Saturday, March 13, 2010

ಹಗ್ಗ ---------ಜಗ್ಗಾಟ

ಇಲ್ಲಿ ಕೆಳಗೆ ,ಆಸ್ಪತ್ರೆಯ 
ಬೆಡ್ದೊಂದರ ಮೇಲೆ ಮಲಗಿದ್ದಾನೆ,
ಜೀವ ಜಲ ಬತ್ತಿದ ರೋಗಿ.
ನರಳುತ್ತಾ ,ಆಚೀಚೆ ಹೊರಳುತ್ತಾ.
ಒಮ್ಮೆ ಸಾವಿನತ್ತ ,ಒಮ್ಮೆ ಬದುಕಿನತ್ತ,
ಮಗ್ಗುಲು ------------ಬದಲಿಸುತ್ತಾ !
ಅಲ್ಲಿ ಮೇಲೆ ಶಿರಸ್ಸಾಸನ ಹಾಕಿ,
ತಲೆ ಕೆಳಗಾಗಿ ನೇತಾಡಿ ,
ಶತಾಯು ಗತಾಯು ಇವನ ಬದುಕಿಸುವ 
ಪಣತೊಟ್ಟ  ಸಲೈನ್ ಬಾಟಲ್ !
ಮಧ್ಯೆ ಜೀವ ಸೆಲೆಯ ಕೊಂಡಿಯಂತೆ ,
ಡ್ರಿಪ್ ಸೆಟ್ಟಿನ ಪ್ಲಾಸ್ಟಿಕ್ ನಳಿಕೆ !
ಮೂಗಿಗೆ ಹಾಕಿದ ಟ್ಯೂಬಿನಿಂದ
ಪ್ರಾಣ ವಾಯು ----------ಸಾಲ.!
ಅದನ್ನೂ ಕದಿಯಲು ಸಂಚು ಹೂಡಿದೆ ,
ಕಾಣದ ನಿಗೂಢ ಜಾಲ !
ವ್ಯಕ್ತ --------------,ಅವ್ಯಕ್ತಗಳ ನಡುವೆ 
ನಡೆದಂತಿದೆ ------------ನಿರಂತರ ,
ಹಗ್ಗ ------------------ಜಗ್ಗಾಟ !

11 comments:

  1. ಚೆನ್ನಾಗಿದೆ ಕವನ! ಏನಿದ್ದರೂ ವೈದ್ಯರೂ ಮನುಷ್ಯರು ತಾನೇ ? ಕೈಲಾಗುವವರೆಗೆ ಮಾಡುತ್ತಾರೆ, ಫಲಾಫಲ ಭಗವಂತನಿಗೆ ಬಿಟ್ಟಿದ್ದು

    ReplyDelete
  2. ಸಾಯಲೂ ಬಿಡದ, ಬದುಕಲೂ ಬಿಡದ ವಿಧಿಯೇ ಈ ಹಗ್ಗ ಜಗ್ಗಾಟಕ್ಕೆ ಕಾರಣವೆನ್ನಬಹುದೇನೋ..! ಚೆನ್ನಾಗಿದೆ.

    ReplyDelete
  3. ಥಾಂಕ್ಸ್ ಶಂಭುಲಿಂಗ ಅವರೇ ಥ್ಯಾಂಕ್ಸ್ ಭಟ್ಟರೇ ಥ್ಯಾಂಕ್ಸ್ ವಸಂತ್ ಅವರೇ .ತಮ್ಮೆಲ್ಲಾ ಅನಿಸಿಕೆಗಳಿಗೆ ಧಯವಾದಗಳು.

    ReplyDelete
  4. praana vaayu... saala
    adannu kadiyalu sanchu hoodide
    kaanada nigooda jaala!
    vyaktha..., avyakthagala naduve
    nadedhanthide ... niranthara
    hagga ----- jaggaata

    adbuthavaagide e lines
    melagadiya sanniveshakke
    uttamavaada upame.

    vyaktha --- avyaktha
    upameyannu
    mirisi elligo karedukondu hogutte

    thanks

    ReplyDelete
  5. ಧನ್ಯವಾದಗಳು ಅಶೋಕ್. .ಕವನ ಇನ್ನೊಬ್ಬರಿಗೆ ಇಷ್ಟವಾಗುವುದದಲ್ಲೇ ಅದರ ಸಾರ್ಥಕತೆ.

    ReplyDelete
  6. kavana tumba chennagide sir :)

    Suma

    ReplyDelete
  7. ಜೀವನ ಹಗ್ಗ ಜಗ್ಗಾಟ ನಿಜ. ಅಲ್ಲಿ ಯಾರ ಬಲ ಹೆಚ್ಚೋ ಅವರು ಗೆಲ್ಲುತ್ತಾರೆ. ಚನ್ನಾಗಿದೆ ನಿಮ್ಮ ಕವನ. ಕೊನೆಯ ಚರಣ ಅತೀ ಸುಂದರವಾಗಿದೆ.

    ReplyDelete
  8. thakyou SUMA,Thankyou PRAVEEN.THANKYOU BOTH FOR VISITING MY BLOG.please keep visiting,keep sharing your thoughts.

    ReplyDelete
  9. ಕವನ ತುಂಬಾ ಇಷ್ಟವಾಯ್ತು. ಕಣ್ಣಿಗೆ ಕಾಣದೆ ಹೋದರೂ ಅನುಭವಕ್ಕೆ ಬರುವ ಸಾವು ಬದುಕಿನ ಈ ಜಗ್ಗಾಟ..... ಇದನ್ನು ಬದುಕಿನ ಇನ್ನಿತರ ವ್ಯಕ್ತ - ಅವ್ಯಕ್ತ ಅನುಭವಗಳಿಗೂ ಹೋಲಿಸಬಹುದೇನೋ. ವೃತ್ತಿಯಲ್ಲಿ ಪ್ರವೃತ್ತಿಯನ್ನೂ ಕಂಡವರು ನೀವು...ಹೀಗೇ ಬರೆಯುತ್ತಿರಿ.

    ReplyDelete

Note: Only a member of this blog may post a comment.