Wednesday, July 21, 2010

'ದಾಂಪತ್ಯ ಗೀತೆ '

ದಾಂಪತ್ಯ ಜೀವನವೆಂದರೆ ಒಲವು ನಲಿವಿನ ಜೊತೆ ಜೊತೆಗೇ ಸಿಟ್ಟು ಸೆಡವು,ಕೋಪ ತಾಪ,ಮೌನದ ಶೀತಲ ಸಮರ ,ಇವೆಲ್ಲಾ ಇದ್ದದ್ದೇ.ಮದುವೆಗೆ ಮೊದಲು ,ಸುಂದರ ಕನಸುಗಳದೇ ಸಾಮ್ರಾಜ್ಯ.ಅಲ್ಲಿ ಕಷ್ಟಗಳ ಇರುಸು ಮುರುಸು,ಮುನಿಸುಗಳ ಕಿನಿಸು ಇವುಗಳ ಸುಳಿವೂ ಇರುವುದಿಲ್ಲ.ದಾಂಪತ್ಯದ ಹಾದಿಯಲ್ಲಿ ಜೊತೆ ಜೊತೆಯಲಿ ಸಾಗಿ ,ಅಗ್ನಿಪರೀಕ್ಷೆಗಳಿಗೆ ಒಳಗಾಗಿ ಒಬ್ಬರನ್ನೊಬ್ಬರು ಅರಿತು ನಡೆದಾಗ, ಬಾಳು ಸಹನೀಯವಾಗುತ್ತದೆ.ನನ್ನ ಇಪ್ಪತ್ತೊಂಬತ್ತು ವರುಷಗಳ ದಾಂಪತ್ಯದಲ್ಲಿ ,ಶಾಂತಿ,ಸಹನೆ,ತಾಳ್ಮೆಯಿಂದ ನನ್ನ ಜೊತೆಗೂಡಿ ಬಂದ ನನ್ನ ಸಹ ಧರ್ಮಿಣಿಗೆ ಈ ದಿನ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಸುಮಾರು ಇಪ್ಪತ್ತು ವರುಷಗಳ ಹಿಂದೆ ಬರೆದ ಗೀತೆಯೊಂದನ್ನು ಬ್ಲಾಗಿನಲ್ಲಿ  ಹಾಕುತ್ತಿದ್ದೇನೆ.ಹೇಗಿದೆ ತಿಳಿಸಿ.ನಮಸ್ಕಾರ.

ನನ್ನ ನಿನ್ನ ನಡುವೆ 
ಯಾಕೇ ಈ ಗೋಡೆ ?
ಸಿಟ್ಟು ಅತ್ತ ಇಟ್ಟು 
ಸ್ವಲ್ಪ ಇತ್ತ ನೋಡೇ|

ನಾನು ಯಾರೋ ನೀನು ಯಾರೋ 
ಮನಸು ಮನಸು ಕೂಡಿ ,
ಒಲವು ಮೂಡಿತು ,ಮದುವೆಯಾಯಿತು 
ಒಂದೇ ಹಾಡ ಹಾಡಿ|

ಹಾಯಿ ಎರಡು ,ಹುಟ್ಟು ಎರಡು ,
ದೋಣಿ ಮಾತ್ರ ಒಂದೇ !
ಯಾತ್ರಿ ನಾವುಗಳು ಇಬ್ಬರಾದರೂ 
ಯಾನ ಮಾತ್ರ ಒಂದೇ |

ಮಾತೂ ಇರಲಿ ,ಮುನಿಸೂ ಇರಲಿ 
ಮೌನ ಮಾತ್ರ ಬೇಡ !
ನಮ್ಮಿಬ್ಬರ ನಡುವೆ ಎಂದೂ 
ಬಲೆ ನೇಯದಿರಲಿ ಜೇಡ |  

58 comments:

 1. ಸರ್
  ದಾಂಪತ್ಯದ ಸೊಗಸಾದ ಗೀತೆ
  ಶುಭ ಹಾರೈಕೆಗಳು

  ReplyDelete
 2. NIMMA 'SAHADHARMINI' YAVARIGE HUTTUHABBADA HARAIKEGALU.KAVANA ENDIGOO -ENDIGOO PRASTUTA.
  KONEYA NUDI TUMBA CHENNAGI BANDIDE.UTTAMA KAVANA NEEDIDDAKKE DHANYAVADAGALU.

  ReplyDelete
 3. ಸುಂದರವಾಗಿದೆ! ಇದಕ್ಕೊಂದು ರಾಗ ಕೊಟ್ಟು ಹಾಡು ಕಟ್ಟಿ ಹಾಡಿದರೆ ಮಜವಾಗಿರುತ್ತದೆ :)

  ReplyDelete
 4. ಗುರು ಸರ್;ನಮಸ್ಕಾರ.ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.

  ReplyDelete
 5. ನಿಮ್ಮ ಶ್ರೀಮತಿ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು..
  ಗೀತೆಯ ಅರ್ಥ ಚೆನ್ನಾಗಿದೆ...

  ReplyDelete
 6. ಹೇಮಚಂದ್ರ ಅವರಿಗೆ ನಮಸ್ಕಾರಗಳು.ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

  ReplyDelete
 7. ಭಾಶೇ;ಯವರಿಗೆ ನಮಸ್ಕಾರ.ಇದು ಹಾದುವುದಕ್ಕೆಂದೇ ಬರೆದ ಗೀತೆ.ರಾಗಕಟ್ಟಿ ಒಂದೆರಡು ವೇದಿಕೆಗಳಲ್ಲಿ ಹಾಡಿದ್ದೇನೆ.ಮೊದಲನೇ ಚರಣವನ್ನು ಪಲ್ಲವಿಯಾಗಿ ಉಪಯೋಗಿಸಿ ಪ್ರತೀ ಚರಣದ ನಂತರ ಅದನ್ನು ಹಾಡಬಹುದು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. ಪ್ರಗತಿ ಹೆಗಡೆ ಯವರಿಗೆ;ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.ನಿಮಗೆ ಗೀತೆ ಇಷ್ಟವಾಗಿದ್ದು ಸಂತೋಷ.ನಮಸ್ಕಾರ.

  ReplyDelete
 9. DTK Sir,
  chandada kavana, arthavattaada padagala jodane.
  naanu idakkondu raaga kattiddene. nenapiddare oorige bandaaga nimage kelisuttene!

  nimma shreematiyavarige huttu habbada haardhika shubhaashyagalu.

  ReplyDelete
 10. ಪ್ರವೀಣ್ ಸರ್;ನಮಸ್ಕಾರ.ನೀವು ನನ್ನ ಹಾಡಿಗೆ ರಾಗ ಹಾಕಿದ್ದು ಕೇಳಿ ತುಂಬಾ ಸಂತೋಷವಾಯಿತು.ನೀವು ಈ ಸಲ ಊರಿಗೆ ಬಂದಾಗ ಖಂಡಿತಾ ನಮ್ಮೂರಿಗೂ ಬನ್ನಿ.ನನ್ನ ಹಾಡನ್ನು ನೀವು ಹಾಡುವುದು ಕೇಳಬೇಕು.ನಿಮ್ಮ ಶುಭಾಶಯಗಳಿಗೆ ಮತ್ತು ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 11. ತುಂಬಾ ಚೆಂದದ ದಾಂಪತ್ಯ ಗೀತೆ ಮೂರ್ತಿ ಸರ್..
  ನಿಮ್ಮ ಶ್ರೀಮತಿಯವರಿಗೆ ಜನ್ಮ ದಿನದ ಶುಭಾಶಯಗಳು..

  ReplyDelete
 12. ದಿಲೀಪ್ ಹೆಗ್ಡೆ ಸರ್;ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 13. ತುಂಬಾ ಸುಂದರವಾಗಿದೆ ಕವಿತೆ. ನಿಮ್ಮ ಪತ್ನಿಗೆ ನನ್ನ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು...:)

  ReplyDelete
 14. ತೇಜಸ್ವಿನಿಯವರಿಗೆ;ನಿಮ್ಮೆಲ್ಲರ ಹಾರ್ದಿಕ ಶುಭಾಶಯಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.ನಮಸ್ಕಾರ .

  ReplyDelete
 15. ತುಂಬಾ ಸುಂದರವಾಗಿದೆ ಕವಿತೆ. ನಿಮ್ಮ ಪತ್ನಿಗೆ ನನ್ನ ಕಡೆಯಿಂದಲೂ ಶುಭಾಶಯಗಳು:)).

  ReplyDelete
 16. ವನಿತಾ ಅವರಿಗೆನಮನಗಳು.ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

  ReplyDelete
 17. Amma, many many happy returns of the day, once again! :D
  Appa, tumba chennagide kavana mattu chitragalu... :)

  ReplyDelete
 18. ತುಂಬಾ ಖುಷಿಯಾಯ್ತು..ಸೊಗಸಾದ ದಾಂಪತ್ಯಗೀತೆ..ಮತ್ತೆ..ನೀವಿಬ್ಬರೂ ಕಣ್ಣೆದುರಿಗೆ ಬಂದು ನಿಂತಂತೆ ಭಾಸವಾಗುವ ಭಾವಚಿತ್ರ. ನಿಮ್ಮ ಶ್ರೀಮತಿಯವರಿಗೆ ಜನ್ಮ ದಿನದ ಶುಭಾಶಯಗಳು.

  ReplyDelete
 19. ಪಲ್ಲವಿ;ಥ್ಯಾಂಕ್ಸ್ ಕಂದಾ.
  ಅಪ್ಪ,ಅಮ್ಮ.

  ReplyDelete
 20. ತಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮ ಗೀತೆ ತು೦ಬಾ ಸು೦ದರವಾಗಿದೆ. ದ೦ಪತಿಗಳ ಚಿತ್ರವು ಸು೦ದರವಾಗಿದೆ. ದಾ೦ಪತ್ಯದ ಗೀತೆ ಮಾರ್ಮಿಕವಗಿದೆ.

  ReplyDelete
 21. ನಾರಾಯಣ್ ಭಟ್ ಸರ್ ;ನಿಮ್ಮಂತಹ ಆತ್ಮೀಯ ಸ್ನೇಹಿತರ ಶುಭಾಶಯಗಳು ತುಂಬಾ ಸಂತಸ ಕೊಡುತ್ತದೆ.ನಿಮ್ಮ ಹಾರೈಕೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 22. ಚೆನ್ನಾಗಿದೆ ಸಾರ್... ನಿಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು... ಇನ್ನೊಂದು ವಿಷಯ... ಇಪ್ಪತ್ತು ವರುಷಗಳಿಂದ ಈ ಗೀತೆ ಜೋಪಾನಮಾಡಿಟ್ಟ ನಿಮ್ಮನ್ನು ಮೆಚ್ಚಲೇಬೇಕು :)

  ReplyDelete
 23. ಸೀತಾರಾಂ ಸರ್;ಖುದ್ದಾಗಿ ಭೇಟಿಯಾಗದೆ,ಬ್ಲಾಗಿನಿಂದಷ್ಟೇ ಪರಿಚಯವಾದರೂ ನೀವು ತೋರುತ್ತಿರುವ ಪ್ರೀತಿ,ವಿಶ್ವಾಸಗಳಿಗೆ ನಾನು ನಿಮಗೆ ಚಿರ ಋಣಿಯಾಗಿದ್ದೇನೆ.
  ನಿಮ್ಮ ಶುಭ ಹಾರೈಕೆಗಳಿಗೆ ಅನಂತ ಧನ್ಯವಾದಗಳು ಸರ್.ನಮಸ್ಕಾರ.

  ReplyDelete
 24. ನಿಮ್ಮ ಪತ್ನಿಯ ಹುಟ್ಟು ಹಬ್ಬಕ್ಕೆ ನಮ್ಮ ಶುಭಾಶಯ ಸರ್ ...ನಿಮ್ಮ ಗೀತೆ ಚನ್ನಾಗಿದೆ ಉತ್ತಮ ಸಂದೇಶ ಕೂಡ ...:)

  ReplyDelete
 25. ಗುರುಪ್ರಸಾದ್;ನಿಮ್ಮ ಶುಭ ಹಾರೈಕೆಗೆ ಅನಂತ ಧನ್ಯವಾದಗಳು.ನಾನು ಮೊದಲಿನಿಂದ ಬರೆದ ಎಲ್ಲಾ ಕವನಗಳೂ ಡೈರಿಯಲ್ಲಿ ಭದ್ರವಾಗಿವೆ.ಹಾಗಾಗಿ ಸಮಯ ಬಂದಾಗ ಉಪಯೋಗಿಸಿಕೊಳ್ಳಬಹುದು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

  ReplyDelete
 26. ನಮಸ್ಕಾರ ಶ್ರೀಕಾಂತ್.ನಿಮ್ಮೆಲ್ಲರ ಪ್ರೀತಿ,ವಿಶ್ವಾಸಕ್ಕೆ ಅನಂತಾನಂತ ವಂದನೆಗಳು.ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.

  ReplyDelete
 27. ಕೃಷ್ಣಮೂರ್ತಿಯವರೆ..

  ನಿಮ್ಮ ಬದುಕಿನ ಸ್ಪೂರ್ತಿ..
  ಬಾಳ ಸಂಗಾತಿಯವರಿಗೆ "ಜನುಮದಿನದ ಶುಭಾಶಯಗಳು.."

  ಮನದ ಭಾವಗಳನ್ನು..
  ಸುಂದರ ಶಬ್ಧಗಳಲ್ಲಿ ವ್ಯಕ್ತಪಡಿಸಿದ್ದೀರಿ..
  ಚಂದದ ಕವನಕ್ಕಾಗಿ ಅಭಿನಂದನೆಗಳು..

  ಇಪ್ಪತ್ತೊಂಭತ್ತು ವರುಷದ ನಿಮ್ಮ ದಾಂಪತ್ಯ..
  ಯಾವಾಗಲೂ ಹರುಷಮಯವಾಗಿರಲಿ....

  ತುಂಬು ಪ್ರೀತಿಯಿಂದ....

  ReplyDelete
 28. ಪ್ರಕಾಶ್ ಸರ್ ;ತಮ್ಮ ಶುಭಾಶಯಗಳಿಗೆ ಧನ್ಯವಾದಗಳು.ಬ್ಲಾಗಿನಲ್ಲಷ್ಟೇ ಪರಿಚಯವಾಗಿದ್ದರೂ ನೀವೆಲ್ಲಾ ತೋರಿಸುತ್ತಿರುವ ಆದರ,ಪ್ರೀತಿ,ವಿಶ್ವಾಸಗಳಿಗೆ ಮನ ತುಂಬಿಬರುತ್ತದೆ.ಬ್ಲಾಗಿನ ಈ ನಂಟು ಹೀಗೇ ಮುಂದುವರೆಯಲಿ ಎಂಬುದು ನನ್ನ ಹಾರೈಕೆ. ನಮಸ್ಕಾರ.

  ReplyDelete
 29. ನಿಮ್ಮ ದರ್ಮಪತ್ನಿಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೇಯೆ ನಿಮ್ಮ ಕವನವು ತುಂಬಾ ಚೆಂದವಾಗಿದೆ ಧನ್ಯವಾದಗಳು.

  ReplyDelete
 30. Nice poem sir, Convey my wishes to your wife...

  ReplyDelete
 31. ಚೆಂದದ ಕವನ.. ನಿಮ್ಮ ಶ್ರೀಮತಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

  ReplyDelete
 32. ವಸಂತ್ ಅವರಿಗೆ;ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 33. ಉದಯ್ ಹೆಗ್ಡೆ;ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 34. ಜ್ಯೋತಿ ಶೀಗೆಪಾಲ್ ಅವರಿಗೆ;ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 35. ದಾಂಪತ್ಯಸಾರವನ್ನು ಚೆಂದದ ಸಾಲುಗಳಲ್ಲಿ ಹಿಡಿದಿಟ್ಟಿದ್ದೀರಿ ಸರ್ .. ಶುಭಾಶಯಗಳು.

  ReplyDelete
 36. ಸುಮ ಅವರಿಗೆ;ನಮನಗಳು.ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

  ReplyDelete
 37. ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹಾಗು ನಿಮ್ಮ ದಾಂಪತ್ಯ ಹೀಗೆ ಸುಖವಾಗಿರಲೆಂದು ಆಶಿಸುತ್ತೇನೆ.

  ReplyDelete
 38. ನವೀನ್;ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಹಾರ್ದಿಕ ಶುಭಾಶಯಗಳಿಗೆ ಹಾಗೂ ಹಾರೈಕೆಗೆ ಧನ್ಯವಾದಗಳು.ಬ್ಲಾಗಿನ ಭಾಂಧವ್ಯ ಬೆಳೆಯಲಿ.ಬರುತ್ತಿರಿ.ನಮಸ್ಕಾರ.

  ReplyDelete
 39. ತುಂಬಾ ಚೆನ್ನಾಗಿದೆ ಸರ್..
  ನನ್ನ ನಿನ್ನ ನಡುವೆ
  ಯಾಕೇ ಈ ಗೋಡೆ ?
  ಸಿಟ್ಟು ಅತ್ತ ಇಟ್ಟು
  ಸ್ವಲ್ಪ ಇತ್ತ ನೋಡೇ|
  ನಿಮ್ಮವ,
  ರಾಘು.

  ReplyDelete
 40. ರಾಘು;ನಮಸ್ಕಾರ ಹಾಗೂ ನಿಮಗೆ ನನ್ನ ಬ್ಲಾಗಿಗೆ ಆತ್ಮೀಯ ಸ್ವಾಗತ.ನಿಮ್ಮ ಪ್ರೋತ್ಸಾಹಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 41. ಮೂರ್ತಿ ಸರ್ ,
  ನಿಮ್ಮ ಮನೆಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಹಾಗು ನಿಮ್ಮ ದಾಂಪತ್ಯ ಜೀವನ ಹೀಗೆ ಸುಖಮಯವಾಗಿರಲಿ ( ತಡವಾಗಿದ್ದಕ್ಕೆ ಕ್ಷಮೆ ಇರಲಿ )
  ಕವನ ತುಂಬಾ ಚೆನ್ನಾಗಿದೆ .. ನನ್ನವರಿಗೂ ಈ ಕವನವನ್ನ ತೋರಿಸುತ್ತೇನೆ . :)

  ReplyDelete
 42. ರಂಜಿತ ಮೇಡಂ;ನಿಮ್ಮ ಹಾರೈಕೆಗೆ ಧನ್ಯವಾದಗಳು.ಇದು ಗೀತೆಯಾದ್ದರಿಂದ ರಾಗ ಹಾಕಿ ನಿಮ್ಮವರಿಗೆ ಹಾಡಿತೋರಿಸಿ.ನಿಮ್ಮೆಲ್ಲರ ಜೀವನವೂ ಸುಖಕರವಾಗಿರಲೆಂದು ನಮ್ಮಿಬ್ಬರ ಹಾರೈಕೆ.ನಮಸ್ಕಾರ.

  ReplyDelete
 43. ಶುಭ ಹಾರೈಕೆಗಳು .ಕವನ ತುಂಬಾ ಚೆನ್ನಾಗಿದೆ

  ReplyDelete
 44. ಕೂಸುಮುಲಿಯಳ ರವರಿಗೆ;ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೀತಿ ,ವಿಶ್ವಾಸ ಹೀಗೇಇರಲಿ.ಬ್ಲಾಗಿನ ನಂಟು ಹೀಗೇ ಮುಂದುವರಿಯಲಿ.ನಮಸ್ಕಾರ.

  ReplyDelete
 45. ತಮ್ಮದು ಅನುರೂಪ ದಾಂಪತ್ಯ ಶತಾಯುವಾಗಲಿ, ನಿಮ್ಮ ಮಡದಿ ನೂರ್ಕಾಲ ನಿಮ್ಮೊಡನಿದ್ದು ಹಲವು ಹುಟ್ಟಿದ ದಿನಗಳನ್ನು ಆಚರಿಸಲಿ-ಸಂಭ್ರಮಿಸಲಿ ಎಂದು ಕೊಳಲಿನ ಕೃಷ್ಣನಲ್ಲಿ ಪ್ರಾರ್ಥಿಸಿ ಹಾರೈಸುತ್ತೇನೆ.

  ಕೃಷ್ಣನ ಕೊಳಲಿನ ಕರೆಗೆ ಬರದವರು ಯಾರು
  ನೆಂಟರೋ ಭಂಟರೋ ವೀ ಆರ್ ಭಟ್ಟರೋ ?
  ಅವರೆಲ್ಲ ಬರುವಾಗ ರಾಧೆ ತಾ ಬಾರಳೇ?
  ಇರುವಳಲ್ಲೇ ಜೊತೆಗೆ ಕೃಷ್ಣ ಕನವರಿಸೆ
  ತೂಕಡಿಸೆ ತನ್ನ ಆಸರೆಯನೀಡಿ ಕನಸಿದಳು
  ಮತ್ತೆ ನೂರಾರು ಸಾವಿರ ನಾದತರಂಗಗಳ
  ಮುದದಿ ಮಾರ್ದವಿಸಿ ನಗರ,ದೇಶಕ್ಕೆಲ್ಲ ವ್ಯಾಪಿಸಿ
  ಮುದನೀಡಲೆಂದು ಬಯಸುವಳು ರಾಧೆ
  ಅದು ನಿಮ್ಮ ಪ್ರೀತಿ, ಅದು ನಿಮ್ಮ ಗೆಲವು, ಅದು ನಿಮ್ಮ ಹರಹು
  ಅದು ನಿಮ್ಮ ಒಲವು, ಅದುವೇ ನಿಮ್ಮ ಗೆಲುವು
  ಅದೇ ನಿಮ್ಮ ಅಳಲು ಇಲ್ಲದ 'ಕೊಳಲಿ'ನ ನಾದ ಮಹಾಶಯರೇ
  ಹಾಯಾಗಿ ಸುಖವಾಗಿ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ,ಧನ್ಯವಾದಗಳು

  ReplyDelete
 46. ಭಟ್ ಸರ್;ನಿಮ್ಮ ಪ್ರೀತಿ,ವಿಶ್ವಾಸ,ಸ್ನೇಹ ಮತ್ತು ಹಾರೈಕೆಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 47. good one
  nimma damapathya noorkaala chennagirali

  ReplyDelete
 48. ಅಶೋಕ್ ಕುಮಾರ್;ಬಹಳ ದಿನಗಳ ನಂತರ ನೀವು ಬ್ಲಾಗಿಗೆ ಬರುತ್ತಿರುವುದು ಸಂತೋಷ ತಂದಿದೆ.ನಿಮ್ಮಹಾರೈಕೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 49. ಮೂರ್ತಿ ಸರ್,
  ನಿಮ್ಮ ಶ್ರೀಮತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...ನಿಮ್ಮ ದಾಂಪತ್ಯ ಜೀವನ ಹೀಗೆ ಸದಾ ಸುಖಮಯವಾಗಿರಲಿ...ನಿಮ್ಮ ಕವನ ಸರಳವಾಗಿ ಸುಂದರವಾಗಿತ್ತು...ಧನ್ಯವಾದಗಳು...(ಕೆಲಸದ ಒತ್ತಡದಿಂದಾಗಿ ಈ ಕಡೆ ಬರಲ್ಲಿಕ್ಕೆ ಸಾಧ್ಯವಾಗದ ಕಾರಣ ನಿಮ್ಮ ಕೆಲವು ಬರಹಗಳನ್ನು ಓದಲಾಗಿರಲಿಲ್ಲ. ಅವುಗಳಲ್ಲಿ ಕೆಲವನ್ನು ಇವತ್ತು ಓದಿದೆ. ಬಾಕಿ ಉಳಿದವುಗಳನ್ನು ಓದುತ್ತೇನೆ)

  ReplyDelete
 50. ಅಶೋಕ್ ಕೊಡ್ಲಾಡಿ ಯವರಿಗೆ;ನಿಮ್ಮ ಪ್ರೀತಿ ಪೂರ್ವಕ ಹಾರೈಕೆಗಳಿಗೆ ಅನಂತಾನಂತ ಧನ್ಯವಾದಳು.ತಪ್ಪದೇ ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

  ReplyDelete
 51. dr. sir,
  shubhaashaya nimage olleya kavana baredaddakke....
  nimma shrimatiyavarige shubhaashaya....

  heege noorkaala baaLi sir....

  ReplyDelete
 52. Dinakara mogera;Thank you very much for your kind greetings.warm regards.

  ReplyDelete
 53. ಮೂರ್ತಿ ಸರ್, ನಮಸ್ತೆ..
  ಈಗಿನ ನಮ್ಮ ಸುತ್ತ ಇರುವ ಪ್ರೀತಿ/ಪ್ರೇಮಿಗಳನ್ನು ನೋಡಿದಾಗ ಬೇಜಾರಾಗುತ್ತೆ..
  ಅವರ ಪ್ರೀತಿಯ ವ್ಯಾಲಿಡಿಟಿ ತುಂಬಾ ಕಡಿಮೆ, ಒಂದು ಸುಂದರ/ ಒಬ್ಬರನೊಬ್ಬರು ಅರ್ಥ ಮಾಡಿಕೊಂಡ ಜೋಡಿ ವಿರಳ..
  ಮೇಲಿನ ನಿಮ್ಮ ಸಾಲುಗಳು, ಪ್ರೀತಿಗೆ ಸ್ಫೂರ್ತಿ ತುಂಬಿದೆ..
  ನಿಮ್ಮ ದಾಂಪತ್ಯ ಪ್ರೀತಿಗೆ ನನ್ನದೊಂದು ಪುಟ್ಟ ಸಲಾಮು..
  ಶುಭಾಶಯಗಳು...
  -ಅನಿಲ್ ಬೇಡಗೆ

  ReplyDelete
 54. ನಮಸ್ಕಾರ ಅನಿಲ್ ಸರ್;ನಿಮ್ಮ ಶುಭ ಹಾರೈಕೆಗೆ ನನ್ನದೂ ಒಂದುಸಲಾಮು.ಬ್ಲಾಗಿಗೆ ಬರುತ್ತಿರಿ.ಎಲ್ಲಾ ಓದುಗರಿಗೂ,ನಿಮಗೂ ಅನಂತ ಧನ್ಯವಾದಗಳು.

  ReplyDelete
 55. 1:Photos::Chennaagide
  2: 29 varshagala daampatya jeevanakke congrats
  3:poem is beautiful, its a river of love. (am i correct ?)
  4: To Madam:: HAPPY BIRTHDAY :-)(sorry for belated wish)sir, madamge khandita nanna wish tilistiralla ?

  ReplyDelete
 56. NRK ಯವರಿಗೆ ನಮಸ್ಕಾರ.ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.ನಿಮ್ಮ ಶುಭಾಶಯಗಳನ್ನು ನನ್ನ ಶ್ರೀಮತಿಗೆ ಖಂಡಿತ ತಿಳಿಸುತ್ತೇನೆ.ನಿಮ್ಮೆಲ್ಲಾ ಸ್ನೇಹ,ಪ್ರೀತಿ,ವಿಶ್ವಾಸಗಳಿಗೆ ಅನಂತಾನಂತ ವಂದನೆಗಳು.

  ReplyDelete
 57. ಕೇಶವ ಪ್ರಸಾದ್ ರವರಿಗೆ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು.ಬ್ಲಾಗಿಗೆ ಮತ್ತೆ ಬನ್ನಿ.ನಮಸ್ಕಾರ.

  ReplyDelete