ಬಾಳು ಬೀಳಾಗುವುದು ಬೇಡ !
ಪಾಳು ಗುಡಿಯಾಗಿ ,
ಬಾವಲಿಗಳು ತೂರಾಡಿ ,
ಕಸ ಕಡ್ಡಿ ,ಜೊಂಡು ಬೆಳೆದು,
ತೊಂಡು ಮೇಯುವ ,
ಪುಂಡು ದನಗಳ ,
ಬೀಡಾಗುವುದೂ ಬೇಡ!
ಜ್ಞಾನವೆಂಬ ಪೊರಕೆಯಲ್ಲಿ
ಅಜ್ಞಾನದ ಕಸ ಗುಡಿಸಿ ,
ದ್ವೇಷ ರೋಷಗಳ ಕಳೆ ಕಿತ್ತು
ಪ್ರೀತಿ ಜ್ಯೋತಿಯ ಬೆಳಗಿಸಿ ,
ಸ್ನೇಹವೆಂಬ ಕಂಬಗಳ ನೆಟ್ಟು ,
ಸಚ್ಚಾರಿತ್ರದ ಸುಣ್ಣ ಬಳಿದು ,
ನಲ್ ನುಡಿಗಳ ಮಂತ್ರಘೋಶ
ಕೇಳಿ ಬರುತಿರಲಿ ಎಂದೂ !
ಕರುಣಾಮೃತದ ತೀರ್ಥವದು
ದೊರಕುತಿರಲಿ ಎಂದೆಂದೂ!
nimma haaraike chennaagide sir.....
ReplyDeleteguDigaLu endigoo mantra ghoshisuva taaNAvaagade, badukannu kalisuva daarideepavaagali...
tumbaa sundara kavana... dhanyavaada...
ದಿನಕರ್ ಮೊಗೇರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮೆಲ್ಲರ ಬಾಳು ಎಲ್ಲರಿಗೂ ದಾರಿದೀಪವಾಗುವಂತೆ ಆ ಭಗವಂತನ ಅನುಗ್ರಹವಿರಲಿ ಎಂಬ ಹಾರೈಕೆ.ನಮಸ್ಕಾರಗಳು.
ReplyDeleteಮೂರ್ತಿಯವರೆ,
ReplyDeleteಬಾಳಿನಲ್ಲಿರಬೇಕಾದ ಸರಿಯಾದ sentimentಉಗಳನ್ನು ಹೇಳಿದ್ದೀರಿ. ಇವನ್ನು ನಾವೆಲ್ಲ ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುವದರಲ್ಲಿ ಸಂಶಯವಿಲ್ಲ.
ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಸದಾಶಯದ ಕವನ, ನಮ್ಮೆಲ್ಲರ ಜೀವನದ ದಾರಿದೀಪವಾಗಲಿ.
ReplyDeleteit has come out very well
ReplyDeleteಸುಬ್ರಮಣ್ಯ ಸರ್;ಕೆಲವರು ಸಣ್ಣ ವಯಸ್ಸಿನಲ್ಲೇ ದುರಭ್ಯಾಸಗಳಿಗೆ ದಾಸರಾಗಿ ತಮ್ಮ ಬಾಳನ್ನು ಹಾಳು ಮಾಡಿಕೂಳುವುದನ್ನು ನೋಡಿ ಬಹಳ ಹಿಂದೆಯೇ ಬರೆದ ಕವನವಿದು.ಬಾಳ ಗುಡಿ ಬೀಳಾಗದಂತೆ,ಹಾಳಾಗದಂತೆ,ಜೋಪಾನ ಮಾಡುವುದು ನಮ್ಮ ಕೈಯಲ್ಲೇ ಇದೆಎಂಬುದು ಕವನದ ಆಶಯ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeletekrihnamurur;thank you for your kind comments.
ReplyDeletebaalu hegiegirabeku ennuvadakkinta, baalu hegirabaaradu embudannu hechhu prabhavakariyagi moodibandide.ellara baalu hasanagirali.nimma kavanada aashaya chennagide.vandanegalu.
ReplyDeleteಹೇಮಚಂದ್ರ;ಬಾಳು ಹೇಗಿರಬಾರದು ಎಂಬುದು ಕವನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದಿದ್ದೀರಿ.ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಉತ್ತಮ ಮಾರ್ಗದರ್ಶಕ ಕವನ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.
ReplyDeleteಪ್ರಭಾಮಣಿ ನಾಗರಾಜ್ ಅವರಿಗೆ ನಮನಗಳು.ನಿಮ್ಮ ಬ್ಲಾಗಿಗೆ ಇದೆ ಈಗ ಭೇಟಿ ನೀಡಿ ಬಂದೆ.ತುಂಬಾ ಒಳ್ಳೆಯ ಬರಹಗಳು.'ಮಕ್ಕಳು'ಕವನದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.ಧನ್ಯವಾದಗಳು.
ReplyDeletetumba chennagide kavana
ReplyDeleteತುಂಬಾ ಚನ್ನಾಗಿದೆ ಸರ್, ಬಾಳು ಸುಂದರ ಗುಡಿಯಾಗೆ ಇರಲಿ, ಘಂಟೆಯ ಸದ್ಧು ಸದಾ ಮೊಳಗಲಿ........
ReplyDeleteNice One
ಜ್ಯೋತಿ ಶೀಗೆಪಾಲ್ ಅವರಿಗೆ ; ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಪ್ರವೀಣ್;ನಮಸ್ಕಾರ.ತಮ್ಮ ಬಾಳನ್ನು ಗುಡಿಯಾಗಿಸಿಕೊಂಡು ಬದುಕನ್ನು ಪ್ರೀತಿಯಿಂದ
ReplyDeleteಸುಂದರವಾಗಿರಿಸಿಕೊಂಡವರು ಯಾವ ಗುಡಿಗೂ ಹೋಗಬೇಕಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ......ಶರೀಫರ ಗೀತೆ ನೆನೆಪಾಯ್ತು, ಚೆನ್ನಾಗಿದೆ,ಧನ್ಯವಾದಗಳು
ReplyDeleteಸು೦ದರ ,ಆಶಯಪೂರ್ಣ ಕವನಕ್ಕೆ ಅಭಿನ೦ದನೆ.
ReplyDeleteವಿ.ಆರ್.ಭಟ್ ಸರ್;ನಮಸ್ಕಾರ.ಶರೀಫರ ಒಳ್ಳೆಯ ಗೀತೆಯೊಂದನ್ನು ನೆನಪು
ReplyDeleteಮಾಡಿದಿರಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕೂಸು ಮುಲಿಯಳ ಸರ್;ಬ್ಲಾಗಿಗೆ ಸ್ವಾಗತ.ಒಳ್ಳೆಯ ಆಶಯದ ಕವನ ಎಂದಿದ್ದೀರಿ.ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಬಾಳ - ಗುಡಿ ತುಂಬ ಚೆನ್ನಾಗಿದೆ....
ReplyDeleteಸರ್, ಈ ಕವನಗಳ ನಡುವೆ ನಿಮ್ಮ ಹಾಸ್ಯ ಮಿಶ್ರಿತ ಲೇಖನಗಳು ಮೂಡಿಬಂದರೆ ಇನ್ನು ಅದ್ಬುತವಾಗಿರುತ್ತೆ.
ಉದಯ್ ಹೆಗ್ಡೆಯವರಿಗೆ;ನಮಸ್ಕಾರ.ನಿಮ್ಮ ಸಲಹೆ ಸೂಕ್ತವಾಗಿದೆ.ಬ್ಲಾಗ್ ಸ್ವಲ್ಪ ಸೀರಿಯಸ್ ಆಯಿತೇನೋ ಅಂತ ನನಗೂ ಅನಿಸಿದೆ.ನಿಮ್ಮ ಬ್ಲಾಗಿನ ಹೊಸ ಚಿತ್ರಕ್ಕೆ ಕಾಯುತ್ತಿದ್ದೇನೆ.ಬೇಗ ಹೊಸ ಚಿತ್ರ ಹಾಕಿ ಸರ್.ಧನ್ಯವಾದಗಳು.
ReplyDeleteಬದುಕಿನಲ್ಲಿ ತುಂಬು ಸ್ಫೂರ್ತಿ ನೀಡುವ ಕವನ. ಧನ್ಯವಾದಗಳು.
ReplyDeleteಬಾಳ ಗುಡಿಯ ಕುರಿತು ನಿಮ್ಮ ಕವನ ಜೀವನಾದರ್ಶ ಸೂಚಕ,
ReplyDeleteನಲ್-ನುಡಿಗಳ ಮಂತ್ರಘೋಷ ಕೇಳಿ ಬರುತಿದೆ ನಿಮ್ಮ ಬ್ಲಾಗಲ್ಲಿ ಅನವರತ.
ಕೆ.ಸೀತಾರಾಂ ಸರ್;'ಬದುಕಿನಲ್ಲಿ ತುಂಬು ಸ್ಫೂರ್ತಿ ನೀಡುವ ಕವನ'ಎಂದಿದ್ದೀರಿ.ನಿಮ್ಮೆಲ್ಲರ ದನಿ 'ಕೊಳಲಿನಲ್ಲಿ'ಸದಾ ಕೇಳಿ ಬರುತಿರಲಿ.ಧನ್ಯವಾದಗಳು.ನಮಸ್ಕಾರ.
ReplyDeleteನಾರಾಯಣ್ ಭಟ್;ನಮಸ್ಕಾರ ಸರ್.ನಿಮ್ಮ ಹಿತನುಡಿಗಳು ಉಳ್ಳ ಮಂತ್ರ ಘೋಷದ ಮೊರೆತ ನನ್ನ ಬ್ಲಾಗಿನಲ್ಲಿ ಕೇಳಿ ಬರುತಿರಲಿ ಅನವರತ.ಈ ಶನಿವಾರ ತಮಗೆ ಬಿಡುವಿದ್ದರೆ ಭೇಟಿಯಾಗೋಣ.ಧನ್ಯವಾದಗಳು.
ReplyDeletekavanada aashaya tumbaa chennagide..maargadarshaka kavan...tumbaa chennagide sir...Dhanyavaadagalu...
ReplyDelete