Sunday, March 21, 2010

VIRAL----------INFECTION

ನಾಲ್ಕು ದಿನಗಳಿಂದ  viral infection! ಹುಷಾರಿರಲಿಲ್ಲ.ನನಗಲ್ಲ,ನಮ್ಮ computer ಗೆ.ಯಾವುದೋ ಮಾಯದಲ್ಲಿ ವೈರಸ್ ಒಂದು ಒಳ ಸೇರಿದೆ .ಸ್ಕ್ಯಾನ್ ಮಾಡಿದರಿಲ್ಲ,ಅಪ್ ಡೇಟ್ ಮಾಡಿದರಿಲ್ಲ!ಏನು ಮಾಡಿದರೂ ವೈರಸ್ ಕಾಟ ತಪ್ಪಲಿಲ್ಲ.ನಾನು doctor ಆಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಅದಕ್ಕೆ ಅದರ doctor ಬಂದು injection ಕೊಡಬೇಕಾಯಿತು.ಈಗ ನೋಡಿ!ಹೇಗೆ ಚಿಗಿತು ಕೊಂಡಿದೆ.!ಆನ್ ಮಾಡಿದರೆ ನನ್ನ ಬೆಲೆ ಈಗ ಗೊತ್ತಾಯಿತೆ,ಎಂದು ಕಿಸಕ್ಕನೆ ನಕ್ಕ ಹಾಗಾಗುತ್ತದೆ.'ಆದದ್ದೆಲ್ಲಾ ಒಳಿತೇ ಆಯಿತು',ಎನ್ನುವ ದಾಸರ ಪದ ಜ್ಞಾಪಕಕ್ಕೆ ಬಂತು .ಈ computer ನ ಹಾವಳಿ ಯಿಂದ ಓದುವ ಹವ್ಯಾಸ ಕಮ್ಮಿಯಾಗಿತ್ತು.ನಾಲಕ್ಕು ದಿನ ಜೋಗಿಯವರ ಅದ್ಭುತ ಬರವಣಿಗೆಗಳ ಬೆನ್ನೇರಿ ಸಾಹಿತ್ಯ ಲೋಕದ ಒಂದು ಸುತ್ತು ಹಾಕಿ ಬಂದಿದ್ದಾಯಿತು.!ಜೊತೆಗೆ ವೈದೇಹಿ ಯವರ ಕ್ರೌಂಚ ಪಕ್ಷಿಗಳು ಕಥಾ ಸಂಕಲನವನ್ನೂ ಓದಿದ್ದಾಯಿತು.ನಿಜಕ್ಕೂ ಆದದ್ದೆಲ್ಲಾ ಒಳಿತೇ ಆಯಿತು.ಬ್ಲಾಗ್ ಶುರು ಮಾಡಿದಾಗಿಂದ ಅದೂ ಒಂದು ರೀತಿಯ addiction ಆಗಿಬಿಟ್ಟಿದೆಯೇನೋ ಎಂದು ಅನುಮಾನ ಬರುತ್ತಿದೆ.ದಿನಕ್ಕೆ ನಾಲಕ್ಕು ಸಲ ಬ್ಲಾಗ್ ಓಪನ್ ಮಾಡುವುದು.ಕಾಮೆಂಟ್ಸ್ ಏನಾದರೂ ಬಂದಿದೆಯಾ ಎಂದು ನೋಡಿ ಅದಕ್ಕೆ ಉತ್ತರ ಕೊಡುವುದು .ಬೇರೆ ಬ್ಲಾಗಿಗೆ ಹೋಗುವುದು.ಯಾವಾಗ ನೋಡಿದರೂ ಬ್ಲಾಗಿನಲ್ಲೇ ಇರುತ್ತೀರ,ನಿಮ್ಮದ್ಯಾಕೋ ಅತಿ ಆಯ್ತು ಎಂದು ಹೆಂಡತಿ ಹತ್ತಿರ ಅನ್ನಿಸಿಕೊಂಡಿದ್ದೂ ಆಯಿತು .ಹೀಗೇ ನಡೆದಿತ್ತು ಬ್ಲಾಗಾಯಣ.ಆದರೆ ನಾಲಕ್ಕು ದಿನ computer ಸಂಪು ಹೂಡಿ ಮನಸ್ಸೆಲ್ಲಾ ಭಣ ಭಣ ಅನಿಸಿದ್ದಂತೂ ನಿಜ!ಬ್ಲಾಗ್ ನ ಮುಖಾಂತರ ನಿಮ್ಮೆಲ್ಲರ ಹತ್ತಿರ ನನ್ನ ಅನಿಸಿಕೆಗಳನ್ನು ಹಂಚಿಕೊಂಡಾಗ ಮನಸ್ಸು ಎಷ್ಟೋ ಹಗುರಾಗುತ್ತದೆ!ಕಾಣದ ನಾನೂ ನೀವೂ ಬ್ಲಾಗಿನ ಬೆಳಕಿನಲ್ಲಿ ಮುಖಾ ಮುಖಿ ಯಾಗುವುದು ಎಷ್ಟು ಛಂದ!-------ಅಲ್ಲವೇ?

11 comments:

  1. ಮೊದ ಮೊದಲು ನನಗೂ ಹೀಗೇ ಅನ್ನಿಸಿತ್ತು. ಆಮೇಲಾಮೇಲೆ ಸರಿ ಹೋಯ್ತು..
    ಶುರುವಿನಲ್ಲಿ ಅಗಸ ಬಟ್ಟೆಯನ್ನ ಒಗೆದೂ ಒಗೆದೂ ತೊಳೆಯುತ್ತಾನಲ್ಲವೇ..?

    ReplyDelete
  2. :).. ನಿಜ ಸಾರ್ ನಿಮ್ಮ ಅಭಿಪ್ರಾಯ.

    ReplyDelete
  3. ಚುಕ್ಕಿ ಚಿತ್ತಾರ ಅವರಿಗೆ ಧನ್ಯವಾದಗಳು.ನೀವು ಹೇಳುವುದು ನಿಜ.ನೀವು ಅಗಸ ಬಟ್ಟೆಯನ್ನು ಒಗೆದೂ ಒಗೆದೂ ತೊಳೆಯುತ್ತಾನೆ ಎಂದಿರಿ.ನಮ್ಮಲ್ಲಿ
    ಅದನ್ನು 'ಶುರುವಿನಲ್ಲಿ ಅಗಸ ಬಟ್ಟೆ ಎತ್ತಿ ಎತ್ತಿ ಒಗೆದ 'ಎನ್ನುತ್ತೇವೆ .ಆಮೇಲಾಮೇಲೆ ಅವನು ಅದನ್ನು ಸುಮ್ಮನೆ ಕಸಕಿ ಬಿಸಾಡಬಹುದು.ನಮ್ಮೆಲ್ಲರ ಬದುಕೂ ಸ್ವಲ್ಪ ಮಟ್ಟಿಗೆ ಹಾಗೇ ಎನಿಸುವುದಿಲ್ಲವೇ?ಎಲ್ಲಾ ವಿಷಯಗಳಲ್ಲೂ ಮೊದ ಮೊದಲು ಇದ್ದ ಆಸಕ್ತಿ ಆಮೇಲೆ ಇರುವುದಿಲ್ಲ.ಭಾಷೆ ಒಂದೇ ಆದರೂ ಅದರ ಬಳಕೆಯ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ.ಇದನ್ನು ಕನ್ನಡದ ಸೊಗಡು ಎನ್ನೋಣವೇ?

    ReplyDelete
  4. ಶಂಭುಲಿಂಗ ಅವರಿಗೆ ನಮಸ್ಕಾರಗಳು ಹಾಗೂ ಧನ್ಯವಾದಗಳು

    ReplyDelete
  5. ಆತ್ಮೀಯರೇ,
    ಹೌದು.ಸಂಪದದ ಮೂಲಕ ಬ್ಲಾಗ್ ಲೋಕವನ್ನು ಪ್ರವೇಶಿದ ನಾನು ಬುದ್ಧಿ-ಭಾವಗಳ ನಡುವಿನ ಬಡಿದಾಟದಲ್ಲಿ ಹೆಚ್ಚು ಸಮಯವನ್ನು ಸಂಪದಕ್ಕೆ ಮೀಸಲಿಟ್ಟ ಪರಣಾಮವಾಗಿ ಆರೋಗ್ಯದ ಮೇಲೆ ಅದರ ಪ್ರಭಾವವನ್ನು ಅನುಭವಿಸಿಯಾಗಿದೆ."ನೆಮ್ಮದಿಗಾಗಿ" ಹೆಸರಿನಲ್ಲಿ ಬ್ಲಾಗ್ ಶುರುಮಾಡಿದರೂ ನೆಮ್ಮದಿ ಕಳೆದುಕೊಂಡ ಪ್ರಸಂಗಗಳೂ ಇವೆ. ವಾಸ್ತವಾಂಶವನ್ನು ಬರೆದಿದ್ದೀರಿ.

    ನನ್ನ ಬ್ಲಾಗ್ ಇಣುಕಿ: vedasudhe.blogspot.com

    ReplyDelete
  6. ಸಹವಾಸ ದೋಷ! ಹವ್ಯಾಸಗಳು ಚಟವಾಗಿ (ವೈರಸ್ ಇನ್ಫೆಕ್ಷನ್) ಬದಲಾಗದಂತೆ ಸ್ವಯಂ-ಪ್ರೇರಿತ ಅಂಕುಶ (ಇಮ್ಯುನೈಸೇಶನ್) ಬೇಕಾಗಬಹುದೇ?

    ReplyDelete
  7. ಡಾಕ್ಟ್ರೆ, ಒಮ್ಮೊಮ್ಮೆ ಹಾಗಾಗುತ್ತದೆ. ಯಾವುದಾದರೊಂದು ಒಂದು ಹವ್ಯಾಸವಾಗಿ ಹೋದರೆ ಆ ಗುಂಗಿನಿಂದ ಹೊರಬರೋದು ಸ್ವಲ್ಪ ಕಷ್ಟವೇ! ನಿಮ್ಮ ಗಣಕ ಯಂತ್ರ ಶ್ರೀ ಆಯ್ತಲ್ಲ! ತುಂಬಾ ಸಂತೋಷ! ಆ ನಾಲ್ಕು ದಿನಗಳಲ್ಲಿ ಓದಿದ ಸಾರವನ್ನು ನಮಗೂ ಸ್ವಲ್ಪ ಉಣಬಡಿಸಿ, ಆಯ್ತಾ?

    ReplyDelete
  8. hehe... appa tumba sogasagide.... and all credits shud go to me for the four fruitful days .... after all, naane alva virus barsiddu ... :)

    ReplyDelete
  9. paapu ,tumbaa kilaadi kane neenu.yaava maayadallo virus barisi mellage paraari.

    ReplyDelete

Note: Only a member of this blog may post a comment.