಿತೆ ನೆನಪಾಯಿತು. ಅದು ನಮಗೆ ೮ ನೇ ತರಗತಿಯಲ್ಲಿತ್ತು. ನಿಮ್ಮ ಕವಿತೆ ಕೂಡಾ ಅಂತಹ ಬಾಲ್ಯದ ನೆನೆಪುಗಳನ್ನು ಮರುಕಳಿಸಿತು. ಬಾಲ್ಯ ಕ್ಮುಗಿಸಿದವರಿಗೆ ಅದು ನೆನಪಷ್ಟೇ ಅಲ್ಲವೇ ??
ReplyDeleteಗುರು ಸರ್ ;ನಮಸ್ಕಾರಗಳು .'ಬಾಲ್ಯದ ಆಟ ,ಆ ಹುಡುಗಾಟ ,ಇನ್ನೂ ಮಾಸಿಲ್ಲಾ 'ಅನ್ನೋ ಹಾಡು ಜ್ಞಾಪಕ ಬಂತಾ ಗುರು ಸರ್ ?ಧನ್ಯವಾದಗಳು.
ReplyDeleteನಮಸ್ಕಾರ ಸುಬ್ರಮಣ್ಯ ಅವರೇ .ನೀವು ಹೇಳಿದ ಹಿಂದಿ ಪದ್ಯ ಕೇಳಿ 'ಕೋಯಿ ಲೌಟಾದೆ ಮುಜ್ಹೇ ,ಬೀತೇ ಹುಯೆ ದಿನ್'ಎನ್ನುವ ಹಾಡು ಜ್ಞಾಪಕ ಬಂತು.
ReplyDeleteಬಾಲ್ಯ ಪೂರ್ತಿ ಕಳೆದು ಹೋಗಿಲ್ಲ ....ಅದರ ಮಿಂಚು ನಿಮ್ಮ ಕವನದಲ್ಲಿ ಹೊಳೆಯುತ್ತಿದೆ..
ReplyDeleteಭಟ್ ಸರ್ ;ಬಾಲ್ಯದ ಮಿಂಚನ್ನು ಕವಿತೆಯಿಂದ ಬಾಳಿಗೆ ತರುವ ಸಂಚಿನ ಬಗೆ ಹೇಗೆಂದು ಹೊಂಚು ಹಾಕುತ್ತಿದ್ದೇನೆ .ಧನ್ಯವಾದಗಳು.
ReplyDeleteSundara nenapugalu
ReplyDeleteThanks for reminding my childhood..
ReplyDeletebalyada sumadhra nenapugala melukadisuvadaralli eruva sukha yavudaralli bandeetu.kavana saralavagi, neravagi manassige nati namma balya prapanchkke kondoyyuttade.dhanyavadagalu.HEMCHANDRA SBH RASMECCC, BANGALORE
ReplyDeleteNisha;Thanks for your kind comments.Memories of the childhood are for ever.
ReplyDeleteಉದಯ್; ನಮಸ್ಕಾರ.ನಿಮ್ಮ ಫೋಟೋಸ್ ನಲ್ಲಿ ಸೈಕಲ್ ಟೈರ್ ಹಿಡಿದು ನಿಂತಿರುವ ಹುಡುಗರನ್ನು ನೋಡಿ ನನ್ನ ಕವಿತೆಯ ಸಾಲುಗಳು ನೆನಪು ಬಂದು ಖುಷಿ ಆಯಿತು.ಬಾಲ್ಯದ ನೆನಪುಗಳು ಯಾವತ್ತಿಗೂ ಸುಂದರವೇ .
ReplyDeleteDear HEMACHANDRA.Itis nice seeing an old friend on the blog .Welcome to my blog .keep visiting.
ReplyDeletethank you.
ಕವನ ಚೆನ್ನಾಗಿದೆ . ನಡುವಯಸ್ಸಿನಲ್ಲಿ ಬಾಲ್ಯದ ದಿನಗಳ ಕನವರಿಕೆ ಕೊಡುವ ಸಂತೋಷ ದೊಡ್ಡದು.
ReplyDeleteಸುಮ ಅವರಿಗೆ ನಮಸ್ಕಾರಗಳು.ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ಮತ್ತೆ ಬನ್ನಿ.
ReplyDeleteನೆನಪಿನಲ್ಲಿ ಸವಿಯಬೇಕು ಕಳೆದುಹೋದ ಬಾಲ್ಯದ ಕೋಲ್ಮಿ೦ಚು. ಚೆನ್ನಾಗಿದೆ ಬಾಲ್ಯದ ನೆನಪಿನ ಸುತ್ತದ ಕವನ.
ReplyDeletevery nice, thank you sir.
ReplyDeleteಧನ್ಯವಾದಗಳು ಸೀತಾರಾಂ ಸರ್.
ReplyDeleteNRK;Thank you very much for your kind comments.
ReplyDeleteಕಳೆದ ಬಾಲ್ಯ ಮತ್ತೆ ಮರಳುವುದಿಲ್ಲ! ಆದರೂ ಬಾಲ್ಯದ ನೆನೆಪು ಮರುಕಳಿಸುತ್ತದೆ, ಇದು ಜೀವನ, ಇದು ವಾಸ್ತವ. ಎಲ್ಲಕೊಟ್ಟ ಭವಂತ ಎಲ್ಲಕ್ಕೂ ಒಂದೊಂದು ಮಿತಿ ಇಟ್ಟ, ಆಯಾಯ ದಿನಗಳಲ್ಲಿ ಅದದೇ ಚಂದ, ಆದರೆ ಪ್ರತೀ ವ್ಯಕ್ತಿಯ ಬಾಲ್ಯದ ಹರವು ಯಾರಿಂದಲೂ ಕಸಿಯಲಾರದ ಭಂಡಾರ. ಚಿನ್ನಿದಾಂಡು,ಕುಂಟೆಬಿಲ್ಲೆ, ಲಗೋರಿ,ಕಿರ್ವ್ಬಿಟ್ ಕಿವ್ರ್ಯಾರು ? , ಅವಲಕ್ಕಿ-ತವಲಕ್ಕಿ..... ಛೆ ಒಂದೇ ಎರಡೇ...ಆಡುತ್ತಿದ್ದರೆ ಬ್ರಹ್ಮನೇ ಬಂದರೂ ವಾಪಸ್ ಬರಲಾರೆವೆಂಬಷ್ಟು ಗಾಢ ಆಟದ ಹುಚ್ಚು.ರಜ ಬಿದ್ದರೆ ಅಜ್ಜಿಯಮನೆಯ ಹಾದಿ. ಮಾವಿನಮರಕ್ಕೆ ಕಲ್ಲು. ನಾಯಿ ಮರಿಗೆ ಕೀಟಲೆ...ಬಾಲ್ಯ ಬಾಲ್ಯವೇ...ಬಂಗಾರವೇ, ನಿಮ್ಮ ಕವನ ನನ್ನ ಬಾಲ್ಯಕ್ಕೂ ಎಳೆಯಿತು. Very Nice
ReplyDeleteಧನ್ಯವಾದಗಳು ಭಟ್ಟರೇ.ನೀವಿಲ್ಲದೆ ಬ್ಲಾಗ್ ಭಣ ಭಣ !ಬಾಲ್ಯ ಬಾಲ್ಯವೇ !ಬಾಲ್ಯದ ನೆನಪುಗಳೇ ಅಮೂಲ್ಯ !
ReplyDelete