Tuesday, August 9, 2011

"ಹಾಗೇ ಸುಮ್ಮನೇ .......,ಸುಮ್ಮನಿರಬಾರದೇ ?"

ಸಿದ್ಧ ಸಮಾಧಿ ಯೋಗದ ಬಗ್ಗೆ 'ಸುಮ್ಮನಿದ್ದರೆ ಛಳಿಯೂ ನಡುಗುವುದು' ಎನ್ನುವಪುಸ್ತಕ ಬರೆದ ನೆಲ್ಲೀಕೆರೆ ವಿಜಯ್ ಕುಮಾರ್ ಅವರ'ಸುಮ್ಮನಿರಬಾರದೇ'ಎನ್ನುವ ಮತ್ತೊಂದು ಪುಸ್ತಕ ಓದುತ್ತಿದ್ದೆ.ಒಂದು ಹಂತದಲ್ಲಿ 'ನಮ್ಮಲ್ಲಿ ಮುಕ್ಕಾಲುವಾಸಿ ಜನಕ್ಕೆ ,ಸುಮ್ಮನಿರುವುದೂ ಎಷ್ಟೊಂದು ಪ್ರಯಾಸಕರವಲ್ಲವೇ!!?'ಎನಿಸಿತು.'We are not human beings,We are human doings"ಎನ್ನುವ ಎಲ್ಲೋ ಓದಿದ ವಾಕ್ಯ ನೆನಪಾಯಿತು.ತಲೆಯಲ್ಲಿ ಸದಾ ಕಾಲ ಕೋರ್ಟಿನ ವಿಚಾರಣೆ ನಡೆಯುತ್ತಿರುತ್ತದೆ !!ಎಷ್ಟೊಂದು ತರ್ಕ!ಎಷ್ಟೊಂದು ವಿತರ್ಕ!!'ಅವನು ಮಾಡಿದ್ದು ಸರಿ,ಇವಳು ಮಾಡಿದ್ದು ತಪ್ಪು.ಅವನು ಹಾಗೆಹೇಳಬಾರದಿತ್ತು.ಅವಳು ಹಾಗೆಮಾಡಬಾರದಿತ್ತು'.ಮನಸ್ಸು ಸದಾಕಾಲ ಹೀಗೇಕೆ ಕೊತ ಕೊತನೆ ಕುದಿಯುತ್ತಿರುತ್ತದೆ!!?Why should we get so upset about things beyond our control?ನಾವೇನು ಜಗತ್ತಿಗೆ ನ್ಯಾಯಾಧೀಶರೇ!?ಎಲ್ಲಾ ಕೆಲಸ ಬಿಟ್ಟು ,ತೀರ್ಪು ನೀಡುವ ಕೆಲಸಕ್ಕೇಕೆ ಕೈ ಹಾಕಬೇಕು!?ತೀರ್ಪನ್ನು ನೀಡುವ,ಅದನ್ನು ಅನುಷ್ಠಾನಕ್ಕೆ ತರುವ 'ಕಾಣದ ಕೈಯೊಂದು'ಕೆಲಸ ಮಾಡುತ್ತಿದೆ ಎನ್ನುವ ನಂಬಿಕೆಯಷ್ಟೇ ನಮಗೆ ಸಾಲದೇ? ಆಗಿದ್ದನ್ನು ಶಾಂತ ಮನಸ್ಸಿನಿಂದ 'ಅದು ಹೀಗಾಗಿ ಬಿಟ್ಟಿದೆ 'ಎಂದು ಒಪ್ಪಿಕೊಂಡು ,ಆಗಿ ಹೋಗಿದ್ದಕ್ಕೆ ಪರಿಹಾರ ಕೈಗೊಳ್ಳಲು ಕಾರ್ಯ ನಿರತರಾಗುವುದೊಂದೇ ನಾವು ಮಾಡ ಬೇಕಾದ ಕೆಲಸವಲ್ಲವೇ?ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇಡುವುದೇ ನಮ್ಮ ಪ್ರಮುಖ ಕೈಂಕರ್ಯ ವಾಗಬೇಕಲ್ಲವೇ?
ಟೀ ಕುಡಿಯುವಾಗ ಕೈ ಜಾರಿ ಟೀ ಕಪ್ಪು ಸಾಸರಿನ ಸಮೇತ ಕೆಳಗೆ ಬಿದ್ದಿದೆ.ನೆಲದ ಮೇಲೆ ಚೆಲ್ಲಿದ ಟೀ ಜೊತೆಗೆ ಪಿಂಗಾಣಿಯ ಚೂರುಗಳು.ಬಿಸಿ ಬಿಸಿ ಟೀ ಚೆಲ್ಲಿದ್ದಕ್ಕೆ ತಲೆ ಬಿಸಿ ಮಾಡಿಕೊಳ್ಳದೆ ,ಆ ಒಡೆದ ಚೂರುಗಳನ್ನು ತೆಗೆದು ಹಾಕಿ,ಚೆಲ್ಲಿದ ಟೀ ಯನ್ನು ಬಟ್ಟೆಯಿಂದ ಒರೆಸಿ,ಏನೂ ಆಗದ ಹಾಗೆ ಇನ್ನೊಮ್ಮೆ ಟೀ ಮಾಡಿ ಕುಡಿದು ಬಿಡಿ ಅಷ್ಟೇ!!
ಇನ್ನೊಮ್ಮೆ ಟೀ ಮಾಡಲು ಮನೆಯಲ್ಲಿ ಹಾಲಿಲ್ಲವೇ?ಆರಾಮಾಗಿ ಸುಮ್ಮನಿದ್ದುಬಿಡಿ.ಈ ಮನಸ್ಥಿತಿ ಯನ್ನು ಎಲ್ಲಾ ಸಂದರ್ಭಗಳಲ್ಲೂ ಅಳವಡಿಸಿಕೊಳ್ಳಲು  ಸಾಧ್ಯವಿಲ್ಲವೇ?ಸಾಧಿಸುವ ಪ್ರಯತ್ನ ಮಾಡಬಹುದಲ್ಲವೇ?ಇಗೋ ಹೊರಟೆ.ನಾನೂ ನನ್ನ ಸಾಧನೆಯ ಹಾದಿಯಲ್ಲಿ ಪ್ರಯಾಣ ಶುರುಮಾಡುತ್ತೇನೆ.................ನಮಸ್ಕಾರ.

14 comments:

  1. NRK;Things which are simple are really good.Thanks for your kind comments.

    ReplyDelete
  2. ನಾನೂ ನೆಲ್ಲೀಕೆರೆ ವಿಜಯ್ ಕುಮಾರ್ ಅವರ'ಸುಮ್ಮನಿರಬಾರದೇ'ಎನ್ನುವ ಪುಸ್ತಕ ಓದುತ್ತಿದ್ದೇನೆ.ಮತ್ತೊಂದು ಪುಸ್ತಕ 'ಒಳ್ಳೆಯವರಾಗುವ ಕೆಟ್ಟ ಚಟವನ್ನು ಬಿಟ್ಟುಬಿಡಿ !' ಓದಿದೆ. 'ನೈಷ್ಕರ್ಮ' ಎಷ್ಟೊಂದು ಉತ್ತಮವಾದದ್ದು ಅಲ್ಲವೇ? ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
  3. ಡಾಕ್ಟ್ರೇ,
    ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಾವು ಹೋಗಿದ್ದೇವು. ಏಕೆಂದರೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮ್ಮ ಸಿದ್ದ ಸಮಾಧಿ ಯೋಗದ ಸಾಧಕರು. ನಮ್ಮ ಕುಟುಂಬವೂ ಈ SSY ಸಾಧಕರಾಗಿ ಕಳೆದ ಹತ್ತು ವರ್ಷದಿಂದ ಅನುಭವ ಪಡೆದುಕೊಳ್ಳುತ್ತಿದ್ದೇವೆ. ಮತ್ತೆ ನಮ್ಮ ಗುರೂಜಿಗಳ ಕಾರ್ಯ-ಪ್ರಕ್ರಿಯೆಗಳು, ಅವರ ವಾಣಿಯನ್ನೇ ಈಗ ಪುಸ್ತಕ ರೂಪದಲ್ಲಿ ತಂದಿರುವ ನೆಲ್ಲಿಕೆರೆ ವಿಜಯಕುಮಾರ್ ಕೂಡ ಒಬ್ಬ ಸಾಧಕರು. ಆಂಗ್ಲ ಭಾಷೆಯಲ್ಲಿರುವ ನಮ್ಮ ಗುರೂಜಿಯವರ ಪುಸ್ತಕಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮ್ಮನಿರಬಾರದೇ ನಾವು ಓದಿದ್ದೇವೆ...ಹಾಗೆ ನಡೆದುಕೊಂಡರೆ ಬದುಕು ಎಷ್ಟು ಸುಲಭವಲ್ಲವೇ...ಇಂಥ ಪುಸ್ತಕವನ್ನು ನಮ್ಮ ಬ್ಲಾಗಿಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  4. olleya pustaka parichayisiddakke dhanyavaadagalu dr. sir.

    ananth

    ReplyDelete
  5. ಡಾಕುಟ್ರೆ..

    ನಾನೂ ಕೂಡ ಎಸ್.ಎಸ್.ವಾಯ್. ವಿದ್ಯಾರ್ಥಿ..
    ಈ ಪುಸ್ತಕ ಓದಿರುವೆ.. ತುಂಬಾ ಸೊಗಸಾಗಿದೆ..

    ಮನಸ್ಸಿಗೆ ಬೇಜಾರಾದಾಗ ಇದನ್ನು ತಪ್ಪದೆ ಓದುವೆ..

    ನಿಮ್ಮ ಓದು, ರುಚಿ ಬರಹ ಬಲು ಇಷ್ಟ.. ಇನ್ನಷ್ಟು ಉಣ ಬಡಿಸಿರಿ...

    ಜೋಗದ ಮಳೆಯ ಗದ್ದಲ.. ಅಬ್ಬರದಲ್ಲಿ ಬ್ಲಾಗ್ ಮರೆಯಬೇಡಿ..

    ಪ್ರೀತಿಯಿಂದ...

    ReplyDelete
  6. ನಮಸ್ತೆ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಪುಸ್ತಕದಲ್ಲಿನ ಕೆಲವೊಂದು ವಿಷಯಗಳ ಮಂಡನೆ ಸ್ವಲ್ಪ ಗೊಂದಲವನ್ನು ಉಂಟುಮಾಡುತ್ತವೆ.ಎಲ್ಲವೂ ಸರಿಯಿದೆ ಎಂದು ಒಪ್ಪಿಕೊಳ್ಳಿ ಎನ್ನುತ್ತಾರೆ.ಆದರೆ ಎಲ್ಲವೂ ಸರಿಯಾಗಿಲ್ಲ ಅಥವಾ ಎಲ್ಲವೂ ನಮ್ಮ ವಿಮರ್ಶೆಯ ಪ್ರಕಾರ ಸರಿಯಾಗಿರಬೇಕಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು.ಎಲ್ಲವೂ ನಾವು ಅಂದುಕೊಂಡಂತೆ ಆಗಬೇಕು ಅಥವಾ ನಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವ ಧೋರಣೆ ಯನ್ನು ಮೊದಲು ಬಿಡಬೇಕು.ಮುಖ್ಯವಾಗಿ ನಾವು ಅಂದುಕೊಂಡಂತೆ ಏನಾದರೂ ನಡೆಯದಿದ್ದಾಗ ಮನಸ್ಸು ಅಶಾಂತವಾಗದಂತೆ ನೋಡಿಕೊಳ್ಳುವುದು ಮುಖ್ಯ.

    ReplyDelete
  7. ಶಿವು;ನಾನು 1993ರಲ್ಲಿ S.S.Y.ಮತ್ತು A.M.C.ಮಾಡಿದ್ದೇನೆ.ತತ್ವಗಳು ಸ್ವಲ್ಪ ಮಟ್ಟಿಗೆ ತಿಳಿದಿವೆ.ಆದರೆ ಸಾಧನೆ ನಿರಂತರ ಸಾಗಬೇಕಿದೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  8. ಅನಂತ್ ಸರ್;ತಮ್ಮಂತಹ ತಿಳಿದವರ ಪ್ರತಿಕ್ರಿಯೆ ನಿಜಕ್ಕೂ ಖುಷಿ ಕೊಡುತ್ತೆ.ಧನ್ಯವಾದಗಳು

    ReplyDelete
  9. ಪ್ರಕಾಶಣ್ಣ;ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಿಮಗೆ ನೀವೇ ಸಾಟಿ!ಬರುತ್ತಿರಿ.ನಮಸ್ಕಾರ.

    ReplyDelete
  10. ಹೌದಲ್ಲವೇ..
    ಸುಮ್ಮನಿರುವುದೂ ತುಂಬಾ ಕಷ್ಟ.


    _ನನ್ನ ಬ್ಲಾಗಿಗೂ ಬನ್ನಿ.

    ReplyDelete
  11. ವಿಚಲಿತ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ.ಹೊಸದೇನಾದರೂ ಬಂದಾಗ ಖಂಡಿತ ಬರುತ್ತೇನೆ.

    ReplyDelete
  12. Murthy Sir,

    Ondu uttama pustakada bagge maahiti odagisiddiri..Dhanyavadagalu..

    ReplyDelete
  13. ನೆಲ್ಲಿಕೆರೇ ವಿಜಯಕುಮಾರರ ಇನ್ನೊಂದು ಪುಸ್ತಕ ಶಿಸ್ತಿನ ಬದುಕಿಗೊಂದು ಗುಡ್ ಬೈ ನಾನು ಓದಿದ್ದೇನೆ ಅದು ಚೆನ್ನಾಗಿದೆ. ಬದುಕಿನ ಹಲವು ಸರಳ ಪಾಠಗಳನ್ನ ಶಿದ್ದಿ ಸಮಾಧಿ ಯೋಗದ ಮೂಲಕ ಕಲಿತದ್ದನ್ನು ತಿಳಿಸುವ ಇವರಪರಿ ಅದ್ಭುತ,

    ReplyDelete

Note: Only a member of this blog may post a comment.