ಬದುಕು 'ಬಬಲ್ ಗಮ್'ನ ಹಾಗೆ!
ಮೊದಮೊದಲು ಸಿಹಿಯಾಗಿದ್ದು,
ಜಗಿದದ್ದೇ------ ಜಗಿದದ್ದು!
ಜಗಿಯುತ್ತಾ-----ಜಗಿಯುತ್ತಾ,
ಕಡೆಗೆ------ಬರೀ, ಸಪ್ಪೆ!
ಸಿಹಿಯಾದ ಹಣ್ಣೆಂದು ಭ್ರಮಿಸಿದ್ದು
ನಿಜದಲ್ಲಿ------ಖಾಲೀ ಸಿಪ್ಪೆ!
ಅಯ್ಯೋ ಬೆಪ್ಪೇ ಎಂದು ನಗುತ್ತಿದೆ
ಬಾಯಲ್ಲಿರುವ ಬಬಲ್ ಗಮ್ಮು !
ಜಗಿಯುವುದೇ ತಲೆ ನೋವಾದರೂ,
ಅದೇ, ಹಿತವೆನಿಸತೊಡಗಿ ,
ಸಂಬಂಧಗಳು ರಾಡಿಯಾದರೂ,
ಅದೇ------ರೂಢಿಯಾಗಿ !
ನುಂಗಲೂ ಆಗದೆ,ಉಗಿಯಲೂ ಬಾರದೆ,
ಜಗಿಯುತ್ತಲೇ ಇರಬೇಕೆನಿಸುವ,
ಈ ನಮ್ಮೆಲ್ಲರ ಬದುಕು,
ಬಬಲ್ ಗಮ್ಮು ------!
ಕಡೆ ಕಡೆಗೆ ಬದುಕಿನ ಗಮ್ಮು,
ನಮ್ಮನ್ನೇ ಜಗಿಯ ತೊಡಗಿ,
ಸಾಕಾಗಿ ಕೈಯಲ್ಲಿ ಹಿಡಿದು,
ಬೀಸಿ ದೂರ ಒಗೆಯಬೇಕೆನಿಸಿದರೂ,
ಬಿಡದಲ್ಲಾ-----ಅಂಟು !
ಬಿಡಿಸಲಾರದ ಗಂಟು!
ಬದುಕಿನ ಈ ನಂಟು !
(ತುಷಾರ ಫೆಬ್ರವರಿ 2010 ರಲ್ಲಿ ಪ್ರಕಟವಾದ ನನ್ನ ಕವನ 'ಚ್ಯೂಯಿಂಗ್ ಗಮ್'ಅನ್ನು ಅಲ್ಲಲ್ಲಿ ತಿದ್ದಿ,ತೀಡಿದ್ದರಿಂದ ಅದು ಈಗ 'ಬಬಲ್ -ಗಮ್ ' ಆಗಿ ಮಾರ್ಪಟ್ಟಿದೆ ! )
eduve samsara, elli yavudanno vyrtha madabaradu.
ReplyDeleteಹೇಮಚಂದ್ರ ;ನೀವು ಹೇಳುವುದೂ ಸರಿ.ಬದುಕು ಬರೀ ಸಿಹಿಯಲ್ಲಾ ,ಕೆಲವೊಮ್ಮೆ ಕಹಿ,ಖಾರ ಹುಳಿ,ಒಗರು ಎಲ್ಲವೂ ಆಗಿ ಕಡೆಗೆ ಬರೀ ಸಪ್ಪೆ ಎಂದು ಪಾಠ ಕಲಿಸುತ್ತದಲ್ಲಾ ಅಷ್ಟರ ಮಟ್ಟಿಗಾದರೂ ಅದು ವ್ಯರ್ಥವಲ್ಲ!ಅಲ್ಲವೇ?ಅಥವಾ ಅದೇ ಅದರ ಅರ್ಥವೇ?
ReplyDeleteಕೃಷ್ಣಮೂರ್ತಿ ಸರ್,
ReplyDeleteಏನೆಂದು ಹೇಳಲಿ.................
ನಾನೆಂತು ಪೋಗಳಲಿ.............
ನಿಮ್ಮ ಕವನವ
ಹೇಗೆ ನಾ ವರ್ಣಿಸಲಿ?
ಬದುಕಿನ ಅಂಟು.......
ಅಂಟಿಕೊಂಡ ನಂಟು.......
ಬಿಡಿಸಲಾಗದ ಗಂಟು
ಈ ಬದುಕಿನ ಒಗಟು............
ಚನ್ನಾಗಿದೆ.
ಪ್ರವೀಣ್ ಅವರೆ;ನೀವು ಮನದಾಳದಿಂದ ಹೇಳಿದ ಮಾತಿಗೆ ಧನ್ಯವಾದಗಳು.ನಮ್ಮ ಈ ಬ್ಲಾಗಿನ ನಂಟು ಬಿಡಿಸಲಾರದ ಗಂಟಾಗಲಿ.ನಮಸ್ಕಾರ.
ReplyDeleteLiked the way you explained the taste of life whit a chewing gum. very nice
ReplyDeleteನಿಜವಾದ ಮಾತು ತುಂಬಾ ಚನ್ನಾಗಿದೆ ಸರ್
ReplyDeleteuday;thanks for your kind comments.kindly keep visiting the blog.thanks again.warm regards.
ReplyDeleteಶ್ರೀಕಾಂತ್;ನಿಮ್ಮ ಅಭಿಪ್ರಾಯಕ್ಕೆಧನ್ಯವಾದಗಳು.ಜೀವನದಲ್ಲಿ ಒಂದೊಂದು ಹಂತದಲ್ಲಿ ಒಬ್ಬೊಬ್ಬರ ಅನುಭವ ಒಂದೊಂದು ತರಹ.ಆದರೆ ಕೊನಗೆ ವಯಸ್ಸಾದ ಕಾಲಕ್ಕೆ
ReplyDeleteಸುಮಾರು ಜನಕ್ಕೆ'ಅಯ್ಯೋ ,ಜೀವನವೆಂದರೆ ಇಷ್ಟೇನೇ?'ಎಂದು ಎನಿಸುತ್ತದೆ.ಆ ಭಾವದ ಚಿತ್ರಣದ ಒಂದು ಪ್ರಯತ್ನ ಇದು.ಆದರೆ ಮಹಾತ್ಮರು ಹೇಳುವಂತೆ ಯಾರ ಬಾಳೂ ,ಬಾಳಬಾರದಷ್ಟು,ಬಾಳಲಾರದಷ್ಟು ಕೆಟ್ಟದ್ದಲ್ಲ .ನಮಗೆ ಅಂತಹ ಒಂದು ನಂಬಿಕೆ ಇರಬೇಕಷ್ಟೆ.
ಸಾರ್, ಬದುಕು ಒಂದು "ಗುಳ್ಳೆ"="ಬಬಲ್" ಹಾಗೆ ಅನ್ನೋದು ಮಾತ್ರ ಗೊತ್ತಿತ್ತು..."ಗಮ್" ಅನ್ನೋದು ಹೊಸ ಗಮ್ಮತ್ತು... ನಿಜಕ್ಕೂ ನಿಮ್ಮ ಕಲ್ಪನೆ ಚೆನ್ನಾಗಿದೆ.
ReplyDeleteನಲ್ಮೆಯ ಸ್ನೇಹಿತರಾದ ನಾರಾಯಣ್ ಭಟ್ಟರಿಗೆ ನಮನಗಳು.'ಗಮ್'ಎಂದರೆ ಹಿಂದಿಯಲ್ಲಿ ದುಃಖ ಎಂದು ಅರ್ಥವಿರುವುದರಿಂದ ಕೆಲವರಿಗೆ ಈ ಜೀವನ 'ಬಬಲ್ ಗಮ್',ಎಂದರೆ'ಬರೀ ದುಃಖದ ಗುಳ್ಳೆಯಂತೆ'ಎನಿಸಿರಬಹುದೇ?ಎಲ್ಲರ ಜೀವನ ಹಗುರವೆನಿಸಲಿ ಎಂದು ಹಾರೈಸೋಣ.ಧನ್ಯವಾದಗಳು ಸರ್.
ReplyDeleteVery nice poem... liked it :)
ReplyDeleteತೇಜಸ್ವಿನಿ ಮೇಡಂ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಸಾಮಾನ್ಯವೆನಿಸುವ 'ಬಬಲ್ ಗಮ್'ನ ಮೂಲಕ ಬದುಕಿನ ಅಸಾಮಾನ್ಯ ಅರ್ಥವನ್ನು ಪ್ರಚುರಪಡಿಸಿದ ನಿಮ್ಮ ಕವನ ಚೆನ್ನಾಗಿದೆ. ಅಭಿನ೦ದನೆಗಳು.
ReplyDeleteಪ್ರಭಾಮಣಿನಾಗರಾಜ್ ಅವರಿಗೆನಮನಗಳು.ಕವಿತೆ ಎಂದರೇನು,ಯಾವುದನ್ನು ಕವಿತೆ ಎನ್ನುತ್ತಾರೆ?ಕವಿತೆ ಹೀಗೇ ಇರಬೇಕು ಎಂದೇನಾದರೂ ನಿಯಮಗಳಿವೆಯೇ ಎಂದು ಬಹಳ ಕಡೆ ಹುಡುಕಿದ್ದೇನೆ.ಆದರೂ ಎಲ್ಲೂ ನಿಖರವಾದ ಉತ್ತರ ಸಿಕ್ಕಿಲ್ಲ.ನೀವುಬರೆಯುವ ಶೈಲಿ ಒಂದು ರೀತಿಯಾದರೆ ನನ್ನ ಶೈಲಿ ಭಿನ್ನ.ಇಪ್ಪತ್ತು ವರುಷಗಳ ಹಿಂದಿನ ನನ್ನದೇ ಕವಿತೆಗಳು ಬೇರೆಯದೇ ಶೈಲಿಯಲ್ಲಿವೆ!ನಾವು ಹೆಚ್ಚು ಕವೀತೆಗಳನ್ನು ಓದುತ್ತಾ, ಬರೆಯುತ್ತಾ ಹೋದಂತೆ ನಮ್ಮದೇ ಒಂದು ರೀತಿಯ ಬರಹ ಡೆವೆಲಪ್ ಆಗುತ್ತೆ ಎನಿಸುತ್ತದೆ.ನಿಮ್ಮಲ್ಲೇನಾದರೂ ಇದಕ್ಕೆ ಉತ್ತರವಿದ್ದರೆ ತಿಳಿಯಬೇಕೆಂಬ ಕುತೂಹಲವಿದೆ.ನಿಮ್ಮ ಕವಿತೆಗಳ ಶೈಲಿ ಇಷ್ಟವಾಗುವಂತಿವೆ.ನಿಮ್ಮಿಂದ ಇನ್ನಷ್ಟು ಕವಿತೆಗಳು ಬರಲಿ ಎಂದು ಹಾರೈಸುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeletechendagina babbal gammina kavana ruchiyaagide..... dhanyavaada sir.....
ReplyDeleteheege baruttaa irali......
ದಿನಕರಮೊಗೇರ ಅವರಿಗೆ ನಮಸ್ಕಾರಗಳು.ಕವನಗಳನ್ನು ಓದಿ ಖುಷಿ ಪಡುವವರು ವಿರಳ.ಯಾರಾದರೂ ಓದಿ ಸಂತೋಷಪಟ್ಟಾಗ ಬರೆದವರಿಗೂ ಖುಷಿ.ತಮ್ಮ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಬಬ್ಬಲ್
ReplyDeleteಗಮ್ಮಿನ ಕವನ ಬಹು ಸುಂದರ
ಜೀವನವನ್ನು ಬಬ್ಬಲ್ ಗಮ್ಮಿನೊಂದಿಗೆ ಸುಂದರವಾಗಿ ಹೋಲಿಸಿದ್ದೀರಿ. ಓದಿ ತುಂಬಾ ಸಂತೋಷವಾಯಿತು ಅಲ್ಲಲ್ಲಿ ಹಾಸ್ಯವೂ ಇದೆ :)
ReplyDeleteನೀವು ಜೋಗದ ಕಾರ್ಗಲ್ ನಲ್ಲಿ ಕೆಲಸ ಮಾಡುತ್ತೀರೆಂದು ತಿಳಿಯಿತು. ಅಲ್ಲಿಯೇ ನನ್ನ ಸ್ನೇಹಿತ ಅನಂತಮೂರ್ತಿ ಅಂತ ಶೃಂಗೇರಿಯವರು ಕೆಲಸ ಮಾಡುತ್ತಿದ್ದಾರೆ ಬಹುಷಃ ನಿಮಗೆ ತಿಳಿದಿರಬಹುದು.
ಗುರುಮೂರ್ತಿಹೆಗ್ಡೆ ಸರ್;ನಮಸ್ಕಾರ.ಕವನ,ಓದಿದವರಿಗೆ ಹಿಡಿಸಿದರೆ ಬರೆದವರಿಗೆ ಅದಕ್ಕಿಂತಾ ಬೇರೇನು ಬೇಕು!ಬ್ಲಾಗಿನ ಉದ್ದೇಶ ಸಫಲವಾದಂತೆ.ತಪ್ಪದೆ ಬರುತ್ತಿರಿ.
ReplyDeleteಧನ್ಯವಾದಗಳು.
ಸನ್ಮಾನ್ಯ ಗುರುಪ್ರಸಾದ್ ಶೃಂಗೇರಿಯವರಿಗೆ;ನನ್ನ ಬ್ಲಾಗಿಗೆ ಸ್ವಾಗತ.ತಮ್ಮ ಸ್ನೇಹಿತರ ಪರಿಚಯವಿದೆ.ತಮ್ಮ ಬ್ಲಾಗಿಗೆ ಫಾಲೋಯರ್ ಆಗುವುದು ಹೇಗೆಂದು ತಿಳಿಸಿ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteVery nice and meaning full poetry ... nice way of telling .. liked it ...
ReplyDeleteಸನ್ಮಾನ್ಯ ಶ್ರೀಧರ್ ರವರಿಗೆ ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರ.
ReplyDeleteನಿಜ! ಬಿಡಬೇಕೆಂದರೂ ಬಿಡದ ಅಂಟು
ReplyDeleteಭಾಶೇಯವರಿಗೆ ನಮನಗಳು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteವಸಂತ್;ನಮಸ್ಕಾರ ಮತ್ತು ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸಂಸಾರದ ಸಾರವನ್ನು ಬಬಲ ಗಂ ನಲ್ಲಇ ಹಾಕಿ ಚೆನ್ನಾಗಿ ನುರಿಸಿದ್ದಿರಾ...
ReplyDeleteನಮ್ಮ ಮನ ಬಿಡದ ನಂಟಾಗಿದೆ ....
ಚೆ೦ದದ ಕವನ.
thank you sir for your kind comments.
ReplyDeleteNice one sir :)
ReplyDeleteಕವನ ಓದಿ ಖುಷಿ ಪಡುವವರು ವಿರಳವೇನಲ್ಲ, ನಮ್ಮಂಥವರೂ ಇದ್ದಾರೆ[ನಿಮ್ಮನ್ನೂ ಸೇರಿಸಿಕೊಂಡಂತೆ], ಬಬಲ್ ಗಮ್ ಹಲ್ಲಿಗೆ ಸಿಕ್ಕಿಕೊಂಡು ಬಿಟ್ಟಿತು! ಚೆನ್ನಾಗಿದೆ ಸ್ವಾಮೀ, ಧನ್ಯವಾದಗಳು
ReplyDeleteMurthy Sir...
ReplyDeletenimma kavanada kalpane sundaravaagide...Very Nice....