Sunday, April 25, 2010

ಮಾಸಿದ ಕೋಟು -ಭಾಗ 2 (ಮುಂದುವರೆದ ಭಾಗ)

ಈಗ "ಮಾಸಿದ ಕೋಟಿನ"ಕಥೆಯ ಮುಂದಿನ ಭಾಗವನ್ನು ಓದಿ ,ನಂತರ ನಿಮ್ಮ ಅಭಿಪ್ರಾಯ ತಿಳಿಸಿ:ವೈದ್ಯರು,ನಡೆದ ಆಕಸ್ಮಿಕ ಘಟನೆ ಯಿಂದ ಅವಾಕ್ಕಾದರು!ಮಾತೇ ಹೊರಡಲಿಲ್ಲ!ಆದರೂ ತಕ್ಷಣ ಸಾವರಿಸಿಕೊಂಡು,ಆ ಮಾಸಿದ ಕೋಟಿನ ವ್ಯಕ್ತಿಯನ್ನು ವಾಪಸ್ಸು ಕರೆದು ಕೂರಿಸಿದರು.ವ್ಯಕ್ತಿ ಬಿಕ್ಕಿ,ಬಿಕ್ಕಿ ಅಳುತ್ತಿದ್ದ!ಅವನನ್ನು ಸಮಾಧಾನ ಪಡಿಸಿದ ನಂತರ ವೈದ್ಯರು'ನೋಡಪ್ಪಾ,ನೀನು ಫೀಸು ಕೊಡಲಿಲ್ಲಅಂತ ತಕ್ಷಣ ಸಿಟ್ಟು ಬಂತು.ಕೋಪದಲ್ಲಿ ಏನೋ ಹೇಳಿಬಿಟ್ಟೆ ಅಂತ ಬೇಜಾರು ಮಾಡಿಕೋ ಬೇಡ,ನಿನ್ನ ಕತೆ ಏನು?'ಎಂದರು.ಅದಕ್ಕೆ ಆತ 'ಆರು ತಿಂಗಳ ಕೆಳಗೆ ನನ್ನ ಹೆಂಡತಿ ತೀರಿಕೊಂಡಳು ಸಾರ್ ,ನನಗೆ ಜೀವನಾನೆ ಬೇಡ ಅನ್ನಿಸಿತ್ತು.ಆತ್ಮಹತ್ಯೆ ಮಾಡಿ ಕೊಳ್ಳೋಣ ಅಂತಿದ್ದೆ.ನೀವು ಫೀಸು ಕೊಡದೆ ಇದ್ದರೂ, ಚಿಕೆತ್ಸೆ ಮಾಡಿದಿರಿ!ಈಗ ಅವಳ ಒಡವೆ ಗಿರವಿ ಇಟ್ಟು ಹತ್ತು ಸಾವಿರ ತಂದಿದ್ದೀನಿ.ನಿಮ್ಮ ಋಣ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲ.ಹಾಗೇ ಹತ್ತು ಸಾವಿರಕೊಟ್ಟರೆ,ನೀವುತೊಗೊಳಲ್ಲಾ.ಅದಕ್ಕೇನನಗೆ ಬಹಳ ಇಷ್ಟವಾದ ಈ ಕೋಟಿನಲ್ಲಿ ಇಟ್ಟು ಕೊಟ್ಟೆ .ಈ ಕೋಟೂ ಅವಳೇ ಯಾವುದೋ ಹಬ್ಬಕ್ಕೆ ಅಂತ ನನಗೆ ತಂದು ಕೊಟ್ಟಿದ್ದು ಸಾರ್'ಎಂದ.ಈಗ ವೈದ್ಯರ ಕಣ್ಣಲ್ಲಿ ನೀರಿತ್ತು!ವೈದ್ಯರು ನಿಧಾನವಾಗಿ ಹೇಳಿದರು'ನೋಡಪ್ಪಾ ನನಗೆ ನಿನ್ನ ಈ ಹಣದ ಅವಶ್ಯಕತೆಇಲ್ಲ.ದೇವರು ಸಾಕಷ್ಟು ಹಣ ಕೊಟ್ಟಿದ್ದಾನೆ.ಎಷ್ಟೋ ಜನ ಚಿಕಿತ್ಸೆ ಪಡೆದವರು ತಿರುಗಿಯೂ ನೋಡುವುದಿಲ್ಲ .ಈ ಹಣದಿಂದ ಯಾರಾದರೂ ಕಷ್ಟದಲ್ಲಿ ಇದ್ದವರಿಗೆ ನೀನೂ ಸಹಾಯ ಮಾಡು ಎಂದು ,ಆ ಹಣವನ್ನು ಅವನಿಗೇ ಹಿಂದಿರುಗಿಸಿ,ಅವನನ್ನು ಬಾಗಿಲಿನ ತನಕ ಬಂದು ಬೀಳ್ಕೊಟ್ಟರು.ಆಗ ರಾತ್ರಿ ಒಂಬತ್ತರ ಸಮಯ.ಕ್ಲಿನಿಕ್ಕಿನ ಬಾಗಿಲು ಮುಚ್ಚುವ ವೇಳೆಯಾಗಿತ್ತು.ಟೇಬಲ್ ಮೇಲೆ ಇದ್ದ ಬುದ್ದನ ಪ್ರತಿಮೆಯ ನಗು ಹೊರಗೆಲ್ಲಾ ತಣ್ಣನೆ ಬೆಳದಿಂಗಳಾಗಿ ಹರಡಿತ್ತು.

15 comments:

  1. ಭಾವನೆಗಳನ್ನು ಸೂಕ್ಶ್ಮವಾಗಿ ವರ್ಣಿಸಿದ್ದೀರಿ...
    ಮಾಸಿದ ಕೋಟಿನ ಕಥೆ ತು೦ಬಾ ಬ್ರೈಟ್ ಆಗಿ ಮೂಡಿಬ೦ದಿದೆ.
    ವ೦ದನೆಗಳು.

    ReplyDelete
  2. ಚುಕ್ಕಿ ಚಿತ್ತಾರ ಅವರಿಗೆ ಧನ್ಯವಾದಗಳು.ಸಾಧಾರಣವಾಗಿ ನಾವು ಒಬ್ಬ ವ್ಯಕ್ತಿಯನ್ನು ಬಹಳ ಬೇಗ ಜಡ್ಜ್ ಮಾಡಿಬಿಡುತ್ತೇವೆ.ಕಥೆಯ ಮೊದಲ ಅರ್ಧ
    ಭಾಗದಲ್ಲಿ ಡಾಕ್ಟರ್, ಹೃದಯವಂತಿಕೆ ಇಲ್ಲದ, ರೂಡ್ ವ್ಯಕ್ತಿಯಂತೆ ಕಾಣುತ್ತಾನೆ.ತಾಳ್ಮೆ ಇಲ್ಲದವನು ಎಂದು ನಿರ್ಧರಿಸಿ ಬಿಡುತ್ತೇವೆ.ಆದರೆ ಪೂರ್ತಿ
    ಕಥೆ ಕೇಳಿದ ನಂತರ ಅದೇ ವೈದ್ಯ ನಮಗೆ ಕರುಣೆಯ ಸಾಕಾರ ಮೂರ್ತಿಯಂತೆ ಕಾಣತೊಡಗುತ್ತಾನೆ .ಅದೇ ವ್ಯಕ್ತಿ!ಆದರೆ ಅವನನ್ನು ನೋಡುವ
    ನಮ್ಮ ರೀತಿ ಬದಲಾಗಿದೆ !

    ReplyDelete
  3. ಕಥೆಯ ಅ೦ತ್ಯ ನಿಜಕ್ಕೂ ಹೊಸ ಅರ್ಥವನ್ನೇ ಕೊಟ್ಟಿದೆ.ಪ್ರತ್ಯಕ್ಷ ಕ೦ಡದ್ದನ್ನೂ ಪ್ರಮಾಣಿಸಿ ನೋಡಬೇಕು ಅನ್ನೋದು ಸುಳ್ಳಲ್ಲ...ಕಥೆಯ ನಿರೂಪಣೆ ಚೆನ್ನಾಗಿದೆ.

    ReplyDelete
  4. ಮನಮುಕ್ತಾ ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಮತ್ತು ಅವನ ಸ್ವಭಾವಗಳುವಿಚಿತ್ರ .ಬಹಳಷ್ಟು ಸಲ ನಮ್ಮ ಆಲೋಚನೆಗಳು ವ್ಯಕ್ತಿಗತವಾಗಿರುತ್ತವೆಯೇ ಹೊರತು ವಸ್ತುಗತವಾಗಿರುವುದಿಲ್ಲ.ಒಬ್ಬ ವ್ಯಕ್ತಿ ಹೀಗೇ ಎಂದು ನಾವು ನಿರ್ಧರಿಸಿದ ಮೇಲೆ ಮುಂದೆ ಆ ವ್ಯಕ್ತಿಯ ವಿಷಯವಾಗಿ ನಮ್ಮೆಲ್ಲಾ ಆಲೋಚನೆಗಳೂ ಅದೇ ಬಣ್ಣದ ಕನ್ನಡಕದ ಮೂಲಕ ನೋಡಿದ್ದಾಗಿರುತ್ತದೆ.we are prejudiced.ಧನ್ಯವಾದಗಳು

    ReplyDelete
  5. ಮೊದಲ ಭಾಗ ಓದಿದಾಗ ಡಾಕ್ಟರ ಸಹನೆ ಕಳೆದುಕೊಳ್ಳದೆ ಸ್ವಲ್ಪ ಸುಮ್ಮನಿರಬೇಕಿತ್ತು ಎನಿಸುತ್ತದೆ.
    ಎರಡನೆ ಭಾಗ ಓದಿದ ಮೇಲೆ, ನೋವಿನ ಗೂಡಿನಲ್ಲಿ ಸ್ನೇಹ, ಪ್ರೀತಿ ಮತ್ತು ಮಮತೆಯ ಸೋನೆ ಮಳೆ.
    ಅಲ್ಲಿ ಆ ಕೋಟು ಎಲ್ಲವೂ ಹೌದು. ಈ ಬರಹ ಓದುವಾಗ ಹಿಂದಿಯ "ರೈನ್ ಕೋಟ " ಚಿತ್ರ ನೆನಪಾಯ್ತು.
    ಚೆನ್ನಾಗಿದೆ ಥ್ಯಾಂಕ್ಸ್ .

    ReplyDelete
  6. ಡಾಕ್ಟ್ರೆ,
    ಚಂದದ ಕಥೆ ಹೇಳಿ ಮನಸಿಗೆ ಚಿಕಿತ್ಸೆ ನೀಡಿದ್ದೀರಿ.

    ReplyDelete
  7. NRK ;ಅವರಿಗೆ ನಮಸ್ಕಾರಗಳು.ಮನುಷ್ಯನ ಮನಸ್ಸು ಸಂಕೀರ್ಣ ,ಅದು ಹರಿಯುವ ನದಿಯಂತೆ ಬದಲಾಗುತ್ತಲೇ ಇರುತ್ತದೆ .ಆದ್ದರಿಂದ ಎಂದೋ ನಡೆದ ಯಾವೊದೋ ಒಂದು ಘಟನೆಯ ಆಧಾರದ ಮೇಲೆ ಈ ವ್ಯಕ್ತಿ ಹೀಗೇಎಂದು ನಿರ್ಧರಿಸಿ ಬಿಡುವುದು ಎಷ್ಟು ಸರಿ ?ಆದರೆ ನಾವೆಲ್ಲಾ ಮಾಡುತ್ತಿರುವುದೇನು?ನಮ್ಮ ನಡವಳಿಕೆ ಒಬ್ಬೊಬ್ಬರ ಹತ್ತಿರ ಒಂದೊಂದು ತರವಾಗಿ ಇರುವುದು ಏಕೆ ?ಇವೆಲ್ಲಾ ಯೋಚಿಸುವಂತಹ ವಿಷಯಗಳು.
    ಧನ್ಯವಾದಗಳು.

    ReplyDelete
  8. ನಮಸ್ಕಾರ ಭಟ್ ಸರ್ .ಕಥೆ ಚಂದ ಅಂತ ಹೇಳಿದಿರಿ .ಕಥೆ ಹೇಳಿದವನಿಗೆ ಇದಕ್ಕಿಂತ ಒಳ್ಳೆ ಚಿಕಿತ್ಸೆ ಬೇಕಾ!ಧನ್ಯವಾದಗಳು .

    ReplyDelete
  9. ಈ ಭಾಗದಲ್ಲಿ ಕಥೆಗೆ ಹೊಸ ತಿರುವು ನೀಡಿ ಓದುಗರನ್ನು ಮತ್ತೆ ಬೆಚ್ಚಿಸಿದ್ದಿರಿ. ಚೆ೦ದದ ಕಥೆ.

    ReplyDelete
  10. ನಮಸ್ಕಾರ ಸೀತಾರಾಮ ಸರ್.ಕಥೆ ನಿಮಗೆ ಇಷ್ಟವಾಗಿದ್ದು ಸಂತೋಷ .ಮನಸ್ಸಿನ ವಿವಿಧ ರೂಪಗಳ ಅನಾವರಣ ಕಥೆಯ ಆಶಯ.ಧನ್ಯವಾದಗಳು .

    ReplyDelete
  11. namaskara sir
    second partalli
    kathena twist maadi bitralla...

    good one
    keep on showig the two face of incidents

    ReplyDelete
  12. Nice story sir,

    Your blog is a good place to relax in the middle of busy work schedule....

    ReplyDelete
  13. ಮೊದಲನೆ ಕಥೆ ಒಂದು ಮುಖವಾದರೆ, ಎರಡನೆಯದು ಇನ್ನೊಂದು ಮುಖ ತೋರಿಸಿತು. ಚಂದದ ಕಥೆಗಳು

    ReplyDelete
  14. ಹಾಯ್ ಅಶೋಕ್, ಬ್ಲಾಗಿಗೆ ಬರುತ್ತಿರಿ
    ನಮಸ್ಕಾರ

    ReplyDelete
  15. ಧನ್ಯವಾದಗಳು ಉದಯ್ ಅವರೆ,
    ಧನ್ಯವಾದಗಳು ದೀಪಸ್ಮಿತ ಅವರೆ,
    ನನ್ನ ಕಂಪ್ಯೂಟರ್ ಕೆಟ್ಟಿರುವುದರಿಂದ ಬ್ಲಾಗ್ ಮತ್ತೆ ಶುರು ಮಾಡುವುದು
    ಸ್ವಲ್ಪ ತಡವಾಗ ಬಹುದು, ಕ್ಷಮೆಯಿರಲಿ

    ReplyDelete

Note: Only a member of this blog may post a comment.