ನಡು ಭಾಗ ಸೇಬಿನಂತಾಗಿ !
ತಿನ್ನದಿದ್ದರೂ ತೇಗುವಂತಾಗಿ!
ನಡೆಯುವುದೇ ಪ್ರಯಾಸವಾಗಿ !
ಕಾರಣವಿಲ್ಲದೇ ಆಯಾಸವಾಗಿ !
ಬಿ.ಪಿ,ಶುಗರ್ರು --------,
ಬೆಲೆಗಳಂತೆ ಗಗನಕ್ಕೇರಿ
ಹಿಡಿತಕ್ಕೇ ಸಿಗದಂತಾಗಿ !
ಮಕ್ಕಳು ಮಾತು ಕೇಳದೇ
ಬರೀ ರೇಗುವಂತಾಗಿ---- ,
ಸಂಗಾತಿಗೆ ಬದುಕು ------,
ಸುಖವಿಲ್ಲದೆ ಏಗುವಂತಾಗಿ!
ಮೊದಲಿನ ಮಿಂಚಿನ ಓಟ ಹೋಗಿ
ಬದುಕು ತೆವಳುತ್ತಾ ಸಾಗಿ !
ಅಂತಾಗಿ,ಇಂತಾಗಿ,ಎಂತೋ ಆಗಿ
ಕೊನೆಗೆ ಮಧ್ಯ ವಯಸ್ಸು
ಮನೆ ಮಂದಿಗೆಲ್ಲಾ ಸಾಕಾಗಿ ,
ತಲೆ ಚಿಟ್ಟು ಹಿಡಿಸುವ --------,
ಕಾ, ಕಾ ,ಎನ್ನುವ -----ಕಾಗಿ !
(ಇದು ನಡುವಯಸ್ಸಿನ ಒಂದು ವಿಡಂಬನಾತ್ಮಕ ಚಿತ್ರಣವಷ್ಟೇ.ಆದರೆ ಇದಕ್ಕೆ ಅಪವಾದ ಎಂಬಂತೆ ಅರವತ್ತರಲ್ಲೂ ಹರೆಯದವರನ್ನೂ ನಾಚಿಸುವಂತಹ ಆರೋಗ್ಯ ಮತ್ತು ಅಂಗ ಸೌಷ್ಠವ ಇರುವವರೂ ಇದ್ದಾರೆ.ಎಲ್ಲರ ಜೊತೆ ಹೊಂದಿಕೊಂಡು ಸೊಗಸಾದ ಬಾಳ್ವೆ ನಡೆಸುತ್ತಿರುವವರೂ ಇದ್ದಾರೆ.ಎಲ್ಲರ ಬಾಳೂ ಹಸನಾಗಲಿ ಎನ್ನುವ ಹಾರೈಕೆ ನನ್ನದು.ನಮಸ್ಕಾರ .)
superb....!!
ReplyDeleteThank you for your kind comment.
ReplyDeleteಮಹನೀಯರೇ, ನಿಮ್ಮ ವ್ಯಾಖ್ಯಾನ ಚೆನ್ನಾಗಿದೆ, ನಿಮ್ಮ ಆಶಯವೇ ನಮ್ಮದೂ ಕೂಡ! ನೀವೇ ಅಂದಂತೆ ನನ್ನ ಅಜ್ಜ ೮೮ ರ ವಯಸ್ಸಿನವರೆಗೂ ಓಡಾಡಿಕೊಂಡು ಅವರ ಕೆಲಸ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದರು, ಅವರದು ಬೊಜ್ಜು ದೇಹವಾಗಿರಲಿಲ್ಲ, ಬೊಜ್ಜೇ ಹಲವು ರೋಗಗಳಿಗೆ ಕಾರಣ ಎಂಬುದು ನನ್ನ ಅಭಿಪ್ರಾಯ. ಶಾರೀರಿಕ ಕೆಲಸ ಯಾರಿಗೆ ಇಲ್ಲವೋ ಅವರೆಲ್ಲಾ ಬಹಳ ಕಾಳಜಿವಹಿಸಬೇಕು, ಶರೀರವನ್ನು ಕೆಲಸದಲ್ಲಿ ತೊಡಗಿಸುವವರು ಬೊಜ್ಜನ್ನು ತಡೆಯಬಲ್ಲರು ಅಲ್ಲದೇ ರೋಗವನ್ನೂ ನಿರೋಧಿಸಿ ತನ್ಮೂಲಕ ೬೦ರ ನಂತರವೂ ಹುಡುಗರಂತೇ ಇರಬಲ್ಲರು, ಧನ್ಯವಾದಗಳು
ReplyDeleteಸನ್ಮಾನ್ಯ ವಿ.ಆರ್.ಭಟ್ ಅವರಿಗೆ ;ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಹಹ..ಸಖತ್..ಡಾಕ್ಟರ್ ಜಿ.. ಅಪವಾದ ಏನೇ ಇರಲಿ..ನೀವು ಹೇಳಿದ ಶೈಲಿ ಖುಶಿ ಕೊಡ್ತು.
ReplyDeleteಅನ೦ತ್
ಡಾಕ್ಟ್ರೆ,
ReplyDeleteಅಂತೂ ಇಂತೂ ಮಧ್ಯ ವಯಸ್ಸಿನಲ್ಲಿ ಏನೆಲ್ಲಾ ಆಗಿ ಕ್ಕಾ ಕ್ಕಾ ಕಾಗಿ........
ಹ್ಹ, ಹ್ಹ ಹ್ಹಾ........
ಚೆನ್ನಾಗಿದೆ.
ಅನಂತರಾಜ್ ಸರ್;ಒಮ್ಮೊಮ್ಮೆ ವಿ.ಆರ್.ಎಸ್.ತೆಗೆದುಕೊಂಡು ಹೆಂಡತಿ ,ಬೆಳದ ಮಕ್ಕಳು ಮಾಡುವ ಎಲ್ಲಾ ಕೆಲಸಕ್ಕೂ ಟಾಂಗ್ ಅಡಾಯಿಸುತ್ತಿರುವರನ್ನು ಕಂಡು ಹೀಗನಿಸುತ್ತದೆ.ಇಡು ಬರೀ ವಿಡಂಬನೆ ಅಷ್ಟೇ.ಧನ್ಯವಾದಗಳು.
ReplyDeleteನಮಸ್ಕಾರ ಪ್ರವೀಣ್;ಸುಮಾರು ಮಧ್ಯವಯಸ್ಕರು ನಾನು ನೋಡಿದ ಹಾಗೆ,ತಮ್ಮ ಪಾಡಿಗೆ ತಾವು ಸುಮ್ಮನಿರದೆ ಎಲ್ಲಾದಕ್ಕೂ ಮೂಗು ತೂರಿಸಿ ಮನೆಯಲ್ಲಿ ಸದಾ ಜಗಳವಾಡುತ್ತಾ ಕಿರಿ,ಕಿರಿ ಮಾಡಿ ಎಲ್ಲರಿಗೂ ಬೇಸರ ಉಂಟುಮಾಡುತ್ತಾರೆ.ನಾವು ಹಾಗಾಗಬಾರದು.ಅಲ್ಲವೇ?
ReplyDeleteNEEVU HELIRUVADU 100% NIJA.NAMMALI VRS PADEDA BAHALASTU JANARA PAADU NIMMA KAVANADALLI KANDIDDENE.PRATHIBHE BEDA, UTTAMA HAVYASA EDDARE SAAKU,BADUKU SUGAMAVAAGABAHUDENO.DHANYAVADAGALU.
ReplyDeleteಹೇಮಚಂದ್ರ;ನಡು ವಯಸಿನಲ್ಲಿ ಸ್ವಲ್ಪ ಹೆಚ್ಚು ತಾಳ್ಮೆ ,ಸಮಾಧಾನ ಇಟ್ಟುಕೊಂಡು,ಹೆಂಡತಿ ಮಕ್ಕಳ ಅಭಿಪ್ರಾಯಗಳನ್ನು ಗೌರವಿಸಿ,ಕೇಳಿದಾಗ ಮಾತ್ರ ಸಲಹೆ ಕೊಡುವುದನ್ನು ಕಲಿತರೆ ಬಾಳು ಸಹನೀಯವಾಗುತ್ತದೆ.ಇಲ್ಲದಿದ್ದರೆ ಹೆಂಡತಿ ನೆರೆ ಮನೆಯವರ ಹತ್ತಿರ'ಇವರು ರಿಟೈರ್ ಮೆಂಟ್ ಆಗಿ ಮನೆಯಲ್ಲಿ ಕೂತಾಗಿನಿಂದ ನನಗೆ ಸಾಕಾಗಿದೆ ನೋಡ್ರಿ.ಮಾತು ಮಾತಿಗೆ ಮಕ್ಕಳ ಕೂಡ ಜಗಳ ಆದತ್ತಾರೆ'ಎಂಬ ಮಾತು ಹೇಳುವುದನ್ನು ಕೇಳಬೇಕಾಗುತ್ತದೆ.ಧನ್ಯವಾದಗಳು.
ReplyDeleteನಿಜ. ಈ ಜನಾಂಗಕ್ಕೆ ನಡುವಯಸ್ಸೇ ಮುದಿವಯಸ್ಸು! :(
ReplyDeleteಭಾಷೆಯವರೇ; ನನಗೆ ತಿಳಿದ ಮಟ್ಟಿಗೆ ಇಂದಿನ ಜನಾಂಗ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚೆತ್ತುಕೊಂಡಿದೆ.ಧನ್ಯವಾದಗಳು.
ReplyDeleteತೇಜಸ್ವಿನಿಯವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:-)
ReplyDeleteVery Nice...
ReplyDeleteಜ್ಯೋತಿ ಶೀಗೆಪಾಲ್ ಅವರಿಗೆ ;ಅನಂತ ಧನ್ಯವಾದಗಳು.
ReplyDeleteಚೆನ್ನಾಗಿದೆ ಸರ್, ಹಾಗಿದ್ರೆ ನಾವ್ ಇದನ್ನ ಹೀಗೆ ಹೇಳೋಣ ಅಲ್ವೇ...
ReplyDeleteನಡು ವಯಸ್ಸಿನ ಲತಾಂಗಿ
ನಡೆಯಲ್ಲಿ ಗೌರವ ಭಂಗಿ
ಕಷ್ಟ ಸುಖಗಳಿಂದ ಮಾಗಿ
ನೆಮ್ಮದಿಯ ಬದುಕು ಸಾಗಿ
ಆಹಾರವು ಮಿತವಾಗಿ
ವ್ಯಾಯಾಮವೇ ನೆರವಾಗಿ
ಇದ್ದಾಗ ಆರೋಗ್ಯವಾಗಿ
ನಗಿಸುವುದೇ ಬದುಕಾಗಿ
ಮನೆಯವರಿಗೆಲ್ಲ ಪ್ರಿಯವಾಗಿ
ಚಿಕ್ಕವರಿಗೆ ಗುರುವಾಗಿ ವರವಾಗಿ
ಸಂಗಾತಿಗೆ ಜೊತೆಯಾಗಿ
ನಡೆಯುತಿರೆ ಹಾಯಾಗಿ..
ಅಂತಾಗಿ... ಇಂತಾಗಿ...
ಶತಕ ಬಾರಿಸುವಂತಾಗಿ
ಜೀವಿಸಿ ಗೆಲುವಾಗಿ .... :-)
ನಮಸ್ಕಾರ.... ಶುಭವಾಗಲಿ..
ನಿಮ್ಮ ವಿಡ೦ಬನೆ ಒ೦ದು ಎಚ್ಚರಿಕೆಯೂ ಆಗಿದೆ.
ReplyDeleteನಡುವಯಸ್ಸಿನವರಿಗೆ ಒಳ್ಳೆಯ ಕಾವ್ಯರೂಪದ ಎಚ್ಚರಿಕೆ ಕೊಟ್ಟಿದ್ದೀರಿ. ಈ ಎಚ್ಚರಿಕೆಯನ್ನು ಎಲ್ಲರೂ ಗಮನಿಸಲೇ ಬೇಕು.
ReplyDeleteಪ್ರಗತಿ ಹೆಗಡೆಯವರಿಗೆ;ನಮನಗಳು.ನಿಮ್ಮ ಕವನ ರೂಪದ ಪ್ರತಿಕ್ರಿಯೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ಅಂತಾಗಿ,ಇಂತಾಗಿ,ನೀವು ನಗು ನಗುತಾ ಶತಕ ಬಾರಿಸುವಂತಾಗಲಿ ಎಂಬುದು ನನ್ನ ಹಾರೈಕೆ.ಧನ್ಯವಾದಗಳು.
ReplyDeleteಕೂಸು ಮುಲಿಯಳ;ಅವರಿಗೆ ನಮನಗಳು.ನಾವು ನಡುವಯಸ್ಕರು ನಮ್ಮ ಆಹಾರ,ವಿಹಾರ,ವಿಚಾರಗಳ ಬಗ್ಗೆ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸುನಾತ್ ಸರ್ ;ನಡುವಯಸ್ಕರಿಗೆ ಕಾವ್ಯರೂಪದಲ್ಲಿ ಎಚ್ಚರಿಕೆ ಕೊಟ್ಟಿದ್ದೀರಿ ಎಂದಿದ್ದೀರಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರಗಳು.
ReplyDeleteಮಸ್ತ್..
ReplyDeleteಧನ್ಯವಾದಗಳು.
ReplyDeleteಹ್ಹಾ..ಹ್ಹಾ... ನಡುವಯಸ್ಸು ನಮ್ಮ ನಡುವಿನಿಂದಲೇ ಅಳೆಯಬಹುದು ಆಲ್ವಾ ಸರ್... ನಡು, ಸರಿಯಾದ ಅಳತೆಯಲ್ಲಿದ್ದರೆ ಎಲ್ಲವೂ ಸರಿಯಾಗಿರತ್ತೆ.... ಆಲ್ವಾ ಸರ್.... ಉತ್ತಮ ಕವನ.....
ReplyDeleteನಡು + ವಯಸ್ಸು = ನಡುವಯಸ್ಸು?
ReplyDeletesuperb sir, good one :D
ReplyDeleteದಿನಕರ್;ನಡುವನ್ನು ಮಿತಿ ಮೀರಿ ಬೆಳೆಯದಂತೆ ನೋಡಿಕೊಂಡರೆ ಆರೋಗ್ಯ ಖಂಡಿತ ಚೆನ್ನಾಗಿ ಇಟ್ಟುಕೊಳ್ಳಬಹುದು.ಧನ್ಯವಾದಗಳು.
ReplyDeleteಭಟ್ಟರೇ;ಅದ್ಭುತ ಪ್ರತಿಕ್ರಿಯೆ!ಧನ್ಯವಾದಗಳು.
ReplyDeleteಮಾನಸ;ಧನ್ಯವಾದಗಳು.
ReplyDeletenanna naduvayassina chinte suruvaayitu nimma kavana odi. 10-12 kg karagisabeku. ha ha
ReplyDeletenice poem!!
sadhyaa innu ka kaa kaagi andilla yaaru!
Murthy sir...
ReplyDeleteha ha ha...tumbaa chennagide nimma nadu vayassina varnane....Nice one sir......