ಎಲೆಲೇಲೆ ---------ರಸ್ತೇ !
ಏನೀ -------ಅವ್ಯವಸ್ಥೆ !!?
ಮೈಮೇಲೆಲ್ಲಾ ---ಹಳ್ಳ!
ಮಳೆ ಬಂದ್ರೆ -----ಕೊಳ್ಳ !
ದಾಟ ಬೇಕಂದ್ರೆ ನಿನ್ನ
ಈಜ್ ಬರಬೇಕು ಮುನ್ನ!
ಅಪರೂಪಕ್ಕೆ ಮರಮ್ಮತ್ತು!
ಹಣ ನುಂಗೋ ಮಸಲತ್ತು!
ಲಾರಿ ಅನ್ನೋ ದೆವ್ವ !
ಮೈಮೇಲ್ ಬಂತಲ್ಲವ್ವಾ!
ಪಕ್ಕದಲ್ ಒಂದಷ್ಟು ಕಲ್ಲು!
ರಿಪೇರಿಯೆಲ್ಲಾ ಮಳ್ಳು!
ಟೆಲಿಫೋನ್ ನವರು ಅಗೆದು !
ಡ್ರೈನೇಜ್ ನವರು ಬಗೆದು!
ನಿನ್ನ ರೂಪ ಕೆಡಿಸಿ !
ಪ್ಯಾಚ್ ವರ್ಕ್ ಸೀರೆ ಉಡಿಸಿ!
ಹೊಡೆದರು ಕೋಟಿ,ಕೋಟಿ!
ನಿನ್ ಹೆಸರಲ್ಲಿ ಲೂಟಿ!
ಎಲೆಲೇಲೆ -------ರಸ್ತೇ!
ಏನೀ ----------ಅವ್ಯವಸ್ಥೆ !
ನಿನ್ ಹಾಗೇ ಈ ವ್ಯವಸ್ಥೆ !
ಬರೀ ---------ಅವ್ಯವಸ್ಥೆ!
ಏನೀ -------ಅವ್ಯವಸ್ಥೆ !!?
ಮೈಮೇಲೆಲ್ಲಾ ---ಹಳ್ಳ!
ಮಳೆ ಬಂದ್ರೆ -----ಕೊಳ್ಳ !
ದಾಟ ಬೇಕಂದ್ರೆ ನಿನ್ನ
ಈಜ್ ಬರಬೇಕು ಮುನ್ನ!
ಅಪರೂಪಕ್ಕೆ ಮರಮ್ಮತ್ತು!
ಹಣ ನುಂಗೋ ಮಸಲತ್ತು!
ಲಾರಿ ಅನ್ನೋ ದೆವ್ವ !
ಮೈಮೇಲ್ ಬಂತಲ್ಲವ್ವಾ!
ಪಕ್ಕದಲ್ ಒಂದಷ್ಟು ಕಲ್ಲು!
ರಿಪೇರಿಯೆಲ್ಲಾ ಮಳ್ಳು!
ಟೆಲಿಫೋನ್ ನವರು ಅಗೆದು !
ಡ್ರೈನೇಜ್ ನವರು ಬಗೆದು!
ನಿನ್ನ ರೂಪ ಕೆಡಿಸಿ !
ಪ್ಯಾಚ್ ವರ್ಕ್ ಸೀರೆ ಉಡಿಸಿ!
ಹೊಡೆದರು ಕೋಟಿ,ಕೋಟಿ!
ನಿನ್ ಹೆಸರಲ್ಲಿ ಲೂಟಿ!
ಎಲೆಲೇಲೆ -------ರಸ್ತೇ!
ಏನೀ ----------ಅವ್ಯವಸ್ಥೆ !
ನಿನ್ ಹಾಗೇ ಈ ವ್ಯವಸ್ಥೆ !
ಬರೀ ---------ಅವ್ಯವಸ್ಥೆ!
ಒಳ್ಳೆ ಕನ್ನಡ ಸಿನೆಮಾದ ಹಾದಂತಿದೆ
ReplyDeleteತುಂಬಾ ಖುಷಿ ಆಗುತ್ತೆ ಹಾಡೋಕೆ
ಒಳ್ಳೆಯ ಕವನ
ಪ್ರಸ್ತುತ ಚಿತ್ರಣ
ಡಾ. ಸರ್,
ReplyDeleteಸೂಕ್ತ ಕವನ... ನಮ್ಮ ಎಲ್ಲಾ ರಸ್ತೆಗಳಿಗೆ ಇದು ಸರಿ ಹೊಂದತ್ತೆ..... ಈ ರಸ್ತೆ ಅವ್ಯವಸ್ತೆಗೆ ದೊಡ್ಡ ಮಸಲತ್ತು ಇದೆ ಸರ್.... ಬರೆದರೆ ದೊಡ್ಡ ಕಥೆ ಕಾದಂಬರಿ ಆಗಬಹುದು..... ಒಳ್ಳೆ ಕವನ....
ಗುರುಸರ್ ;ನಿಮ್ಮದೇ ರಾಗ ಹಾಕಿ ಮಸ್ತ್ ಹಾಡಿ ಸರ್.ಸಾಗರದಾಚೆಯ ಇಂಚರ ಕೇಳಿ ನಾವು ಖುಷಿಪಡುತ್ತೇವೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ನಿರಂತರ ಪ್ರೋತ್ಸಾಹ ಮುಂದುವರಿಯಲಿ.ನಮಸ್ಕಾರ.
ReplyDeleteದಿನಕರ್ ಮೊಗೇರ ಸರ್;ನಮಸ್ಕಾರ.ನಿಮ್ಮ sms ಜೋಕ್ ತುಂಬಾ ಚೆನ್ನಾಗಿತ್ತು.ಇನ್ನು ರಸ್ತೆಯ ಅವ್ಯವಸ್ಥೆಯ ಬಗ್ಗೆ ನನಗಿಂತ ನೀವು ಚೆನ್ನಾಗಿ ಬಲ್ಲಿರಿ.ನಿಮ್ಮ ಲೇಖನಿಯಿಂದಲೂ ಅದರ ಬಗ್ಗೆ ಲೇಖನ ಬರಲಿ.
ReplyDeleteವಸಂತ್;ಇದು ನಾನು ಬಹಳ ಹಿಂದೆ ಬರೆದ ಕವನ.ನಿಮಗೆ ಇಷ್ಟವಾದದ್ದು ಸಂತೋಷ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಕವನ ಚೆನ್ನಾಗಿದೆ,
ReplyDeleteರಸ್ತೆಯ ಅವಾಂತರ
ಜನರಿಗೆ ಗಂಡಾಂತರ !
Wonderful!
ReplyDeleteರಸ್ತೆಯ ಅವ್ಯವಸ್ಥೆ ಬಗ್ಗೆ ಚೆಂದದ ಕವನ
ReplyDeleteಭಟ್ ಸರ್;ಮೊನ್ನೆ ಸಂಜೆ ಮಳೆಯಲ್ಲಿ ಸಾಗರಕ್ಕೆ ಇಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ಕಾರಿನಲ್ಲಿ ಹೋಗಿ ಬರುವಷ್ಟರಲ್ಲಿ ಸಾಕಾಯಿತು.ರಸ್ತೆಗಳು ಪೂರಾ ಹಾಳಾಗಿವೆ.ಇದು ಇಲ್ಲಿನ ರಸ್ತೆಗಳ ಕಥೆ ಅಷ್ಟೇ ಅಲ್ಲಾ.ಸುಮಾರು ರಸ್ತೆಗಳ ಸ್ಥಿತಿ ಹೀಗೇ ಇದೆ.ಮಳೆ ನೀರು ರಸ್ತೆಯ ತುಂಬಾ ಹರಿಯುವಾಗ ಯಾವುದು ಹೊಂಡ,ಯಾವುದು ಸರಿಯಾದ ದಾರಿ ಎಂದು ತಿಳಿಯದೆ ಸುಮಾರು ಸಲ ಪಜೀತಿಯಾಗಿದೆ.ಇದು ಎಲ್ಲರ ಸಮಸ್ಯೆ.ಸಮಸ್ಯೆಗಳೊಂದಿಗೆ ಬದುಕುವುದು ನಮಗೂ ರೂಢಿ ಯಾಗಿದೆ.ಅಲ್ಲವೇ?ಧನ್ಯವಾದಗಳು.
ReplyDeleteಸುನಾತ್ ಸರ್;ನಮಸ್ಕಾರ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteದಿಲೀಪ್ ಹೆಗ್ಡೆ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬೇರೊಂದು ಬ್ಲಾಗಿನಲ್ಲಿ ನೀವು ಪೂರ್ಣ ಚಂದ್ರ ತೇಜಸ್ವಿ ಯವರ ಅಭಿಮಾನಿ ಎಂದು ತಿಳಿದು ಖುಷಿಯಾಯಿತು.ಅವರ ಸುಮಾರು ಕೃತಿಗಳು ನನ್ನಲ್ಲಿವೆ.ನೀವು ಹೇಳಿದ ಹಾಗೆ ಈ ಮಳೆಗಾಲದಲ್ಲಿ ಇನ್ನೊಂದು ರೌಂಡ್ ಓದಬೇಕು.ಅವರು ಸುಮಾರು ಕಡೆ ಮಲೆನಾಡಿನ ರಸ್ತೆಗಳ ಅವ್ಯವಸ್ತೆಯ ಬಗ್ಗೆ ಉಲ್ಲೇಖಿಸಿದ್ದಾರೆ.ಅವರ ಖಟಾರ ಸ್ಕೂಟರ್ ನ ಸಾಹಸ ಘಾತೆಗಳು ಸೊಗಸಾಗಿವೆ.ನಮಸ್ಕಾರ.
ReplyDeleteನಮ್ಮ ರಸ್ತೆಗಳ ಅವಸ್ತೆಯನ್ನು ಸುಶ್ರಾವ್ಯವಾಗಿ ಹೊರ ತಂದಿದ್ದೀರಿ.
ReplyDeleteಕೃಷ್ಣಮೂರ್ತಿಯವರೆ...
ReplyDeleteರಸ್ತೆಗಳು..
ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯಂತಿದೆ...
ಉತ್ತಮ ಕವನಕ್ಕಾಗಿ ಅಭಿನಂದನೆಗಳು...
ರಸ್ತೆಗಳ ಬಗ್ಗೆ ಸ್ಪಷ್ಟವಾಗಿ ಮತ್ತು ಸೊಗಸಾಗಿ ಬರೆದಿದ್ದೀರ.
ReplyDeleteಕೆಲವು ರಸ್ತೆಗಳಂತೂ ವರ್ಷಾನುಗಟ್ಟಲೆ ಬರೀ ಪ್ಯಾಚ್ ವರ್ಕ್ ಸೀರೆನೆ ಉತ್ಕೊಂದಿರ್ತಾವೆ.
ಮತ್ತೆ ಕೆಲವಕ್ಕೆ ಆ ಅದೃಷ್ಟವು ಇರುವುದಿಲ್ಲಾ! ಆದ್ರೆ
(V)VIPಗಳು ಬಂದ್ರೆ ರಾತ್ರೋ ರಾತ್ರಿ ರೆಡಿಯಾಗ್ತವೆ.
ರತ್ನನ ಪದದ ಧಾಟಿಯಲ್ಲಿ ಬರೆದ ರಸ್ತೆಯ ಪದ ಸಕತ್ತಾಗಿದೆ..ಡಾ.
ReplyDeleteಅನ೦ತ್
ಡಾಕ್ಟರ್ ಸರ್,
ReplyDeleteಈ ರಸ್ತೆ........
ಈ ಅವ್ಯವಸ್ತೆ.........
ಎಲ್ಲೆಲ್ಲೂ ಇದ್ದಿದ್ದೆ,
ಕವನ ತುಂಬಾ ಚನ್ನಾಗಿದೆ.
ಚಂದದ ಧನ್ಯವಾದಗಳು.
ಕೃಷ್ಣ ಮುರೂರು;ನಮಸ್ಕಾರ.ಬ್ಲಾಗಿಗೆ ಬಹಳ ದಿನಗಳ ನಂತರ ಬಂದಿದ್ದೀರಿ.ನಿಮಗೆ ಬ್ಲಾಗಿಗೆ ಸ್ವಾಗತ.ನಿಮ್ಮ ಫೋಟೋ ಬ್ಲಾಗ್ ತುಂಬಾ ಸುಂದರವಾಗಿದೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಪ್ರಶಾಂತ್ ಹೆಗ್ಡೆಯವರಿಗೆ;ನಮಸ್ಕಾರ.ನಮ್ಮ ರಸ್ತೆಗಳು ನಮ್ಮ ರಾಜಕೀಯ ವ್ಯವಸ್ತೆಗೆ ಕನ್ನಡಿ ಎಂದಿದ್ದೀರಿ.ನಿಮ್ಮ ಸೂಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteನಾಗರಾಜ್;ನಮಸ್ಕಾರ.ನೀವು ಹೇಳಿದಂತೆ ಕೆಲವು ರಸ್ತೆಗಳು ವರ್ಷಾನುಗಟ್ಟಲೆ ರಿಪೇರಿ ಕಾಣದೆ ಹಾಗೆ ಇವೆ.ಇಂತಹ ರಸ್ತೆಗಳಲ್ಲಿ ಪ್ರಯಾಣ ಮಾಡುವವರ ಸ್ಥಿತಿ ನಿಜಕ್ಕೂ ಶೋಚನೀಯ.
ReplyDeleteಅನಂತ್ ರಾಜ್ ;ನಮಸ್ಕಾರ.ನೀವು ಹೇಳಿದಂತೆ ಈ ಕವನದಲ್ಲಿ ರತ್ನನ ಪದಗಳ ಛಾಯೆ ಇದೆ.ಇದನ್ನು ಬರೆದಾಗ ರತ್ನನ ಪದಗಳನ್ನು ಜಾಸ್ತಿ ಓದುತ್ತಿದ್ದೆ ಎಂದು ಕಾಣುತ್ತೆ.ನಾವು ಓದುವ ಕವನಗಳು ನಮ್ಮ ಬರವಣಿಗೆಯ ಮೇಲೂ ಪರಿಣಾಮ ಬೀರುತ್ತವೆ.
ReplyDeleteಪ್ರವೀಣ್;ನಮಸ್ಕಾರ.ರಸ್ತೆಗಳ ಅವ್ಯವಸ್ತೆ ಸರ್ವ ವ್ಯಾಪಿ ಎಂದು ಸರಿಯಾಗಿ ಹೇಳಿದಿರಿ.ಧನ್ಯವಾದಗಳು.
ReplyDeleteಎಲೆಲೆ ರಸ್ತೆ.. ಅಂತ್ಯ ಕಾಣದ ನಿನ್ನ ದುರವಸ್ಥೆ - ನಮ್ಮನ್ನ ಪ್ರತಿನಿಧಿಸೋ ಹಾಗೆ ಕಾಣಿಸುತ್ತೆ!
ReplyDeleteನಮಸ್ಕಾರ ಭಟ್ಟರೇ;ನಿಮ್ಮ ಕಾವ್ಯಮಯ ಪ್ರತಿಕ್ರಿಯೆ ಚೆನ್ನಾಗಿದೆ.ಧನ್ಯವಾದಗಳು.
ReplyDeleteದುಡ್ಡು ಹೊಡೆಯೋ ಬ್ರಷ್ಟ ರಾಜಕಾರಣಿಗಳು ಅಧಿಕಾರಿಗಳು ಸೇರಿದರೆ ರಸ್ತೆ ಮಾಡೋ ಗುತ್ತಿಗೆದಾರ ಸಿಗೊಲ್ಲ ನುಂಗಣ್ಣ ಸಿಗ್ತಾನೆ. ನುಂಗಣ್ಣನ ರಸ್ತೆ ಹೀಗೆ!
ReplyDeleteಚೆಂದದ ಅಣುಕು!
ಪಕ್ಕದ ರಾಜ್ಯ ಗೋವೆಯಲ್ಲೂ ನಿರಂತರ ಮಳೆ ಬರುತ್ತೆ ಆದರೆ ಹಳ್ಳಿ ಹಳ್ಳಿಯ ರಸ್ತೆಯೂ ಸುಂದರವಾಗಿದೆ ಮತ್ತು ನೀರು ನಿಂತದ್ದು ಕಾಣುವದಿಲ್ಲ.
ನಮ್ಮ ರಾಜ್ಯ ಲೂಟಿಯಲ್ಲಿ ಈಗ ನ೦ಬರ ೧!!!
ಮೂರ್ತಿ ಸರ್,
ReplyDeleteಸಮಾಜದಲ್ಲಿನ ಒಂದು ಅವ್ಯವಸ್ತೆಯನ್ನ ಬಹಳ ಸುಂದರವಾಗಿ ಕವನದಲ್ಲಿ ಹಿಡಿದಿಟ್ಟಿದ್ದಿರಿ ... ನಿಮ್ಮ ಕವನ ಓದಿದರೆ ಸಾಕು ರಸ್ತೆಯ ಕತೆ ತಿಳಿಯುತ್ತೆ .. ತುಂಬಾ ಚೆನ್ನಾಗಿ ಬರ್ದಿದೀರಿ
Murthy Sir,
ReplyDeleteTumbaa chennagide nimma kavana..prastutakke hidida kannadiyantittu..Very Nice....
Sir innond Vishya...Tejash[wi avra books ide anta helidri...nanage odalu sigbahudaa?