Tuesday, July 17, 2012

"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ!!!"

ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ! ನಿನ್ನನ್ಯಾರೂ ....... ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!

8 comments:

  1. ಬದುಕಿನಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ.

    ಎಷ್ಟೋ ಬಾರಿ, ನಮ್ಮ ಆಸೆಗಳು ಮಣ್ಣಾಗಿ ಹೋಗುತ್ತವೆ.

    ಎಲ್ಲ ಇದ್ದೂ ಬೆಳವಣಿಗೆ ಕಂಡರೆ ಅಂತಹ ಆಶ್ಚರ್ಯವಿಲ್ಲ.

    ಆದರೆ, ಈ ನಿಮ್ಮ ಕವಿತೆ ಅದಮ್ಯ ಚೈತನ್ಯವನ್ನು ಪ್ರೇರೇಪಿಸುತ್ತದೆ.

    ಬದುಕನ್ನು ಕಟ್ಟಿಕೊಳ್ಳುವ ಯಾವ ಅವಕಾಶವನ್ನೂ ಬಿಡಬೇಡಿ ಎಂದು ಹೇಳಿ
    ಕೊಡುತ್ತದೆ.

    ಸೋಲನ್ನು ರುಚಿ ಕಂಡ ನಮ್ಮಂತಹ ಸೋತವರಿಗೂ ಹೀಗೆ ಹುರಿದುಂಬಿಸುವ ನಿಮ್ಮ ನಿಸ್ವಾರ್ಥ ಪ್ರೀತಿಗೆ ಶರಣು.

    ReplyDelete
  2. ಆ ಅದಮ್ಯ ಚೈತನ್ಯದ "ಆಳ" ಅರಿತವರಾರು. ಚೆನ್ನಾಗಿದೆ ಗುರುಗಳೇ

    ReplyDelete
  3. ಅದಮ್ಯ ಚೇತನ... ಚೈತನ್ಯ ಉಗಮಕ್ಕೆ ಸಾಥ್ ಬೇಕಿಲ್ಲ ಎನ್ನುವುದನ್ನು ಡಾಕ್ಟ್ರೇ ಬಹಳ ಚನ್ನಾಗಿ ಕೆಲವೇ ಅಳೆದು-ತೂಗಿ ಬಿಟ್ಟ ಪದಬಾಣದ ಕವನದಲ್ಲಿ ಪ್ರಸ್ತುತಪಡಿಸಿದ್ದು...ವಾವ್

    ReplyDelete
  4. adamya chaithanyada bagegina nimma kavana thumbaa chennaagide sir.inthaha olle kavana rachisuvudara moolaka ondu olle sandesha neediddeeri.nimage nanna dhanyavaadagalu.

    ReplyDelete
  5. ಸಾಧಿಸುವ ಛಲ ಇದ್ದಾಗ ಎಂತಹ ವಾತಾವರಣವು ಕೂಡ ಸಹಾಯ ಮಾಡಬಲ್ಲದು..ಈ ಆಶಯವನ್ನು ಚೆನ್ನಾಗಿ ವ್ಯಕ್ತ ಪಡಿಸುತ್ತೆ ನಿಮ್ಮ ಸಾಲುಗಳು..ತುಂಬಾ ಸುಂದರ ಡಾಕ್ಟ್ರೆ...

    ReplyDelete
  6. so nice.....
    kavana odidare ondu positive energy baratte.....

    thank you sir....

    ReplyDelete
  7. ವಾಹ್ ಸರ್ ಚೆನ್ನಾಗಿದೆ, ಇಂದು ಮುಂಜಾನೆ ಎದ್ದ ತಕ್ಷಣ ಕನ್ನುಗೆ ಬಿದ್ದ ಒಳ್ಳೆಯ ಕವಿತೆ ನಿಮ್ಮದು, ಪ್ರಕೃತಿಯ ಈ ವಿಸ್ಮಯ ಎಲ್ಲರಿಗೂ ಗುರು, ಆದರೆ ನಮ್ಮ ಬಾಳಿನಲ್ಲೂ ಹೀಗೆ ಜ್ಞಾನದ ಚಿಗುರು ಚಿಗುರುತ್ತಿದ್ದರೆ ಎಷ್ಟು ಚಂದಾ ಅನ್ನಿಸಿತು ನಿಮ್ಮ ಕವಿತೆ ಓದಿ. ಜೈ ಹೋ ಸಾರ್ .

    ReplyDelete
  8. ಮೂರ್ತಿ ಸರ್ ,

    ಎಷ್ಟೊಂದು ಸುಂದರ, ಅರ್ಥಪೂರ್ಣ ಸಾಲುಗಳು ಸರ್. ಇದೊಂದು ಪ್ರಕೃತಿ ವಿಶೇಷವಾಗಿದ್ದರೂ, ನಿಮ್ಮ ಕವನವು ಮಾನವ ಕುಲಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಲ್ಲಿ ಯಶಸ್ವೀ ಯಾಗಿದೆ. ಮನಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ ಸರ್....ಇಷ್ಟ ಆಯಿತು....

    ನಿಮ್ಮ ಅಭಿಮಾನಿ....
    ಅಶೋಕ್

    ReplyDelete

Note: Only a member of this blog may post a comment.