Monday, April 5, 2010

ಮಾತಿನ ಕಲ್ಲು --------ಬೀರುವ ಮುನ್ನ!

ಒಡೆದ ಮನಸ್ಸಿನ ,
ಕನ್ನಡಿಯೊಳಗಿರುವ ,
ಬಿರುಕುಗಳ  ಗಡಿಯಾಚೆ 
ಕಂಡ ಸಂಬಧಗಳು 
ಛಿನ್ನಾ------- ಛಿದ್ರ!
ಕನ್ನಡಿ ಒಡೆದರೆ 
ಬಿಂಬಗಳೂ ಚೂರು ಚೂರು !
ಒಡೆದು ವಿಕೃತ ಗೊಂಡ 
ಮನಕ್ಕೆ -------------,                  
ಕಂಡಿದ್ದೆಲ್ಲಾ ------ವಿಕೃತ !
ಆದ್ದರಿಂದ------------,
ಮಾತಿನ ಕಲ್ಲು ಬೀರುವ ಮುನ್ನ ,
ಮನಸ್ಸು ಕನ್ನಡಿಯಂತೆ 
ಎಂಬ ------------,
ಎಚ್ಚರವಿರಲಿ ----------!

6 comments:

  1. ತುಂಬಾ ಚೆನ್ನಾಗಿದೆ. ಉಪಮೆ ಹಾಗೂ ಅದನ್ನು ಬಳಸಿಕೊಂಡ ರೀತಿ ತುಂಬಾ ಇಷ್ಟವಾಯಿತು. ನಿಜ... ಮಾತು ಆಡಿದರೆ ಹಾಗೂ ಮುತ್ತು ಒಡೆದರೆ ಮುಗುದೇ ಹೋಯಿತು.

    ReplyDelete
  2. ಅದಕ್ಕೇ ಒಡೆದ ಕನ್ನಡಿಯನ್ನು ಮನೆಯಲ್ಲಿ ಬಳಸಬಾರದೆಂಬ ಶಾಸ್ತ್ರ, ಒಡೆದ ಮನವನ್ನು ಧ್ಯಾನದಿಂದ.ಪರಿಶ್ರಮದಿಂದ, ಹಲವು ರೀತಿಯ ಅರ್ಥೈಸುವಿಕೆಯಿಂದ ಮತ್ತೆ ಒಮ್ಮತಕ್ಕೆ ತರಬಹುದು, ಒಡೆದ ಮನದವರಿಗೆ ಇದನ್ನೇ ಬೋಧಿಸಿದರೆ ಒಳಿತು, ಮನ ಒಡೆದ ಕನ್ನದಿಯ, ಮುತ್ತಿನ ಹಾಗಲ್ಲ, ಅದನ್ನು ಮತ್ತೆ ಸೇರಿಸಿ ತಾಳ್ಮೆಯಿಂದ ಪೇರಿಸಿ ಹೊಸತನ ಕೊಡಬಹುದು, ಇಲ್ಲಿ ಇನ್ನೊಂದು ಕ್ರಿಯಾಶೀಲ, ಸಜ್ಜನ ಮನಸ್ಸಿನ ತಾಳ್ಮೆಯ ಪ್ರಯತ್ನದ ಅಗತ್ಯವಿದೆ, ಕವನ ಅರ್ಥಪೂರ್ಣ, ಧನ್ಯವಾದಗಳು

    ReplyDelete
  3. ಕವನ ಅರ್ಥಪೂರ್ಣವಾಗಿದೆ. ಒಡೆದ ಕನ್ನಡಿಯನ್ನು ಸೇರಿಸಲು ಸಾಧ್ಯವಿಲ್ಲ. ಸೇರಿಸಿದರೂ ಅದು ಪರಿಪೂರ್ಣ ಕನ್ನಡಿಯಾಗಿ ಉಳಿಯುವುದಿಲ್ಲ! ಆದರೆ ಒಡೆದ ಮನಸ್ಸನ್ನು ಸೇರಿಸಲು ಸಾಧ್ಯ. ಒಡೆದ ಮಾತನ್ನಲ್ಲ!
    ಒಳ್ಳೆಯ ಸಂದೇಶ ನೀಡಿದ್ದೀರಾ.
    ಸುಂದರ ಕವನ.

    ReplyDelete
  4. ಬ್ಲಾಗಿಗೆ ಬಂದ ತೇಜಸ್ವಿನಿ ಹೆಗಡೆ ವಿ .ಅರ .ಭಟ್ ಮತ್ತು ಪ್ರವೀಣ್ ಅವರಿಗೆ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.ತಾವೆಲ್ಲಾ ಹೇಳಿದಂತೆ ಮುರಿದ ಮನುಸ್ಸುಗಳನ್ನು ಜೋಡಿಸುವುದು ಸಾಧ್ಯ .ಆ ನಿಟ್ಟಿನ ಕಡೆ ನಮ್ಮ ಎಲ್ಲಾ ಪ್ರಯತ್ನಗಳೂ ನಡೆಯಬೇಕು .ಅದಕ್ಕೆ ಇನ್ನೊಂದು ಕಡೆಯಿಂದಲೂ ತಕ್ಕ ಸ್ಪಂದನ ಇರಬೇಕಾಗುತ್ತದೆ.ಎರಡೂ ಕಡೆ ಕ್ಷಮಾಗುಣವೆಂಬ ಅಂಟು ಸಾಕಷ್ಟು ಪ್ರಮಾಣದಲ್ಲಿ ಇರಬೇಕಾಗುತ್ತದೆ .ಆದರೆ ಇದಕ್ಕೆ ನಮ್ಮ ನಮ್ಮ ಅಹಂಕಾರ ಅಡ್ಡಿ ಬರುತ್ತದೆ .ಆದರೆ ಮಾತನಾಡುವ ಮೊದಲೇ ಸಾಕಷ್ಟು ಎಚ್ಚರಿಕೆ ವಹಿಸಿದರೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ಕವಿತೆಯ ಆಶಯ .

    ReplyDelete
  5. ಮಾತಿನ ಕಲ್ಲೆಸೆಯುವ ಮುನ್ನ ಯೋಚಿಸು ಮನ ಕನ್ನಡಿಯ೦ತೇ ಎ೦ಬ ಸಾಲುಗಳು ತು೦ಬಾ ಅರ್ಥಪೂರ್ಣ. ಮನ ಒಡೆಯುವದಲ್ಲದೇ ಬೆರೆಸಲಾಗದು ಜೊತೆಗೆ ಕನ್ನಡಿಯಲ್ಲಿ ಕಾಣುವದು ನೀನೇ ಅಲ್ಲವೇ!! ಕಲ್ಲೆಸೆದು ಮನ ಮುರಿದರೇ ಕಾಣುವ ನೀನೆ ಛಿದ್ರವಲ್ಲವೇ!!
    ಚೆ೦ದದ ಕವನ.

    ReplyDelete
  6. ಕೆ.ಸೀತಾರಾಂ ಅವರೇ ,ತಮಗೆ ನನ್ನ ಬ್ಲಾಗಿಗೆ ಸ್ವಾಗತ .ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಮನಸ್ಸು ಮುರಿದ ಮೇಲೆ ಅದನ್ನು ಜೋಡಿಸುವುದಕ್ಕಿಂತ ಅದು ಮುರಿಯದಂತೆ ಮೊದಲೇ ಎಚ್ಚರಿಕೆ ವಹಿಸುವುದು ಸುರಕ್ಷತೆಯ ದೃಷ್ಟಿ ಯಿಂದ ಒಳ್ಳೆಯದು ಎನಿಸುತ್ತದೆ.ವಿಶೇಷವಾಗಿ
    ನಾವು ಕೋಪಗೊಂಡಾಗ ಮಾತಿಗಿಂತ ಮೌನವಾಗಿರುವುದೇ ಲೇಸು ಎನಿಸುತ್ತದೆ .ಬ್ಲಾಗಿಗೆ ಬರುತ್ತಿರಿ .ತಮ್ಮ ಅಭಿಪ್ರಾಯಗಳ ತಿಳಿಸುತ್ತಿರಿ.

    ReplyDelete

Note: Only a member of this blog may post a comment.