Monday, March 15, 2010

'ವಿಕೃತಿ'ಗೂ------ ಸ್ವಾಗತ

ಬೆಲೆ ಏರಿಕೆಯ ಬಿಸಿಗಾಳಿ,
ಈ ಬೇಸಿಗೆಯ ಜೊತೆ, ಜೊತೆಯಲಿ,
ಬಂದು -------, ಒಳಸೇರಿ,
ನಮ್ಮೆದೆಯ -------ಬೇಗೆಗೆ,
ತಿದಿಯನೊತ್ತುತಿದೆ ----------!
ಇರುವ ಎಲ್ಲಾ ತಗಾದಿಯ ನಡುವೆ,
ಮತ್ತೆ ಬಂದಿದೆ ಯುಗಾದಿ!
ವಿರೋಧಿಯ ನಂತರದ ವಿಕೃತ!
ಯಾರನ್ನೂ ದೂರುವಂತಿಲ್ಲ,
ಇದು ------------ಸ್ವಯಂಕೃತ!
ಪ್ರಕೃತಿಯ ವಿಕೃತಗೊಳಿಸಿದ ಫಲಶ್ರುತಿ,
ಬರಗಾಲದ ಬೆನ್ನೇರಿ ಬಂದ ವಿಕೃತಿ.
ಸಧ್ಯದ ಪರಿಸ್ಥಿಯ  ಕನ್ನಡಿಯಂತೆ,
ಎಲ್ಲೆಡೆಯ ಗೊಂದಲಗಳ ಪ್ರತೀಕದಂತೆ!
ಮರಳಿ ಬಂದಿದೆ ಯುಗಾದಿ,
ಎಲ್ಲಾ ವೈರುಧ್ಯದ ನಡುವೆ,
ಪ್ರತಿ ವರುಷದಂತೆ ----------------,
ಸಮೃದ್ಧಿಯ  -------ಕನಸುಗಳ ಹೊತ್ತು !

17 comments:

  1. yugaadi samrudha kanasugalige
    shubhashayagalu

    happy ugadi sir

    ReplyDelete
  2. Happy Ugaadi Ashok.Thank you for your kind comments.

    ReplyDelete
  3. ವಾಸ್ತವಿಕತೆಯ ಸತ್ಯ. ಯುಗಾದಿಗೆನು?
    "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ"
    ನಿಮಗೂ ಹಾಗೂ ನಿಮ್ಮೆಲ್ಲಾ ಸ್ನೇಹಿತರಿಗೂ ಉಗಾದಿಯ ಶುಭಾಶಯಗಳು.

    ReplyDelete
  4. ಧನ್ಯವಾದಗಳು .ನಿಮಗೂ ನಿಮ್ಮೆಲ್ಲ ಬಂಧುಗಳಿಗೂ ಯುಗಾದಿಯ ಶುಭಾಶಯಗಳು.ಕಾಣದ ನಾನೂ ನೀವೂ ಈ ಬ್ಲಾಗಿನ ಬೆಳಕಿನಲ್ಲಿ ಸ್ನೇಹಿತರಾಗಿದ್ದೇವೆ .ಈ ಸ್ನೇಹದ ಚಿಗುರು ಬೆಳೆದು ಹೆಮ್ಮರವಾಗಲಿ .

    ReplyDelete
  5. D.T.K.ಅವರೆ,
    ಯುಗಾದಿಯ ಶುಭಾಶಯಗಳು.
    ಹರುಷದ ಹೊನಲು ಎಲ್ಲಾ ಕಡೆ ಹರಿಯಲಿ.

    ReplyDelete
  6. ವಿಕೃತಿ ನಾಮ ಸಂವತ್ಸರದಲ್ಲಿ ಎಲ್ಲಾ ಕೆಲಸಗಳೂ ಸುಕ್ರುತವಾಗಿ ,ಸುಸೂತ್ರವಾಗಿ ನೆರವೇರಲಿ ಎಂಬ ಆಶಯದೊಂದಿಗೆ ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  7. ಹೌದು ಮನುಷ್ಯನ ದುಷ್ಕೃತಿಗಳ ಫಲವಾಗಿ ಈ ಪ್ರಕೃತಿ ವಿಕೃತಿಯತ್ತ ಸಾಗುತಿದೆ. ಆದರೂ ಈ ವಿಕೃತಿನಾಮ ಸಂವತ್ಸರ ನಮ್ಮೆಲರೊಳಗೂ ಸುವಿಚಾರಗಳನ್ನೇ ತುಂಬಲೆಂದು ಹಾರೈಸುವೆ.

    ನಿಮಗೆ ಹಾಗೂ ಬ್ಲಾಗ್ ಓದುಗರೆಲ್ಲರಿಗೂ ಹಾರ್ದಿಕ ಶುಭಾಶಯಗಳು.

    ReplyDelete
  8. dhayavaadagalu haagoo ugaadi habbada shubhaashayagalu.

    ReplyDelete
  9. ಕವನ ಸುಂದರ ಹಾಗೂ ಸಮಯೋಚಿತ. ವಿಕೃತಿ ಸಂವತ್ಸರದಲ್ಲಿ ಸದ್-ವಿಚಾರಗಳು ಕೃತಿಗಿಳಿಯಲಿ.
    ಎಲ್ಲರಿಗೂ ಈ ಯುಗಾದಿ ಶುಭ ತರಲಿ.

    ReplyDelete
  10. Thanks Bhattare.Tammellarigoo Ugaadiya Shubhaashayagalu.

    ReplyDelete
  11. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete
  12. thakyou verymuch for your best wishes.tamagoo ugaadiya haagoo hosa varshada shubhaashayagalu.

    ReplyDelete
  13. chennagide..yugadi welcome..
    ನಿಮ್ಮವ,
    ರಾಘು.

    ReplyDelete
  14. thanks goutam,thanks raghu .kindly keep visiting the blog.

    ReplyDelete

Note: Only a member of this blog may post a comment.