ಬ್ಲಾಗಿನ ------ಚಾರಣಿಗರೇ!
ಹೀಗೇ ಬನ್ನಿ --------ಇಲ್ಲೇ ,
ಸ್ವಲ್ಪ ವಿರಮಿಸಿಕೊಳ್ಳಿ
ಈ ನನ್ನ --------ಚಾವಡಿಯಲ್ಲಿ !
ಕಷ್ಟಗಳ ಬೆಟ್ಟವೇರಿ ಸುಸ್ತೆ ?
ಚಿಂತೆಯ 'ಬ್ಯಾಕ್ ಪ್ಯಾಕ್' '
ಕೆಳಗಿಳಿಸಿ ----ಹಾಂ --ಹಾಗೆ.
ಕುಳಿತುಕೊಳ್ಳಿ ---ಇಲ್ಲೇ !
'ಕೊಳಲ'ನೂದಲೇ? ,ಗಾಳಿ ಬೀಸಲೇ ?
ಬೇಸರವ ಬದಿಗಿರಿಸಿ ,ನಕ್ಕುಬಿಡಿ ಒಮ್ಮೆ !
ಹಾಗೇ ಇರಿ ಒಂದು ಚಣ !
ಈ ಕ್ಷಣದ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ,
ನೆನಪಿನ ಫೋಟೋಗಳನ್ನು
ಕೊಟ್ಟುಬಿಡುತ್ತೇನೆ ನಿಮಗೇ!
ಏನು ಕುಡಿಯುತ್ತೀರಿ ಆಸರೆಗೆ ?
ಹನಿಗವನಗಳ ಪಾನಕವೇ ?
ಕವಿತೆಗಳ ಎಳನೀರೆ?
ಅನಿಸಿಕೆಗಳ ಮಜ್ಜಿಗೆಯೇ ?
ಎಲ್ಲವೂ ಇದೆ ಇಲ್ಲಿ !
ಧನ್ಯವಾದಗಳು ಬಂದಿದ್ದಕ್ಕೆ !
ಮತ್ತೆ ಬನ್ನಿ ಮರೆಯದೇ,
ಈ ನನ್ನ ಬ್ಲಾಗಿನ ----ಚಾವಡಿಗೆ !
ನಾನೂ ಇದೇ ಮೊದಲು ನಿಮ್ಮ ಬ್ಲಾಗಿಗೆ ಭೇಟಿ ಇಡುತ್ತಿರುವುದು. ಆಸ್ರಿಗೆ ಕೇಳಿದ್ದು ಕಾವ್ಯಮಯವಾಗಿದೆ. ದಣಿವೆಲ್ಲ ನೀಗಿತು. ಆಗಾಗ ಆಸ್ರಿ ಕುಡ್ಯಲು ಖಂಡಿತ ಬರುತ್ತಿರುವೆ ಇಲ್ಲಿಗೆ.
ReplyDeleteಇಷ್ಟೊಳ್ಳೆ ಉಪಚಾರ, ಆಸರಿಯೆಲ್ಲಾ ಇದ್ದು ಹೇಳಾದ್ರೆ ತಪ್ಪದೇ ಬರ್ತೆ :)
ReplyDeleteಓ.. ಭಾರಿ ಚೊಲೊ ಕರಿಯಾವೇಯ..(invitation). ಇಷ್ಟೆಲ್ಲಾ ಚೊಲೋವ ನಮ್ನಮ್ನಿ ಆಸ್ರಿಗೆ ಎಲ್ಲಾ ಕೊಟ್ಟು ಬನ್ನಿ ಹೇಳಿ ಕರ್ಯಾಕಾರೆ, ಬ್ಲಾಗ್ ಚಾವಡಿಗೆ ಬರದ್ದೇ ಇಪ್ಲಾಗತಿಲ್ಲೆ.ಯ೦ಗವ್ವು ಬಪ್ಪದ್ರ ಜೊತಿಗೆ ನೆ೦ಟ್ರನ್ನೂ ಕರಕ ಬತ್ಯ!!!
ReplyDeleteಅಬ್ಬಾ ! ಈ ಸೆಕೆಯಲ್ಲಿ ನೀವು ಕೋಟ್ಟ ಎಲ್ಲಾ ಪಾನೀಯಗಳೂ ದಾಹ ತಣಿಸಿದವು. ಮತ್ತೆ ಬರುತ್ತೇನೆ...
ReplyDeleteಆಸರಿಗೆ ಕುಡಿದಾಯ್ತು, ಹನಿಗವನಗಳ ಪಾನಕ,ಕವಿತೆಗಳ ಎಳನೀರೆ,ಅನಿಸಿಕೆಗಳ ಮಜ್ಜಿಗೆ ಎಲ್ಲವನ್ನೂ ಏಕಕಾಲಕ್ಕೆ ಅಂದ್ರೆ ಮೂತ್ರ ಶಂಕೆ ಕಾಡಬಹುದು, ದಿನವೂ ಒಂದೊಂದೇ ಕೊಡಿ ಸಾಕು, ಎಷ್ಟೆಂದರೂ ನಿಮಗೆ 1-0-0 ಬರೆದು ಅಭ್ಯಾಸ ಇದೆಯಲ್ಲವೇ ? ಹೀಗಾಗಿ ತಪ್ಪು ತಿಳಿಯಬೇಡಿ, ನಮ್ಮ ಹೊಟ್ಟೆ ಸಣ್ಣದು, ಅದಕ್ಕೇ ಹೇಳಿದೆ, ಕವನ ಚೆನ್ನಾಗಿದೆ ಸ್ವಾಮೀ, ಬೇಸಿಗೆ ಸೆಕೆ ಹಾರೆ ಹೋಯಿತು, ಹರೇ ರಾಮ, ಕೃಷ್ಣಾ ನಿನ್ನ ಕೊಳಲಿನ ನಾದಕ್ಕೆ ಮನಸೋತು ಇಲ್ಲೇ ಮಲಗಿರುವೆ,ಧನ್ಯವಾದಗಳು
ReplyDeleteಸಾಗರಿ ಅವರಿಗೆ ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ಆಗಾಗ ಬರುತ್ತಿರಿ .ರಾಶಿ ಖುಷಿ ಆಯ್ತು! ಆಸ್ರಿಗೆ ಖಂಡಿತಾ ವ್ಯವಸ್ತೆ ಮಾಡ್ತೆ .
ReplyDeleteನಮಸ್ಕಾರ ತೇಜಸ್ವಿನಿಯವರಿಗೆ .ನಿಮ್ಮೆಲ್ಲರ ಪ್ರೋತ್ಸಾಹದ ಆಸರೆಯಲ್ಲಿ ಬೆಳೆದವನು ನಾನು !.ನೀವೆಲ್ಲಾ ನನ್ನ ಬ್ಲಾಗಿಗೆ ಬರುತ್ತೀರಿ ,ಎರಡು ಹಿತನುಡಿಗಳ ಸಿಂಚನ ನೀಡುತ್ತೀರಿ ! ಮತ್ತೇನು ಬೇಕು ? ಧನ್ಯವಾದಗಳು !
ReplyDeleteಮನಮುಕ್ತಾ ಅವರಿಗೆ ನಮಸ್ಕಾರಗಳು.ಹೊಗಳೋಕೆ ನಾನು ಇದನ್ನು ಹೇಳ್ತಾ ಇಲ್ಲ .ನಿಜಕ್ಕೂನಿಮ್ಮ ಹವ್ಯಕ ಕನ್ನಡದ ಸೊಗಡೇ ಬೇರೆ ಕಣ್ರೀ !
ReplyDeleteಅದೆಷ್ಟು ಲಿರಿಕಲ್ ಆಗಿ !ಅದೆಷ್ಟು ಕಾವ್ಯಮಯವಾಗಿದೆಯಲ್ಲಾ !ಇನ್ನು ಮೇಲೆ ನಿಮ್ಮ ಕಾಮೆಂಟ್ಸ್ ಅನ್ನು ನಿಮ್ಮ ಭಾಷೆಯಲ್ಲೇ ಬರೀಲಿಕ್ ಅಡ್ಡಿ ಇಲ್ಲ !
ಸುಬ್ರಮಣ್ಯ ಅವರಿಗೆ ನಮಸ್ಕಾರ .ನೀವು ನಮ್ಮ ಚಾವಡಿಗೆ ಬಂದಿದ್ದು ಸಂತೋಷ !ಎಲ್ಲಾ ಪಾನೀಯಗಳನ್ನೂ ಒಟ್ಟಿಗೆ ಕುಡಿದು ಮತ್ತು ಬಂದಿದ್ದು ಮತ್ತೂ ಸಂತೋಷ !ಆಗಾಗ ಬರುತ್ತಿರಿ .ಖುಷಿ ಹಂಚಿಕೊಳ್ಳುತ್ತಿರಿ !ಧನ್ಯವಾದಗಳು.
ReplyDeleteವಿ .ಆರ್ .ಭಟ್ ಸರ್ ರವರಿಗೆ ನಮಸ್ಕಾರಗಳು. ಸರ್ ,ನಿಮಗೆ ಶಂಕೆಯ ಬಗ್ಗೆಯಾಗಲೀ,ಆಮಶಂಕೆಯ ಬಗ್ಗೆಯಾಗಲೀ ಚಿಂತೆ ಬೇಡ !ಅದಕ್ಕೂ ನಮ್ಮಲ್ಲಿ ನಗೆ ಗುಳಿಗೆಗಳು ಇವೆ !ನಿಮ್ಮೆಲ್ಲರ ಪ್ರೋತ್ಸಾಹದ ಟಾನಿಕ್ ನನಗೆ ಸಿಗುತ್ತಿದ್ದರೆ ಸಾಕು !ಕೊಳಲಿನ ನಾದ ನಿಮಗೆ ಇಷ್ಟವಾದದ್ದು ಸಂತೋಷ .
ReplyDeleteಚಾವದಿಯಲ್ಲಿ ಹರಟೆ ಇದೆ. ಮನರ೦ಜನೆ ಇದೆ. ಆಸ್ರಿ ಇದೆ. ಸೊಗಸಾದ ಪ್ರತಿಕ್ರಿಯೆಗಳಿವೆ. ಇನ್ನೇನು ಬೇಕು -ಸ್ವಲ್ಪ್ ಹೊತ್ತು ವಿರಮಿಸುತ್ತಾ ಇರ್ತಿವ್ರಿ ಅವಾಗಾವಾಗ್ಗೆ ಬ೦ದು!
ReplyDeleteನಮಸ್ಕಾರ ಸೀತಾರಂ ಸರ್.ಚಾವಡಿ ನಿಮ್ಮದು ,ನಿಮ್ಮಿಂದ ,ನಿಮಗಾಗಿ .ನಿಮಗಿಲ್ಲಿ ಸದಾ ಸ್ವಾಗತ ಸರ್ !ಒಟ್ಟಾಗಿ ಕನ್ನಡದ ಚಾವಡಿ ಕಟ್ಟೋಣ !ಕನ್ನಡ ಚಾವಡಿ ಬೆಳೆಸೋಣ !ಕನ್ನಡ ಸಾಹಿತ್ಯದ ಸವಿಯ ಒಟ್ಟಾಗಿ ಸವಿಯೋಣ !
ReplyDeleteಸರ್, ತುಂಬಾ ದಣಿದಿದ್ದೆ, ನಿಮ್ಮ ಬ್ಲಾಗ್ ನ ಪಾನೀಯ ದಣಿವನ್ನು
ReplyDeleteನಿವಾರಿಸಿದವು
ಸುಂದರ ಕವನ
ಎಷ್ಟೆಲ್ಲ ದಿನ ಆಗಿತ್ತು; ಯಾರ ಹತ್ತಿರನೂ ಹೀಗೆ ಆಸರಿಗೆ ಕೇಳಿಸಿಕೊಳ್ಳದೆ. ಮನೆಗೆ ಹೋದರೂ "ಬಂದ್ಯ" ಅಂತ ಹೇಳಿ ಟೀವಿ ಧಾರಾವಾಹಿ ನೋಡ್ತಾ ಕುಳ್ತಿರ್ತ. ನಾವೂ ಅದನ್ನೇ ನೋಡಲೇಬೇಕು. ನೀವು ಆಸರಿಗೆ ಕೇಳಿದ್ದು ನೋಡಿ ಭಾರೀ ಖುಷಿ ಆತು. ಖಂಡಿತಾ ಆಗಾಗ ಬರ್ತಿರ್ತಿ.
ReplyDeleteಗುರು ಸರ್ ,ಇದೆ ಈಗ ನಿಮ್ಮ ಬ್ಲಾಗಿಗೆ ಹೋಗಿ ಡೆನ್ಮಾರ್ಕಿನ ಹಡಗಿನ ಪ್ರವಾಸ ಮಾಡಿ ಬಂದೆ .ನಿಮ್ಮ ಆಯಾಸ ಪರಿಹಾರವಾಗಿದ್ದು ಸಂತೋಷ .ಆಗಾಗ ಬ್ಲಾಗಿಗೆ ಬರುತ್ತಿರಿ .ಧನ್ಯವಾದಗಳು.
ReplyDeleteಬಾಲು ಸರ್ ,ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ನಾನು ನಿಮ್ಮ ಬ್ಲಾಗಿಗೆ ಹೋಗಿ ಫಾಲೋಯರ್ ಆಗಿದ್ದೇನೆ .ಆಗಾಗ ಬರುತ್ತಿರಿ .ಧನ್ಯವಾದಗಳು .
ReplyDelete