Thursday, July 15, 2010
'ಬರಡು ಮನಕೆ ಹಸಿರು ಹೊದಿಕೆ'
ನಮ್ಮ ಮನೆಯ ಅನತಿ ದೂರದಲ್ಲೇ ಇದೆ ಈ ಪಾಳು ಬಿದ್ದ ಮನೆ.ಹೆಂಚು ಹಾರಿ ಹೋಗಿ ,ಕಿಟಕಿ ಬಾಗಿಳುಗಳಿಲ್ಲದೆ ಅನಾಥವಾಗಿ ನಿಂತಿದೆ.ಈ ಮನೆಯನ್ನು ನೋಡಿದಾಗಲೆಲ್ಲಾ ಏನೋ ಒಂದು ಅವ್ಯಕ್ತ ಭಾವನೆ . ಈ ಚಿತ್ರದ ಕುರಿತು ಕವಿತೆಯೊಂದನ್ನು ಬರೆಯಬೇಕೆಂದುಕೊಂಡಿದ್ದೇನೆ . ಇನ್ನೂ ಸಫಲತೆ ಸಿಕ್ಕಿಲ್ಲ.ನಮ್ಮ ಸುತ್ತ ಮುತ್ತ ಇರುವ ಹಲವರ ಬದುಕಿಗೂ ,ಈ ಪಾಳು ಬಿದ್ದ ಮನೆಗೂ ಸಾಕಷ್ಟು ಸಾಮ್ಯವಿದೆ ಎನಿಸುವುದಿಲ್ಲವೇ?ಇಲ್ಲೂ ಹಿಂದೊಮ್ಮೆಸಂತಸದ ಬದುಕಿತ್ತಲ್ಲವೇ ?ಎನಿಸುತ್ತದೆ.ಚಿತ್ರಕ್ಕೆ ಶೀರ್ಷಿಕೆ ಏನು ಹಾಕಬೇಕೆಂದು ತಿಳಿಯದೇ,ಶೀರ್ಷಿಕೆಯೊಂದನ್ನು ಸೂಚಿಸುವಂತೆ ಕೋರಿದ್ದೆ.ಹಲವಾರು ಉತ್ತಮ ಶೀರ್ಷಿಕೆಗಳು ಹರಿದು ಬಂದವು.ಶೀರ್ಷಿಕೆ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು.ಶ್ರೀಧರ್ ಅವರು ಕಳಿಸಿದ ಶೀರ್ಷಿಕೆಯನ್ನು ಹಾಕಿದ್ದೇನೆ.ನಿಮ್ಮ ಪ್ರತಿ ಕ್ರಿಯೆಗಳಿಗೆ ಸ್ವಾಗತ.
Subscribe to:
Post Comments (Atom)
"ಅವಶೇಷ"
ReplyDelete"ಮುರಿದ ಮನೆ ಹರಿದ ಬದುಕು"
ಸದ್ಯ ತುರ್ತಿನಲ್ಲಿ ಇಷ್ಟು ನೆನಪಾಯ್ತು.
ಬದುಕು ..............
ReplyDelete"ಮಾಡಿಲ್ಲದ ಮನೆ"
ReplyDelete"ಚೆದುರಿದ ಮಾಡು"
"ಸೂರು ಹಾರಿದ ಬದುಕು"
ಜಗುಲಿಯಲ್ಲೇ ಮುಗಿಲು..
ReplyDeleteಸೂರು ಇಲ್ಲದ ಮೇಲೆ...
ಸೋರುತಿಹುದು ಮನೆಯ...
"ಮರವೇ ಮಾಳಿಗೆ"
ReplyDelete"ಈ ಬಾಳಿಗೆ, ಮನೆಯೊಂದು ಬೇಕು ಬಾಡಿಗೆಗೆ"
paalu mane-habbida kaadu
ReplyDeletemane kaadayuthu
baduku bolaythu
adarenathe-
talapaya bhadra,
gode gatti
ennenu beku?
muchhige haaku-bechhage malagu.
ಹ್ಮ್ಂ... ನಿಜ... ಪಾಳುಬಿದ್ದ ಮನೆ ಹಲವರ ಬದುಕನ್ನೂ ಪ್ರತಿಬಿಂಬಿಸುವಂತಿದೆ. ಆದರೆ ಅದಕೇ ತಾಗಿಗೊಂಡಂತಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಮರದ ಕಡೆ ಕಣ್ಣು ಹಾಕಿಲ್ಲ ಯಾಕೆ? ಅದೂ ಉನ್ನತಿಯ ಸಂಕೇತವನ್ನು ಕೊಡುತ್ತಿದೆಯಲ್ಲಾ.... ಎಲ್ಲಿ ಅವನತಿಯಾಗುವುದೋ ಅಲ್ಲಿಂದಲೇ ಉನ್ನತಿಯ ಉಗಮ ಎನ್ನುವ ಧನಾತ್ಮಕ ಸಂದೇಶ ನನಗೆ ಈ ಚಿತ್ರವನ್ನು ನೋಡಿದಾಗ ಆಯಿತು... ಹಾಗಾಗಿ "ಅವನತಿಯಿಂದುನ್ನತಿಯೆಡೆಗೆ...." ?
ReplyDeleteChitra noditakshan Nanagannisiddu "Baradu manake hasiru hodike" . Nice one sir . Visit my blog as wel.
ReplyDeleteನಾನೇನ ಮಾಡಲಿ ಬಡವನಯ್ಯಾ....
ReplyDeleteಹೇಗಿದೆ? ಎಲ್ಲ ಹೇಳ್ತಾರೆ, ಎಲ್ಲರೂ ಸಂಗ್ರಹಿಸ್ತಾರೆ..ಆದರೆ ಬಡವನ ಬಿದ್ದ ಸೂರು ಎತ್ತೋರು ಯಾರೂ ಇಲ್ಲ ...ಅಲ್ಲವೇ ಡಾ. ಟಿ.ಕೆ.ಎಮ್.
@ಪರಾಂಜಪೆ @ಸೌಮ್ಯ @ಸೀತಾರಾಮ್ @ದಿಲೀಪ್ ಹೆಗ್ಡೆ @ನಾಗರಾಜ್ @ತೇಜಸ್ವಿನಿ @ಶ್ರೀಧರ್ ;ನಿಮ್ಮೆಲ್ಲರಿಗೂ, ಶೀರ್ಷಿಕೆ ಸೂಚಿಸಿದಕ್ಕೆ ಧನ್ಯವಾದಗಳು.ಎಲ್ಲರ ಶೀರ್ಷಿಕೆಗಳೂ ಸಮರ್ಪಕವಾಗಿವೆ.ಚಿತ್ರ ನೋಡಿ ನಿಮ್ಮಲ್ಲಿ ಮೂಡಿದ ಭಾವನೆಗಳ ಬಗ್ಗೆಯೂ ಬರೆಯಬೇಕೆಂದು ಕೋರಿಕೆ.
ReplyDeleteಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮಲ್ಲೂ ಒಳ್ಳೆಯ ಕವಿತ್ವವಿದೆ.ಪ್ರತಿಕ್ರಿಯೆಯೇ ಒಂದು ಕವಿತೆಯಾಗಿ ಹೊರ ಹೊಮ್ಮಿದೆ.ನಮಸ್ಕಾರ.
ReplyDeleteತೇಜಸ್ವಿನಿ ಹೆಗಡೆಯವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ 'ಅವ್ಯಕ್ತ' ಕವಿತೆಯಲ್ಲಿನ ಆ ಒಂಟಿ ಮರ ಸೆಳೆದಂತೆ ಇಷ್ಟೆಲ್ಲಾ ಹಸಿರಿನ ಮಧ್ಯೆಯೂ ಆ ಪಾಳು ಮನೆ ನನ್ನ ಗಮನ ಸೆಳೆಯುತ್ತದೆ.ಏನೋ ಹೇಳ ಬಯಸುತ್ತಿದೆಯೇನೋ ಎನಿಸುತ್ತದೆ.ನಮಸ್ಕಾರ.
ReplyDeleteಶ್ರೀಧರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಸೂಚಿಸಿದ ಶೀರ್ಷಿಕೆ ಇಷ್ಟವಾಯಿತು.ಚಿತ್ರಕ್ಕೆ ಅದೇ ಶೀರ್ಷಿಕೆಯನ್ನೇ ಇಟ್ಟಿದ್ದೇನೆ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.
ReplyDeleteಜಲನಯನದ ಅಜಾದ್ಅವರಿಗೆ;ತಮ್ಮ ಪ್ರತಿಕ್ರಿಯೆ ಸೂಕ್ತವಾಗಿದೆ.ನಾನೇನು ಮಾಡಲಿ ಬಡವನಯ್ಯ!ಎಂದು ಬೇಡುವಂತಿದೆ ಆ ಪಾಳು ಬಿದ್ದ ಮನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteವಸಂತ್;ನಿಮ್ಮ ಶೀರ್ಷಿಕೆ ಕೂಡ ಸಮಂಜಸವಾಗಿದೆ.ಈಗಾಗಲೇ ಶ್ರೀಧರ್ ರವರು ಸೂಚಿಸಿದ 'ಬರಡು ಮನಕೆ ಹಸಿರು ಹೊದಿಕೆ'ಎಂಬ ಶೀರ್ಶಿಕೆಯನ್ನು ಇಟ್ಟಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteNice title for the nice photo .. :)
ReplyDeleteನಮಸ್ಕಾರ ಶಿವಪ್ರಕಾಶ್;ಚಿತ್ರ ನಾನು ತೆಗೆದದ್ದು ,ಟೈಟಲ್ ಶ್ರೀಧರ್ ಅವರದ್ದು.ನಿಮ್ಮ ಪ್ರತಿಕ್ರಿಯೆಗೆ ಧಯವಾದಗಳು.
ReplyDeleteಬರಡು ಮನಕೆ ಹಸಿರು ಹೊದಿಕೆ..ತುಂಬಾ ಚೆನ್ನಾಗಿದೆ.
ReplyDeleteನಿಮ್ಮವ,
ರಾಘು.
Thanks Raaghu;The credit should go to Mr.Sridhar for suggesting a lovely title.ವಸುಧೇಂದ್ರರ ಹೊಸದಾಗಿ ಪ್ರಕಟವಾಗಿರುವ 'ರಕ್ಷಕ ಅನಾಥ'!ಎನ್ನುವ ಪುಸ್ತಕ ಓದುತ್ತಿದ್ದೇನೆ.ಇದ್ದಕ್ಕಿದ್ದ ಹಾಗೇ
ReplyDelete'ರಕ್ಷಕ ಅನಾಥ!'ಎಂಬ ಶೀರ್ಷಿಕೆ ಕೂಡ ಈ ಚಿತ್ರಕ್ಕೆ ಹೊಂದುತ್ತದೆ ಅನಿಸಿತು.ಧನ್ಯವಾದಗಳು.
ಕೃಷ್ಣಮೂರ್ತಿಯವರೆ..
ReplyDeleteಸುರಿವ ಮಳೆ..
ಬಿಸಿಲು..
ಗಾಳಿಗಿಲ್ಲ...ಮುಚ್ಚಿಗೆ
ಬರಡು
ಬದುಕಿಗೆ..
ಹಸಿರು ಹೊದಿಕೆ..
ಬರಿ..
ಬರಿದು..
ಕನಸು ಕಾಣುವ
ಬಯಕೆ....
how is dis?
ಸಖತ್ ಪ್ರಕಾಶಣ್ಣ.ನಿಮ್ಮ ಕವಿತಾ ಶಕ್ತಿ,ಕಲ್ಪನಾ ಶಕ್ತಿ ಅದ್ಭುತ!ಆದರೆ ನಿಮ್ಮ ಬ್ಲಾಗ್ ನಲ್ಲಿ ನೀವು narrate ಮಾಡುವ ರೀತಿ ಇದೆಯಲ್ಲಾ!ಅದು ಅದ್ವಿತೀಯ!solid concrete!ನೀವು ತಣ್ಣಗೆ ಕಥೆ ಹೇಳಿ ಕುತೂಹಲ ಉಳಿಸಿ ಬಿಡುವ ರೀತಿ ನನಗೆ ತುಂಬಾನೇ ಇಷ್ಟ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeletemurida bhaavagalie hasira saantwana....
ReplyDelete