Wednesday, July 28, 2010

'ನಲ್ಲಿ ಇದೆ,---- ನೀರಿಲ್ಲ!'

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

41 comments:

  1. ಸರ್, ತುಂಬಾ ಚೆನ್ನಾಗಿದೆ (ನಿಜವಾಗಿದೆ).
    ಇಪ್ಪತ್ತು ವರ್ಷಗಳ ಹಿಂದೆ ನೀವು ಬರೆದದ್ದು ಇಂದಿಗೂ ಪ್ರಸ್ತುತ ಅಂದ್ರೆ ಅದು ನಮ್ಮ ದೌರ್ಭಾಗ್ಯವೇ ಸರಿ.
    ನಾವು ಬದಲಾವಣೆ ಕಂಡೆ ಇಲ್ಲ ಅಲ್ವಾ ? ಇಪ್ಪತ್ತು ವರ್ಷಗಳು ಉರುಳಿ ಹೋದರು !

    ReplyDelete
  2. ಮಾರ್ಮಿಕವಾದ ಸಾಲುಗಳು..


    ಮನುಷ್ಯರೇನೋ ಸಾಕಷ್ಟಿದ್ದರೂ
    ಮನುಷ್ಯತ್ವವೇ ಕಾಣೋಲ್ಲಾ !


    ಈ ಸಾಲುಗಳು ತುಂಬಾ ಇಷ್ಟವಾಯ್ತು..

    ReplyDelete
  3. ತುಂಬಾ ಪ್ರಸ್ತುತ ಕವನ. "ಮನುಷ್ಯರೇನೋ ಸಾಕಷ್ಟಿದ್ದರೂ
    ಮನುಷ್ಯತ್ವವೇ ಕಾಣೋಲ್ಲಾ !" ಅದ್ಭುತ ಸಾಲುಗಳು. ಪ್ರತಿಯೊಂದು ಸಾಲುಗಳು ನಮ್ಮ ವ್ಯವಸ್ಥೆಯ ಗೋಡೆಯನ್ನು ಚೆನ್ನಾಗಿ ಅಣಕಿಸುತ್ತವೆ.

    ReplyDelete
  4. ಹೌದು.. ಇಲ್ಲಿ ಎಲ್ಲ ಇದ್ದರೂ ಏನೂ ಇಲ್ಲ.. ಆದ್ರೆ ಈ ಕವನದಲ್ಲಿ ಎಲ್ಲವೂ ಇದೆ.. ಸೂಪರ್..

    ReplyDelete
  5. ತು೦ಬಾ ಚನ್ನಾಗಿದೆ..
    ಇದೆ ಆದರೆ ಉಪಯೋಗಕ್ಕಿಲ್ಲ...ಹಣೆ ಇದೆ ಹಣೆಬರಹ ಸರಿಯಿಲ್ಲ.....!
    ಸು೦ದರ ಸಾಲುಗಳು..

    ReplyDelete
  6. ತುಂಬಾ ಚನ್ನಾಗಿದೆ ಕವನ ...ಉತ್ತಮ ಸಂದೇಶ

    ReplyDelete
  7. ಕವನದಲ್ಲಿಯ ವ್ಯಂಗ್ಯ ಹರಿತವಾಗಿದೆ, ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

    ReplyDelete
  8. ಕವನದಲ್ಲಿ ವಾಸ್ತವದ ಚಿತ್ರಣ... ಚೆನ್ನಾಗಿದೆ.

    ReplyDelete
  9. ನಾಗರಾಜ್ ರವರಿಗೆ;ನಮನಗಳು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ ಅನಿಸುತ್ತಿದೆ.1965 ರಲ್ಲಿ ನಾವು ಏಳನೇ ತರಗತಿಯಲ್ಲಿದ್ದಾಗ ಕಡಲೇಕಾಯಿ ಎಣ್ಣೆ ಒಂದೂವರೆ ರೂಪಾಯಿ ಇದ್ದದ್ದು ಕೇವಲ 75 paise ಜಾಸ್ತಿಯಾಗಿದ್ದಕ್ಕೆ ,ಜೀವನ ಮಾಡೋದು ಹೇಗೆ ಎಂದು ನಮ್ಮ ಟೀಚರ್ ಗಳು ತಮ್ಮೊಳಗೇ ಚರ್ಚೆಮಾಡುತ್ತಿದ್ದದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

    ReplyDelete
  10. ಆಕಾಶಬುಟ್ಟಿಯವರಿಗೆ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  11. ಸೀತಾರಾಮ್ ಸರ್ ;ನಮಸ್ಕಾರ.ಸೂಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ದಿಲೀಪ್ ಹೆಗ್ಡೆಯವರಿಗೆ;ನಮಸ್ಕಾರ.ತಮ್ಮ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಚುಕ್ಕಿ ಚಿತ್ತಾರ;ಅವರಿಗೆ ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. ಶ್ರೀಕಾಂತ್ ಅವರಿಗೆ ನಮಸ್ಕಾರ.ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ಡಾ. ಸರ್,
    ನೀವು ಬರೆದ ಸಾಲುಗಳು ಎಂದಿಗೂ ಪ್ರಸ್ತುತವಾಗೆ ಇರುತ್ತವೆ ಎನಿಸುತ್ತದೆ.... ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್......

    ReplyDelete
  16. ಕವನಗಳು ವಾಸ್ತವಿಕತೆಗೆ ತು೦ಬಾ ಹತ್ತಿರವಿವೆ ಡಾ. ಮೂರ್ತಿ ಸರ್ . ಇಪ್ಪತ್ತು ವರುಷದ ನ೦ತರವೂ ಅದೇ ಪರಿಸ್ಥಿತಿಯೆದೆ ಎನ್ನುವುದೂ ಕಠೋರ ಸತ್ಯ.

    ಶುಭಾಶಯಗಳು
    ಅನ೦ತ್

    ReplyDelete
  17. ಕವನ ಅರ್ಥಗರ್ಭಿತವಾಗಿದೆ.. ಎಲ್ಲ ಸೌಲಭ್ಯಗಳಿದ್ರು ಎಲ್ಲರಿಗೂ ಅದು ಬೇಕಾದ ಸಮಯದಲ್ಲಿ ಸಿಗ್ತಿಲ್ಲ... ಚುಕ್ಕಿಚಿತ್ತಾರ ಅವ್ರು ಹೇಳಿದಹಾಗೆ ಹಣೆ ಇದೆ ಹಣೆಬರಹ ಸರಿ ಇಲ್ವೇ?

    ReplyDelete
  18. ಹಾಡು ಹಳೆಯದಾದರೇನು, ಭಾವ ನವ ನವೀನ ಅನ್ನಬಹುದೇ...

    ReplyDelete
  19. ELLA EDE, YAVUDOO SIGODILLA,AASE KETTADU ENDU MAHIMARU HELILLAVE? ELLAROO SANTARAGABEKEMBUDE
    NAMMANNU AALUVAVARA AAPEKSHE ERABAHUDU.
    5NEYA NUDI SUPERB.

    ReplyDelete
  20. ಸುನಾತ್ ಸರ್ ಅವರಿಗೆ;ನಮಸ್ಕಾರಗಳು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  21. ಮನಮುಕ್ತಾ ಮೇಡಂ;ಕವನದಲ್ಲಿ ವಾಸ್ತವದ ಚಿತ್ರಣವಿದೆ ಎಂದಿದ್ದೀರಿ.ಧನ್ಯವಾದಗಳು.

    ReplyDelete
  22. ದಿನಕರ ಮೊಗೇರಸರ್ ;ಕವನ ಎಂದಿಗೂ ಪ್ರಸ್ತುತ ಎಂದು ಹೇಳಿದ್ದೀರಿ.ಧನ್ಯವಾದಗಳು.

    ReplyDelete
  23. ಅನಂತ್ ರಾಜ್ ಅವರಿಗೆ;ನಮಸ್ಕಾರ.ಕವನ ವಾಸ್ತವಿಕತೆಗೆ ಹತ್ತಿರ ಎಂದಿದ್ದೀರಿ.ಧನ್ಯವಾದಗಳು ಸರ್.

    ReplyDelete
  24. ಪ್ರಗತಿ ಮೇಡಂ;ಕವನ ಅರ್ಥ ಗರ್ಭಿತವಾಗಿದೆ ಎಂದಿದ್ದೀರಿ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  25. ನಾರಾಯಣ್ ಭಟ್ ರವರಿಗೆ;ನಮಸ್ಕಾರ.'ಹಾಡು ಹಳೆಯದಾದರೇನು ಭಾವ ನವ ನವೀನ'ಎಂದಿದ್ದೀರಿ.ಹಳೆಯ ಹಾಡಿಗೆ ಹೊಸ ರೀತಿಯ ಪ್ರತಿಕ್ರಿಯೆ!ಧನ್ಯವಾದಗಳು.

    ReplyDelete
  26. ಹೇಮಚಂದ್ರ;ನಮಸ್ಕಾರ.ಇನ್ನೂ ಇಪ್ಪತ್ತು ವರುಷಗಳಾದರೂ ಪರಿಸ್ಥಿತಿ ಹೀಗೇ ಇರುತ್ತೇನೋ!ಅಲ್ಲವೇ?ನಿಮಗಿಷ್ಟವಾದ ಸಾಲುಗಳು ನಾನೂ ಇಷ್ಟಪಟ್ಟ ಸಾಲುಗಳು.ಧನ್ಯವಾದಗಳು.

    ReplyDelete
  27. ಸ್ವಾಮೀ, ಹೆಸರಿಗೆ ಮಾತ್ರ ಬದುಕಬೇಕಾದ ಕಾಲವೇ ಇದಾಗಿದೆ,

    ಮಾತು ಜಾಸ್ತಿ ಆಡಿದರೆ ನಿಮ್ಮ ಮೇಲೆ ಕ್ರಮ,
    ಕಮ್ಮಿ ಆಡಿದರೆ ನೀವೇ 'ವಿಕ್ರಮ' !
    ಅಕ್ರಮಗಳಿಗೆಲ್ಲಾ ಸಕ್ರಮ !
    ಇದು ರಾಜಕಾರಣಿಗಳು ಸಂಚಿ ತುಂಬಿಸಿಕೊಳ್ಳುವ ಕ್ರಮ !

    ReplyDelete
  28. ಭಟ್ ಸರ್;ನೀವು ಹೇಳಿದಂತೆ ಹೆಸರಿಗೆ ಮಾತ್ರ ಬದುಕಬೇಕಾದ ಕಾಲ ಇದಾಗಿದೆ !ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  29. ಅಂದಿಗೂ ಇಂದಿಗೂ ಪ್ರಪಂಚ ಮುಂದುವರಿದಿದೆ ಎಂಬ ಕಲ್ಪನೆ ನಮ್ಮದು. ಆದರೆ ಮೂಲಭೂತ ಸಮಸ್ಯೆಗಳು ಹಾಗೇ ಇವೆಯೆಂಬ ಕಟು ಸತ್ಯ ಮನಸ್ಸನ್ನು ಘಾಸಿ ಗೊಳಿಸಿತು.

    ReplyDelete
  30. ಪ್ರಶಾಂತ್ ಅವರಿಗೆ;ನಮಸ್ಕಾರ.ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  31. ಮೂರ್ತಿ ಸರ್ ...
    ಕವನ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.... ಮಾರ್ಮಿಕವಾದ ಸಾಲುಗಳು

    ReplyDelete
  32. ಶ್ರೀಧರ್ ಅವರಿಗೆ ;ನಮಸ್ಕಾರ.ಕವನ ವಾಸ್ತವಕ್ಕೆ ಹಿಡಿದ ಕನ್ನಡಿ ಎಂದಿದ್ದೀರಿ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  33. ಕವನದ ಕೊನೆಯ ನಾಲ್ಕು ಸಾಲಲ್ಲಿ ಗಮ್ಮತ್ತಿದೆ. ನಮ್ಮ ದೇಶವನ್ನು ಚಿಕ್ಕದಾಗಿ ಆದ್ರೂ ಪರಿಣಾಮಕಾರಿಯಾಗಿ ಬಿಂಬಿಸಿದ್ದೀರಿ

    ReplyDelete
  34. ಸಾಗರಿಯವರಿಗೆ;ನಮನಗಳು.ಕವನದ ಕೊನೆಯ ನಾಲ್ಕು ಸಾಲುಗಳು ಇಷ್ಟವಾಯ್ತು ಎಂದಿದ್ದೀರಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  35. ಜ್ಯೋತಿ ಶೀಗೆಪಾಲ್ ರವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  36. ಧರ್ಮಗಳೋ ಲೆಕ್ಕ ಇಲ್ಲ
    ಅಧರ್ಮ ಅನ್ಯಾಯ ತಪ್ಪಿಲ್ಲ
    ಮನುಷ್ಯರೇನೋ ಸಾಕಷ್ಟಿದ್ದರೂ
    ಮನುಷ್ಯತ್ವವೇ ಕಾಣೋಲ್ಲಾ !

    ಎಂಥಾ ವಿಪರ್ಯಾಸ ಅಲ್ವಾ ಸರ್,
    ಚನ್ನಾಗಿದೆ.

    ReplyDelete
  37. ಪ್ರವೀಣ್ ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  38. Murthy Sir....


    20 varshagala hinde neevu chitrisida chitrana ivaagalu badalaagade iruvudu viparyasave sari,....tumbba uttama kavana...dhanyavadagalu...

    ReplyDelete
  39. ಸರ್ವಕಾಲಕ್ಕೂ ಸಲ್ಲುವ ಕವಿತೆ..
    ತುಂಬಾ ಚೆನ್ನಾಗಿ ಬರೀತೀರಿ.

    ReplyDelete

Note: Only a member of this blog may post a comment.