Friday, July 30, 2010

'ಖಾಲಿ ಜಗಾ ಕಹಾಂ ಹೈ?'

ಒಮ್ಮೆ ನಾನು ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದೆ .ನನ್ನ ಎದುರಿನ ಸಾಲಿನಲ್ಲಿ ನಾಲಕ್ಕು ಜನ ಕೂರುವ ಜಾಗದಲ್ಲಿ ಮೂರು ಜನ ಮಾತ್ರ ಕೂತಿದ್ದರು.ಮಧ್ಯದಲ್ಲಿ ಕುಳಿತಿದ್ದ ಧಡೂತಿ ವ್ಯಕ್ತಿ ,ಬಹಳ ಹೊತ್ತಿನಿಂದ ಯಾರಿಗೂ ಜಾಗ ಕೊಡದೆ ಕಾಲುಗಳನ್ನು ಅಗಲಿಸಿಕೊಂಡುಇಬ್ಬರ ಜಾಗ ಆಕ್ರಮಿಸಿಕೊಂಡು  ಆರಾಮವಾಗಿ ಕುಳಿತಿದ್ದ.ಕೆಲವರು ಕೇಳಲು ಧೈರ್ಯ ಸಾಲದೇ ಮುಂದೆ ಹೋದರೆ ,ಕೆಲವರು ಜಾಗ ಕೇಳಿ ಆ ಧಡೂತಿ ವ್ಯಕ್ತಿಯ ಹತ್ತಿರ 'ಜಗಾ ಕಹಾಂ ಖಾಲಿ ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು  ಹೇಳಿಸಿಕೊಂಡು ಮುಂದೆ ಹೋಗುತ್ತಿದ್ದರು.ಅವನ ಒರುಟು ತನದಿಂದ ಜನ ಬೇಸರ ಗೊಂಡಿದ್ದರೂ, ಅವನ ಆಕಾರ ಮತ್ತು ನಡವಳಿಕೆ ನೋಡಿ ಸುಮ್ಮನಿದ್ದರು.ಮುಂದೊಂದು ಸ್ಟೇಶನ್ ನಲ್ಲಿ ಒಬ್ಬ ಭಾರಿ ಸರ್ದಾರ್ ಜೀ ಬೋಗಿಯೊಳಗೆ ಹತ್ತಿದ.ಧಾರಾಕಾರವಾಗಿ ಸುರಿಯುತ್ತಿದ್ದ ಬೆವರು ಒರಿಸಿಕೊಳ್ಳುತ್ತಿದ್ದ ಅವನಿಗೆ ಧಡೂತಿಯವನು ಕುಳಿತಿದ್ದ ಡಬಲ್ ಸೀಟು ಕಣ್ಣಿಗೆ ಬಿತ್ತು.ಸ್ವಲ್ಪವೂ ಹಿಂಜರಿಯದೆ ಆ ಧಡೂತಿ  ಯವನಿಗೆ 'ಜರಾ ಸರಕೋ ಭೈಯ್ಯಾ 'ಎಂದಾ.ಧಡೂತಿ ವ್ಯಕ್ತಿ ತನ್ನ ಮಾಮೂಲಿ ವರಸೆಯಲ್ಲಿ 'ಜಗಾ ಕಹಾಂ ಖಾಲೀ  ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು ಕೆಕ್ಕರಿಸಿ ನೋಡುತ್ತಾ  ಸಿಡುಕಿದ.ತಕ್ಷಣವೇ ಸರ್ದಾರ್ ಜೀ ತುಂಟ ನಗೆ ನಗುತ್ತಾ  'ಕ್ಯಾ ಸಿರ್ ಮೇ ಜಗಾ ಖಾಲೀ ಹೈ?' ಎಂದುವ್ಯಂಗ್ಯದ ಹರಿತ  ಬಾಣ ಒಂದನ್ನು  ಬಿಟ್ಟ.ಬಾಣ ನಾಟಿತು.ಈ ಅನಿರೀಕ್ಷಿತ ಮಾತಿನ ಧಾಳಿಯಿಂದ ಅವಾಕ್ಕಾದ ಧಡಿಯ, ಮರು ಮಾತಾಡದೆ ಸರಿದು ಜಾಗ ಬಿಟ್ಟ.ಸರ್ದಾರ್ ಜೀ ನಗುತ್ತಲೇಅವನ ಪಕ್ಕ  ಕುಳಿತುಕೊಂಡ.ಬೋಗಿಯಲ್ಲಿ ಈ ತಮಾಷೆಯನ್ನು ನೋಡುತ್ತಿದ್ದವರು ನಗು ತಡೆದು ಕೊಳ್ಳಲು ಕಷ್ಟಪಡುತ್ತಿದ್ದರು.ನಾನೂ ಮನಸ್ಸಿನಲ್ಲೇ ನಕ್ಕೆ.

17 comments:

  1. hhaa...hhaaa... sakkattaagide..... sardaarji, konegoo buddivantanaada.....

    ReplyDelete
  2. ಅಯ್ಯೋ ಈ ರಾತ್ರಿ ಮೇಲ್ ಟ್ರೈನ್ಗಳ ಸಹವಾಸ ಸಾಕಪ್ಪ ಸಾಕು ..ಕಾಲು ಇಡಲು ಜಾಗವಿರೋಲ್ಲ ಕೆಲವೊಮ್ಮೆ ಅತ್ತಲು ಜಾಗವಿರೋಲ್ಲ.ಈಚೆಗೆ ಟ್ರೈನ್ ನಲ್ಲಿ ಪ್ರಯಾಣ ನಿಲ್ಲಿಸಿಬಿಟ್ಟಿರುವೆ:
    -- Day dreamer

    ReplyDelete
  3. ದಿನಕರ್ ಮೊಗೇರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  4. ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಕೆಲವೊಮ್ಮೆ ದೂರದ ರೈಲು ಪ್ರಯಾಣಗಳು ವಿಶಿಷ್ಟ ಅನುಭವಗಳನ್ನು ಕೊಡುತ್ತವೆ.ನಮಸ್ಕಾರ.

    ReplyDelete
  5. ಕೃಷ್ಣಮೂರ್ತಿಯವರೆ...

    ಧಡೂತಿಯ ತಲೆಯಲ್ಲಿ ತಿಳುವಳಿಕೆ ಇದ್ದಲ್ಲಿ ಆತ ಜಾಗ ಬಿಟ್ಟುಕೊಡುತ್ತಿದ್ದ ತಾನೆ?

    ಹ್ಹಾ..ಹ್ಹಾ.. !!
    ಸರ್ದಾರನ ಸಮಯೋಚಿತ ಮಾತು ಬಹಳ ಇಷ್ಟವಾಯಿತು... ಹ್ಹಾ..ಹ್ಹ.. !!

    ReplyDelete
  6. ಈ ಧಡೂತಿ ಥರದವರು ಬಹಳ ಜನ ಇರುತ್ತಾರೆ, ತಮ್ಮದೇ ಸ್ವಂತ ಎನ್ನುವ ಹಾಗೆ ಒಂದು ಕಂಪಾರ್ಟ್ ಮೆಂಟ್ ಪೂರ್ತಿ ಅಡ್ಡಾದಿಡ್ಡಿ ಕಾಲಿಟ್ಟುಕೊಂಡು ಎಲ್ಲರನ್ನೂ ಬೇರೆಡೆಗೆ ಕಳಿಸುವವರಿದ್ದಾರೆ, ಇಲ್ಲಿ ಜೋಕಿನ ಜೊತೆಗೆ ನಮ್ಮನ್ನೂ ಎಚ್ಚರಿಸಿಬಿಟ್ಟಿದ್ದೀರಿ, ಧನ್ಯವಾದಗಳು.

    ReplyDelete
  7. ರೈಲಿನ ಪ್ರಯಾಣ ತುಂಬಾ ಸೊಗಸಾಗಿರುತ್ತೆ. ಎಂಜಾಯ್ ಮಾಡೋಕೆ ತುಂಬಾ ವಿಷಯಗಳು ಸಿಗುತ್ತವೆ.
    ಒಬ್ಬ ಯಾರಿಗೂ ಸೀಟು ಬಿಡದೆ ಮಲಗಿದ್ದ, ಬಹುಶಃ ಅರಸೀಕೆರೆ ಹತ್ರ ಅನ್ನಿಸುತ್ತೆ. ಅವನಿಗೆ ಒದೆಗಳು ಬಿದ್ದಿದ್ದು ಮಾತ್ರ ಒಬ್ಬ ಸೈನಿಕನಿಂದ.
    ಬೇಕಾಗಿತ್ತಾ ಅವನಿಗೆದೆಲ್ಲಾ :-(
    ಇಂತಹ ಕೆಲವು ಘಟನೆಗಳನ್ನ ನೆನಪಿಸುತ್ತೆ ನಿಮ್ಮ ಬರಹ. ಥ್ಯಾಂಕ್ಸ್.

    ReplyDelete
  8. ಮೂರ್ತಿ ಸರ್ ,
    ರೈಲಿನಲ್ಲಿ ಪ್ರಯಾಣಿಸಿವಾಗ ಇಂತಹ ಹಲವು ಪ್ರಸಂಗಗಳನ್ನು ನೋಡಬಹುದಾಗಿದೆ ..
    ಚೆನ್ನಾಗಿದೆ . ನೀವು ಹೇಳಿದ ಘಟನೆ ..

    ReplyDelete
  9. ಸರದಾರಜೀ ಅಂದರೆ ಏನೋ ಅಂತ ತಿಳ್ಕೊಂಡಿರೋರಿಗೆ ಈ ಸರದಾರ ಒಳ್ಳೇ ಪಂಚ್ ಕೊಟ್ಟನಲ್ಲ! A very witty reply!

    ReplyDelete
  10. ಡಾ. ಬಹಳ ಸ್ವಾರಸ್ಯಕರ...ಎಲ್ಲರೂ ಸರ್ದಾರ್ ಜೀಗಳಿಗೆ ಬುದ್ಧಿ ಇರೊಲ್ಲ ದಡ್ಡ ದಡ್ದ ಲೇವಡಿ ಮಾಡೋದು ಎಷ್ಟು ಸುಳ್ಳು ನೋಡಿ ಎಲ್ಲರೂ ಸುಮ್ನೇ ಹೋದ್ರು ಸಾರ್ದಾರ್ ಜೀ ತನ್ನ ಬುದ್ಧಿವಂತಿಕೇನಾ ಕ್ಯಾಶ್ ಮಾಡ್ಕೊಂಡ...ಚನ್ನಾಗಿದೆ..

    ReplyDelete
  11. 'ಕ್ಯಾ ಸಿರ್ ಮೇ ಜಗಾ ಖಾಲೀ ಹೈ?' ಈ ಪ್ರಶ್ನೆ ಯೇ ಬಹಳ ಚೆನ್ನಾಗಿದೆ. ಹೇಗಾದರೂ ಅರ್ಥ ಮಾಡಿಕೊಳ್ಳಬಹುದು!

    ReplyDelete
  12. ಸೂಕ್ತ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುತ್ತಿರುವ ಶ್ರೀ ಪ್ರಶಾಂತ್ ಹೆಗಡೆ,ಶ್ರೀ ವಿ.ಆರ್.ಭಟ್,ಶ್ರೀ ನಾಗರಾಜ್ ,ಶ್ರೀ ಕೆ.ಶ್ರೀಧರ್,ಶ್ರೀ ಸುನಾಥ್ ,ಶ್ರೀ ಆಜಾದ್, ಶ್ರೀಮತಿ ಪ್ರಗತಿ ಹೆಗಡೆ ಮತ್ತು ಶ್ರೀಮತಿ ಪ್ರಭಾಮಣಿ ನಾಗರಾಜ್ ಇವರಿಗೆಲ್ಲ ನನ್ನ ಅನಂತ ಧನ್ಯವಾದಗಳು.ತಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲೆಂದು ಹಾರೈಸುತ್ತೇನೆ.ತಮ್ಮೆಲ್ಲರಿಗೂ ನಮಸ್ಕಾರ.

    ReplyDelete
  13. ಡಾಕ್ಟ್ರೆ, ಸಧ್ಯ ಮನಸ್ಸಿನಲ್ಲೇ ನಕ್ಕಿದ್ದು ಒಳ್ಳೆದಾಯ್ತು, ಇಲ್ಲ ಅಂದ್ರೆ ನಿಮಗೂ ತನ್ನ ದಡೂತಿ ಬುದ್ಧಿ ತೋರಿಸಿದರೆ ಕಷ್ಟ ಆಗ್ತಿತು.......!
    ಚೆನ್ನಾಗಿದೆ. ಉತ್ತರ ಭಾರತದಲ್ಲಿ ಇಂತಹ ಒರಟು ಅಣ್ಣ-ಅಕ್ಕಂದಿರು ಜಾಸ್ತಿ........
    ನಮಗಂತೂ ದಿನಾ ಇಂತಹ ಅನುಭವಗಲಾಗ್ತವೆ!

    ReplyDelete
  14. ಪ್ರವೀಣ್;ಜೋರಾಗಿ ನಕ್ಕಿದ್ದರೆ ನನ್ನ ಹಲ್ಲು ಉದುರಿಸುತ್ತಿದ್ದನೋ ಏನೋ!ನನ್ನ ಪುಣ್ಯ ಚೆನ್ನಾಗಿದೆ!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. Murthy sir.....

    tumbaa chennagide...odta iddaga Mumbai na local train na nenpaitu...dina adralle naan hogodu...intaha ghathanegalu nadeeta irtaave...dhanyavaadagalu...

    ReplyDelete

Note: Only a member of this blog may post a comment.