Monday, April 30, 2012

"ಉಸಿರಾಟದ ಬಗ್ಗೆ ಸ್ವಲ್ಪಗಮನ ಹರಿಸಿ"

ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಹರಿಸುವುದಿಲ್ಲ.ಅದು ನಮ್ಮ ಗಮನಕ್ಕೆ ಬರದೆ ತನ್ನ ಪಾಡಿಗೆ ತಾನು ನಡೆಯುವ ಕ್ರಿಯೆ.ನಾವು ಸಾಮಾನ್ಯವಾಗಿ ಮಾಡುವ ಉಸಿರಾಟ(Thoracic breathing) ನಮ್ಮ ಶ್ವಾಶ ಕೋಶಗಳ ಮೇಲಿನ ಸ್ವಲ್ಪ ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಕೆಳ ಭಾಗದ ಶ್ವಾಸ ಕೋಶದ ಬಹಳಷ್ಟು ಪುಟ್ಟ ಪುಟ್ಟ ಗಾಳಿಯ ಚೀಲಗಳು (alveoli or air sacks) ತೆರೆದುಕೊಳ್ಳುವುದೇ ಇಲ್ಲ ! ನಮ್ಮ ಗಡಿಬಿಡಿಯ ದಿನಚರಿಯಲ್ಲಿ ನಮಗೆ ಸರಿಯಾಗಿ ಉಸಿರಾಡಲೂ ಪುರಸೊತ್ತಿಲ್ಲ!! ಬಹಳಷ್ಟು ರೋಗಗಳನ್ನು ಸರಿಯಾದ ಉಸಿರಾಟದಿಂದ ಗುಣ ಪಡಿಸಬಹುದು ಎನ್ನುವುದು ಬಹಳಷ್ಟು ವೈದ್ಯರ ಅಭಿಮತ.ದೀರ್ಘ ಉಸಿರಾಟದಲ್ಲಿ ಉಸಿರನ್ನು ಒಳಕ್ಕೆ ಎಳೆದು ಕೊಂಡಾಗ (Abdominal breathing) ವಪೆ ಅಥವಾ Diaphragm ಹೊಟ್ಟೆಯ ಭಾಗವನ್ನು ಕೆಳಕ್ಕೆ ತಳ್ಳಿ ಉಬ್ಬುವಂತೆ ಮಾಡುತ್ತದೆ. ಉಸಿರನ್ನು ಹತ್ತು ಎಣಿಕೆಯವರಗೆ ಹಾಗೆಯೇ ಎದೆಯ ಒಳಗೆ ಹಿಡಿದಿಟ್ಟುಕೊಂಡು,ನಂತರ ನಿಧಾನವಾಗಿ ಹೊರಗೆ ಬಿಡಿ(ಹೃದಯದ ತೊಂದರೆ ಇರುವವರು ಉಸಿರನ್ನು ಹಿಡಿದು ಇಟ್ಟು ಕೊಳ್ಳುವುದು ಅಥವಾ 'ಕುಂಭಕ'ದ ಬಗ್ಗೆ ತಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು).ನಮ್ಮ ಸಾಮಾನ್ಯವಾದ ಉಸಿರಾಟ ಹನ್ನೆರಡರಿಂದ ಹದಿನೈದರವರಗೆ ಇರುತ್ತದೆ. ನಿಧಾನವಾಗಿ ಮೇಲೆ ಹೇಳಿದ ರೀತಿಯ ಉಸಿರಾಟದಿಂದ ನಿಮಿಷಕ್ಕೆ ಮೂರರಿಂದ ನಾಲಕ್ಕು ಸಲ ಉಸಿರಾಟವಾಗುತ್ತದೆ. ಈ ರೀತಿಯ ಹತ್ತರಿಂದ ಹದಿನೈದು ನಿಮಿಷ ಉಸಿರಾಟದಿಂದ ಎಷ್ಟೋ ಉಪಯೋಗಗಳಿವೆ! ಕೋಶಗಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಲ್ಲದೆ ,ಅರಿವಿನಿಂದ ಉಸಿರಾಟ ನಡೆಸುವುದರಿಂದ ನೀವು ಈ ಕ್ಷಣದಲ್ಲಿ ಇರುತ್ತೀರಿ !You are in the present moment! ಆ ಸಮಯದಲ್ಲಿ ನಿಮ್ಮನ್ನು ಬೇಡದ ಚಿಂತೆಗಳು,ಆಲೋಚನೆಗಳು ಕಾಡುವುದಿಲ್ಲ.ಸರಿಯಾದ ಉಸಿರಾಟದಿಂದ ಎಷ್ಟೊಂದು ಉಪಯೋಗಳಿವೆ ಅಲ್ಲವೇ? ನೀವು ಈಗಾಗಲೇ ಪ್ರಾಣಾಯಾಮ ಮಾಡುತ್ತಿದ್ದರೆ ನಿಮಗೆ ಸರಿಯಾದ ಉಸಿರಾಟದ ಉಪಯೋಗ ಗೊತ್ತೇ ಇದೇ. ನಮ್ಮ ಪ್ರಾಣ ದಾಯಕ ಉಸಿರಿನ ಬಗ್ಗೆ ಇನ್ನಾದರೂ ಸ್ವಲ್ಪ ಗಮನ ಹರಿಸೋಣವೇ?

21 comments:

  1. ತುಂಬಾ ಉಪಯುಕ್ತವಾದ ಮಾಹಿತಿ ಡಾಕ್ಟ್ರೆ ... ಪ್ರಯತ್ನಿಸಿ ನೋಡಿದೆ ... ಅಷ್ಟೆಲ್ಲ ಉಸಿರಾಡಲು ಪುರುಸೊತ್ತಿಲ್ಲ ಬಿಡಿ :)

    ReplyDelete
    Replies
    1. ಪುರುಸೊತ್ತಿಲ್ಲ ಅಂತ ಉಸಿರಾಡುವುದನ್ನು ಮರೀ ಬೇಡಿ ಸರ್.......!ಹ....ಹ...!ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಕುಂಭಕ ಪ್ರಕ್ರಿಯೇ ವಿವರಿಸಿ ಒಳ್ಳೆಯದನ್ನು ಮಾಡಿದಿರಿ. ನಾನು ಖಂಡಿತ ರೂಢಿಸಿಕೊಳ್ಳುತ್ತೇನೆ.

    ಇಂತಹ ಒಳ್ಳೆಯ ಬ್ಲಾಗ್ ಪೋಸ್ಟ್ ಹಾಕುತ್ತಲೇ ಇರಿ ಸಾರ್. ಕೊಳಲು ಬ್ಲಾಗುಗಳ ರಾಜ ಎಂದು ನಾನು ಕರೆಯುತ್ತಲೇ ಇರುತ್ತೇನೆ.

    ReplyDelete
    Replies
    1. ಬದರಿ ;ದೀರ್ಘವಾಗಿ ಉಸಿರಾಡುವುದನ್ನು ಹತ್ತರಿಂದ ಹದಿನೈದು ನಿಮಿಷ ರೂಢಿಸಿಕೊಂಡರೂ ಸಾಕು.ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  3. ಡಾಕ್ಟ್ರೆ ಧನ್ಯವಾದಗಳು , ಹಾಗೆಯೆ ವಿಪಸ್ಸನ ದ ಬಗ್ಗೆಯೂ ಸ್ವಲ್ಪ ವಿವರಿಸಿದ್ದರೆ ಚೆನ್ನಾಗಿತ್ತು .

    ReplyDelete
    Replies
    1. ಮಿಲನ ಮಹಾಲೆಯವರಿಗೆ ;ನನ್ನ ಬ್ಲಾಗಿಗೆ ಸ್ವಾಗತ.ವಿಪಶ್ಯನ ಧ್ಯಾನದ ಒಂದು ವಿಧಾನ.ಇಲ್ಲಿ ಮಾಮೂಲು ಉಸಿರಾಟದ ಕ್ರಿಯೆಯನ್ನೇ ಸಂಪೂರ್ಣವಾಗಿ ಗಮನಿಸುತ್ತಿರುವುದು.ದೀರ್ಘಉಸಿರಾಟ ಇರುವುದಿಲ್ಲ.ಇಲ್ಲಿ ಧ್ಯಾನಕ್ಕೆ ಅಥವಾ ಗಮನಿಸುವ ಕ್ರಿಯೆಗೆ ಹೆಚ್ಚು ಒತ್ತು.ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

      Delete
  4. ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
    Replies
    1. ನಮಸ್ತೆ ಮೇಡಂ.ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗಿನಲ್ಲೂ ಅತ್ಯುತ್ತಮ ಆಧ್ಯಾತ್ಮಿಕ ವಿಚಾರಗಳಿರುವ ಲೇಖನಗಳು ಬರುತ್ತಿವೆ.ನಿಮ್ಮಿಂದ ಇನ್ನಷ್ಟು ಉತ್ತಮ ಲೇಖನಗಳು ಬರಲಿ ಎಂದು ಹಾರೈಸುತ್ತೇನೆ.ಬರುತ್ತಿರಿ.ನಮಸ್ಕಾರ.

      Delete
  5. ಸದಾ ಒಳ್ಳೊಳ್ಳೆಯ ಲೇಖನ ಕೊಡುತ್ತಿರುವ ನಿಮಗೆ ಧನ್ಯವಾದಗಳು ಸರ್.

    ReplyDelete
    Replies
    1. ನಮಸ್ತೆ ಉಮಾ ಮೇಡಂ;ಭಟ್ ಸರ್ ಮತ್ತು ನಿವೇದಿತಾ ಹೇಗಿದ್ದಾರೆ?ಬ್ಲಾಗಿಗೆ ಒಳ್ಳೆಯ ಲೇಖನಗಳ ಕೊರತೆ ಇದ್ದೇ ಇದೆ.ಆದರು ಮತ್ತಷ್ಟು ಒಳ್ಳೆಯ ಬರಹಗಳನ್ನು ಕೊಡುವ ಪ್ರಯತ್ನ ಜಾರಿಯಲ್ಲಿದೆ.'ನಾಭಿ' ಮತ್ತು 'ನಿವೇದನೆ'ಬ್ಲಾಗುಗಳಿಂದಲೂ ಒಳ್ಳೆಯ ಲೇಖನಗಳು ಬರಲಿ ಎಂದು ಹಾರೈಕೆ.ಧನ್ಯವಾದಗಳು.ನಮಸ್ಕಾರ.

      Delete
  6. ಉತ್ತಮ ಮಾಹಿತಿ ಲೇಖನ - ಧನ್ಯವಾದಗಳು ಸರ್.


    ಅನ೦ತ್

    ReplyDelete
    Replies
    1. ಅನಂತ್ ಸರ್;ಈಗೀಗ ಪ್ರಾಣಾಯಾಮದ ಬಗ್ಗೆ ಸುಮಾರು ಜನಕ್ಕೆ ಸಾಕಷ್ಟು ಅರಿವಿದೆ.ಆದರೂ ಹೆಚ್ಚಿನ ಜನಕ್ಕೆ ಉಸಿರಾಟದ ಮಹತ್ವದ ಬಗೆ ಅರಿವನ್ನು ಮೂಡಿಸುವ ಸಣ್ಣ ಪ್ರಯತ್ನವಿದು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  7. ಚೆನ್ನಾಗಿ ವಿವರಿಸಿದ್ದೀರಿ ಸರ್.
    ರೂಢಿ ಮಾಡ್ಕೋಳ್ತಿನಿ
    ಸ್ವರ್ಣಾ

    ReplyDelete
  8. ಸ್ವರ್ಣ ಅವರಿಗೆ;ಪ್ರತಿಕ್ರಿಯೆಗೆ ಧನ್ಯವಾದಗಳು.ಸರಿಯಾದ ಉಸಿರಾಟ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅವಶ್ಯಕ.ಬರುತ್ತಿರಿ.ನಮಸ್ಕಾರ.

    ReplyDelete
  9. ನಮಸ್ತೆ ಸರ್,

    ಸರಿಯಾಗಿ ಉಸಿರಾಡಲು ಪ್ರಾರಂಭಿಸುತ್ತೇನೆ. ಒಳ್ಳೆ ಬರಹ :)

    ReplyDelete
  10. ಪ್ರತಿಕ್ರಿಯೆಗೆ ಧನ್ಯವಾದಗಳು ಈಶ್ವರ್.ನಮಸ್ಕಾರ.

    ReplyDelete
  11. ಸರ್, ಸದಾ ಸದ್ವಿಚಾರ, ಉತ್ತಮ ಸಲಹೆಗಳಿಗೆ ಆಕರವಾದ ನಿಮ್ಮ ಲೇಖನಗಳ ಅಭಿಮಾನಿ ನಾನು...ಆದರೆ ಪ್ರತಿಕ್ರಿಯಿಸುವದರಲ್ಲಿ ಸ್ವಲ್ಪ ಹಿಂದೆ!..ನಿಮ್ಮ ಲೇಖನಗಳ ಧಾರೆ ಹೀಗೇ ಹರಿಯುತ್ತಿರಲಿ.

    ReplyDelete
  12. ಭಟ್ ಸರ್;ಬಹಳ ದಿನಗಳ ನಂತರ ನಿಮ್ಮಚಿತ್ರ,ನಿಮ್ಮಪ್ರತಿಕ್ರಿಯೆ ನೋಡಿ ತುಬಾ ಸಂತೋಷವಾಯಿತು.ನಿಮ್ಮ ವಿಶ್ವಾಸ,ಪ್ರೀತಿ,ಹಾರೈಕೆಗಳು ಹೀಗೇ ಸದಾ ಕಾಲವೂ ಇರಲಿ ಎನ್ನುವುದು ನನ್ನ ಹಾರೈಕೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  13. Nice article. Also while breathing in the stomach has to bulge like a balloon and while breathing out it has to constrict. But without our knowledge we will be doing just the opposite. I came to know about this after I started doing pranayama.

    ReplyDelete
  14. @pragalbha;thank you for your kind comments.keep visiting my blog .regards.

    ReplyDelete
  15. ಕುಂಭಕ ಪ್ರಕ್ರಿಯೇ ವಿವರಿಸಿ ಒಳ್ಳೆಯದನ್ನು ಮಾಡಿದಿರಿ. ನಾನು ಖಂಡಿತ ರೂಢಿಸಿಕೊಳ್ಳುತ್ತೇನೆ.

    ReplyDelete

Note: Only a member of this blog may post a comment.