Wednesday, April 7, 2010

ನಾವು -------ಮಧ್ಯಮ ವರ್ಗ!

ನಾವು ಮಧ್ಯಮ ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ 
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್ 
ನಮಗೆ ------- ದುಬಾರಿ !
ಆದರೇನು ಮಾಡೋಣ ?                         
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !          

9 comments:

  1. ನಿಜಾ ಸರ್
    ವಸ್ತುತಃ ಚಿತ್ರಣ ಇದು
    ನಾವು ಎಂದಿಗೂ ನಮ್ಮನ್ನು ಸುಖಿಗಳು ಎಂದುಕೊಳ್ಳುವುದೇ ಇಲ್ಲ
    ಸದಾ ಅಳುವುದೇ ನಮ್ಮ ಮನೋಭಾವ
    ಸುಂದರ ಕವನ

    ReplyDelete
  2. ಹಹಹ...ಸರಳ ಪದಗಳಲ್ಲಿ , ವಾಸ್ತವವನ್ನು ಮತ್ತು ನಮ್ಮ ಮನೋಸ್ಥಿತಿಯನ್ನು ತೆರೆದಿಟ್ಟಿದ್ದೀರಿ. ತುಂಬ ಚೆನ್ನಾಗಿದೆ. ಧನ್ಯವಾದಗಳು.

    ReplyDelete
  3. ನಮಸ್ಕಾರ ಗುರು ಅವರೇ ,ನಮಸ್ಕಾರ ಸುಬ್ರಮಣ್ಯ ಅವರೇ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  4. ಧನ್ಯವಾದಗಳು ಸೀತಾರಾಮ್.

    ReplyDelete
  5. ಚೆನ್ನಾಗಿದೆ, ನಾವು ಮಧ್ಯಮವರ್ಗವಾದರೆ ತೊದರೆಯಿಲ್ಲ ನಾವು 'ಮದ್ಯ'--ಮ ವರ್ಗವಾದರೆ ಕಷ್ಟ ಅಲ್ಲವೇ, ಶ್ರೀಮಂತರ ಚಟಗಳನ್ನೆಲ್ಲ ಇತ್ತೀಚೆಗೆ ಮಧ್ಯಮವರ್ಗದವರು ಅಂಟಿಸಿಕೊಂಡಿದ್ದಾರೆ, ತಮ್ಮ ಅನಿಸಿಕೆ ಚೆನ್ನಾಗಿದೆ,ಧನ್ಯವಾದ

    ReplyDelete
  6. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಭಟ್ಟರೆ .ನೀವು ಹೇಳಿದ ಹಾಗೆ ಈಚೆಗೆ ಕೆಲವು ಮಧ್ಯಮ ವರ್ಗಗಳು ಮದ್ಯಮ ವರ್ಗವಾಗುತ್ತಿರ್ವುದು ನಿಜ.ಆಗ ಮದ್ಯಮ ವರ್ಗದ ಕಷ್ಟಗಳು ಒಳೊಗೊಳಗೆ ಬಿಕ್ಕುತ್ತವೆ .

    ReplyDelete
  7. ನಿಜ ನಾವು ಹೇಗೆ ನೋಡಿದರು ಮ-ಧ್ಯ-ಮ

    ReplyDelete
  8. ನಾವು ಮಿತಿ ಮೀರದ ಇತಿಯಲ್ಲೇ ಇರುವ ಇತಿ ನಿಮ್ಮ ವಿಶ್ -ವಾಸಿ ,ಮಧ್ಯಮ ವರ್ಗ.

    ReplyDelete

Note: Only a member of this blog may post a comment.