Monday, August 30, 2010

"ನೂರು ಗ್ರಾಂ -ಗೋಡಂಬಿ !"

ನ್ನ ಮಗರಾಯ ಆಗಿನ್ನೂ ಒಂದನೇ ತರಗತಿಯಲ್ಲಿದ್ದ.ಅವನ ಅಮ್ಮ ಅವನ ಕೈಯಲ್ಲಿ ಹತ್ತಿರದಲ್ಲಿದ್ದ ಅಂಗಡಿಯಿಂದ ಸಣ್ಣ ಪುಟ್ಟ ಸಾಮಾನುಗಳನ್ನುತರಿಸುತ್ತಿದ್ದಳು.ಚಿಲ್ಲರೆಯನ್ನೂ,ಸಾಮಾನುಗಳನ್ನೂ ಜೋಪಾನವಾಗಿ ತರುತ್ತಿದ್ದ.ಅವರಮ್ಮನಿಗೆ ಅವನ ಜಾಣತನದ ಮೇಲೆ ಸಾಕಷ್ಟು  ನಂಬಿಕೆ ಇತ್ತು.ಯಾವುದೋ ಹಬ್ಬಕ್ಕೆ ಬೇಕೆಂದು ಅವನ ಕೈಯಲ್ಲಿ ದುಡ್ಡು ಕೊಟ್ಟು ನೂರು ಗ್ರಾಂ ಗೋಡಂಬಿ ತರಲು ಅಂಗಡಿಗೆ ಕಳಿಸಿದಳು.ಮಗರಾಯ ವಾಪಸ್ ಬಂದಾಗ ಕೋನ್ ಆಕಾರದಲ್ಲಿ ದಾರದಿಂದ ಸುತ್ತಿದ್ದ ಪೇಪರ್ ಪೊಟ್ಟಣ ಹಾಗೇ ಇತ್ತು!ನನ್ನ ಹೆಂಡತಿ ಪೊಟ್ಟಣ ಬಿಚ್ಚಿ ನೋಡಿ ಗಾಭರಿಯಾದಳು.ಏಕೆಂದರೆ ,ಆ ಪೊಟ್ಟಣದಲ್ಲಿ ಇದ್ದದ್ದು ಒಂದೇ ಒಂದು ಗೋಡಂಬಿ! 'ಇದೇನೋ ದೀಪೂ!ನೂರು ಗ್ರಾಂ ತಾ ಎಂದರೆ ,ಒಂದೇ ಒಂದುಗೋಡಂಬಿ ತಂದಿದ್ದೀಯಾ!ಎಲ್ಲಾದರೂ ಬೀಳಿಸಿಕೊಂಡು ಬಂದೆಯೇನೋ ?'ಎಂದು ಕೇಳಿದಳು.ಮಗರಾಯ ಕೂಲಾಗಿ 'ಇಲ್ಲಮ್ಮಾ,ಪೊಟ್ಟಣದ ಕೆಳಗೆ ತೂತು ಮಾಡಿ ಮೊದಲು ಒಂದೇ ಒಂದು ಗೋಡಂಬಿ ತಿಂದೆ.ಆಮೇಲೆ ತಿಂತಾನೆ ಇರಬೇಕು ಅನ್ನಿಸಿತು 'ಎಂದು ಉತ್ತರ ಕೊಟ್ಟು ತುಂಟ ನಗೆನಕ್ಕ ! ಅವನಮ್ಮ ಏನು ಮಾಡಬೇಕೋ ತೋಚದೆ,ಕಣ್ಣು ಕಣ್ಣು ಬಿಟ್ಟಳು!

39 comments:

 1. ಚೆನ್ನಾಗಿದೆ ಸರ್.ಕಿಲಾಡಿ ಮಗರಾಯ .ಮಕ್ಕಳ ಮುಗ್ಧತೆ ಎಷ್ಟು ಖುಷಿ ಆಗುತ್ತಲ್ಲ!!!

  ReplyDelete
 2. ಶಶಿ ಜೋಯಿಸ್ ಮೇಡಂ;ನಮಸ್ಕಾರ.ಮಕ್ಕಳ ಮುಗ್ಧತೆ,ಅವರ ತುಂಟತನ,ಅವರ ಚೇಷ್ಟೆ!ಆ ಲೋಕವೇ ಬೇರೆ!ಹಂಚಿಕೊಳ್ಳಲು ಇಂತಹ ನೂರೆಂಟು ನೆನಪುಗಳಿವೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 3. 100 gramge onde godambi.angadi dooradalliddare
  ondoo ella.evugalannu meluku hakuvade khushiyenisuttade.

  ReplyDelete
 4. ಮಕ್ಕಳ ತರಲೆಗಳನ್ನು, ತು೦ಟಾಟಗಳನ್ನು ನೆನೆಪಿಸಿಕೊಳ್ಳಲು.. ಮನ ಮುದಗೊಳ್ಳುತ್ತದೆ. ಹ೦ಚಿಕೊ೦ಡದ್ದಕ್ಕೆ..ಧನ್ಯವಾದಗಳು..ಡಾ.

  ಅನ೦ತ್

  ReplyDelete
 5. ನಿಮ್ಮ ಮಗರಾಯನ ಸಾಹಸ ನನ್ನ ಬಾಲ್ಯ ದ ನೆನಪಿನ ಬುತ್ತಿ ಜ್ಞಾಪಿಸಿತು

  ReplyDelete
 6. ಮಕ್ಕಳ ತು೦ಟತನ ಮುದ್ದು ಆಟ ಗಳನ್ನು ನೆನಪಿಸಿಕೊ೦ಡರೆ ಆಗುವ ಆನ೦ದ ಹೇಳಿ ತೀರದು..ನನ್ನ ಮಕ್ಕಳ ಆಟಗೋಷ್ಟಿಗಳು ಮನಸ್ಸಿಗೆ ಬ೦ದವು.ಧನ್ಯವಾದಗಳು. ಚೆನ್ನಾಗಿ ಬರೆದಿದ್ದೀರಿ.

  ReplyDelete
 7. ಹೇಮಚಂದ್ರ ;ನೀವು ಹೇಳಿದ ಹಾಗೆ ಅಂಗಡಿ ಇನ್ನಷ್ಟು ದೂರದಲ್ಲಿದ್ದರೆ ಖಾಲಿ ಪೊಟ್ಟಣ ವಿರುತ್ತಿತ್ತೋ ಏನೋ!ಧನ್ಯವಾದಗಳು.

  ReplyDelete
 8. ಮಕ್ಕಳ ಮನಸ್ಸಿನಲ್ಲಿ ಸೃಜನ ಶೀಲತೆ ಹೆಚ್ಚು.ಹಾಗಾಗಿ ಕೆಲವೊಮ್ಮೆ ಅವರ ಆಲೋಚನೆಗಳು ದಂಗು ಬಡಿಸುವಂತಿರುತ್ತವೆ!ಧನ್ಯವಾದಗಳು.

  ReplyDelete
 9. ಬಾಲೂ ಸರ್;ಬಾಲ್ಯದ ನೆನಪುಗಳು ಎಷ್ಟು ಚೆಂದ ಅಲ್ಲವೆ?ಧನ್ಯವಾದಗಳು.

  ReplyDelete
 10. ಮನ ಮುಕ್ತಾ ಮೇಡಂ;ತಂದೆಗಿಂತಾ ತಾಯಿಗೆ ಮಕ್ಕಳ ಈ ರೀತಿಯ ಚೇಷ್ಟೆಗಳು ಹೆಚ್ಚು ಅನುಭವಕ್ಕೆ ಬಂದಿರುತ್ತವೆ.'ಅಪ್ಪನಿಗೆ ಹೇಳಬೇಡಮ್ಮಾ ,ಹೊಡೀತಾರೆ'ಎಂದು ಅಮ್ಮನ ಹತ್ತಿರ ಮಕ್ಕಳು ಕೇಳಿಕೊಳ್ಳುವುದರಿಂದ ಎಷ್ಟೋ ವಿಷಯಗಳು ಅಪ್ಪನಿಗೆ ಗೊತ್ತೇ ಆಗುವುದಿಲ್ಲ.ಧನ್ಯವಾದಗಳು.

  ReplyDelete
 11. ಸೀತಾರಾಂ ಸರ್;ಮಕ್ಕಳು ಬೆಳೆದಂತೆ ಅವರ ತುಂಟತನವೂ ಮಾಯವಾಗಿರುತ್ತದೆ.
  ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 12. ಪ್ರಗತಿ ಮೇಡಂ;ನಮಗಿಂತ ನಮ್ಮ ಮಕ್ಕಳು ಖಂಡಿತಾ ಜಾಣರು.ಇದು ಪ್ರಕೃತಿ ನಿಯಮವಲ್ಲವೇ!

  ReplyDelete
 13. goDambi sakat ruchi sir.......... ondu tindu summane kuLitukoLLalu aagalla........
  nimma magana tappalla adu....

  chennaagide vivaraNe......

  ReplyDelete
 14. ಚೆನ್ನಾಗಿದೆ, ಇನ್ನಷ್ಟು ಇ೦ತಹ ಹಳೆ ನೆನಪುಗಳ ಮೆರವಣಿಗೆ ಬರಲಿ, ಆಮೇಲೆ ಆವತ್ತು ಯಾತ್ರಿ ನಿವಾಸ ನಲ್ಲಿ ಊಟ ಮಾಡುವಾಗ ಹೇಳಿದ್ರಲ್ಲ, "ಮಜ್ಜಿಗೆಯಲ್ಲಿ ಎನಿಮಾ" ಆ ಪ್ರಕರಣ ಹಾಕಿ ಸಾರ್.

  ReplyDelete
 15. ನಿಮ್ಮ ಮಗ ನಿಜವಾಗಿಯೂ ತುಂಬ ಜಾಣ.ಮೆಚ್ಚಿಕೊಂಡೆ ಅವನ ಜಾಣತನವನ್ನು!

  ReplyDelete
 16. ha ha ha... naanu kooda Heege tinkondu barta idde.. especially bella, shenga kadle... :)

  ReplyDelete
 17. ಆಹಾ ನನ್ನ ತರಹದ ತುಂಟ ಮಗ! :-)

  ನೂರು ಗ್ರಾಂ ಗೋಡಂಬಿ ತಿಂದ ಮೇಲೆ ಆರೋಗ್ಯ ಸ್ಥಿತಿಯ ಬಗ್ಗೆ ತಾವೇನೂ ಬರೆದಿಲ್ಲ (;-))

  ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

  ReplyDelete
 18. ಹಹಹ್ಹ,,, ಗೋಡಂಬಿಯೇ ಹಾಗೆ,, ತಿನ್ನಲು ಶುರು ಹಚ್ಚಿದರೆ ಮಧ್ಯದಲ್ಲಿ ನಿಲ್ಲಿಸಲು ಮನಸ್ಸೇ ಬರಲ್ಲ. ಒಂದಾದರೂ ಉಳಿಯಿತಲ್ಲ ಕಾಗದದ ಪೊಟ್ಟಣದಲ್ಲಿ..!!

  ReplyDelete
 19. ದಿನಕರ್;ನೀವು ಹೇಳುವುದು ಸರಿ.ನಮಗೇ ಮತ್ತಷ್ಟು ತಿನ್ನಬೇಕೆನಿಸುವಾಗ ಮಕ್ಕಳು ಸುಮ್ಮನೇ ಇರುತ್ತಾರೆಯೇ?

  ReplyDelete
 20. ರವಿ ಹೆಗ್ಡೆ;ಧನ್ಯವಾದಗಳು.

  ReplyDelete
 21. ಪರಾಂಜಪೆ ಸರ್;ಮಜ್ಜಿಗೆ ಎನೀಮ ಕತೆ ಹಾಕುವ.ಧನ್ಯವಾದಗಳು.

  ReplyDelete
 22. ಸುನಾತ್ ಸರ್;ಮಕ್ಕಳು ನಿಜಕ್ಕೂ ನಮಗಿಂತ ಜಾಣರು.ಧನ್ಯವಾದಗಳು.

  ReplyDelete
 23. ಶಿವ ಪ್ರಕಾಶ್;ಓಹೋ ನಿಮ್ಮದೂ ಇದೆ ಕೇಸಾ?ಸರಿ ಹೋಯಿತು ಬಿಡಿ.

  ReplyDelete
 24. ಬದರೀ ನಾಥ್;ನೀವೂ ಹೀಗೆನಾ?ಹಾ -ಹಾ --ಹಾ !

  ReplyDelete
 25. ಸಾಗರಿ ಮೇಡಂ;ಮಗ ಬುದ್ಧಿವಂತ.ಒಂದೂ ಉಳಿಸದಿದ್ದರೆ ತಂದೇ ಇಲ್ಲಾ ಅನ್ನುತ್ತಾರಲ್ಲಾ!

  ReplyDelete
 26. ಸದ್ಯ ಒಂದಾದರು ಮಿಗ್ತಲ್ಲ.

  ReplyDelete
 27. ಹಬ್ಬವಾದ್ದರಿಂದ 100ಗ್ರಾಂ ಪೊಟ್ಟಣದಲ್ಲಿ ಒಂದು ತಿಂದು ನೋಡಿಬಹುದು. ರುಚಿ ಅದ್ಭುತವಾಗಿರಬೇಕು, ಎರಡಕ್ಕು ಮನಸು ಸುಮ್ಮನಿರಲಾಗದೆ, ಮೂರು, ನಾಲ್ಕು, ಐದು, ಈಗೇ ಸಾಗಿಹೋಗಿದೆ. ಮನೆ ಬರುವಷ್ಟರಲ್ಲಿ ಒಂದು ಉಳಿದಿರಬಹುದು. ಅದು ಅಮ್ಮನಿಗೆ ರುಚಿತೋರಿಸಲಿರಬೇಕು. ಮುಂದೆ ಅದು 100 ಗ್ರಾಂ ಹೋಗಿ 1 ಕೆಜಿ ಬರಬಹುದೆಂದು ಜಾಣತನ ತೋರಿಸಿದ್ದಾನೆ.ಮಕ್ಕಳು ಇಂತ ಕಲೆಯಲ್ಲಿ ಪ್ರಚಂಡರು ಮೂರ್ತಿ ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು.

  ReplyDelete
 28. ಗುಬ್ಬಚ್ಚಿ ಸತೀಶ್;ಒಂದೂ ಮಿಗಿಸದಿದ್ದರೆ ತಂದೇ ಇಲ್ಲಾ ಅಂತಾರಲ್ಲಾ!

  ReplyDelete
 29. ವಸಂತ್;ಮಕ್ಕಳು ಬುದ್ಧಿವಂತರು!

  ReplyDelete
 30. ಮಗನ ಬಾಲ್ಯವನ್ನು ಹೇಳಿದ್ದೀರಿ ಚೆನ್ನಾಗಿದೆ, ನಮಗೆ 'ಕೊಳಲ ಕೃಷ್ಣ' ನ ಬಾಲ್ಯವನ್ನು ಯಾವಾಗ ಹೇಳುತ್ತೀರಿ ? ಧನ್ಯವಾದಗಳು

  ReplyDelete
 31. Sir,

  Godambi nange kotre kg gattale tinteeni sir, nimma magana kathe keli godambi tinno aase punaha aitu....

  ReplyDelete
 32. ಭಟ್ ಸರ್;ಮುಖತಹ ಭೇಟಿ ಆದಾಗ.

  ReplyDelete
 33. ಅಶೋಕ್ ಸರ್;ನಿಮ್ಮದೂ ಅದೇ ಕೇಸೇ!

  ReplyDelete