ನಮ್ಮ ಮನದ ಅಹಂಕಾರದ
ಗಂಟುಗಳ------ ಬಿಡಿಸಿ ,
ದಶಕಗಳ ಕೊಳೆಯ
ತಿಕ್ಕಿ-------- ತೊಳೆದು
ಶುದ್ಧ ಗೊಳಿಸಿ -----,
ಮಡಿಕೆ ಮಡಿಕೆಗಳ ತೆಗೆದು ,
ಸುಕ್ಕುಗಳ ತಿದ್ದಿ ತೀಡಿ ,
ನೀಟಾಗಿ ,ಗರಿ ಗರಿಯಾಗಿ
ಇಸ್ತ್ರಿ ಮಾಡಿ ----------,
ಮುಗ್ಧತೆಯ ಶುಭ್ರತೆಯ ಸೂಸುವ ,
ಮಗುವಿನ ಮನವಾಗಿ ಮಾರ್ಪಡಿಸುವ ,
ದೋಬಿಯ ----ವಿಳಾಸ ,
ಎಲ್ಲೆಂದು -----ಹುಡುಕುತ್ತಿದ್ದೇನೆ !
ಪತ್ತೆಯಾದರೆ ---------,
ತಿಳಿಸಿ --------ಪ್ಲೀಸ್ !
ದೇವ ಡ್ರೈ ಕ್ಲೀನರ್ಸ್,
ReplyDeleteಕ್ವಿಕ್ ಒನ್ ಡೇ ಸರ್ವಿಸ್,
ಸ್ವರ್ಗದ ರಸ್ತೆ, ಮೂರನೇ ಕ್ರಾಸ್,ಇಂದ್ರಗಲ್ಲಿ
ದೇವೇಂದ್ರ ನಗರ, ಪರಲೋಕ
ಪಿನ್ ಕೋಡ್- _ _ _ _ _ ೦
ಪ್ರೊ--ಶ್ರೀ ದೇವರಾಜ್
ವಿಳಾಸ ಕೊಟ್ಟಿದ್ದೇನೆ, ಇನ್ನು ನೀವುಂಟು ಆ ದೇವರಾಜ್ ಉಂಟು, ಲ್ಯಾಂಡ್ ಮಾರ್ಕ್ ಕೇಳಬೇಡಿ, ಅದೇ ಒಂದು ಬಿಗ್ ಲ್ಯಾಂಡ್ ಮಾರ್ಕ್.
ಚೆನ್ನಾಗಿದೆ ಸ್ವಾಮೀ, ನಾವೆಲ್ಲಾ ನಿಮ್ಮ ಕಾಯಂ ' ಬಾಗಿಲು ಭಟ್ ' ರಾಗಿದ್ದೇವೆ,ಧನ್ಯವಾದಗಳು
ಅಡ್ರೆಸ್ಸ್ ಕೊಟ್ಟಿದ್ದಕ್ಕೆthanks ಭಟ್ಟರೇ.ಮೊಬೈಲ್ ನಂಬರ್ ಹುಡುಕಿ ಟ್ರೈ ಮಾಡಿದ್ರೆ 'ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ' ಅಂತ ಬರ್ತಾ ಇದೆ ..ನಮಸ್ಕಾರ.
ReplyDeleteತುಂಬಾ ನಗು ಬಂತು ಸಾರ್ ನನ್ನ ಒಂದಾಣೆಯನ್ನು ಸೇರಿಸುತ್ತೇನೆ..
ReplyDeleteನಿಮ್ಮ ಕಲ್ಪನೆಯ ಧೋಭಿಯಾ ಬಳಿ ನಾರದರು [ ಎಷ್ಟು ದಿನ ಸ್ನಾನವಿಲ್ಲದಿದ್ದರು ನಾರದೆ ಇರುವವ ನಾರದ ]
ಮಾತ್ರವೇ ಜೀವಂತ ಹೋಗಬಹುದು. ನಾರಿಯರು[ ಯಾವಾಗಲು ನಾರುತ್ತಿರುವವರು ] ನೀರನ್ನು [ಭಕ್ತಿಯೆಂಬ ]ಉಪಯೋಗಿಸಿ ತಾವೇ ನಾರದರಾಗ ಬಹುದು. ಜನ್ಮಾಂತರದ ಕೊಳೆಯನ್ನು ತೊಳೆಯುವ ಸರ್ವಶಕ್ತ ನ
ಅಡ್ರೆಸ್ ಇದೆ. ಆದರೆ ಹೋಗಿ ಬಂದವರಾರೂ ಗೊತ್ತಿಲ್ಲ. ಕರೆದಾಗ ಮಾತ್ರ ಹೋಗಲು ಈ ವಿಳಾಸ:
ಯಾರನ್ನಾದರೂ ಕಲಿಸುವ ವಿಚಾರವಿದ್ದರೆ ಕಿವಿಯಲ್ಲಿ ಈ ವಿಳಾಸ ಉಸುರಿ!!
ಶ್ರೀಮನ್ನಾರಾಯಣ
ಬಾಗಿಲು ಸಂಖ್ಯೆ - 7
ಸಾಕಿನ್ ವೈಕುಂಟ
ಮಹಾಶೇಶ ರಸ್ತೆ
ಕ್ಷೀರಸಾಗರ ಹೋಬಳಿ
ಸತ್ಯ ಲೋಕ
ಮುಂಚಿತವಾಗಿ ದಿನ ನಿಗದಿಪಡಿಸಲು ಕೆಳಗಿನವರನ್ನು ಸಂಪರ್ಕಿಸಬಹುದು.: ಜಯ-ವಿಜಯ, ಚಂಡ-ಪ್ರಚಂಡ
ಶಂಖ ನಿಧಿ ಅಥವಾ ಪುಷ್ಪನಿಧಿ. ಉತ್ತರಾಯಣದಲ್ಲಿ ಬಂದರೆ ಪ್ರವೇಶ ಉಚಿತ...ದ್ವಾರ ಪಾಲಕರಲ್ಲಿ ವಿನಯದಿಂದ ವರ್ತಿಸಿ ಸಹಕರಿಸಲು ಕೋರಿದೆ. ತಪ್ಪಿದಲ್ಲಿ ಭೂಲೋಕಕ್ಕೆ ಪತನ ಖಂಡಿತ.
ಭೂ ಲೋಕದಲ್ಲಿ ಎಲ್ಲವನ್ನು ತ್ಯಾಗ ಮಾಡಿದವರಿಗೆ ಮಾತ್ರ ರಂಭೆ-ಮೇನಕೆ ಸುರಾಪಾನ ಯಕ್ಷ ಸಂಗೀತ ಮುಂತಾದ ಆಕರ್ಷಣೆಗಳಿಗೆ ಉಚಿತ ಸೌಲಭ್ಯವಿದೆ. ಹೆಚ್ಚು ಹಣ ಕೊಟ್ಟವರಿಗೆ [ ಭಕ್ತಿ ] ಸಾಯುಜ್ಯ ಮುಕ್ತಿಯನ್ನು ಕಡಿಮೆ ಹಣ ಕೊಟ್ಟವರಿಗೆ ಸಾರೂಕ್ಯ, ಸಾಮೀಪ್ಯ ಇತ್ಯಾದಿ ಮರು ಹುಟ್ಟು ಇರುವ ಕಡಿಮೆ ದರ್ಜೆಯ ಮುಕ್ತಿಯನ್ನು ಕೊಟ್ಟು ಕಳಿಸಲಾಗುವುದು.
ತುಂಬಾ ತೊಳೆಯಲಾಗದ ಕೊಳೆ ಇದ್ದಲ್ಲಿ ಮನೆಬಾಗಿಲಿಗೆ ಸೇವೆಯನ್ನು ಒದಗಿಸುವ ಸೌಲಭ್ಯವೂ ಇದೆ.
Good one.
ReplyDeleteಶಿವರಾಂ ಭಟ್ ಸರ್ ,ವಿ.ಆರ್ .ಭಟ್ ಅವರ ಕಾಮೆಂಟ್ಸ್ ಮತ್ತು ಅದಕ್ಕೆ ನೀವು ಕೊಟ್ಟ ಉತ್ತರ ಅದ್ಭುತ !ಬ್ಲಾಗ್ ಬೆಳೆಯುತ್ತಿರುವ ರೀತಿ ನಿಜಕ್ಕೂ ಖುಷಿ ಕೊಡುವಂತದು !ನಾನು ಕವನ ಬರೆದಾಗ ನೀವೆಲ್ಲಾ ಮೇಲೆ ಹೇಳಿದ ಯಾವ ವಿಷಯಗಳನ್ನೂ ಯೋಚನೆ ಮಾಡಿರಲಿಲ್ಲ !ನಿಮ್ಮೆಲ್ಲರ ಆಸಕ್ತಿಮತ್ತು
ReplyDeleteಆಸ್ಥೆಗೆ ಧನ್ಯವಾದಗಳು .your comments have made the blog even more interesting !ಬ್ಲಾಗಿಗೆ ಬರುತ್ತಿರಿ ,ಕಾಮೆಂಟ್ಸ್ ಮಾಡುತ್ತಿರಿ .
ನಿಶಾ ಅವರಿಗೆ ನಮಸ್ಕಾರಗಳು ಹಾಗು 'ಕೊಳಲು ' ಬ್ಲಾಗಿಗೆ ಸ್ವಾಗತ .ಇದು ನಿಮ್ಮೆಲ್ಲರ ಬ್ಲಾಗು .ಬರುತ್ತಿರಿ .ಧನ್ಯವಾದಗಳು .
ReplyDeletegood one sir
ReplyDeletedon't try to find the address of dhobi
its u and only u can do it
meditation sir
nishkaama dhyana
which can keep u neat clean and fresh
continue the journey
nice one sir.. :)
ReplyDeleteಅಶೋಕ್ ಕುಮಾರ್ ಅವರಿಗೆ ನಮಸ್ಕಾರ .ನನ್ನೊಳಗಿನ ದೋಬಿಯನ್ನು ಧ್ಯಾನದ ದಾರಿಯಲ್ಲೇ ಹುಡುಕುತ್ತಿದ್ದೇನೆ !ಧನ್ಯವಾದಗಳು .
ReplyDeleteWelcome to my blog SNOW WHITE.thanks for visiting my blog.
ReplyDeleteಚೆ೦ದದ ಕವನ. ಮನದ ಕೊಳೆ ತೆಗೆವ ಧೋಬಿಯು ತಮಗೆ ಸಿಕ್ಕಲ್ಲಿ ನಮ್ಮ ಮನೆ ಅಡ್ರೆಸ್ಸ್ ಕೊಟ್ಟು ನಮ್ಮಲ್ಲೂ ಬರಲೂ ತಿಳಿಸಿ!!
ReplyDeleteಸೀತಾರಾಮ ಅವರಿಗೆ ನಮಾಸ್ಕಾರ.ಪ್ರತಿ ಯೊಬ್ಬರಿಗೂ ಸ್ವಲ್ಪ ಮಟ್ಟಿಗೆ ಆತ್ಮಾವಲೋಕನದ ಅವಶ್ಯಕತೆಯಿದೆ ಎನ್ನುವುದೇ ಕವಿತೆಯ ಆಶಯ .
ReplyDelete