Tuesday, August 24, 2010

"ಕೋಣನ ಕುಂಟೆಯ ಕಿಂದರ ಜೋಗಿ!!"

ಇವನ  ದಿನನಿತ್ಯದ  ಒಡನಾಟ  ,
ಇಟ್ಟಿಗೆ ಸಿಮೆಂಟಿನ ಜೊತೆಯಾದರೂ ,
ಇವನು -------ಸಾಮಾನ್ಯನಲ್ಲ!
ಇಂವ ---------------------,
ಸ್ನೇಹ ಲೋಕದ ,ಮಾಂತ್ರಿಕ!!
ಬ್ಲಾಗ್ ಲೋಕದ ಗಾರುಡಿಗ!!

ಕೋಣನ ಕುಂಟೆಯಲ್ಲೇ ಕುಳಿತು 
ಮಾಡಿದ ನೋಡಿ ,ಮೋಡಿ!!
ಯಾಂತ್ರಿಕ ಜೀವನಕ್ಕೆ ಬೇಸತ್ತು ,
ಬಳಲಿ,ಬೆಂಡಾಗಿ,ಬಸವಳಿದ ಜೀವವ,
ಕೈ ಬೀಸಿ,ಕರೆದಿತ್ತು -----------,
ಇವನೂದಿದ ಸ್ನೇಹದ -----,
ಮೋಹನ  ಮುರಳಿ !

ಕೆಲಸವನೆಲ್ಲ ಬದಿಗೊತ್ತಿ ,
ಓಡಿದೆವು ನಾವೆಲ್ಲಾ 
'ಬೃಂದಾವನ'ನಗರಕ್ಕೆ !
'ನಯನ'ಸಭಾಂಗಣಕ್ಕೆ.
ನಕ್ಕು ,ನಲಿಯುವುದಕ್ಕೆ!
ಸ್ನೇಹ  ಸುಧೆಯ ---------,
ಮೊಗೆ ಮೊಗೆದು ಕುಡಿಯುವುದಕ್ಕೆ!


ಈ ಗಾರುಡಿಗ ಸಾಮಾನ್ಯನಲ್ಲ!
ಇವನ ಸ್ನೇಹ  ಆಕಾಶ!
ನಮ್ಮ ನರ ನಾಡಿಗಳಲ್ಲೂ 
ಅದು ವಿದ್ಯುತ್ತಾಗಿ ಹರಿದು 
ನಮ್ಮ ಬದುಕೂ 'ಪ್ರಕಾಶ'!!!

52 comments:

  1. ಬಹಳ ನಿಸ್ಪೃಹ ಮತ್ತು ಅತ್ಯಂತ ಚಟುವಟಿಕೆಯ ಶ್ರೀ ವ್ಯಕ್ತಿ ಪ್ರಕಾಶ್ ಹೆಗಡೆ. ಪಕ್ಕು ಮಾಮ, ದಾದ, ಪ್ರಕಾಶಣ್ಣ , ಪ್ರಕಾಶು, ಪ್ರಕಾಸಣ್ಣ, ದೊಡ್ಡಗಣಪ ಎಂದೆಲ್ಲಾ ಕರೆಸಿಕೊಳ್ಳುವ ಈ ಸ್ನೇಹಜೀವಿಗೆ ಕವನ ಸಮಂಜಸವಾಗಿದೆ. ಅವರ ಹೆಸರು ನೂರೆಂಟು ಆಗುವವರೆಗೂ ಅವರಿವರು ಇಷ್ಟವಾದ ಹೆಸರಲ್ಲಿ ಕರೆಯುತ್ತಲೇ ಇರಲಿ, ಆಮೇಲೆ ಎಲ್ಲರೂ ಸೇರಿ ಒಂದು ನಿರ್ದಿಷ್ಟ ಪೆನ್ ನೇಮ್ ನಾವೇ ಕೊಟ್ಟು ಸನ್ಮಾನಿಸಿ ಬಿಡೋಣ ಆಗದೇ ? ಕವನ ಬಹಳ ಚೆನ್ನಾಗಿ ಬಂದಿದೆ, 'ದೊಡ್ಡ ಗಣಪನ' ಚಿತ್ರ ಕೂಡ, ಪಕ್ಕು ಮಾಮ ಇನ್ನೂ ಹಲವು ಹತ್ತು ಸಾಧನೆ ಮಾಡಲಿ, ರಂಜಿಸುತ್ತ ನೂರ್ಕಾಲ ನಮ್ಮೆಲ್ಲರ ಮಧ್ಯೆ ತಾನು ರಂಜನೆ ಪಡೆಯಲಿ [ಭೂಮಿ ತನ್ನನ್ನೇ ಸುತ್ತಿಕೊಂಡಂತೆ !] ಎಂದು ಹಾರೈಸುತ್ತೇನೆ, ನಿಮ್ಮ ಅನುಭವ ಅದು ಬಹುಶಃ ಎಲ್ಲರ ಅನುಭವ. ಧನ್ಯವಾದಗಳು ಅವರ ಕಾರ್ಯಕ್ಕೆ ಮತ್ತು ತಮ್ಮ ಕವನಕ್ಕೆ , ನಮಸ್ಕಾರ.

    ReplyDelete
  2. ಕಾರ್ಯಕ್ರಮದ ಗಣಪಣ್ಣನಿಗೆ ಗೀತ ನಮನ!

    ಡಾಕ್ಟ್ರೇ, ನಿಮ್ಮೆಲ್ಲರ ಸಮಾಗಮ ಮಧುರ, ಅತಿಮಧುರ!

    ReplyDelete
  3. ಡಾಕ್ಟ್ರೇ,

    ನಿಮ್ಮ ಕವನದಲ್ಲಿರುವುದೆಲ್ಲಾ ಸತ್ಯ. ಎಲ್ಲರನ್ನು ಖುಷಿಯಾಗಿಡುವುದು ಸುಲಭವಲ್ಲ. ಆಂಥ ಒಂದು ಶಕ್ತಿ ಪ್ರಕಾಶ್ ಹೆಗಡೆಯವರಿಗೆ ಇದೆ. ಅದು ಇನ್ನಷ್ಟು ಹೆಚ್ಚಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.

    ReplyDelete
  4. The Emerging of a Blogger "Pakku mama" into the world of Kannada Bloggers. Hope he continues to cherish his passion and keeps everyone laughing as always!! Thank U Dr. Krishnamurthy for such a nice poem!!

    ReplyDelete
  5. ವಿ,ಆರ್.ಭಟ್.ಸರ್;ಪ್ರಕಾಶಣ್ಣನ ಸ್ನೇಹ ಸುಧೆ ನಮಗೆಲ್ಲಾ ಇದೇ ರೀತಿ ಸದಾ ಸಿಗುತ್ತರಲಿ.ಧನ್ಯವಾದಗಳು.

    ReplyDelete
  6. ಗುಬ್ಬಚ್ಚಿ ಸತೀಶ್;ನಮಸ್ಕಾರ.ನಿಮ್ಮೆಲ್ಲರ ಜೊತೆ ಕಳೆದ ಕ್ಷಣಗಳು ಅದ್ಭುತ,ಅವರ್ಣನೀಯ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಗುರುಮೂರ್ತಿ ಸರ್;ಪ್ರಕಾಶಣ್ಣ ಒಬ್ಬ ವ್ಯಕ್ತಿಯಲ್ಲ,ಶಕ್ತಿ!ಜೈ ಹೋ ಪ್ರಕಾಶಣ್ಣ.

    ReplyDelete
  8. ಶಿವೂ ಸರ್;ಇಷ್ಟು ಚೆಂದದ ಸಮಾರಂಭವನ್ನು ಆಯೋಜಿಸಿದ ನಿಮಗೂ ನಿಮ್ಮೆಲ್ಲ ಸ್ನೇಹಿತರಿಗೂ ಧನ್ಯವಾದಗಳು.ಬ್ಲಾಗಿಗರ ಸ್ನೇಹ ಚಿರಾಯುವಾಗಲಿ.

    ReplyDelete
  9. ಡಾಕ್ಟ್ರೆ,
    ಪ್ರಕಾಶಣ್ಣ ನವರ ಬಗ್ಗೆ ಬರೆದ ಕವನ ಸೊಗಸಾಗಿತ್ತು.

    ReplyDelete
  10. Prashant;namaste and welcome to my blog.Prakash hegde's friendly nature is exemplary!May his tribe increase!regards.

    ReplyDelete
  11. ಶಶಿ ಮೇಡಂ;ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.

    ReplyDelete
  12. Nice poem about an equally fantastic person ! Thanks a lot.

    ReplyDelete
  13. hhahahahha nam dummu prakashanna...sss.....

    ReplyDelete
  14. ಸರ್‍, ಹೌದು, ಮೊದಲಭೇಟಿಯಲ್ಲಿಯೇ ಈ ಪ್ರಕಾಶಣ್ಣನ ಆತ್ಮೀಯತೆ, ಹಾಸ್ಯಚಟಾಕಿ ಇವೆಲ್ಲ ಕಂಡು ಖುಷಿಯಾಗಿದ್ದೆ. ನಿಜಕ್ಕೂ ಇಂತಹ ಒಬ್ಬ ಗೆಳೆಯ, ಸೋದರ ಸಿಗುವುದು ಅಪರೂಪ... ಅವರ ಬಗೆಗಿನ ಕವನ ಸೂಕ್ತವಾದ ಬಹುಮಾನ ಅವರಿಗೆ...
    ಧನ್ಯವಾದಗಳು.

    ReplyDelete
  15. Nija Prakashanna snehave antahudu ...Ollya Kavan ...

    ReplyDelete
  16. ಒಳ್ಳೆಯ ವ್ಯಕ್ತಿಗೆ ಚಂದದ ಕವನ...

    ReplyDelete
  17. 'ಉತ್ತಮ ವ್ಯಕ್ತಿ' ಚಿತ್ರಣದ ಕವನ! ಅಜ್ಞಾತರಾಗಿದ್ದವರನ್ನು ನಾವೆಲ್ಲರೂ ನೊಡುವ೦ತೆ ಅವರ ಫೋಟೋ ಸಮೇತ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

    ReplyDelete
  18. ಡಾಕ್ಟ್ರೆ, ಸರಿಯಾಗಿ ಹೇಳಿದ್ದಿರಿ....

    ಪಕ್ಕು ಮಾಮ ಅಭಿಮಾನಿಗಳ ಸಂಘವನ್ನ ಕಟ್ಟುವ ಯೋಚನೆಯಲ್ಲಿ ನಾವೆಲ್ಲಾ ಅಳಿಯಂದ್ರು ನಿರತರಾಗಿದ್ದೇವೆ..

    ReplyDelete
  19. ಸರ್, ಮಾಮನ ಬಗ್ಗೆ ಸೂಕ್ತವಾದ ಸಾಲುಗಳನ್ನೇ ಬರೆದಿದ್ದಿರ.
    ನಯನ ಸಭಾಂಗಣದ ಮುಂದೆ ಮಾಮ ನಮಗೆಲ್ಲ (ಅಳಿಯಂದಿರಿಗೆ)ಹೆಣ್ಣು ಹುಡುಕುವ ಭರವಸೆಯನ್ನ ನೀಡಿದ್ದಾರೆ (ನಾವು ತೋಗೊಂಡಿದಿವಿ) ಹ್ಹ ಹ್ಹ ಹ್ಹ
    ಎಲ್ಲರೂ ಬೇಗ ಬೇಗ ಸೆಟ್ಲಾಗ್ಲಿ ಕ್ಯೂನಲ್ಲಿ ನಾನೇ ಲಾಷ್ಟು :-)
    ಚೆಂದದ ಸಾಲುಗಳಿಗೆ ಥ್ಯಾಂಕ್ಸ್ . . .

    ReplyDelete
  20. Kishan;welcome to my blog and thanks for your kind compliments.My poem says it all.keep visiting the blog.

    ReplyDelete
  21. ಜ್ಯೋತಿಶೀಗೆಪಾಲ್ ರವರಿಗೆ;ನಮಸ್ಕಾರ.ನಮ್ಮೆಲ್ಲರ ಪ್ರಕಾಶಣ್ಣನ ಬಗ್ಗೆ ಕವನ ಇಷ್ಟ ಆಯ್ತಾ?ಧನ್ಯವಾದಗಳು.

    ReplyDelete
  22. ಕ್ಷಣ ಚಿಂತನೆಚಂದ್ರು;ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ಪ್ರಕಾಶಣ್ಣನ ಬಗ್ಗೆ ಹೇಳಬೇಕಾದ್ದನ್ನ ನನ್ನ ಕವನದಲ್ಲೇ ಹೇಳಿದ್ದೇನೆ.ಪ್ರಕಾಶಣ್ಣ ವ್ಯಕ್ತಿಯಲ್ಲ ,ಶಕ್ತಿ!ಧನ್ಯವಾದಗಳು.

    ReplyDelete
  23. ಶ್ರೀಧರ್;ನಮಸ್ಕಾರ.ಪ್ರಕಾಶಣ್ಣನ ಸ್ನೇಹದ ಚುಂಬಕ ಶಕ್ತಿ ಅಂತಹುದು.ಧನ್ಯವಾದಗಳು.

    ReplyDelete
  24. ಪ್ರಗತಿ ಹೆಗಡೆ ಯವರಿಗೆ ನಮಸ್ಕಾರಗಳು.ಒಳ್ಳೆಯ ತನವನ್ನು ಒಳ್ಳೆಯತನವೆಂದು ಗುರುತಿಸದಿದ್ದರೆ ತಪ್ಪಾಗುತ್ತದೆ.ಪ್ರಕಾಶಣ್ಣನಂತಹವರು ಹೀಗೇ ಸೂರ್ಯನಂತೆ ಸದಾ ಪ್ರಕಾಶಿಸುತ್ತಿರಲಿ.ಧನ್ಯವಾದಗಳು.

    ReplyDelete
  25. ಪ್ರಭಾಮಣಿ ನಾಗರಾಜ್ ರವರಿಗೆ ;ನಮಸ್ಕಾರ ಮೇಡಂ.ನೀವೆಲ್ಲಾ ಬಂದಿದ್ದರೆ ಚೆನ್ನಾಗಿತ್ತು.ಮತ್ತೊಮ್ಮೆ ಎಲ್ಲ ಬ್ಲಾಗಿಗರೂ ಸೇರೋಣ.ಧನ್ಯವಾದಗಳು.

    ReplyDelete
  26. ನವೀನ್ ;ಪಕ್ಕು ಮಾಮನ ಅಭಿಮಾನಿ ಸಂಘಕ್ಕೆ ನಾವು ಮದುವೆ ಆದವರೂ ಸೇರಬಹುದಾ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  27. ನಾಗರಾಜ್;ನಿಮಗೆಲ್ಲಾ ಪಕ್ಕು ಮಾಮ ಬೇಗ ಹೆಣ್ಣು ಹುಡುಕಿ ಸಿಹಿ ಊಟ ಹಾಕಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.ಧನ್ಯವಾದಗಳು.

    ReplyDelete
  28. ಪ್ರಕಾಶ್..ಕೋಣನ ಕುಂಟೆಯಲ್ಲೇ ಕುಳಿತು ಮೋಡಿ ಮಾಡುತ್ತಿರುವರೆ? ಒಮ್ಮೆಯೂ ಕಣ್ಣಿಗೆ ಬಿದ್ದಿಲ್ಲವಲ್ಲ..ಹೂ೦ ನಿಮ್ಮ ಚಿತ್ರ, ಚಿತ್ರಣ ನನಗೆ ಸಹಾಯ ಮಾಡೀತು! ಥ್ಯಾ೦ಕ್ಸ್ ಡಾ.ಸರ್.. ಉತ್ತಮವಾಗಿ ಚಿತ್ರಿಸಿದ್ದೀರಿ.. ಪ್ರಕಾಶ್ ಸರ್ ಅವರ ವೈವಿಧ್ಯತೆಯ ವ್ಯಕ್ತಿತ್ವವನ್ನು..

    ಶುಭಾಶಯಗಳು
    ಅನ೦ತ್

    ReplyDelete
  29. ಮೊದಲ ಭೇಟಿಗೇ ಮೋಡಿ ಮಾಡುವ ಈ ಕಿಂದರ ಜೋಗಿಯ ಜೋಳಿಗೆಗೆ ಜಾರಿ ಬೀಳದವರುಂಟೆ?, ಹಾಗೇ ಮೈಮರೆಸುವ ನಿಮ್ಮ ಕೆಳೆಯ ಕೊಳಲ ಗಾನಕ್ಕೆ ಮನಸೋಲದವರುಂಟೆ ಗೆಳೆಯ?

    ReplyDelete
  30. ಅನಂತ್ ಸರ್;ಪ್ರಕಾಶ್ ಅವರ ವ್ಯಕ್ತಿತ್ವ ಅರಿಯಬೇಕೆಂದರೆ ನೀವೇ ಅವರನ್ನು ಖುದ್ದು ಭೇಟಿ ಮಾಡಬೇಕು.ಬೆಳದಿಂಗಳ ಸೊಬಗನ್ನು ಎಷ್ಟು ಬಣ್ಣಿಸಿದರೂ,ಬೆಳದಿಂಗಳ ಅನುಭವವೇ ಬೇರೆ ಅಲ್ಲವೇ?ಬೆಂಗಳೂರಿಗೆ ಈ ಸಲ ಹೋದಾಗ ತಪ್ಪದೆ ಭೇಟಿಯಾಗಿ.ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  31. ನಾರಾಯಣ್ ಭಟ್ ಸರ್;ಸ್ನೇಹವನ್ನು ಗಳಿಸಿಕೊಳ್ಳುವುದಕ್ಕಿಂತಾ ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ.ನಮ್ಮೆಲ್ಲರ ಸ್ನೇಹ ಚಿರಾಯುವಾಗಲಿ.ಜೈ ಹೋ !

    ReplyDelete
  32. ಮೂರ್ತಿ ಸರ್,
    ಪ್ರಕಾಶಣ್ಣ ನದ್ದು ಸುಜಿಗಲ್ಲಿನಂತ ವ್ಯಕ್ತಿತ್ವ..... ಅದರ ಸೆಳೆತಕ್ಕೆ ಸಿಲುಕದೆ ಇರುವವರು ವಿರಳ..... ಮೊದಲು ಅವರು ತಮ್ಮ ಬರೆಯುವ ಮೋಡಿಗೆ ಒಳಗಾಗಿಸಿ, ನಂತರ ತಮ್ಮ ಮಾತಿನ ಮೋಡಿಗೆ ಒಳಗೀಡು ಮಾಡುತ್ತಾರೆ... ಅವರ ಮಾತಿಗೆ ನಾವು ತಲೆ ತೂಗಲೆ ಬೇಕಾಗುತ್ತದೆ.... ಎಲ್ಲರನ್ನು ಸಮಾಧಾನಿಸಿ, ಎಲ್ಲರನ್ನು ಸಮನಾಗಿ ಕಂಡು , ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಲೆ ಎಲ್ಲರಿಗು ಬರಲ್ಲ... ಅವರ ಬಳಗದಲ್ಲಿ ನಾನು ಇದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ....ಧನ್ಯವಾದ ಸರ್... ಒಳ್ಳೆಯ ಕವನಕ್ಕೆ....

    ReplyDelete
  33. ದಿನಕರ್ ಮೊಗೇರ;ಪ್ರಕಾಶ್ ಅವರ ಸ್ನೇಹಪೂರ್ಣ ವ್ಯಕ್ತಿತ್ವವೇ ಅಂತಹುದು.ಅಪರೂಪದ್ದು.ಅವರ ಸ್ನೇಹ ಸುಧೆಯನ್ನು ಮತ್ತಷ್ಟು
    ಜನ ಸವಿಯಲಿ.ನಾವೂ ಅವರಂತೆ ಸ್ನೇಹಮಯಿಗಳಾಗೋಣ.
    ಧನ್ಯವಾದಗಳು.

    ReplyDelete
  34. ಸರ್ಜನ ಬ೦ಧು,
    ಕುಮಾರಸ್ವಾಮಿಯವರ ಬಳ್ಳಾರಿ ಪಾದಯಾತ್ರೆ idea ವನ್ನು ಕಾ೦ಗ್ರೆಸ್ ನವರು ಹೈಜಾಕ್ ಮಾಡಿದ್ರ೦ತೆ. ಹಾಗೇನೆ ಪ್ರಕಾಶರ ಬಗ್ಗೆ ನಾನು ಬರೆಯಬೇಕೆ೦ದಿದ್ದ ಕವನದ concept ನೀವು ಹೈಜಾಕ್ ಮಾಡಿ ಬರೆದರಲ್ಲ ಗುರುವೇ?
    (ತಮಾಷೆಗೆ ಅ೦ದೆ) ತು೦ಬಾ ಚೆನ್ನಾಗಿದೆ. ಸಹೃದಯ ವ್ಯಕ್ತಿಯಾದ ಪ್ರಕಾಶಣ್ಣ ನಮಗೆಲ್ಲ ಈ ಬ್ಲಾಗೆ೦ಬ ಮಾಧ್ಯಮದಿ೦ದ ದೊರೆತಿದ್ದು ಸುದೈವ. ನಾನು ಬರೆಯುವೆ ಅವರ ಬಗ್ಗೆ ಒ೦ದು ಕವನ ಮುಂದಿನದಿನಗಳಲ್ಲಿ.

    ReplyDelete
  35. dr. sir,
    idenidu..... paranjape sir matte nivu paipoTige biddavara haage prakashanna na mele kavana bareyuttaa hodare avarige drashTiyaagabahudu.....

    ReplyDelete
  36. Dr ...ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ...ಫಸ್ಟ್ ಒನ್ ಮಸ್ತ್ ಮಸ್ತ್..
    ಪಕಾಶಣ್ಣ ಪ್ರೀತಿಗೆ ಹೃದಯವಂತ..!!..ಸ್ನೇಹಕ್ಕೆ ಸಿರಿವಂತ..!! ಅವರು ಕೋಟಿಗೊಬ್ಬ..!!
    ಜೈಹೂ ಪಕಾಶಣ್ಣ..
    ನಿಮ್ಮವ,
    ರಾಘು.

    ReplyDelete
  37. ನಿಮ್ಮ ಕೊಳಲಿನ ನಾದದಲ್ಲಿ ಪ್ರಕಾಶಣ್ಣ ಅವರ ಆತ್ಮೀಯತೆಯ.. ಸಹೃದಯ ವ್ಯಕ್ತಿತ್ವದ ರಾಗ...ತು೦ಬಾ ಚೆನ್ನಾಗಿದೆ.

    ReplyDelete
  38. ಪರಾಂಜಪೆ ಸರ್;ನಿಮ್ಮ ಐಡಿಯಾ ಹೈಜಾಕ್ ಮಾಡಿದ್ದಕ್ಕೆ ಕ್ಷಮೆ ಇರಲಿ.ನೀವೂ ಪ್ರಕಾ ಶಣ್ಣನವರ ಬಗ್ಗೆ ಬರೆದ ಕವನ ಹಾಕಿದ್ದರೆ ಡಬಲ್ ಧಮಾಕ ಆಗುತ್ತಿತ್ತು.ಬ್ಲಾಗ್ ಸ್ನೇಹವನ್ನು ಇನ್ನಷ್ಟು ಬೆಳೆಸೋಣ.ಧನ್ಯವಾದಗಳು.

    ReplyDelete
  39. ದಿನಕರ್;ತಕ್ಷಣವೇ ನೀವೊಂದು ಹಾಸ್ಯ ಲೇಖನ ಬರೆದು ಹಾಕಿ.ಎಲ್ಲಾ ಸರಿಹೋಗುತ್ತೆ.

    ReplyDelete
  40. ರಾಘು;ನಿಮ್ಮೆಲ್ಲರ ಜೊತೆ ಆತ್ಮೀಯತೆಯಿಂದ ಕಳೆದ ಕ್ಷಣಗಳು ಅವಿಸ್ಮರಣೀಯ.ಧನ್ಯವಾದಗಳು.

    ReplyDelete
  41. ಮನಮುಕ್ತಾ ಮೇಡಂ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನಮಸ್ಕಾರ.

    ReplyDelete
  42. ಶಿವಪ್ರಕಾಶ್;ನಿಮ್ಮದರ ಜೊತೆ ಪ್ರಕಾಶಣ್ಣನಿಗೆ ನನ್ನದೊಂದು ಜೈ ಹೋ .

    ReplyDelete
  43. ಪ್ರಕಾಶಣ್ಣನ ಬಗ್ಗೆ ತುಂಬಾ ಸುಂದರವಾಗಿ ಬರೆದಿದ್ದಿರಾ.... ರಾಸಾಯನಿಕವಾಗಿ ಹೇಳಬೇಕೆಂದರೆ ಪಕ್ಕಣ್ಣ ಮೆರ್ಕುರಿ-ನೈಥ್ರೌಸ್ ಆಕ್ಷಿಡ (ಪದರ ಮತ್ತು ನಗೆಸುವ ಅನಿಲ). ಸದಾ ಹಸಂಮುಕಿ ಎಲ್ಲರಲ್ಲೂ ಒಂದಾಗುವ ಮಂಕುತಿಮ್ಮ!
    ಪ್ರಕಾಶಣ್ಣನ ಪ್ರೀತಿಯ ಹೃದಯಕ್ಕೆ ನಮೋನ್ನಮಃ!ಹಾಗೂ ತಮ್ಮ ಕವನಕ್ಕೂ ಜೈ.
    ಜೈ ಹೊ ಬ್ಲಾಗಿಗರ ಸ್ನೇಹ!

    ReplyDelete
  44. Murthy Sir,

    Prakashannana bagge tumbaa chennagi barediddira..Nijavaagiyu avra vyaktitva tumbaa ne ista aitu..Vyaktitvakke takkanta avra persnolity...avrannu bheti maadi tumbaane kushi aitu....haage ella blog sneitarannu nodi tumbaaane santhosha aitu...

    ReplyDelete
  45. ವ್ಹಾ! ಎಷ್ಟೊಂದು ಆಪ್ತವಾಗಿ ಪ್ರಕಾಶ್ ಹೆಗಡೆಯವರ ಬಗ್ಗೆ ಬರೆದಿದ್ದೀರಿ. ಅಲ್ಲಿ ಕೋಣನಕುಂಟೆಯಲ್ಲಿ ಅವರು ನಾಚಿ ನೀರಾಗಿದ್ದಿರಬೇಕು!

    ReplyDelete
  46. ಸೀತಾರಾಮ್ ಸರ್;ಪ್ರಕಾಶಣ್ಣನ ವ್ಯಕ್ತಿತ್ವವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ.ನನ್ನದು ಸಣ್ಣದೊಂದು ಪ್ರಯತ್ನ.ಸ್ನೇಹ,ಪ್ರೀತಿ,ವಿಶ್ವಾಸಕ್ಕೆ ಅವರುನಮಗೆಲ್ಲಾಮಾದರಿಯಾಗಿದ್ದಾರೆ.ಅವರ ಮಾರ್ಗ ದರ್ಶನದಲ್ಲಿ ಮುಂದುವರೆದು ಬ್ಲಾಗಿಗರ ಸ್ನೇಹವನ್ನು ಬಲಪಡಿಸೋಣ.ಧನ್ಯವಾದಗಳು ಸರ್.

    ReplyDelete
  47. ಅಶೋಕ್ ಕೊಡ್ಲಾಡಿ ಯವರೇ;ದೂರದ ಮುಂಬೈನಿಂದ ಬಂದು ಎಲ್ಲರ ಜೊತೆ ಸೇರಿ ಸಂತೋಷ ಪಟ್ಟಿದ್ದಕ್ಕೆ ಬ್ಲಾಗಿಗರ ಸ್ನೇಹ ಬಲ ಪಡಿಸುವಲ್ಲಿ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು.

    ReplyDelete
  48. ರಾಜೇಶ್ ನಾಯ್ಕರೇ;ನಿಮ್ಮ ಬ್ಲಾಗಿನಲ್ಲಿ ಫಾಲೋಯರ್ಸ್ ಲಿಸ್ಟ್ ಇಲ್ಲ.ಫಾಲೋಯರ್ ಆಗುವುದು ಹೇಗೆ?ಪ್ರಕಾಶಣ್ಣನಿಗೆ ಸ್ವಲ್ಪಮುಜುಗರವಾಗಿರಲಿಕ್ಕೆಸಾಕು.ಆಡಲಿಕ್ಕಿಲ್ಲ,ಅನುಭವಿಸಲಿಕ್ಕಿಲ್ಲ!ಅವರಿಗೆ ಇರಿಸು ಮುರುಸಾಗಿದ್ದರೆ ಕ್ಷಮೆ ಕೋರುತ್ತೇನೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  49. yes pakku anna deserves this poem :)

    ReplyDelete
  50. Thanks Shree.He really deserves all accolades.

    ReplyDelete

Note: Only a member of this blog may post a comment.