Monday, March 1, 2010

ಎನ್ನ --------ಕಿವುಡನ ಮಾಡಯ್ಯ

ರಾತ್ರಿಯ ಸ್ಲೀಪರ್ ಕೋಚ್ ಬಸ್ಸು
ಹೊರಟು ಗಂಟೆ ಒಂದಾಗಿದೆ-----------,  
ನಿಶೆಯ ಮಡಿಲಲ್ಲಿ ರಸ್ತೆ ತಣ್ಣಗೆ ಮಲಗಿದೆ!
ಬಸ್ಸಿನದೋ ಜೋರು ಗೊರಕೆ --------!
ನನ್ನ ಬಳಿ ನಿದ್ದೆಯ ಸುಳಿವಿಲ್ಲ -------!
ಪಕ್ಕದ ಬರ್ತಿನ ಭೂಪ -------,
ನಡುರಾತ್ರಿ ಹನ್ನೆರಡಕ್ಕೆ ಎದ್ದು ,
ತನ್ನ ಮೊಬೈಲಿನಲ್ಲಿ ಯಾರ ಜೊತೆಯೋ,
ಎಡೆ ಬಿಡದೆ ಜೋರು ದನಿಯಲ್ಲಿ,
ಸಂ ---------ವಾದ ,ನಡೆಸಿದ್ದಾನೆ .
ತಾನೂ ನಿದ್ರಿಸಲೊಲ್ಲ ನಮ್ಮನ್ನೂ ಬಿಡಲೊಲ್ಲ.
ನಿಲ್ಲಿಸಲೊಲ್ಲ-------ತನ್ನ ಸೊಲ್ಲ !
       ಆಕ್ಸ್ಹೇಪಿಸಲು-------------,
ಬರ್ತ್ ನನ್ನದು ,ಮೊಬೈಲ್  ನನ್ನದು ,
ಮಾತು ನನ್ನ ಬರ್ತ್ ರೈಟು ಎಂದ!
ಎಲ್ಲವೂ ನಿನ್ನದೇ ಹೌದು ತಂದೆ ,
ಆದರೆ ಕಿವಿ ನನ್ನದಲ್ಲವೇ ಎಂದೆ.
ಸಧ್ಯ ---------ಸುಮ್ಮನಾದ !
ಮಾತನಾಡಲಿಲ್ಲ -----ಮುಂದೆ ! 

4 comments:

  1. ಒಳ್ಳೇ ಭೂಪ!...ಕಿವಿ ಅವನದಲ್ಲದ್ದರಿ೦ದ ಸುಮ್ಮನಾದನಿರಬೇಕು.
    ಚೆನ್ನಾಗಿ ಬರೆದಿದ್ದೀರಿ. ವ೦ದನೆಗಳು.

    ReplyDelete
  2. Dhanyavaadagalu.mobile haavali hucchu hecchagi yenna kivudana maadayya tande,endu bedikolluvantaagide.

    ReplyDelete
  3. ಮೊಬೈಲ್ ನಶೆ... ನಿಮಗೊಂದು ಕೆಟ್ಟ ಅನುಭವವವಾದರೂ ಈ ಕವನ ಖುಷಿ ಕೊಟ್ಟಿದೆ.

    ReplyDelete
  4. thankyou bhat sir.Even an irritating experience can bring out a poetry!interesting!

    ReplyDelete

Note: Only a member of this blog may post a comment.