'ಸಾರ್ ,ದೇವರಾಣೆಗೂ ಹೇಳ್ತೀನಿ ,ನಾನು ಏನೂ ತಿನ್ನೊಲ್ಲಾ ,ಆದರೂ ಈ ಹಾಳು ಶುಗರ್ರು ಕಮ್ಮಿನೇ ಆಗ್ತಿಲ್ಲಾ!ಕಣ್ಣಿನ ಆಪರೇಶನ್ ಮಾಡಿಸಬೇಕು,ಬೇಗ ಈ ಶುಗರ್ ಒಂದು ಕಮ್ಮಿ ಮಾಡಿಕೊಡಿ'ಎಂದು ಅಲವತ್ತು ಕೊಂಡಳು ಅರವತ್ತರ ಮುನಿಯಮ್ಮ.'ಏನೂ ತಿನ್ನದೇ ಶುಗರ್ ಹೇಗೆ ಜಾಸ್ತಿಯಾಗುತ್ತಮ್ಮಾ!ಅದೇನು ಗಾಳಿಯಿಂದ ಬರುತ್ಯೆ ?ನೀನೆಲ್ಲೋ ಮಾತ್ರೆ ತೊಗೊಳ್ಳೋದು ಬಿಟ್ಟಿರಬೇಕು'ಎಂದೆ .'ಅಯ್ಯೋ !ನಾನ್ಯಾಕೆ ಬಿಡಲೀ ಸಾರ್ ಮಾತ್ರೆನಾ!ಆ ಮಾತ್ರೇನೆ ಸರಿ ಇಲ್ಲಾ ,ಬೇರೆ ಯಾವುದಾದರೂ ಒಳ್ಳೇ ಮಾತ್ರೆ ಬರೆದು ಕೊಡಿ 'ಎಂದು ಮುನಿಸಿಕೊಂಡಳು ಮುನಿಯಮ್ಮ! 'ಎಲ್ಲೋ ಮಾವಿನ ಹಣ್ಣಿನ ಸೀಕರಣೆ,ಒಬ್ಬಟ್ಟು, ಹಲಸಿನ ಹಣ್ಣು ಎಲ್ಲಾ ಚೆನ್ನಾಗಿ ತಿಂದಿದ್ದೀಯಾ ಅಂತ ಕಾಣುತ್ತೇ'ಎಂದು ಇನ್ನಷ್ಟು ಕೆರಳಿಸಿದೆ. ಮುನಿಯಮ್ಮ ಮತ್ತಷ್ಟು ಮುನಿಸಿಕೊಂಡಳು !'ಪಥ್ಯ ಎಲ್ಲಾ ಸರೀಗೆ ಮಾಡ್ತಾ ಇದ್ದೀನಿ ಸಾರ್.ಅನ್ನ ತಿನ್ನಲ್ಲಾ,ಸಿಹಿ ಪದಾರ್ಥ ಮುಟ್ಟೋದಿಲ್ಲಾ !ಆದರೂ ಯಾಕೆ ಸಾರ್ ಶುಗರ್ ಕಮ್ಮಿ ಆಗ್ತಾ ಇಲ್ಲಾ?'ಎಂದು ಪಾಟಿಸವಾಲು ಹಾಕಿದಳು ಮುನಿಯಮ್ಮ.'ಬೆಳಿಗ್ಗೆಯಿಂದಾ ರಾತ್ರೀವರೆಗೂ ಏನೇನು ತಿಂತೀಯ ಹೇಳು ಮುನಿಯಮ್ಮ 'ಎಂದೆ ಶಾಂತವಾಗಿ.'ಬರೀಚಪಾತಿ, ಪಲ್ಯ ಬಿಟ್ಟರೆ ಬೇರೇನೂ ತಿನ್ನೊಲ್ಲಾ ಸಾರ್ 'ಎಂದಳು ಮುನಿಯಮ್ಮ.(ಇಟ್ಟಿಗೆ ಸಿಮೆಂಟು ಬ್ಲಾಗಿನ ಪ್ರಕಾಶ್ ಹೆಗಡೆಯವರ 'ಹೆಸರೇ ಬೇಡ'ಪುಸ್ತಕದಲ್ಲಿ ಅದೇ ತಾನೇ ಚಪಾತಿ ಪ್ರಸಂಗ ಓದಿದ್ದರಿಂದ ಚಪಾತಿ ಎಂದ ತಕ್ಷಣ ತುಂಬಾ ನಗು ಬಂದಿತ್ತು ಕಷ್ಟಪಟ್ಟು ತಡೆದುಕೊಂಡೆ).'ಸರಿ ಹೇಳು ,ಎಷ್ಟು ಚಪಾತಿ ತಿಂತೀಯ 'ಎಂದೆ.''ಸಾರ್ ಬೆಳಿಗ್ಗೆ ತಿಂಡಿಗೆ ಆರು ಚಪಾತಿ,ಪಲ್ಯ!ಮಧ್ಯಾನ್ನ ಊಟಕ್ಕೆ ಆರು ಚಪಾತಿ, ಪಲ್ಯ!ರಾತ್ರಿ ಊಟಕ್ಕೆ ಆರು ಚಪಾತಿ, ಪಲ್ಯ!ಅಷ್ಟೇಯ'ಎಂದಳು,ಅದೇನು ಮಹಾ ಅನ್ನುವ ಹಾಗೆ!ಲೆಕ್ಕ ಹಾಕಿದೆ.ತಲೆ ಗಿರ್ರೆನ್ನುತ್ತಿತ್ತು ! ಆರ್ ಮೂರ್ ಲಿ ಹದಿನೆಂಟು! ದಿನಕ್ಕೆ ಹದಿನೆಂಟು ಚಪಾತಿ ಪ್ಲಸ್ ಪಲ್ಯ (ಅದೆಷ್ಟು ಕಿಲೋನೋ?) !!ತಿಂದರೆ ಶುಗರ್ ಹೇಗೆ ಕಮ್ಮಿಯಾಗಬೇಕು!!?ಒಳ್ಳೇ ಗರಡೀ ಮನೆ ಗೆ ಹೋಗಿ ವ್ಯಾಯಾಮ ಮಾಡುವವರು ತಿಂದ ಹಾಗೆ ತಿನ್ನುತ್ತಾಳಲ್ಲಾ ಈ ಯಮ್ಮ !!!ಎಂದು ಆಶ್ಚರ್ಯ ವಾಯಿತು.
ಬರೀ ಚಪಾತಿಯದೆ ಲೆಕ್ಕ ಹಾಕಿದರೆ 3000-3600 ಕ್ಯಾಲೋರಿಯಾಗುತ್ತೆ!ಡಯಾಬಿಟೀಸ್ ಇದ್ದವರು ದಿನಕ್ಕೆ 1800 ಕ್ಕಿಂತಾ ಹೆಚ್ಚು ಕ್ಯಾಲೋರಿಯ ಆಹಾರ ತೊಗೋಬಾರದು.ಈ ಮುನಿಯಮ್ಮನಿಗೆ ಕ್ಯಾಲೋರಿ ಲೆಕ್ಕ ಯಾವ ರೀತಿಯಲ್ಲಿ ಹೇಳುವುದು ಅಂತ ಯೋಚಿಸುತ್ತಾ ಕುಳಿತೆ.
Very Nice write-up...
ReplyDeleteನಿಜ ಸರ್ , ಅನೇಕ ಶುಗರ್ ಪೇಶಂಟ್ ಮಾಡೋದೆ ಹಾಗೆ . ಅನೇಕ ವೈದ್ಯರೂ ಕೂಡ ಸರಿಯಾಗಿ ಅವರಿಗೆ ಆಹಾರಕ್ರಮ ತಿಳಿಸೋಲ್ಲ. ಇನ್ನೊಂದು ತಮಾಷೆಯೆಂದರೆ ನಮ್ಮ ಊರಕಡೆ ಸಕ್ಕರೆಕಾಯಿಲೆಯವರು ಸಕ್ಕರೆಯನ್ನು ಮಾತ್ರ ತಿನ್ನಬಾರದು, ಬೆಲ್ಲ ತಿಂದರೆ ಪರವಾಗಿಲ್ಲ ಅಂತ ತಿಳಿದುಕೊಂಡಿರುವವರೇ ಹೆಚ್ಚು.
ReplyDeleteಬೆಲ್ಲ ತಿ೦ದರೆ ತೊಂದರೆಯಿಲ್ಲ!
ReplyDeleteಮಾತ್ರೆ ತಗೊಂಡರೆ ಏನೆಲ್ಲಾ ತಿನಬೋದು!
ಗೋಧಿ-ರೊಟ್ಟಿ-ಜೋಳ-ರಾಗಿ ಗಳನ್ನ ಸೇವಿಸಿದರೆ ಏನು ಆಗೋಲ್ಲ!
ಪಪ್ಪಾಯಿ ತಿಂದರೆ ಸಕ್ಕರೆ ಎರೊಲ್ಲ!
ಇನ್ನು ಹಲವಾರು ಮುದನಂಬಿಕೆಗಳು ಸಕ್ಕರೆ ಕಾಯಲೆಯವರಲ್ಲಿವೆ!
ಅವ್ರಿಗೆ ನಾ ಹೇಳೋದು ಇಷ್ಟೇಯಾ -ನೀವು ತಿನ್ನು ಖಾರದ ಹಸಿಮೆಣಸಿನಕಾಯಿನಲ್ಲೂ ಸಕ್ಕರೆ ಇದೆ ಅ೦ಥಾ!
ಮು೦ದಿನ ಭಾಗಕ್ಕೆ ಕಾಯ್ತಾ ಇದೇವೆ ನಿಮ್ಮ ಉತ್ತರ ಏನು ಅಂಥಾ?
ಸುಮ ಅವರಿಗೆ ನಮನಗಳು.ವಾರಕ್ಕೆ ಎರಡು ಅಥವಾ ಮೂರು ಹೊಸ ಡಯಾಬಿಟಿಸ್ ರೋಗಿಗಳು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕದ ವಿಷಯ.ಸಕ್ಕರೆ ಅಥವಾ ಸಿಹಿ ಮತ್ತು ಅನ್ನ ತಿನ್ನುವುದನ್ನು ಬಿಟ್ಟರೆ ಬೇರೆಲ್ಲವನ್ನೂ ಎಷ್ಟಾದರೂ ತಿನ್ನಬಹುದು ಎನ್ನುವುದು ಸಾಮಾನ್ಯ ಅಭಿಪ್ರಾಯ.ಜನಗಳಿಗೆ ತಿಳಿದವರು ಮತ್ತು ವೈದ್ಯರು ಸರಿಯಾದ ತಿಳುವಳಿಕೆ ನೀಡುವುದೊಂದೇ ದಾರಿ.Awareness and proper education of the public is the only key to prevent diabetes.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteNAVELLA MUNIYAMMAGALE,ASHIKSHITA VIDYAVANTARU. NIMMA BLOGININDA TILUVALIKE NEEDUTTIRUVADAKKE DHANYAVADAGALU. BARAHADA SHYLI CHENNAGIDE. KANNADADALLI ENNASHTU VAIDYAKEEYA LEKHANAGALU NIMMINDA BARALI. DHANYAVADAGALU.
ReplyDeleteಸೀತಾರಾಂಸರ್;ನಮಸ್ಕಾರ.ಡಯಾಬಿಟಿಸ್ ರೋಗಿಗಳಿಗೆ ಡಯಟ್ ಹೇಳುವಾಗ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆ ರೋಗಿಗೆ ತಕ್ಕಂತೆ ಆಹಾರದ ಪ್ರಮಾಣವನ್ನು ಸೂಚಿಸಬೇಕಾಗುತ್ತದೆ.ಆದರೂ ಕೆಲವೊಂದು ಸಾಮಾನ್ಯ ನಿಯಮಗಳೂ ಇವೆ.ಸಕ್ಕರೆ ಮತ್ತು ಸಿಹಿತಿಂಡಿಗಳು,ಸಿಹಿ ಹಣ್ಣುಗಳು,ಕರಿದ ಪದಾರ್ಥಗಳು,ಡ್ರೈ ಫ್ರೂಟ್ಸ್,ಬೇಕರಿ ಪದಾರ್ಥಗಳು,ಸಿಹಿ ಪಾನೀಯಗಳು ಇಂತವುಗಳಲ್ಲಿ ಹೆಚ್ಚು ಕ್ಯಾಲೋರಿಗಳಿರುವುದರಿಂದ ಇವನ್ನು ಸೇವಿಸದಿರುವುದು ಒಳ್ಳೆಯದು.ಸಾಮಾನ್ಯವಾಗಿ ಮಧುಮೇಹಿಗಳ ಆಹಾರ 1800-2000 ಕ್ಯಾಲೋರಿಗಳಿಗೆ ಸೀಮಿತಗೊಳಿಸುತ್ತಾರೆ.ಪ್ರತಿಯೊಬ್ಬ ರೋಗಿಯೂ ಅವರ ವೈದ್ಯರ ಹತ್ತಿರ ಅಥವಾ ಆಹಾರ ತಜ್ಞರ ಹತ್ತಿರ ಸರಿಯಾದ ಸಲಹೆ ಪಡೆಯುವುದು ಉತ್ತಮ.
ReplyDeleteನಮಸ್ಕಾರ ಹೇಮಚಂದ್ರ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನೀವು ಹೇಳಿದ ವಿಷಯಗಳ ಅನುಷ್ಟಾನಕ್ಕೆ ನನ್ನ ಸಹಮತವಿದೆ.ಆ ದಿಶೆಯಲ್ಲಿ ನನ್ನ ಪ್ರಯತ್ನ ಜಾರಿಯಲ್ಲಿರುತ್ತದೆ.
ReplyDeleteತುಂಬಾ ಸಂದಿಗ್ಧ ಪರಿಸ್ಥಿತಿ ಸಾರ್...ಮುನಿಯಮ್ಮ ಮುನಿಸ್ಕಂಡು ಮಾರೆಮ್ಮ ಆಗ್ಬಿಟ್ರೆ?
ReplyDeleteನಾರಾಯಣ್ ಭಟ್ ಸರ್;ನಮಸ್ಕಾರ!ಸಂಧಿಗ್ದವೇನಿಲ್ಲಾ ಭಟ್ಟರೇ ,ಮಾರಮ್ಮನಿಗೆ ಬೇರೆ ಮಾತ್ರೆ!ಅಷ್ಟೇ.ಹಾ ---ಹಾ ---ಹಾ.
ReplyDeleteಬರೆಹ ಚೆನ್ನಗಿದೆ ಸಾರ್.
ReplyDeleteವೆಂಕಟ ಕೃಷ್ಣ ಸರ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಪ್ಪದೆ ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.
ReplyDeleteಮುನಿಯಮ್ಮ ಚೆನ್ನಾಗೈತೆ ಕಥೆ ಸರ್
ReplyDeleteಮುಂದಿನದು ಯಾವಾಗ
ಗುರೂಸರ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಇದೀಗ ತಮ್ಮ ಬ್ಲಾಗಿಗೆ ಹೋಗಿ ಬಂದೆ. ರೋಗಿಗಳನ್ನು ಚಿಕಿತ್ಸೆ ಮಾಡುವಾಗಿನ ಅನುಭವಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ ಇದು.ನಿಮಗೆಲ್ಲರಿಗೂ ಇಷ್ಟವಾಗಬಹುದು ಎಂದುಕೊಂಡಿದ್ದೇನೆ.ನಮಸ್ಕಾರ.
ReplyDeleteಹ್ಹ ಹ್ಹ ..ಆರ್ ಮೂರ್ ಲಿ ಹದಿನೆಂಟು!
ReplyDeleteವನಿತಾ ಮೇಡಂ;ಈ ಕ್ಯಾಲುಕ್ಯುಲೇಟರ್ ಯುಗದಲ್ಲಿ ಈ ರೀತಿ ಮಗ್ಗಿ ಹೇಳಿಕೊಂಡು ಲೆಕ್ಕ ಹಾಕೋದು ಅಪರೂಪ ಆಲ್ವಾ?ನಾವೆಲ್ಲಾ ಸ್ವಲ್ಪ ಹಳೇ ತಲೆಗಳು.ಕನ್ನಡ ಶಾಲೆಯಲ್ಲಿ ಮಗ್ಗಿ ಬಾಯಿ ಪಾಠ ಮಾಡಿದವರು.ಹಳೇ ಅಭ್ಯಾಸ !ಆರ್ ಮೂರ್ ಲಿ ಹದಿನೆಂಟು!ಇದು ಕನ್ನಡದ ನಂಟು! ಧನ್ಯ ವಾದಗಳು.
ReplyDeleteಹ್ಹ ಹ್ಹ ಹ್ಹಾ........
ReplyDeleteಮುನಿಯಮ್ಮನ ಮುನಿಸಿಗೇನು ಮದ್ದು ಡಾಕ್ಟ್ರೆ?
ಚನ್ನಾಗಿದೆ, ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.
ಪ್ರವೀಣ್;ನಮಸ್ಕಾರ.ಮುನಿಯಮ್ಮನ ಮುನಿಸಿದ್ದದ್ದು ತನ್ನ ಶುಗರ್ ಮೇಲೇ.ಅದನ್ನು ಕಮ್ಮಿ ಮಾಡಿಕೊಟ್ಟ ಮೇಲೆ ಕಣ್ಣಿನ ಆಪರೇಶನ್ ಮಾಡಿಸಿಕೊಂಡು ಈಗ ತಣ್ಣಗಿದ್ದಾಳೆ .ತನ್ನ ಒಂದುಹೊತ್ತಿನ ಚಪಾತಿಯ ಸಂಖ್ಯೆಯನ್ನು ಆರರಿಂದ ಮೂರಕ್ಕೆ ಇಳಿಸಿದ್ದಾಳೆ.ಶುಗರ್ ಕಂಟ್ರೋಲ್ ನಲ್ಲಿದೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteನಿಮ್ಮ ಮಾತು ನಿಜ ಸರ್. ಅದರೂ ಡಯಾಬಿಟಿಸ್ ವ್ಯಕ್ತಿಗಳಿಗೆ ಕಡಿಮೆ ಕ್ಯಾಲೋರಿ ಆಹಾರದ ಬದಲು ತಡವಾಗಿ ಜೀರ್ಣವಾಗುವ (complex carbohydrates) ಆಹಾರ ಉತ್ತಮ.ಯಾಕೆಂದರೆ ಈ ತರಹದ ಆಹಾರ ತಡವಾಗಿ ಜೀರ್ಣವಾಗಿ ನಿಧಾನವಾಗಿ ಗ್ಲುಕೋಸ್ ನ ರಕ್ತಕ್ಕೆ ನೀಡುತ್ತವೆ.ಈಗೆ ತಡವಾಗಿ ರಕ್ತಕ್ಕೆ ಗ್ಲುಕೋಸ್ ಸೇರುವುದರಿಂದ ಅತಿಯಾದ ಗ್ಲುಕೋಸ್ ಇಂದ ಆಗುವ ಪರಿಣಾಮಗಳು ಕಡಿಮೆಯಾಗುತ್ತವೆ.ಇಂತಹ ಆಹಾರ ಡಯಾಬಿಟಿಸ್ ಬರದಂತೆ ತಡೆಯುವುದರ ಜೊತೆಗೆ ಕಡಿಮೆ ಮಾಡಲು ಉಪಕರಿಯಗುತ್ತವೆ. ಇಂತಹ ಆಹಾರವನ್ನ LOW GLYCEMIC FOODS ಅಂತ ನಾವು ಕರೆಯುವುದು.ನಾನು ಈ ವಿಷಯವಾಗಿ ಸಂಶೋದನೆ ಮಾಡುತ್ತಿರುವೆ.LOW GLYCEMIC ಫೂದ್ಸ್ ಈಗಾಗಲೇ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು ನೀವು ನಿಮ್ಮ ರೋಗಿಗಳಿಗೆ prescribe ಮಾಡುವುದು ಉತ್ತಮ.ಇನ್ಸುಲಿನ್ ನೀಡುವ ಜೊತೆಗೆ ಇದು ಉತ್ತಮ ಆಯ್ಕೆ.
ReplyDeleteನಮಸ್ಕಾರ ಸರ್,
ReplyDeleteಒಳ್ಳೆ ಬರಹ... ನಗು ಬಂತು..:-)
ನೋಡಿ ಅಮ್ಮ , ವಯಸ್ಸು ಆಗುತ್ತಿದ್ದಂತೆ ಕಡಿಮೆ ತಿನ್ನಬೇಕು.. ಅದಕ್ಕೆ ನಿಮ್ಮ ಮೂರು ಹೊತ್ತಿನ ಆರು ಚಪಾತಿಯನ್ನು ಎರಡಕ್ಕೆ ಇಳಿಸಿ ಅಂತ ಹೇಳಿ ನೋಡಿ ಸರ್...
:) ಆಮೇಲೆ ಯಾವರೀತಿ ಮುನಿಯಮ್ಮನಿಗೆ ಅವಳ ತಪ್ಪನ್ನು ತಿಳಿಹೇಳಿದಿರೆಂದೂ ತಿಳಿಸಿ....:)
ReplyDeleteನಿಜ.
ReplyDeleteಪುಸ್ತಕಗಳ ಪಟ್ಟಿ ನೀಡಿದ್ದಕ್ಕೆ ಧನ್ಯವಾದಗಳು.
ನಾನು ಈ ರೀತಿಯ ಪುಸ್ತಕಗಳನ್ನು ಕನ್ನಡದಲ್ಲಿ ಮಾತ್ರ ಓದುತ್ತೇನೆ. ಏನೋ ಇಂಗ್ಲಿಷ್ ನಲ್ಲಿ ಓದಿದರೆ ಅದರ ಜೊತೆ ನನ್ನನ್ನು ಅಳವಡಿಸಿಕೊಳ್ಳಲು ಕಷ್ಟ.
ನಿಮ್ಮ ಪಟ್ಟಿಯಲ್ಲಿ ಇನ್ನಷ್ಟು ಪುಸ್ತಕಗಳಿದ್ದರೆ ದಯವಿಟ್ಟು ಹೇಳಿ.
ಧನ್ಯವಾದಗಳು
ಮಹನೀಯರೇ, ಮಿತ್ರ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ| ಗಿರಿಧರ ಕಜೆಯವರು 'ಪ್ರೊಫೆಶನಲ್ ಸೀಕ್ರೆಟ್ಸ್' ಎಂಬ ಪುಸ್ತಕದಲ್ಲಿ ಅನೇಕ ಸಂಗತಿಗಳನ್ನು ಬರೆದಿದ್ದಾರೆ, ಅದರಲ್ಲಿ ಒಂದು ಅವರ ಬಾಯಿಂದಲೇ ನಾನು ಕೇಳಿದ್ದು- ಚಪಾತಿ ತಿನ್ನಿ ಸಾಕು ಅಂದ್ರೆ ಚಪಾತಿ ಊಟವಾದ ಮೇಲೋ ಅಥವಾ ಊಟಕ್ಕಿಂತ ಮೊದಲೋ ಎಂದು ಕೇಳಿದನಂತೆ ಒಬ್ಬಾತ! ಅದೇ ರೀತಿ ಸಕ್ಕರೆ ಎಲ್ಲಿಲ್ಲ ಅಲ್ಲವೇ ? ಕೆಲವರಿಗೆ ಏನನ್ನೂ ತಿಳಿಹೇಳಲು ಸಾಧ್ಯವಾಗುವುದೇ ಇಲ್ಲ, ತಮ್ಮ ಲೇಖನ ಚೆನ್ನಾಗಿದೆ, ನಮಸ್ಕಾರ.
ReplyDeleteThanks for your kind comments Srikanth.Foods which have a high glycemic index like polished rice cause a sudden surge in post prandial blood glucose level and hence they are avoided.All the other foods like wheat,raagi,jowar which have their husk intact are complex carbs with low glycemic index.Never the less they too have to be advised in a limited quantity as per the needs of the diabetic patient.Hence calory count is important.warm regards.
ReplyDeleteದಿವ್ಯಾ ಮೇಡಂ ;ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ನೀವು ಹೇಳಿದ ಮಾತುಗಳನ್ನು ನನ್ನ ವೈದ್ಯಕೀಯ ವೃತ್ತಿ ಜೀವನದ ಕಳೆದ ಮೂವತ್ತನಾಲಕ್ಕು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ .ಆದರೂ ರೋಗಿಗಳು ತಮಗೆ ಅನಿಸಿದ್ದನ್ನೇ ಮಾಡುತ್ತಾರೆ.ಯಾವ ಯಾವ ರೀತಿಯ ರೋಗಿಗಳು ನಮ್ಮ ಬಳಿ ಬರುತ್ತಾರೆ ಎನ್ನುವುದನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ಇದು.ಧನ್ಯವಾದಗಳು.
ReplyDeleteತೇಜಸ್ವಿನಿ ಮೇಡಂ;ನಮಸ್ಕಾರ.ಮುನಿಯಮ್ಮನಿಗೆ ಎಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮನವರಿಕೆ ಮಾಡಿಸಿದ ಮೇಲೆ ತನ್ನ ಚಪಾತಿಗಳ ಗರಿಷ್ಟ ಮಿತಿಯನ್ನು ಮೂರಕ್ಕೆ ಇಳಿಸಿದ್ದಾಳೆ.ಕಣ್ಣಿನ ಆಪರೇಶನ್ ಮಾಡಿಸಿಕೊಂಡು ಈಗ ತಣ್ಣಗಿದ್ದಾಳೆ.ನೀವು ತಣ್ಣಗಿರಿ ಸಾರ್ ಎಂದು ಹರಸುತ್ತಾಳೆ.
ReplyDeleteಬಾಷೆ ಮೇಡಂ;please start reading the books I have mentioned.they are extremely simple and easy to understand.one of my lady colleagues who had never read such books before has read more than over fifty such books and thanks me often for having introduced her to these books.I specially recommend oshos meditation seris and stillness speaks.they are just class.Regards.
ReplyDeleteV.R.Bhat sir;thanks for your kind comments.please keep coming.warm regards.
ReplyDeleteya sir i got u r point. what i am going to tell is usually if we consume low calori diet we fell exhaust after some time like u r patient raju.commercially avilable products such as ooat meal and many other were balanced diet they rich in dietrey fiber. after eating these we feel stomach fullness and we get enery for longer duration.on these products they mention how much to take ana when to take so their is no confusion for people.usally these were advisable for breakfast
ReplyDeleteಶ್ರೀಕಾಂತ್ ;ನಮಸ್ಕಾರ.ಓಟ್ ಮೀಲ್ಸ್ ಮತ್ತಿತರ ದುಬಾರಿಯಾದ ಆಹಾರವನ್ನು ಕೊಳ್ಳಲು ಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ.ದಿನನಿತ್ಯದ ಆಹಾರವನ್ನೇ ಇತಿಯಲ್ಲಿ ,ಮಿತಿಯಲ್ಲಿ ತಿನ್ನುವುದು ಒಳ್ಳೆಯದು.ಡಯಾಬಿಟಿಸ್ ರೋಗಿಗಳಿಗೆ ಹಸಿವು ಹೆಚ್ಚಾಗಿ ಇರುವುದರಿಂದ ಅವರು ಹಸಿ ತರಕಾರಿ,ಮೊಳಕೆಕಾಳು, ಸ್ವಲ್ಪಪ್ರಮಾಣದಲ್ಲಿ ಪಪ್ಪಾಯಿ ಮತ್ತು ಸೇಬಿನಂತಹ ಹಣ್ಣು ತಿನ್ನುವುದು ಒಳ್ಳೆಯದು.
ReplyDeleteha ha ha.. channagide...
ReplyDeleteಧನ್ಯವಾದಗಳು ಶಿವಪ್ರಕಾಶ್.
ReplyDeleteMurthy Sir,
ReplyDeleteTumbaa uttama lekhana, odta iruvaaga sihimootra rogigalaagiruva namma tandeyavara nenapaitu...Dhanyavaadagalu...