1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ,ಹೊಸನಗರ ತಾಲೂಕಿನ,ಚಕ್ರಾನಗರದ ಕೆ.ಪಿ.ಸಿ.ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದೆ.ನಾವು ಇದ್ದ ಮನೆ ಶೀಟುಗಳ ಸೂರುಳ್ಳ ಮನೆಯಾಗಿತ್ತು.ವಿಪರೀತ ಇಲಿಗಳ ಕಾಟ.ಇಲಿಗಳು ಎಲ್ಲೆಂದರಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದವು.ಇಲಿಗಳನ್ನು ಹುಡುಕಿಕೊಂಡು ಎಲ್ಲಾ ತರದ ಹಾವುಗಳೂ ಬರುತ್ತಿದ್ದವು.ಎರಡು ಮೂರು ಸಲ ನಾಗರ ಹಾವುಗಳು ಸೂರಿನಲ್ಲಿ ಸೇರಿಕೊಂಡು ,ಶೀಟುಗಳನ್ನೇ ತೆಗೆಯಬೇಕಾಗಿ ಬಂತು.ಮಲೆನಾಡು ಅಷ್ಟಾಗಿ ಪರಿಚಯವಿರದ ನಮಗೆ ಪಜೀತಿಯೋ ಪಜೀತಿ.ಮಕ್ಕಳು ಇನ್ನೂ ಸಣ್ಣವರಿದ್ದರು.ಮಗ ಮೂರನೇ ತರಗತಿಯಲ್ಲಿದ್ದರೆ ,ಮಗಳು ಎಲ್.ಕೆ.ಜಿ.ಯಲ್ಲಿದ್ದಳು.ಹಾವಿನ ಹೆದರಿಕೆಯಿಂದ ರಾತ್ರಿಯೆಲ್ಲಾ ನಿದ್ರೆ ಬರದೆ ಸೂರು ನೋಡುತ್ತಾ ಮಲಗುವುದೇ ಆಗುತ್ತಿತ್ತು.
ಈ ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಎರಡು ಇಲಿ ಬೋನುಗಳನ್ನು ತಂದು ,ಅದರಲ್ಲಿ ಚಪಾತಿ ತುಂಡು,ಕೊಬ್ಬರಿ ತುಂಡುಗಳನ್ನಿಟ್ಟು,ಬೋನುಗಳನ್ನು ಬೇರೆ ಬೇರೆ ಜಾಗದಲ್ಲಿಟ್ಟೆ.ಏನಿಟ್ಟರೂ ಬೋನಿಗೆ ಇಲಿಗಳಂತೂ ಬೀಳುತ್ತಿರಲಿಲ್ಲ ! ಯಾರೋ' ಇಲಿಗಳಿಗೆ ಕರಿದ ತಿಂಡಿ ಅಂದರೆ ಇಷ್ಟ!ಬಜ್ಜಿ ,ಬೋಂಡ ಮಾಡಿ ಬೋನಿನಲ್ಲಿ ಇಡಿ ಸರ್ 'ಎಂದರು. ಸರಿ ಅಂದಿನಿಂದ ದಿನಾ ಸಂಜೆ ನನ್ನ ಹೆಂಡತಿ ಇಲಿಗಳಿಗಾಗಿ ಕರಿದ ತಿಂಡಿ ಮಾಡಲು ಶುರು ಮಾಡಿದಳು!ಒಂದು ದಿನ ಮೆಣಸಿನಕಾಯಿ ಬಜ್ಜಿಯಾದರೆ,ಮತ್ತೊಂದು ದಿನ ಆಲೂ ಬೋಂಡಾ !ಮಕ್ಕಳಿರುವ ಮನೆ .ಸ್ವಲ್ಪ ಮಾಡಿದರೆ ಆಗುತ್ತೆಯೇ?ಮಕ್ಕಳಿಗೂ ಇರಲಿ ಅಂತ ಹೆಚ್ಚಾಗಿಯೇ ಮಾಡುತ್ತಿದ್ದಳು.ಇಲಿಯ ಹೆಸರಿನಲ್ಲಿ ನಮಗೆಲ್ಲಾ ದಿನವೂ ತರ ತರದ ಕರಿದ ತಿಂಡಿಗಳ ಹಬ್ಬ!
ನನ್ನ ಮಗ ಸ್ಕೂಲಿನಿಂದ ಬಂದ ತಕ್ಷಣ ,ಬ್ಯಾಗ್ ಬಿಸಾಡಿ ,'ಅಮ್ಮಾ ಇವತ್ತು ಇಲಿಗೆ ಏನು ತಿಂಡಿ?'ಎಂದು ಕೇಳಲು ಶುರು ಮಾಡಿದ!ನಾನೂ ತಮಾಷೆಗೆ ಆಗಾಗ 'ಏನೇ ಇವತ್ತು ಇಲಿಗೆ ಏನು ವಿಶೇಷ?'ಎಂದು ಕೇಳುತ್ತಿದ್ದೆ.ಒಂದೆರಡು ಸಲ ಬೋನಿಗೆ ಬಿದ್ದ ಇಲಿಗಳು ಹುಶಾರಾದವು!ಅದು ಹೇಗೋ ತಿಂಡಿ ಮಾತ್ರ ತಿಂದು ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದವು! ಕರಿದ ತಿಂಡಿ ತಿಂದೂ ತಿಂದೂ,ಇಲಿಗಳ ಜೊತೆಗೇ ನಾವೂ ಗುಂಡಗಾದೆವು!
hha hhaa... antu bere mane maadi ''ili vishesha tinDi'' tappisikondri alvaa... chennaagide sir barediddu.....
ReplyDeleteಚೆನ್ನಾಗಿದೆ ನಿಮ್ಮ ಅನುಭವ, ಇಲಿಸ೦ಹಾರದ ನೆಪದಲ್ಲಿ ದಿನವೂ ಕರಿದ ತಿ೦ಡಿ ತಿ೦ದು ದು೦ಡಗಾದಿರಿ ನಿಜ, ಕೊನೆಗೆ ಇಲಿ ಸ೦ಹಾರ ಹೇಗೆ ಪರಿಸಮಾಪ್ತಿಯಾಯಿತು ಎ೦ಬುದನ್ನು ಮುಂದಿನ ಬರಹದಲ್ಲಿ ಹೇಳಿ ಸ್ವಾಮಿ. good one, continue.
ReplyDeleteದಿನಕರ್ ಮೊಗೇರ;ಇಲಿಗಳು ಬಹಳ ಬುದ್ಧಿವಂತ ಪ್ರಾಣಿಗಳು.ಈ ಘಟನೆ ನಡೆದು ಸುಮಾರು ವರ್ಷಗಳಾದ್ದರಿಂದ ಎಲ್ಲವೂ ಈಗ ನೆನಪಿಗೆ ಬರುತ್ತಿಲ್ಲಾ.ನಮ್ಮ ಮನೆಯಲ್ಲಿ ಇಲಿಗೆ ತಿಂಡಿ ಮಾಡುವುದು ಎಷ್ಟು ಫೇಮಸ್ ಆಗಿತ್ತೆಂದರೆ ,ನಮ್ಮ ambulance driver ಕೂಡ ಉರ್ದುಮಿಶ್ರಿತ ಕನ್ನಡದಲ್ಲಿ"ಕ್ಯಾ ಸಾಬ್ ,ಆಜ್ ಚೂಹೇ ಕೋ ಕ್ಯಾ ತಿಂಡಿ?"ಎಂದು ಕೇಳುತ್ತಿದ್ದ!
ReplyDeleteಪರಾಂಜಪೆ ಸರ್;ಇಲಿ ಹೆಗ್ಗಣಗಳ ಜೊತೆ ಹೀಗೇ ಹೆಣಗುವಷ್ಟರಲ್ಲಿ ಮುಂದಿನ ಊರಿಗೆ ವರ್ಗವಾಗಿತ್ತು.
ReplyDeleteನಿಮ್ಮ ಇಲಿ ತಿಂಡಿಯ ಲೇಖನ,
ReplyDeleteನನ್ನಂಥ ಹೆಗ್ಗಣಕ್ಕೆ ಜಿಲೇಬಿ ತಿಂದ ಆಗಾಯಿತು.
:):)..chennaagi barediddiri.
ReplyDeleteಗುಬ್ಬಚ್ಚಿ ಸತೀಶ್;ಸುಮಾರು ಹದಿನೆಂಟು ವರುಷಗಳ ಹಿಂದಿನ ಆ ಕರಿದ ತಿಂಡಿಗಳ ಸಮಾರಾಧನೆ ನೆನಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತೆ!ಏನು ಮಾಡೋದು ಈಗ ಡಯಟ್ ,ಅದೂ ಇದೂ ಅಂತ ನಾಲಿಗೆಗೆ ಕಡಿವಾಣ ಹಾಕಬೇಕಾಗಿ ಬಂದಿದೆ!
ReplyDeleteಮನಮುಕ್ತಾ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಹಾ! ಹಾ! ಚೆನ್ನಾಗಿದೆ ನಿಮ್ಮ ಇಲಿ ಪುರಾಣ!
ReplyDeleteಕಾರ್ಗಲ್-ನಲ್ಲೂ ಇಲಿ ತಂದು ಬಿಡುತ್ತೇವೆ!
ಯಾಕೋ ತಮ್ಮನ್ನು ಸೀತಾರಾಮರು ಹೆದರಿಸುವುದನ್ನು ನೋಡಿದೆ, ನಾವೂ ಇಲಿ ತಂದು ಬಿಡಲು ರೆಡಿ ಇದ್ದೇವೆ ಎಂದು ನಾನು ಹೇಳುತ್ತಿದ್ದೇನೆ. ಅದು ಬಳ್ಳಾರಿಯಲ್ಲವೇ ಅಲ್ಲಿ ಎರಡು ಕಾಲಿನ ಗಣಿಹೆಗ್ಗಣಗಳೇ ಇವೆ, ಅವನ್ನು ಹಿಡಿಯಲು ಸಾಕು ಸಾಕಾಗುತ್ತಿದೆ! ಕಾರ್ಗಲ್ ಕೂಡ ಶಿವಮೊಗ್ಗ ಜಿಲ್ಲೆಯಲ್ಲೇ ಬರುತ್ತದೆಯಲ್ಲವೇ? ಇಲಿಗಳ ಕಾಟ ಎಲ್ಲಿಲ್ಲ ? ಆದ್ರೂ ಸ್ವಲ್ಪ ಪ್ರತಿಶತ ಹೆಚ್ಚು-ಕಮ್ಮಿ ಇರಬಹುದು, 'ಇಲಿಗೆ ಏನು ವಿಶೇಷ? ' ಎಂದು ನೀವೆಲ್ಲಾ ಕೇಳುವುದನ್ನು ನೆನೆಸಿಕೊಂಡರೆ ನಗುಬರುತ್ತದೆ! ಪಾಪ ನಿಮಗೆ ಬಾಯಿಗೆ ರುಚಿಯಾಗಿ ದಿನವೂ ಸಿಗಲಿ ಅಂತ ಅವು ಬಂದು ಉಪಕಾರಮಾಡಿವೆ! ಇಲಿಗಳಿಗೆ ಅನುಮಾನ ಬಂದರೆ ಅವು ನೀವು ಏನನ್ನು ಇಟ್ಟರೂ ತಿನ್ನುವುದಿಲ್ಲ, ಬರುವುದು ಬಿಡುವುದೂ ಇಲ್ಲ. ಹಸಿತೆಂಗಿನ ಕಾಯಿ ತುಂಡು ಸ್ವಲ್ಪ ಬೆಂಕಿಯಲ್ಲಿ ಸುಟ್ಟು ಇಟ್ಟರೆ ಅದರ ಪರಿಮಳ ಅವುಗಳಿಗೆ ಬಹಳ ಚೇತೋಹಾರಿ, ಇದಲ್ಲದೇ ಈರುಳ್ಳಿ ಬೋಂಡ ಅಥವಾ ಪಕೋಡ ಕೂಡ ಹಾಗೇ. ಇಷ್ಟಕ್ಕೇ ನಿಲ್ಲಿಸಿದರೆ ರಸಭಂಗವಾಗುತ್ತದೆ, ತಮ್ಮ ' ಇಲಿಪುರಾಣ' ಕ್ಕೆ ಮುಂದಿನ ಕಂತುಕೊಟ್ಟು ಮಂಗಳಹಾಡಿ ಸ್ವಾಮಿ, ಧನ್ಯವಾದಗಳು
ReplyDeleteಸೀತಾರಾಮ್ ಸರ್;ನಮಸ್ಕಾರ.ಹಾಗೆಲ್ಲ ಹೆದರಿಸಬೇಡಿ ಸಾರ್.ವಯಸ್ಸಾಯಿತು.ಏನೋ ರಾಮ ಕೃಷ್ಣ ಎಂದುಕೊಂಡು ನೆಮ್ಮದಿಯಾಗಿದ್ದೀವೆ.
ReplyDeleteವಿ.ಆರ್.ಭಟ್ ಸರ್;ಇಲಿಯ ಪುರಾಣ ಸುಮಾರು ಹದಿನೆಂಟು ವರುಷ ಹಳೆಯದು.ಸುಮಾರಷ್ಟು ಮರೆತುಹೋಗಿದೆ.ನಾನು ಅದನ್ನು ಆಗಲೇ ದಾಖಲಿಸಿ ಇಟ್ಟಿದ್ದರೆ ಮತ್ತಷ್ಟು ಬರೆಯಬಹುದಾಗಿತ್ತು.ಸಧ್ಯಕ್ಕೆ ನೀವು ಇಷ್ಟರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕು.ನಮಸ್ಕಾರ.
ReplyDeleteಕೃಷ್ಣಮೂರ್ತಿಯವರೆ...
ReplyDeleteನಿಮ್ಮ ಇಲಿ ಪ್ರಸಂಗ ಮಸ್ತಾಗಿದೆ...
ಇಲಿಗಳಿಗೆ ಮಾಡಿದ ತಿಂಡಿ..ಕಥೆ ಕೇಳಿ ಹೊಟ್ಟೆತುಂಬಾ ನಕ್ಕೇವು...
"ಅಮ್ಮಾ ನಮಗೇನು ತಿಂಡಿ?" ಅಂತ ಕೇಳುವದನ್ನು ಬಿಟ್ಟು..
"ಇಲಿಗೇನು ತಿಂಡಿ ಇವತ್ತು... ?" ಅಂತ ಕೇಳುವ ನಿಮ್ಮ ಮಗ ಇಷ್ಟವಾಗಿಬಿಟ್ಟ...
ಇಲಿಗೋಸ್ಕರನಾದ್ರೂ ಸ್ಪೆಷಲ್ ತಿಂಡಿ ಸಿಗುತ್ತಿತ್ತಲ್ಲಾ...!!
ಹ್ಹಾ... ಹ್ಹಾ !!
ಮಸ್ತಾಗಿದೆರೀ.. ಸಾಹೇಬರ !!
ಇನ್ನಷ್ಟು ರಸಾನುಭವ ಹಾಕ್ರಲಾ.. !!
ಹೊಟ್ಟೆತುಂಬಾ ನಗಿಸಿದ್ದಕ್ಕೆ "ಜೈ.. ಹೋ.. !!"
ಪ್ರಕಾಶಣ್ಣ;ನಮ್ಮ ambulance driver ಕೂಡ ತನ್ನ ಉರ್ದು ಮಿಶ್ರಿತ ಕನ್ನಡದಲ್ಲಿ'ಸಾಬ್ ಆಜ್ ಚೂಹೇ ಕೋ ಕ್ಯಾ ತಿಂಡಿ?'ಎಂದು ಕೇಳುತ್ತಿದ್ದ!ಒಂದು ಕಡೆ ಈ ಎಲ್ಲಾ ತಮಾಷೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಹಾವಿನ ಭಯ,ಮಕ್ಕಳ ಬಗ್ಗೆ ಆತಂಕ ಕಾಡುತ್ತಿತ್ತು.ಜೊತೆಗೆ ಮಗನ ತುಂಟತನ ವಿಪರೀತವಿತ್ತು.ಈಗ ಅದನ್ನೆಲ್ಲಾ ನೆನಸಿಕೊಂಡರೆ ನಗು ಬರುತ್ತದೆ.ಧನ್ಯವಾದಗಳು.ಜೈ ಹೋ.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರ ಸರ್...
ReplyDeleteiligenu thindi ruchiyagittu.ennastu thindigalannu
ReplyDeletenimma blogninda namage neediri.
ಸೌಮ್ಯ ಅವರಿಗೆ;ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಹೇಮಚಂದ್ರ ;'ಇಲಿಗೇನು ತಿಂಡಿ ರುಚಿಯಾಗಿತ್ತು'ಎಂದಿದ್ದೀರಿ.ಖಂಡಿತಾ ನನ್ನ ಬ್ಲಾಗಿನಲ್ಲಿ ಇನ್ನಷ್ಟು ರುಚಿಯಾದ ,ಶುಚಿಯಾದ ತಿಂಡಿಗಳನ್ನು ನೀಡಲು ಪ್ರಯತ್ನಿಸುತ್ತೇನೆ.ಧನ್ಯವಾದಗಳು.ನಮಸ್ಕಾರ.
ReplyDeleteಇಲಿಗಳ ತಿ೦ಡಿ ಪುರಾಣ ಭವ್ಯವಾಗಿದೆ ಡಾ. ನಮ್ಮ ಕಛೇರಿಯಲ್ಲಿಯೂ ಕಾಡುವ "ಇಲಿಗಳಿಗೆ ತಿ೦ಡಿ ತಿನ್ನಿಸಿ ಕೊಲ್ಲುವ" ನೆಪದಲ್ಲಿ ಕೊ೦ಚ ಹೆಚ್ಚೇ ಕ್ಯಾ೦ಟೀನ್ ನಿ೦ದ ತಿ೦ಡಿಯನ್ನು ತರಿಸಿ ನಾವು ಬಾಯಿ ಚಪಲ ಹೆಚ್ಚಿಸಿಕೊ೦ಡದ್ದು ಜ್ಞಾಪಕಕ್ಕೆ ಬ೦ತು..!
ReplyDeleteಧನ್ಯವಾದಗಳು
ಅನ೦ತ್
ಸರ್ ನಿಮ್ಮ ಮನೆಗೆ ಬರಬೇಕು ಅಂತ ಇದೀನಿ ..ನಾಳೆ ನಿಮ್ಮ ಇಲಿಗಳಿಗೆ ಏನು ತಿಂಡಿ ಮಾಡ್ತಿರ ? :)ಚನ್ನಾಗಿದೆ
ReplyDeleteಮೂಷಿಕ ಸೇವೆ ಬಹಳ ಚೆನ್ನಾಗಿ ಮಾಡುತ್ತಾ , ಮೂಷಿಕಗಳ ಹೆಸರಿನಲ್ಲಿ ತಾವುಗಳು ತಿಂಡಿ ತಿಂದಿದ್ದು ಮಜವಾಗಿದೆ. ಮುಂದೊಮ್ಮೆ ನಾನೂ ನನ್ನ ತಮ್ಮ ಗಣೇಶನ ವಾಹನದ ರೂಪದಲ್ಲಿ ನಿಮ್ಮ ಮನೆಗೆ ಬರುತ್ತೇನೆ. ಆದ್ರೆ ಬೋನಿಗೆ ಹಾಕದೆ ಹಾಗೆ ಕರಿದ ತಿಂಡಿ ಕೊಡಿ ಡಾಕ್ಟ್ರೆ.ನಿರೂಪಣೆ ಚೆನ್ನಾಗಿದೆ.ಆದ್ರೆ ಸ್ವಾಮೀ ನೀವು ಕೊಟ್ಟ ತಿಂಡಿ ತಿನ್ನುವಾಗ ನೀವು ಮನ್ನಾದೆ ಹಾಡು ಗಳನ್ನೂ ಮಾತ್ರ ಹಾಡಬೇಕು ಸರೀನಾ ಸರ್ ಥ್ಯಾಂಕ್ಸ್.
ReplyDeleteMurthy Sir,
ReplyDeleteTumbaa swarasyakaravaagide nimma lekhana, odi nagun banthu..'ilige enu tindi' ennuvude ee barahhada highlight... Nice one sir....
ಅನಂತ್ ಸರ್;ನಿಮ್ಮದೂ ಇದೆ ಕತೆ ರಿಪೀಟ್ ಆಗಿದೆಯಾ?ಸರಿಹೋಯ್ತು ಬಿಡಿ.
ReplyDeleteಶ್ರೀಕಾಂತ್;ನಮ್ಮ ಮನೆಗೆ ಖಂಡಿತ ಬನ್ನಿ.ಈಗ ಇಲಿಗಳ ಕಾಟ ಇಲ್ಲ.ಆದರೂ ನಿಮಗೆ ಒಳ್ಳೆಯ ಖಾದ್ಯ ಗ್ಯಾರೆಂಟಿ
ReplyDeleteನಮ್ಮೊಳಗೊಬ್ಬ ಬಾಲೂ ಸರ್; ನಮ್ಮ ಮನೆಗೆ ನೀವು ಹೇಳಿದ ಹಾಗೆ ಅಕಸ್ಮಾತ್ ಮೂಶಿಕವಾಗಿ ಬಂದರೆ,ನಿಮಗೆ ಬೋನು ಇಲ್ಲ ,ಕರಿದ ತಿಂಡಿ ಗ್ಯಾರಂಟಿ,ಆದರೆ ಮೊನ್ನೆ ಹಾಡಿದ ಹಾಗೆ ನಿಂಗಿ ,ನಿಂಗಿ ಹಾಡು ಹಾಡಿ ಓಡಿಸುತ್ತೇನೆ.ಇನ್ನೊಂದು ಸಲ ನೀವು ಈ ಕಡೆ ಖಂಡಿತ ತಲೆ ಹಾಕುವುದಿಲ್ಲ.
ReplyDeleteಅಶೋಕ್ ಕೊಡ್ಲಾಡಿ ಸರ್;ನಿಮಗೆ'ಇಲಿಗೇನು ತಿಂಡಿ'ಇಷ್ಟವಾಯಿತು ಎಂದಿದ್ದೀರ.ಧನ್ಯವಾದಗಳು.
ReplyDeleteha ..ha ...chennaagide "ಇಲಿಗೇನು ತಿಂಡಿ ಇವತ್ತು... ?"
ReplyDeleteನಮಸ್ಕಾರ ಸುಮ ಮೇಡಂ;'ಇಲಿಗೇನು ತಿಂಡಿ'ಘಟನೆ ನಡೆದು ಹದಿನೆಂಟು ವರ್ಷ ಆಯಿತು.ಈಗ ಇಲ್ಲಿ ಇಲಿ ಇಲ್ಲ!,'ಇಲಿಗೇನು ತಿಂಡಿ'ಎಂದು ಕೇಳುತ್ತಿದ್ದ ಮಗ ಈಗ U.S.ನಲ್ಲಿದ್ದಾನೆ.ಧನ್ಯವಾದಗಳು.
ReplyDeleteಹ್ಹ ಹ್ಹ ಹ್ಹ...ಮಸ್ತ್ ಆಗಿದೆ ಇಲಿ ಸ್ಟೋರಿ...
ReplyDeleteದಿನ ಹೊಸ ಹೊಸ ತಿಂಡಿ..ಎಲ್ಲರೂ ಚೇಂಜ್ ಕೇಳ್ತಾರೆ... :)
ನಿಮ್ಮವ,
ರಾಘು.
ಡಾ.ಕೃಷ್ಣಮೂರ್ತಿ ಸರ್,
ReplyDeleteಆಹ.ಅಹ್ಹ..ನಿಮ್ಮ ಇಲಿ ತಿಂಡಿ ಕತೆ ಸೂಫರ್. ಓದಿ ನಗು ಬಂತು. ನೀವು ದಪ್ಪಗಾಗಿದ್ದು ನೀವು ನನ್ನ ತಬ್ಬಿ ಹಿಡಿದಾಗ ಗೊತ್ತಾಗಿತ್ತು. ಅದಕ್ಕೆ ಕಾರಣ ಇಲಿಗಳು ಅಂತ ಈಗ ಗೊತ್ತಾಯಿತು.
ಇನ್ನಷ್ಟು ಇಂಥ ತಮಾಷೆಗಳಿದ್ದರೆ ಬರೆಯಿರಿ ಸರ್,
:D :D
ReplyDeleteಡಾಕ್ಟರ್ ಸಾಹೇಬ್ರೆ ನಿಮ್ಮ ಮೂಷಕ ಪುರಾಣ ಪ್ರಸಂಗ ಸೊಗಸಾಗಿತ್ತು, ಹಿಂದೆ ನಾವೂ ಆ ಬಗ್ಗೆ ತೊಂದರೆ ಪಟ್ಟಿದ್ದಿದೆ
ReplyDeleteನೀವು ಬೋನು ಅಂತೀರಿ ನಾವಿ ಬಲಿ ಅಂತೇವಿ ಆದ್ರ ಭಜಿ,ಬೊಂಡ ಕಾಮನ್...!
ಸರ್, ಸಕ್ಕತ್ತಾಗಿದೆ. ಇಲಿಗಳಿಗೆ ತಿಂಡಿ ಮಾಡಿದ್ದ ವಿಚಾರ. ಹೌದು ಹಿಂದೆಲ್ಲಾ ಇಲಿ ಬೋನಿಗೆ ಬೀಳಲೆಂದು ಕಾಯಿಚೂರು, ಸುಟ್ಟಕೊಬ್ಬರಿ, ಬೋಂಡ ಇವೆಲ್ಲ ಇಲಿಗಳನ್ನು ಹಿಡಿದರೂ, ನಂತರ ಇಲಿಗಳೇ ಇವುಗಳನ್ನು ತಿಂದು ಬೋನಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದವು. ಚೆನ್ನಾಗಿದೆ ಸರ್, ನೆನಪುಗಳ ಬರಹ.
ReplyDeleteಸ್ನೇಹದಿಂದ,
ಇಷ್ಟಪಟ್ಟು ಓದಿ ಪ್ರತಿಕ್ರಿಯಿಸಿದ ರಾಘು,ಶಿವೂ,ತೇಜಸ್ವಿನಿ ಹೆಗ್ಡೆ,ಉಮೇಶ್ ದೇಸಾಯ್ ,ಚಂದ್ರು ಇವರಿಗೆಲ್ಲಾ ನನ್ನ ಅನಂತ ಧನ್ಯವಾದಗಳು.ಸಮಯದ ಅಭಾವದಿಂದ ಪ್ರತ್ಯೇಕವಾಗಿ ಪ್ರತಿಕ್ರಿಯೆಗೆ ಉತ್ತರಿಸಲಾಗುತ್ತಿಲ್ಲ.ಕ್ಷಮೆ ಇರಲಿ.
ReplyDeleteಸಾಹೇಬ್ರೆ ನಿಂಗಿ ,ನಿಂಗಿ ಹಾಡಿಗೆ ಬಗ್ಗೊದಿಲ್ಲಾ ಸ್ವಾಮೀ , ನಿಂಗಿ ಹಾಡಿನ ಸುರ್ ಗೆ ಬೇಕಾದ ಔಷದಿ ತಂದು ನಿಮ್ಮ ಕಂಠ ದಿಂದ ಹಾಡಿಸಿ ಬಿಡುತ್ತೇನೆ. ನಿಮ್ಮ ಹಾಸ್ಯ ನನಗೆ ಇಷ್ಟವಾಯಿತು.ನಿಮಗೆ ಧನ್ಯವಾದಗಳು.
ReplyDeleteಮೂರ್ತಿ ಸರ್ ..
ReplyDeleteನಿಮಗೆಲ್ಲಾ ಕರಿದ ತಿಂಡಿಯ ಆಟ ,, ಇಲಿಯ ಪ್ರಾಣಕ್ಕೆ ಸಂಕಟ .. ಹ್ಹ ಹ್ಹ್ ಹ್ಹಾ ..
ಚೆನ್ನಾಗಿದೆ ನಿಮ್ಮ ಇಲಿ ಸಂಹಾರ ಅನುಭವ ,,,
ಶ್ರೀಧರ್;ನಮಸ್ಕಾರ.ಇಲಿಗಳು ಬಹಳ ಹುಷಾರು ಸರ್.ಅವುಗಳ ಬುದ್ಧಿವಂತಿಕೆಗೆ ಅಚ್ಚರಿಪಟ್ಟಿದ್ದೆ.ಅವುಗಳನ್ನೆಲ್ಲಾ ದಾಖಲಿಸಿ ಇಟ್ಟಿದ್ದರೆ ಒಳ್ಳೆಯ ಬರಹವಾಗುತ್ತಿತ್ತು!ಧನ್ಯವಾದಗಳು.
ReplyDelete"ಇಲಿಗಳಿಗೇನು ತಿಂಡಿ ?"..ಸಕತ್ ಇಷ್ಟ ಆಯಿತು..ನಮ್ಮನೆಯವರಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು..but really sorry ಆಗ ನೀವು ಎಷ್ಟೊಂದು ಕಷ್ಟ ಅನುಭವಿಸಿರಬಹುದು, ಅಲ್ವೇ...??
ReplyDeleteವನಿತ ಮೇಡಂ;ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿಟ್ಟುಕೊಂಡು ,ಸೂರಿನಲ್ಲಿ ನಾಗರಹಾವುಗಳು ಸೇರಿಕೊಂಡು ತುಂಬಾ ಕಷ್ಟ ಪಟ್ಟಿದ್ದೀವಿ.ಮಕ್ಕಳು ಮಾತ್ರ ನಿಶ್ಚಿಂತೆಯಿಂದ 'ಇವತ್ತು ಇಲಿಗೆ ಏನು ತಿಂಡಿ 'ಅಂತ ಕೇಳುತ್ತಾ ,ದಿನಾ ಒಂದು ಕರಿದ ತಿಂಡಿ ತಿನ್ನುತ್ತಾ ಖುಷಿಯಾಗಿರುತ್ತಿದ್ದರು.
ReplyDeleteಡಾಕ್ಟರ್ ಸರ್,
ReplyDeleteಬ್ಲಾಗ್ ಲೋಕದಲ್ಲಿ ಅಲೆಯುವಾಗ ನಿಮ್ಮ ಕೊಳಲು ಕೇಳಿಸಿತು.
ಇಲಿ ತಿಂಡಿ ಕತೆ ಸ್ವಾರಸ್ಯಕರವಾಗಿ ಬಂದಿದೆ.
Thanks Shiv.kindly keep visiting the blog.regards.
ReplyDeleteHa Ha Ha... Channagide sir :)
ReplyDelete