ರಾತ್ರಿಯೆಲ್ಲಾ -----------,
ನಿದ್ದೆಯ ಹಾಸಿಗೆಯಲ್ಲಿ
ಕನಸಿನ ಛಾದರ
ಹೊದ್ದು ಮಲಗಿ ---,
ಬೆಳಗಾಗೆದ್ದು ------,
ಛಾದರ ಒದ್ದು ,
ಕಣ್ಣು ಬಿಟ್ಟಾಗ,
ಕಿಟಕಿಯ ಸಂದಿಯಿಂದ
ಸೂರ್ಯ -------,
ಕಣ್ಣು ಮಿಟುಕಿಸಿ ,
ರಾತ್ರಿಯೆಲ್ಲಾ ----,
ನೀನೀಕಡೆ ನಿದ್ದೆ !
ಆಕಡೆ ನಾನಿದ್ದೆ !
ಎಂದು ನಕ್ಕು ,
ಹೊಳೆವ ಕಿರಣಗಳ ,
ಹಲ್ಲು ಬಿಟ್ಟ !
Superb Sir,
ReplyDeleteNice.... chennagide Sir :)
ReplyDeleteವ್ಹಾ.......ವ್ಹಾ........
ReplyDeleteಕ್ಯಾ ಬಾತ್ ಹೈ........
ಸುಪರ್..........
ಸರಳವಾಗಿ ಸುಂದರವಾಗಿದೆ.
ReplyDeleteva vaa vaa
ReplyDeletenija, sundaravaagide
"ನೀನೀಕಡೆ ನಿದ್ದೆ !
ReplyDeleteಆಕಡೆ ನಾನಿದ್ದೆ !
ಎಂದು ನಕ್ಕು ,
ಹೊಳೆವ ಕಿರಣಗಳ ,
ಹಲ್ಲು ಬಿಟ್ಟ !"
ಇಷ್ಟ ಆದ ಸಾಲುಗಳು :-)
ನೀನೀಕಡೆ ನಿದ್ದೆ !
ReplyDeleteಆಕಡೆ ನಾನಿದ್ದೆ !
amazing lines
nice poem....!
ಹೊಳೆವ ಕಿರಣಗಳ ಹಲ್ಲು ಬಿಟ್ಟ..! ಒಳ್ಲೆಯ ಉಪಮೆ..ಸರ್
ReplyDeleteಅನ೦ತ್
ಪ್ರತಿಕ್ರಿಯೆನೀಡಿದಮಾನಸ,ತೇಜಸ್ವಿನಿಹೆಗ್ಡೆ,ಬಾಶೆ,ಪ್ರವೀಣ್,ಸೀತಾರಾಂ,ಗುರುಮೂರ್ತಿಹೆಗ್ಡೆ,
ReplyDeleteನಾಗರಾಜ್,ಸೌಮ್ಯ,ಅನಂತರಾಜ್ ,ಇವರಿಗೆ ನನ್ನ ಅನಂತ ಧನ್ಯವಾದಗಳು.ನಮಸ್ಕಾರ.
ಪ್ರತಿಕ್ರಿಯೆ ನೀಡಿದ್ದಕ್ಕೆ ಸೀತಾರಾಮ್ ಅವರಿಗೂ ಗುರುಮೂರ್ತಿ ಹೆಗಡೆಯವರಿಗೂ ನನ್ನ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಡಾ ಸರ್,
ReplyDeleteಸುಂದರ ಕಲ್ಪನೆ..... ಆದ್ರೆ ......' ಸೂರ್ಯ' ಎಂದು ಬರೆದ ಜಾಗದಲ್ಲಿ ' ದಿನಕರ' ಎಂದು ಬರೆದಿದ್ದರೆ ನನಗೆ ಖುಷಿಯಾಗುತ್ತಿತ್ತು...... ಹ್ಹ ಹ್ಹ ಹ್ಹಾ....
ನೀನೀಕಡೆ ನಿದ್ದೆ !
ReplyDeleteಆಕಡೆ ನಾನಿದ್ದೆ !
-------------
ಹೊಳೆವ ಕಿರಣಗಳ ಹಲ್ಲು ಬಿಟ್ಟ..!
----------
ಈ ಎಲ್ಲ ಸಾಲುಗಳು ಇಷ್ಟವಾದವು ಸಾರ್.
ಸುಂದರವಾಗಿದೆ ಕವನ.
ದಿನಕರ್ ಮೊಗೇರ;ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು.ನನಗೆ ಮೊದಲೇ ತೋಚಿದ್ದರೆ ಖಂಡಿತಾ ದಿನಕರ ಎಂದು ಬದಲಿಸುತ್ತಿದ್ದೆ.ಈಗಲೂ ನಿಮ್ಮ ಅನುಮತಿ ಇದ್ದರೆ ಸೂರ್ಯ ಎನ್ನುವ ಜಾಗದಲ್ಲಿ ನಿಮ್ಮ ಹೆಸರು ಹಾಕುತ್ತೇನೆ.ನಿಮ್ಮ ಪ್ರೀತಿ,ವಿಶ್ವಾಸ ಹೀಗೇ ಇರಲಿ.ನಮಸ್ಕಾರ.
ReplyDeleteವೆಂಕಟಕೃಷ್ಣ ಅವರಿಗೆ ನಮಸ್ಕಾರಗಳು;ಕವನದಲ್ಲಿ ಪದಗಳ ಬಳಕೆ ಇಷ್ಟವಾಯಿತು ಎಂದಿದ್ದೀರಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಅದ್ಭುತ ಕಲ್ಪನೆ !!!
ReplyDeleteಚಂದದ ಸಾಲುಗಳು ಸುಂದರ ಕವನ ! ತುಂಬಾ ಇಷ್ಟವಾಯ್ತು ಸರ್ :)
ರಂಜಿತಾ ಮೇಡಂ;ನಮಸ್ಕಾರ.ಕವನ ನಿಮಗೆ ಇಷ್ಟವಾಯಿತೆಂದಿದ್ದೀರಿ.ನಿಮ್ಮ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸುಂದರ ಸಾಲುಗಳು,ಚುರುಕಾದ ಕವನ!
ReplyDeleteಈ ಸೂರ್ಯನಿಗೆ ನನ್ನ ಬೆಳಗಿನ ಜಾವದ ಸಕ್ಕರೆ ನಿದ್ದೆ ಕಂಡರೆ ಕಣ್ಣುರಿ..ಅದನ್ನ ಕೆಡಿಸೋತನಕ ಅವನಿಗೆ ಸಮಾಧಾನವಿಲ್ಲ, ಅಂತ ನನಗೆ ಸಾಕಷ್ಟು ಸಲ ಅನ್ನಿಸಿದ್ದಿದೆ...ನಿಮ್ಮನ್ನು ಕಂಡಾಗಲಾದರೂ ತನ್ನ ಉರಿಮೊಗದಲ್ಲಿ ನಗು ತೋರುತ್ತಾನಲ್ಲ.. ಅಷ್ಟು ಸಾಕು!
ReplyDeleteಸುನಾತ್ ಸರ್;ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ReplyDeleteನಾರಾಯಣ್ ಭಟ್ ಸರ್;ಎಲ್ಲಾ ಮಕ್ಕಳ ಹಾಗೇ ಬಾಲ ಸೂರ್ಯನದೂ ನಗು ಮುಖ!ಮಧ್ಯಾಹ್ನ್ನ ನಡುವಯಸ್ಸಿನಲ್ಲಿ ನಮ್ಮೆಲ್ಲರ ಹಾಗೆ ಉರಿಗುಟ್ಟುತ್ತಾನೆ!ಸಂಜೆ ವಯಸ್ಸಾದ ಹಾಗೆ,ನಮ್ಮೆಲ್ಲರಂತೆ ಕೈಯಲ್ಲಾಗದೆ ಅವನೂ ತಣ್ಣಗಾಗುತ್ತಾನೆ!Truth is universal!ಅಲ್ಲವೇ ಸಾರ್ !?ಉತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಸರಳವಾಗಿ ಸು೦ದರವಾಗಿದೆ ಸಾರ್
ReplyDeleteಕೂಸು ಮುಲಿಯಳಅವರೆ;ಕವನವನ್ನು ಓದಿ ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteholeva kiranagla hallu-superb,nimma kavithvakke hats-off
ReplyDeleteNice .... ಚೆನ್ನಾಗಿದೆ ಸರ್ :)
ReplyDeleteಸ್ವಾಮೀ, ಸೂರ್ಯನಿಗೇ ರಜವೂ ಇಲ್ಲ, ನಿದ್ದೆಯೂ ಇಲ್ಲ, ಸೂರ್ಯ ಕಣ್ಣಿಗೆ ಕಾಣುವ ಪಂಚಮಹಾಭೂತಗಳಲ್ಲಿ ಒಬ್ಬನಲ್ಲವೇ ? ನಮ್ಮ ಕಲ್ಪನೆಯಲ್ಲಿ ಏನೇ ಇದ್ದರೂ ನೀವು ಹೇಳಿದಂತೆ ನಾನಾ ಕಡೆಗಿದ್ದೆ, ನೀನೆಕಡೆ ನಿದ್ದೆ, ಬೆಳಗಿನ ನಿದ್ರೆಗೆ ಬಹುತೇಕರು ಸಕ್ಕರೆ ನಿದ್ರೆ ಎಂದರೆ ನನ್ನ ವಿಷಯದಲ್ಲಿ-- ನನಗೆ ಒಂದು ದಿನ ಅಪ್ಪಿ ತಪ್ಪಿ ಬೆಳಿಗ್ಗೆ ತಡವಾಗಿ ಎದ್ದರೆ ಆ ದಿನವೆಲ್ಲಾ ಅಪ್ಸೆಟ್! ಹೀಗಾಗಿ ಬೆಳಗಿನ ನಿದ್ದೆ ಸಕ್ಕರೆಯೋ ಬೆಲ್ಲವೋ ಅದನ್ನು ಬಿಟ್ಟು ವರ್ಷಗಳೇ ಆದವು, ವೈದ್ಯ ಮಿತ್ರರೇ ಬೆಳಿಗ್ಗೆ ನಿದ್ರೆ ಬಿಟ್ಟು, ಬೆಳಗಿನ ಜಾವದ ಚಳಿಯಲ್ಲೇ ಉಗುರು ಬೆಚ್ಚಗಿನ [ನನ್ನದು ತಣ್ಣೀರ ಸ್ನಾನ] ಸ್ನಾನ ಮಾಡಿನೋಡಿ, ಮತ್ತೆ ತಮಗೆ ಮೂರನೇ ದಿನ ಅದೇ ಬೇಕಾಗುತ್ತದೆ! ಕವನ ಸರಳವಾಗಿ ರಸವತ್ತಾಗಿದೆ, ನಮಸ್ಕಾರ
ReplyDeleteತುಂಬಾ ಚೆನ್ನಾಗಿದೆ ಸರ್
ReplyDeleteಹೇಮಚಂದ್ರ;ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು.
ReplyDeleteಪ್ರಗತಿ ಹೆಗ್ಡೆ ಯವರಿಗೆ;ಕವನವನ್ನು ಓದಿ,ಮೆಚ್ಚಿ,ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteವಿ.ಆರ್.ಭಟ್ಟರೆ;ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಮ್ಮ ಪ್ರತಿಕ್ರಿಯೆಳಲ್ಲೂ ನಮಗೆ ಅನೇಕ ವಿಷಯ ತಿಳಿಸಿ ಕೊಡುತ್ತೀರಿ.ಸಂತೋಷವಾಗುತ್ತದೆ.ನಮಸ್ಕಾರ.
ReplyDeleteದೀಪಸ್ಮಿತ ಅವರೆ;ಕವಿತೆ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಕೃಷ್ಣಮೂರ್ತಿಯವರೆ..
ReplyDeleteಸೂರ್ಯವಂಶಸ್ಥರಾದ ನಮ್ಮಂಥವರಿಗೆ ನಿಮ್ಮ ಕವನ ಬಲುಬೇಗ ಅರ್ಥವಾಯಿತು...
ಹೊದ್ದು
ಮಲಗಿದ
ಛಾದರದೊಳಗೆ..
ಕದ್ದು.. ಕದ್ದು..
ಬರುವ
ಛಂದದ ಕನಸುಗಳಲಿ..
ನಿನ್ನದೇ
ಮುದ್ದು ಮುಖ....
ನಲ್ಲೆ..
ನೋಡಲಾಗದ
ಸೂರ್ಯ..
ಒದ್ದು
ಎಬ್ಬಿಸಿದ..
ಸುಂದರ ಕವನಕ್ಕೆ ಅಭಿನಂದನೆಗಳು...
ಬೆಂಗಳೂರಿಗೆ ಸ್ವಾಗತ ಕೋರುತ್ತಿರುವೆ...
ಪ್ರಕಾಶಣ್ಣ;ಸೂಪರ್ ಪ್ರತಿಕ್ರಿಯೆ.ನನ್ನ ಕವನಕ್ಕಿಂತ ನಿಮ್ಮ ಪ್ರತಿಕ್ರಿಯೆಯ ಕವನವೇ ಸೊಗಸಾಗಿದೆ.ತುಂಬಾ ತುಂಬಾ ಖುಷಿಯಾಯಿತು.Hats off to your talent.
ReplyDeletesarala sundara kavana sir....
ReplyDeleteಕವನದಲ್ಲಿ ಒಳ್ಳೆಯ pun ಇದ್ದು ಚೆನ್ನಾಗಿದೆ.
ReplyDelete