ನಾನು ಬಹಳ ವರ್ಷಗಳ ಹಿಂದೆ ಒಂದು ಚಿತ್ರಕಲಾ
ಪ್ರದರ್ಶನಕ್ಕೆಹೋಗಿದ್ದೆ.ಅಲ್ಲಿದ್ದ ನವ್ಯ ಚಿತ್ರವೊಂದು
ವಿಚಿತ್ರವಾಗಿತ್ತು.ಅದರತಲೆಬುಡಅರ್ಥವಾಗಲಿಲ್ಲ.
'ಇದನ್ನು ಕಲೆ ಅಂತ ಏಕೆ ಕರೆಯುತ್ತಾರೆ',ಎಂದು
ತಲೆ ಕೆರೆದುಕೊಂಡೆ! ಯಾರೋ ಸಣ್ಣ ಮಕ್ಕಳು
ಸಿಕ್ಕಿದ್ದನ್ನು ಗೀಚಿಅದಕ್ಕೆಸಿಕ್ಕಾಪಟ್ಟೆ ಬಣ್ಣ ಬಳಿದ ಹಾಗಿತ್ತು!
ಹಾಗೆಂದು ನವ್ಯ ಕಲೆಯನ್ನುನಾನುತಿರಸ್ಕಾರದಿಂದ
ಕಾಣುತ್ತೇನೆಂದು ತಪ್ಪು ತಿಳಿಯಬೇಡಿ. ಕೆಲವು
ನವ್ಯಚಿತ್ರಗಳನ್ನು ತುಂಬಾ ಇಷ್ಟಪಟ್ಟಿದ್ದುಂಟು.
ಆಗ ಅನಿಸಿದ್ದನ್ನುಕವಿತೆಯಲ್ಲಿಹಿಡಿದಿಟ್ಟಿದ್ದೆ.ನಿಮ್ಮಲ್ಲೂ
ಕೆಲವರಿಗೆ ನವ್ಯ ಚಿತ್ರಗಳನ್ನು ನೋಡಿಹಾಗೆಯೇಅನಿಸಿರಬಹುದು
.ನವ್ಯ ಚಿತ್ರಕಾರರು ದಯವಿಟ್ಟು ಸಿಟ್ಟಾಗಬೇಡಿ.
ಇದುಶ್ರೀಸಾಮಾನ್ಯನೊಬ್ಬನ ಅನಿಸಿಕೆ ಎಂದು ನಕ್ಕುಬಿಡಿ;
-------------------------
'ನವ್ಯ ಕಲೆ '
-------------------------
ಡಾಳಾದ ಎರಡು ಗೆರೆ !
ಮಧ್ಯೆ ಕೆಂಪು ಬರೆ !
ಎತ್ತಲೋ ನೋಡುವ ಕಣ್ಣು!
ಅರ್ಥವೇ ಆಗುತ್ತಿಲ್ಲ ಮಣ್ಣು!
ಪಕ್ಕದಲ್ಲೇ ಒಂದಷ್ಟು ಮಸಿ !
ಅದಕ್ಕೇನೋ ಮಾಡಿದ್ದಾನೆ ಕಸಿ !
ಓ -----ಅಲ್ಲೆಲ್ಲೋ ಇದ್ದಾನೆ ಚಂದ್ರ !
ಇದನ್ನು ನೋಡೋಕೆ ನೀವೂ ಬಂದ್ರ !
ಆಕಾಶದಲ್ಲಿ ಯಾಕಿವೆ ಮೀನುಗಳು?
ಕೆಳಗೆ ಹರಿದಾಡುವ ಹಕ್ಕಿಗಳು !
ಕ್ಯಾನ್ವಾಸ್ ತುಂಬೆಲ್ಲಾ ಪುಕ್ಕಗಳು ;
ತಲೆ ಕೆಟ್ಟು ಕುಣಿಯುವ ಬಣ್ಣಗಳು !
ಇದೇನಾ ---------ನವ್ಯ ಕಲೆ !
ಇದು -----------ಕಲೆಯಲ್ಲ ,
ಹುಚ್ಚು ಹಿಡಿದ ತಲೆ !
ನಿಜ ಡಾಕ್ಟ್ರೆ..
ReplyDeleteನನಗೂ ಕೆಲವೊಮ್ಮೆ ನವ್ಯ ”ಚಿತ್ರಗಳನ್ನು [?]” ಹೇಗೆ ಅರ್ಥ ಮಾಡಿಕೊಳ್ಳಬೇಕೆ೦ದು ತಿಳಿಯದೆ ತಲೆ ಕೆಡಿಸಿಕೊಳ್ಳುತ್ತೇನೆ..ನಮ್ಮನೆಯಲ್ಲಿ ಗೋಡೆಯ ತು೦ಬಾ ನವ್ಯ ಚಿತ್ರಗಳೆ ಇವೆ.. ನನ್ನ ಮಗನ ಕೈ ಚಳಕ...!!
ನವ್ಯ ಚಿತ್ರಗಳನ್ನು ಕವಿತೆಯಲ್ಲಿ ಚನ್ನಾಗಿ ಚಿತ್ರಿಸಿದ್ದೀರಿ...
ಕಲೆ ಮನಸ್ಸಿಗೆ ಮುದ ನೀಡಬೇಕು .ಹೃದಯಕ್ಕೆ ಹತ್ತಿರವಿರಬೇಕು ಎನ್ನುವುದು ನನ್ನ ಅಭಿಮತ.ಬುದ್ದಿಗೆ ಕಸರತ್ತು ಕೊಡುವಂತಹ ಕಲೆ ಹೆಚ್ಚು ಹತ್ತಿರವಾಗದು ಎನಿಸುತ್ತದೆ .ಇದು ನನ್ನ ಅಭಿಪ್ರಾಯ .ಲೋಕೋ ಭಿನ್ನ ರುಚಿ !ನಮಸ್ಕಾರಗಳು.
ReplyDeleteನವ್ಯಚಿತ್ರಕಲೆ ನನಗೂ ಅರ್ಥವಾಗುವುದೇ ಇಲ್ಲ ..ಅನೇಕ ಬಾರಿ ಅ೦ದುಕೊಳ್ಳುತ್ತೇನೆ..ಈ ನವ್ಯಚಿತ್ರಕಾರರು ಚಿತ್ರದ ಕೆಳಗೆ ಅದರಲ್ಲಿನ ಭಾವನೆಯನ್ನೂ, ಅರ್ಥವನ್ನೂ ಬರೆಯಬಾರದೇ..ಎ೦ದು.
ReplyDeleteನಿಮ್ಮ ಕವನ ಚೆನ್ನಾಗಿದೆ.
HHAA..... navyakalege perfect vivaraNe idu....... tumbaa chennaagide.........
ReplyDeleteನವ್ಯ ಕಲೆಯಂತೆ ನವ್ಯಕಾವ್ಯವೂ ಒಮ್ಮೊಮ್ಮೆ ಹಾಗೇ, ಕೆಲವರದು ಬರೆದದ್ದೇ 'ಕವನ', ಕೆಲವರು ಚಿತ್ರ ಬಿಡಿಸಿದರೆ ಅದು ಏನು ಎಂದು ಅವರೇ ಹೇಳಬೇಕಲ್ಲವೇ? ಹಾಗೇ ಕೆಲವರ ಕವನ 'ಅದು ಕವನ' ಅಂತ ಅವರೇ ಹೇಳಬೇಕಾಗುತ್ತದೆ, ಸ್ಯಾಂಪಲ್ಲು --
ReplyDeleteನೆರೆಮನೆಯ ನಾಯಿ ಹೊರಟಿತ್ತು ಹೊರಗೆ
ಬಾಲು ಕೂಗಿದ ತುಂಬಾ ಜೋರಾಗಿ
ಪ್ರೀತಿಯ ಪರಾಗಸ್ಪರ್ಶ !
ಅತ್ಮಾವಲೋಕನದಲ್ಲಿ ಮಧ್ಯೆ ಅಲ್ಲೆಲ್ಲೋ ಹಾಗೇ ಅಲೆ ಬಿಟ್ಟ ಗೂಳಿ
ಸರಕ್ಕನೆ ಓಡಿದಳು ಸಂಜು
ಮಿತಿಮೀರಿದ ರಾತ್ರಿ ಗತಿಕಾಣದ ಬಯಕೆ
ಒಟ್ಟಾ ಏನೋ ಒಡಂಬಡಿಕೆ ಹುಚ್ಚಾಟ
ನಾಯಿ ಹೊರಟಿತ್ತು ಹೊರಗೆ ಯಾರಿಗೂ ಕಾಣದೇ ಹಾಗೆ !
ಇದು ಯಾವುದೇ ಕಾವ್ಯಕ್ಕೆ ಅಣುಕಲ್ಲ, ಕಾವ್ಯ ಕೆಲ್ಸಕ್ಕೆ ಬರಬೇಕು, ಅದು ಸ್ಫೂರ್ತಿ ಪಡೆದು ಅರ್ಥೈಸಿಕೊಳ್ಳುವಂತಿರಬೇಕು, ಆದ್ರೆ ಕೆಲವು ಕಾವ್ಯಗಳೂ ನೀವು ಬಣ್ಣಿಸಿದ ನವ್ಯ ಕಲೆಯ ಹಾಗೇ! ಗೀಚಿದ್ದೇ ಚಿತ್ರ, ಬರೆದದ್ದೇ ಕವನ !
ತಾವು ಈ ದಿಸೆಯಲ್ಲಿ ಪ್ರಯತ್ನಶೀಲರಾಗಿ ಇರುವಷ್ಟು ಸಮಯದಲ್ಲಿ ಚಿಕ್ಕ ಚೊಕ್ಕ ಕವನಗಳನ್ನು ನವ್ಯರೂಪದಲ್ಲಿ ಕೊಡುತ್ತಿದ್ದೀರಿ, ಈ ಕಾವ್ಯ ಚೆನ್ನಾಗಿದೆ,ಧನ್ಯವಾದಗಳು.
ನೀವೆನ್ನುವುದು ನಿಜ ಕೃಷ್ಣಮೂರ್ತಿಯವರೆ .ಕೆಲವು ಅವಾರ್ಡ್ ಸಿನೆಮಾಗಳು , ನವ್ಯ ಚಿತ್ರಗಳು , ಕೆಲವು ಸಾಹಿತಿಗಳ ಸಾಹಿತ್ಯ .... ಅರ್ಥವೇ ಆಗುವುದಿಲ್ಲ. ಇಂತವುಗಳನ್ನು ತುಂಬಾ ಚೆನ್ನಾಗಿದೆಯೆಂಬಂತೆ ದೊಡ್ಡ ದೊಡ್ಡ ಪದಗಳನ್ನು ಬಳಸಿ ವಿಮರ್ಶಿಸುವ ವಿಮರ್ಶಕರ ಗುಂಪು ಬೇರೆ.
ReplyDeleteನವ್ಯಕಲೆಯನ್ನು ನೋಡಿದಾಗ ಶ್ರೀಸಾಮಾನ್ಯನಿಗನಿಸಿದ್ದನ್ನು ಚೆ೦ದವಾಗಿ ಹೇಳಿದ್ದಿರಾ!. ನನಗೂ ಅನಿಸಿದೆ ನಿಮ್ಮ ಹಾಗೇ
ReplyDeleteನವ್ಯ ಕಲೆ
ಕಲೆಯ ಕೊಲೆ?
Even i felt same when i first saw modern art...unfortunately now also i am feeling same.
ReplyDeleteNAMMA SAMPRADAYIKA KALCHITRAGALU NAIJATEGE HATTIRAVAGIDDARINDALE EDUVAREGU ADARA PARAMOARE ULIDIDE.NAMMELLARA ANISIKEGALA MURTARUPAVE NIMMA KAVANA.
ReplyDeleteನವ್ಯ ಚಿತ್ರಗಳನ್ನು ಬಿಡಿಸಿದಾತನೆ ಹೇಳಿದರೂ ಅರ್ಥವಾಗುವುದಿಲ್ಲ
ReplyDeleteಅವುಗಳನ್ನೇ ಅವುಗಳದೇ ಅರ್ಥಕ್ಕೆ ಬಿಟ್ಟು ಬಿಡುವುದು ಒಳ್ಳೆಯದು ಎನಿಸುತ್ತದೆ
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ವಂದನೆಗಳು.ನೆನ್ನೆಯಿಂದ ಬಿ .ಎಸ್.ಎನ್.ಎಲ್.ಸ್ಟ್ರೈಕ್ ನಿಂದಾಗಿ ಒಂದು ದಿನವಿಡೀ ನೆಟ್ ವರ್ಕ್ ಇರಲಿಲ್ಲ .ಅದ್ದರಿಂದ
ReplyDeleteತಕ್ಷಣ ಪ್ರತಿಕ್ರಿಯೆ ನೀಡಲಾಗದೆ ಇದ್ದದ್ದಕ್ಕೆ ಕ್ಷಮೆ ಇರಲಿ .
ಮನಮುಕ್ತಾ ಅವರೇ ,ಧನ್ಯವಾದಗಳು.ಕಲೆ ಮನಸ್ಸಿಗೆ ಮುದ ನೀಡುವಂತಿರಬೇಕು ಎನ್ನುವುದು ನನ್ನ ಅಭಿಪ್ರಾಯ .
ReplyDeleteದಿನಕರ ಮೊಗೇರಅವರಿಗೆ ನಮಸ್ಕಾರಗಳು.ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.
ReplyDeleteಭಟ್ ಸರ್,ನಿಮ್ಮ ನವ್ಯ ಕವಿತೆ ಓದಿ ತುಂಬಾ ನಗು ಬಂತು.ಬಹಳಷ್ಟು ನವ್ಯ ಕವಿತೆಗಳು ಅದೇ ರೀತಿ ಇರುತ್ತವೆ .ಅರ್ಥ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿ ನನಗೇ ಬುದ್ದಿ ಶಕ್ತಿ ಕಮ್ಮಿ ಇರಬಹುದೆಂದುಕೊಂಡು ಸುಮ್ಮನಾಗಿದ್ದೇನೆ.ಧನ್ಯವಾದಗಳು.
ReplyDeleteಸುಮಾ ಅವರಿಗೆ ನಮಸ್ಕಾರಗಳು.ಅಂತಹ ವಿಮರ್ಶಕರ ವಿಮರ್ಶೆಗಳೂ ಅರ್ಥವಾಗುವುದಿಲ್ಲ!
ReplyDeleteಧನ್ಯವಾದಗಳು ಸೀತಾರಾಮ ಅವರೇ .ಯಾವುದಕ್ಕೆ ಕಲೆ ಎನ್ನುತ್ತಾರೆ ಎಂದು ನನಗಿನ್ನೂ ಅರ್ಥವಾಗಿಲ್ಲ.
ReplyDeleteuday hegde ,Thanks for your kind comments.Namaste.
ReplyDeleteHemachandra,you are right.Thanks for your kind comments.
ReplyDeleteಗುರು ಸರ್ ,ಇಷ್ಟವಾಗದಿದ್ದರೆ ಕಷ್ಟಪಟ್ಟು ಅರ್ಥಮಾಡಿಕೊಳ್ಳುವುದು ವ್ಯರ್ಥ ಎನ್ನುವುದು ನನ್ನ ಅನಿಸಿಕೆ.
ReplyDeleteSuperb baraha :) ... nanagantu aa kale no illa tale no gotagolla... aadaru eno message irutte anta ellaru heLataralla... chitrakaaranige matta avan followers ge maatra adu eno anta gottagutte bahushaha :)
ReplyDeleteThanks for your kind comments.Welcome to my blog.please keep visiting the blog.
ReplyDelete