ನಾವು ಮಧ್ಯಮ ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್
ನಮಗೆ ------- ದುಬಾರಿ !
ಆದರೇನು ಮಾಡೋಣ ?
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !
ನಿಜಾ ಸರ್
ReplyDeleteವಸ್ತುತಃ ಚಿತ್ರಣ ಇದು
ನಾವು ಎಂದಿಗೂ ನಮ್ಮನ್ನು ಸುಖಿಗಳು ಎಂದುಕೊಳ್ಳುವುದೇ ಇಲ್ಲ
ಸದಾ ಅಳುವುದೇ ನಮ್ಮ ಮನೋಭಾವ
ಸುಂದರ ಕವನ
ಹಹಹ...ಸರಳ ಪದಗಳಲ್ಲಿ , ವಾಸ್ತವವನ್ನು ಮತ್ತು ನಮ್ಮ ಮನೋಸ್ಥಿತಿಯನ್ನು ತೆರೆದಿಟ್ಟಿದ್ದೀರಿ. ತುಂಬ ಚೆನ್ನಾಗಿದೆ. ಧನ್ಯವಾದಗಳು.
ReplyDeleteನಿಜವಾದ ಮಾತು !!!
ReplyDeleteನಮಸ್ಕಾರ ಗುರು ಅವರೇ ,ನಮಸ್ಕಾರ ಸುಬ್ರಮಣ್ಯ ಅವರೇ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ReplyDeleteಧನ್ಯವಾದಗಳು ಸೀತಾರಾಮ್.
ReplyDeleteಚೆನ್ನಾಗಿದೆ, ನಾವು ಮಧ್ಯಮವರ್ಗವಾದರೆ ತೊದರೆಯಿಲ್ಲ ನಾವು 'ಮದ್ಯ'--ಮ ವರ್ಗವಾದರೆ ಕಷ್ಟ ಅಲ್ಲವೇ, ಶ್ರೀಮಂತರ ಚಟಗಳನ್ನೆಲ್ಲ ಇತ್ತೀಚೆಗೆ ಮಧ್ಯಮವರ್ಗದವರು ಅಂಟಿಸಿಕೊಂಡಿದ್ದಾರೆ, ತಮ್ಮ ಅನಿಸಿಕೆ ಚೆನ್ನಾಗಿದೆ,ಧನ್ಯವಾದ
ReplyDeleteತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಭಟ್ಟರೆ .ನೀವು ಹೇಳಿದ ಹಾಗೆ ಈಚೆಗೆ ಕೆಲವು ಮಧ್ಯಮ ವರ್ಗಗಳು ಮದ್ಯಮ ವರ್ಗವಾಗುತ್ತಿರ್ವುದು ನಿಜ.ಆಗ ಮದ್ಯಮ ವರ್ಗದ ಕಷ್ಟಗಳು ಒಳೊಗೊಳಗೆ ಬಿಕ್ಕುತ್ತವೆ .
ReplyDeleteನಿಜ ನಾವು ಹೇಗೆ ನೋಡಿದರು ಮ-ಧ್ಯ-ಮ
ReplyDeleteನಾವು ಮಿತಿ ಮೀರದ ಇತಿಯಲ್ಲೇ ಇರುವ ಇತಿ ನಿಮ್ಮ ವಿಶ್ -ವಾಸಿ ,ಮಧ್ಯಮ ವರ್ಗ.
ReplyDelete