Thursday, April 15, 2010

'ಬಾಲ್ಯ'

ಬಾಲ್ಯದ --------ಕನಸುಗಳು ,
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ  ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,                            
ಆ -------ನನ್ನ  ಬಾಲ್ಯ !               

22 comments:

  1. ಚೆನ್ನಾಗಿದೆ...
    ಕಳೆದುದು ಸಿಕ್ಕಿದೆ ಅ೦ತಾ ಟೋಪೀ ಆಟ ನೆನಪಿದೆಯೆ..ಸರ್...? ಆದರೆ ಕಳೆದ ಬಾಲ್ಯ ಮಾತ್ರಾ ಕಳೆದುದು ಸಿಕ್ಕದು...
    ನೆನಪು ಚ೦ದ...

    ReplyDelete
  2. ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು.ಕವನ ಓದಿ ನಿಮಗೆ ನಿಮ್ಮ ಬಾಲ್ಯದ ದಿನಗಳ ನೆನಪಾದರೆ ಸಂತೋಷ.ಅದೇ ಕವನದ ಆಶಯ .ಧನ್ಯವಾದಗಳು .

    ReplyDelete
  3. ಬಾಲ್ಯದ ನೆನಪುಗಳಿ ಎಷ್ಟೊಂದು ಮಧುರ ಅಲ್ವಾ ಸರ್
    ತುಂಬಾ ಸುಂದರ ಕವಿತೆ
    ನಮ್ಮನ್ನು ಬಾಲ್ಯಕ್ಕೆ ತೆಗೆದುಕೊಂಡು ಹೋದಿರಿ

    ReplyDelete
  4. ನನಗೆ ಸುಭಧ್ರಾಕುಮಾರಿ ಚೌಹಾಣ್ ರ "ಮೇರಾ ನಯಾ ಬಚಪನ್" ಕವಿತೆ ನೆನಪಾಯಿತು. ಅದು ನಮಗೆ ೮ ನೇ ತರಗತಿಯಲ್ಲಿತ್ತು. ನಿಮ್ಮ ಕವಿತೆ ಕೂಡಾ ಅಂತಹ ಬಾಲ್ಯದ ನೆನೆಪುಗಳನ್ನು ಮರುಕಳಿಸಿತು. ಬಾಲ್ಯ ಕ್ಮುಗಿಸಿದವರಿಗೆ ಅದು ನೆನಪಷ್ಟೇ ಅಲ್ಲವೇ ??

    ReplyDelete
  5. ಗುರು ಸರ್ ;ನಮಸ್ಕಾರಗಳು .'ಬಾಲ್ಯದ ಆಟ ,ಆ ಹುಡುಗಾಟ ,ಇನ್ನೂ ಮಾಸಿಲ್ಲಾ 'ಅನ್ನೋ ಹಾಡು ಜ್ಞಾಪಕ ಬಂತಾ ಗುರು ಸರ್ ?ಧನ್ಯವಾದಗಳು.

    ReplyDelete
  6. ನಮಸ್ಕಾರ ಸುಬ್ರಮಣ್ಯ ಅವರೇ .ನೀವು ಹೇಳಿದ ಹಿಂದಿ ಪದ್ಯ ಕೇಳಿ 'ಕೋಯಿ ಲೌಟಾದೆ ಮುಜ್ಹೇ ,ಬೀತೇ ಹುಯೆ ದಿನ್'ಎನ್ನುವ ಹಾಡು ಜ್ಞಾಪಕ ಬಂತು.

    ReplyDelete
  7. ಬಾಲ್ಯ ಪೂರ್ತಿ ಕಳೆದು ಹೋಗಿಲ್ಲ ....ಅದರ ಮಿಂಚು ನಿಮ್ಮ ಕವನದಲ್ಲಿ ಹೊಳೆಯುತ್ತಿದೆ..

    ReplyDelete
  8. ಭಟ್ ಸರ್ ;ಬಾಲ್ಯದ ಮಿಂಚನ್ನು ಕವಿತೆಯಿಂದ ಬಾಳಿಗೆ ತರುವ ಸಂಚಿನ ಬಗೆ ಹೇಗೆಂದು ಹೊಂಚು ಹಾಕುತ್ತಿದ್ದೇನೆ .ಧನ್ಯವಾದಗಳು.

    ReplyDelete
  9. Thanks for reminding my childhood..

    ReplyDelete
  10. balyada sumadhra nenapugala melukadisuvadaralli eruva sukha yavudaralli bandeetu.kavana saralavagi, neravagi manassige nati namma balya prapanchkke kondoyyuttade.dhanyavadagalu.HEMCHANDRA SBH RASMECCC, BANGALORE

    ReplyDelete
  11. Nisha;Thanks for your kind comments.Memories of the childhood are for ever.

    ReplyDelete
  12. ಉದಯ್; ನಮಸ್ಕಾರ.ನಿಮ್ಮ ಫೋಟೋಸ್ ನಲ್ಲಿ ಸೈಕಲ್ ಟೈರ್ ಹಿಡಿದು ನಿಂತಿರುವ ಹುಡುಗರನ್ನು ನೋಡಿ ನನ್ನ ಕವಿತೆಯ ಸಾಲುಗಳು ನೆನಪು ಬಂದು ಖುಷಿ ಆಯಿತು.ಬಾಲ್ಯದ ನೆನಪುಗಳು ಯಾವತ್ತಿಗೂ ಸುಂದರವೇ .

    ReplyDelete
  13. Dear HEMACHANDRA.Itis nice seeing an old friend on the blog .Welcome to my blog .keep visiting.
    thank you.

    ReplyDelete
  14. ಕವನ ಚೆನ್ನಾಗಿದೆ . ನಡುವಯಸ್ಸಿನಲ್ಲಿ ಬಾಲ್ಯದ ದಿನಗಳ ಕನವರಿಕೆ ಕೊಡುವ ಸಂತೋಷ ದೊಡ್ಡದು.

    ReplyDelete
  15. ಸುಮ ಅವರಿಗೆ ನಮಸ್ಕಾರಗಳು.ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ಮತ್ತೆ ಬನ್ನಿ.

    ReplyDelete
  16. ನೆನಪಿನಲ್ಲಿ ಸವಿಯಬೇಕು ಕಳೆದುಹೋದ ಬಾಲ್ಯದ ಕೋಲ್ಮಿ೦ಚು. ಚೆನ್ನಾಗಿದೆ ಬಾಲ್ಯದ ನೆನಪಿನ ಸುತ್ತದ ಕವನ.

    ReplyDelete
  17. ಧನ್ಯವಾದಗಳು ಸೀತಾರಾಂ ಸರ್.

    ReplyDelete
  18. NRK;Thank you very much for your kind comments.

    ReplyDelete
  19. ಕಳೆದ ಬಾಲ್ಯ ಮತ್ತೆ ಮರಳುವುದಿಲ್ಲ! ಆದರೂ ಬಾಲ್ಯದ ನೆನೆಪು ಮರುಕಳಿಸುತ್ತದೆ, ಇದು ಜೀವನ, ಇದು ವಾಸ್ತವ. ಎಲ್ಲಕೊಟ್ಟ ಭವಂತ ಎಲ್ಲಕ್ಕೂ ಒಂದೊಂದು ಮಿತಿ ಇಟ್ಟ, ಆಯಾಯ ದಿನಗಳಲ್ಲಿ ಅದದೇ ಚಂದ, ಆದರೆ ಪ್ರತೀ ವ್ಯಕ್ತಿಯ ಬಾಲ್ಯದ ಹರವು ಯಾರಿಂದಲೂ ಕಸಿಯಲಾರದ ಭಂಡಾರ. ಚಿನ್ನಿದಾಂಡು,ಕುಂಟೆಬಿಲ್ಲೆ, ಲಗೋರಿ,ಕಿರ್ವ್ಬಿಟ್ ಕಿವ್ರ್ಯಾರು ? , ಅವಲಕ್ಕಿ-ತವಲಕ್ಕಿ..... ಛೆ ಒಂದೇ ಎರಡೇ...ಆಡುತ್ತಿದ್ದರೆ ಬ್ರಹ್ಮನೇ ಬಂದರೂ ವಾಪಸ್ ಬರಲಾರೆವೆಂಬಷ್ಟು ಗಾಢ ಆಟದ ಹುಚ್ಚು.ರಜ ಬಿದ್ದರೆ ಅಜ್ಜಿಯಮನೆಯ ಹಾದಿ. ಮಾವಿನಮರಕ್ಕೆ ಕಲ್ಲು. ನಾಯಿ ಮರಿಗೆ ಕೀಟಲೆ...ಬಾಲ್ಯ ಬಾಲ್ಯವೇ...ಬಂಗಾರವೇ, ನಿಮ್ಮ ಕವನ ನನ್ನ ಬಾಲ್ಯಕ್ಕೂ ಎಳೆಯಿತು. Very Nice

    ReplyDelete
  20. ಧನ್ಯವಾದಗಳು ಭಟ್ಟರೇ.ನೀವಿಲ್ಲದೆ ಬ್ಲಾಗ್ ಭಣ ಭಣ !ಬಾಲ್ಯ ಬಾಲ್ಯವೇ !ಬಾಲ್ಯದ ನೆನಪುಗಳೇ ಅಮೂಲ್ಯ !

    ReplyDelete

Note: Only a member of this blog may post a comment.