ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .
ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .
ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .
ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .
ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .
'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.
ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .
ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.
'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
:D :D oLLE marevu....
ReplyDeleteBALYAKALADA 'NENAPINA' BENNIGE MUDIGALADA'MAREVU',BADUKINA YATREYA ERADU ANUBHAVAGALU.MUPPIGE-MAREVU ONDU VARADANAVE?
ReplyDeleteಧನ್ಯವಾದಗಳು ಯಶಸ್ವಿನಿಯವರೇ ----------ಓ ------ಸಾರಿ,ತೇಜಸ್ವಿನಿಯವರೇ.ಹ --ಹ --ಹಾ.ನನಗಿನ್ನೂ ಅಷ್ಟೊಂದು ಮರೆವು ಬಂದಿಲ್ಲಾ ಮೇಡಂ ! .
ReplyDeleteಧನ್ಯವಾದಗಳು ಹೇಮಚಂದ್ರ .ನದಿಯ ಮಧ್ಯೆ ಈಜುವಾಗ ಎರಡೂ ದಡಗಳನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದಲ್ಲವೇ?ನೀವು ಹೇಳಿದ ಹಾಗೆ ಮರೆವೂ ಕೂಡ ಒಂದು ವರವೇ .
ReplyDeletehmm, someday, everyone has to go through this phase.
ReplyDeleteನಾರಾಯಣಮೂರ್ತಿಗಳೇ...ಅಯ್ಯೊ ..ಮರೆತುಹೋಯ್ತು...ಕೃಷ್ಣಮೂರ್ತಿಗಳೆ,
ReplyDeleteಕಿವುಡತನ ಮತ್ತು ಮರೆವು ವಯಸ್ಸಾದ ಕಾಲದಲ್ಲಿ ಒಳ್ಳೆಯದೇ ಏನೋ...?? :D..:). ನೀವು ಮರೆಯದೇ ಇಲ್ಲಿ ಬರೆದುದು ಸಂತೋಷವಾಯಿತು.
Thank you Nisha.Thanks for your kind comments.You are right .Every one has to go through all this provided one lives long enough.It is all in a lighter vein.
ReplyDeleteಸುಬ್ರಮಣ್ಯ ಅವರಿಗೆ ನಮಸ್ಕಾರಗಳು.ಮರೆಯದೆ ಕಾಮೆಂಟ್ಸ್ ಮಾಡಿದ್ದಕ್ಕೆ ಧನ್ಯವಾದಗಳು.
ReplyDeleteಹಹಹಾ.. ಮರೆಗುಳಿಗಳ ಬಗ್ಗೆ ಬರೆದು ಒಳ್ಳೆ ನಗೆಗುಳಿಗೆ ಕೊಟ್ಟಿದ್ದೀರ..ಚೆನ್ನಾಗಿದೆ.
ReplyDeleteನಿಮ್ಮ ನೆನೆಪು ಚೆನ್ನಾಗಿದೆ ರಾಮಮೂರ್ತಿಗಳೇ, ನೀವು ಹಳೇ ಮೈಸೂರಿನಲ್ಲಿ ಶಿಕ್ಷಕರಲ್ಲವೇ, ಚೆನ್ನಾಗಿ ಗೊತ್ತುಬಿಡಿ, ಅದೇ ಗಾಂಧೀಜಿಯವರ ಸರಳತನ, ಕಣ್ಣಿಗೆ ಹಳೇ ಉರುಟು ಗ್ಲಾಸು, ಖಾದಿ ಪಂಚೆ, ಉದ್ದ ಕಾವಿನ ಬಿಳೇ ಬಣ್ಣಕ್ಕೆ ಪ್ರಮೋಶನ್ ಪಡೆದ ಕೊಡೆ ನಿಮ್ಮನ್ನು ಮರೆಯಲು ಸಾಧ್ಯವೇ? ಅಂದಹಾಗೆ ನೀವು ಹೆಸರು ಬದಲಾಯ್ಸಿಕೊಂಡಿರೆ? ಓಹೋ ಸಾರಿ ಸಾರಿ ನೀವು ಡಾ| ಕೃಷ್ಣಮೂರ್ತಿ, ಇರಲಿ ಅನ್ಯಥಾ ಭಾವಿಸಬೇಡಿ ನಂಗೆ ಸ್ವಲ್ಪ ಗೊತ್ತಾಗಿಲ್ಲ, ಇನ್ನೆಲ್ಲ ಗೊತ್ತಾಗುತ್ತೆ ಬಿಡಿ,ನಮಸ್ಕಾರ
ReplyDeleteನಗೆ ಗುಳಿಗೆ ತಿಂದು ನೂರು ವರ್ಷ ನಗು ನಗುತ್ತಾ ಇರಿ ಮನಮುಕ್ತಾ ಅವರೇ .ಧನ್ಯವಾದಗಳು.
ReplyDelete'ತಪ್ಪು ತಿಳಿಯ ಬೇಡಿ ಹೆಗ್ಗಡೆಯವರೇ .ನಾನು ಅದೇ ರಾಮ ಮೂರ್ತಿನೇ.ನೀವು ಬಹಳ ಬದಲಾಗಿದ್ದೀರಿ.ಜೊತೆಗೆ ಥಟ್ ಅಂತ ಹೆಸರೂ ಬದಲಾಯಿಸಿಕೊಂಡಿದ್ದೀರಿ!!!ಈಗ ಮೈಸೂರಿನಲ್ಲೇ ತಾನೇ ಇರೋದು ?' ಎಂಬತ್ತಕ್ಕೆ ನಾವೂ ಹೀಗೇ ಇರುತ್ತೆವೇನೋ !ಅಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದರಲ್ಲಾ ಭಟ್ಟರೆ !ನೀವಿಲ್ಲದೆ ಬ್ಲಾಗ್ ಭಣ ಭಣ ಎನ್ನುತ್ತಿತ್ತು.ಧನ್ಯವಾದಗಳು.
ReplyDeleteಇಬ್ಬರೂ ಮರೆಗುಳಿಗಳಾಗಿದ್ದಕ್ಕೆ ಸಮಸ್ಯೆ ಬಗೆ ಹರಿಯಿತು ಅಲ್ಲವೇ!!!
ReplyDeleteಚೆ೦ದದ ಹಾಸ್ಯಾಯಣ.
many times it proves that ignorance is bliss :)
ReplyDeleteನಮಸ್ಕಾರ ಸೀತಾರಾಮ್ .ಇಬ್ಬರ ಮರೆವು ಇಲ್ಲಿ ಇಬ್ಬರಿಗೂ ವರವಾಗಿದೆ!ಧನ್ಯವಾದಗಳು.
ReplyDeleteYes,ignorance is indeed a blessing in disguise at times.It is better not to know the truth than to know it and be bitter about it.Thanks for your kind comments.
ReplyDeletei forget, wat to write . . .ha ha
ReplyDeleteYou havenot forgotten to visit my blog at least!thank you sir.
ReplyDelete