Monday, July 12, 2010

'ಸೋತರೇನೊಮ್ಮೆ?'

ಹೌದು ಸ್ವಾಮಿ,ಹೌದು !
ನೀವು ಕಲಿ ಕರ್ಣರೇ !
ನಿಮ್ಮ ಮಕ್ಕಳೂ -----,
ಇಂದ್ರ,ಚಂದ್ರರೇ ---!
ಇದೋ ನಿಮಗೆ ನಮ್ಮ 
ಮುಜರೆ ,ಸಲಾಮು !
ಆದರೇ ----------,
ಹೀಗೇಕೆ ಇರಿಯುತ್ತೀರಿ 
ನಿಮ್ಮ ಎದುರಿನವರೆದೆಯ 
ನಿಮ್ಮ ಮಾತಿನ ಈಟಿಯಲಿ?
ನಿಮ್ಮ ತುತ್ತೂರಿ ನೀವೇ ಊದುತ್ತ
ನಿಮಗೆ ನೀವೇ ವಂದಿ ಮಾಗಧರಾಗಿ 
ಬಹುಪರಾಕು ಹೇಳಿಕೊಳ್ಳುತ್ತಾ 
ಕುಗ್ಗಿದವರೆದೆಯ ಮೇಲೆ
ನಡೆಸಬಹುದೇ ನೀವು ಹೀಗೆ
ನಿಮ್ಮ ಡೊಳ್ಳು ಕುಣಿತ?
ನಿಮ್ಮ ಅಬ್ಬರದ ಬೊಬ್ಬೆಯಲಿ
ಹೂವಂಥ ಮನವೊಂದು 
ನಲುಗುತಿದೆ ಮನ ನೊಂದು !
ಚಿವುಟದಿರಿ ಮೊಗ್ಗುಗಳ !
ಅರಳ ಬಿಡಿ ಹೂವುಗಳ !
ಯಾರ ಬಿಸಿ ಉಸಿರು ತಾಗದೇ 
ಅರಳಲವು-------------,
ತಮ್ಮಷ್ಟಕ್ಕೆ ತಾವೇ !
ಸೋತರೇನೊಮ್ಮೆ ?
ಅದೇ ------ಸಾವೇ ?

24 comments:

  1. Jyoti madame;Thanks for your kind comments.regards.

    ReplyDelete
  2. ನಮ್ಮ ಆತ್ಮಸ್ತುತಿಗಳೆಲ್ಲೋ ಯಾರಿಗೋ ನೋವಾಗಬಹುದು! ಗೆದ್ದ ಮನಗಳ ಸಂಭ್ರಮದಲ್ಲಿ ಸೋತ ಮನಗಳು ಹತಾಶವಾಗಬಾರದು ಎ೦ಬ ತಮ್ಮ ಮಾರ್ಮಿಕ ನೇತಿ ಚೆನ್ನಾಗಿದೆ.

    ReplyDelete
  3. ಸೀತಾರಾಂ ಸರ್;ಕೆಲವರಿಗೆ ತಮ್ಮ ಬಗ್ಗೆ,ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳುವ ಭರದಲ್ಲಿ ಎದುರಿನವರಿಗೆ ನೋವಾಗುತ್ತದೆ ಎನ್ನುವ ಪರಿವೆಯೇ ಇರುವುದಿಲ್ಲ.ನಮ್ಮ ಆತ್ಮಸ್ತುತಿಮಾಡಿಕೊಳ್ಳುವಾಗ ಎದುರಿದ್ದವರಿಗೆ ನೋವುಂಟುಮಾಡದಂತೆ ಎಚ್ಚರ ವಹಿಸುವುದು ಒಳ್ಳೆಯದು.ನಮಸ್ಕಾರ.

    ReplyDelete
  4. nija sir nimma saalugalu.... naavugalu aadastu nOvaagadante nodikollabeku

    ReplyDelete
  5. ನಮ್ಮ ಖುಷಿಗೆ ನಮ್ಮ ಡೌಲಿಗೆ ಮತ್ತೊಂದು ಮನ ನೋಯಬಾರದು, ನಿಜ. ಕವನ ಬಹಳ ಚೆನ್ನಾಗಿದೆ.

    ReplyDelete
  6. ಮನಸು ಮೇಡಂ; ನಾವು ಹೆಚ್ಚು ಸೂಕ್ಷ್ಮ ಮತಿಗಳಾಗಿ ಮಾತಿನ ಭರದಲ್ಲಿ ಯಾರಿಗೂ ನೋವಾಗದ ರೀತಿ ನಡೆದುಕೊಳ್ಳಲು ಪ್ರಯತ್ನಿಸಬೇಕು.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  7. ಸಾಗರಿ ಮೇಡಂ;ನಮಸ್ಕಾರ.ನಾವು ನಮ್ಮ ಬಗ್ಗೆಯಾಗಲೀ,ನಮ್ಮ ಮಕ್ಕಳ ಸಾಧನೆಯ ಬಗ್ಗೆಯಾಗಲೀ ಮಾತನಾಡುವಾಗ ಮೈಮರೆಯುವುದು ಜಾಸ್ತಿ.ಅಲ್ಲಿ ಓದಿನಲ್ಲಿ ಅಷ್ಟೇನೂ ಮುಂದಿಲ್ಲದಿರುವವರ ಮಕ್ಕಳೂ ಇದ್ದು ಅವರು ಕೀಳರಿಮೆಯಿಂದ ನರಳುವ ಸಾಧ್ಯತೆಯನ್ನೂನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಕವನ ಚೆನ್ನಾಗಿದೆ.. ತಮ್ಮನ್ನೇ ಹೊಗಳಿಕೊಳ್ಳುತ್ತಾ ಬೇರೆಯವರ ಮನಸ್ಸಿಗೆ ನೋವುಂಟು ಮಾಡಬಾರದು..

    ReplyDelete
  9. ಪ್ರಗತಿಯವರೇ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ನಿಮ್ಮ ಬ್ಲಾಗಿಗೆ ಫಾಲೋಯರ್ ಆಗಿದ್ದೇನೆ.ನೀವು ಬರೆದ ಚಿತ್ರಗಳು ಚೆನ್ನಾಗಿವೆ.ಇನ್ನಷ್ಟು ಒಳ್ಳೆಯ ಚಿತ್ರಗಳು ನಿಮ್ಮ ಬ್ಲಾಗಿನಲ್ಲಿ ಬರಲಿ ಎಂದು ಹಾರೈಸುತ್ತೇನೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯ ವಾದಗಳು.ನಿಮ್ಮ ಬ್ಲಾಗಿನಲ್ಲೂ ಒಳ್ಳೆಯ ಕವಿತೆಗಳು ಬರುತ್ತಿವೆ.ಬರೆಯುವುದನ್ನು ಮುಂದುವರಿಸಿ.ನಮಸ್ಕಾರ.

    ReplyDelete
  11. ಸೋಲುವುದು ಗೆಲುವವರ ಪ್ರಮುಖ ಲಕ್ಷಣ! ಯಾರು ಸೋಲನ್ನು ಒಪ್ಪುವುದಿಲ್ಲವೋ ಅವನು ಸೋತನೆಂದೇ ಅರ್ಥ! ಬಹಳ ದುರಭಿಮಾನ ಇರುವ ಧುರ್ಯೋಧನನ ವಂಶಜರು ಸೋಲೋಪ್ಪುವುದಿಲ್ಲ.ಅಹಂ ಇರುವವರಿಗೆ ತಾನು ಸೋತೆ ಎನ್ನಲು ಅವರ ಅಹಂ ಅವಕಾಶ ಕೊಡುವುದಿಲ್ಲ, ಒಂದರ್ಥದಲ್ಲಿ ಈ ಅಹಂ ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಭೂತ! ಪಣದಲ್ಲಿ-ಆಟದಲ್ಲಿ ಸೋತರೆ ಮರ್ಯಾದೆಯಲ್ಲ, ಜೀವನದ ಕಲಿಕೆಯ ಹಂತಗಳಲ್ಲಿ ಸೋತರೆ ಅಪಮಾನವಲ್ಲ, ನಡೆಯುವಾಗ ಎಡವಿದರೆ ಅಸ್ಥಿರತೆಯಲ್ಲ, ಆದರೆ ಅದರಿಂದ ಮತ್ತೆ ಅದೇ ಮರುಕಳಿಸದ ಪಾಠ ಕಲಿಯುತ್ತೇವಲ್ಲ ಅದು ನಿಜವಾದ ಹೂರಣ! ಅದು ಪಾಕಬರುವ ಹಾಗೇ ನೋಡಿಕೊಂಡು ಮತ್ತೆಂದೂ ಸೋಲದ ಸ್ಥಿತಿಗೆ ನಮ್ಮನ್ನು ನಾವು ಒಗ್ಗಿಸಿಕೊಂಡರೆ ಆ ಪಾಕ ರಸಪಾಕ, ಘನಪಾಕ, ನಳಪಾಕ ! ತಮ್ಮ ಕವನವೂ ಕೂಡ ಇಲ್ಲೀಗ ನಳಪಾಕ, ತಮಗೆ ಒಂದೇ ಮಾತಲ್ಲಿ ಹೇಳುತ್ತೇನೆ ಜೈ ಹೋ ! ನಮಸ್ಕಾರ

    ReplyDelete
  12. satya sir.... satyada maatugaLu....

    chennaagide kavana....

    ReplyDelete
  13. ಚೆನ್ನಾಗಿದೆ,,, ಸಾರ್..... :)

    ReplyDelete
  14. ವಾಸ್ತವಿಕತೆಯ ಚಿತ್ರಣವನ್ನು ಅಭಿವ್ಯಕ್ತಿಗೊಳಿಸಿರುವುದು ಪರಿಣಾಮಕಾರಿಯಾಗಿದೆ ಡಾ.
    ಇ೦ತಹ ಸನ್ಮಾನ್ಯಶ್ರೀ..ಗಳನ್ನೇ ಪ್ರತಿ ಬಾರಿಯೂ ಆರಿಸಿ ಕಳಿಸುವ ದೌರ್ಭಾಗ್ಯ ನಮ್ಮದು. ಈ ಮಜಾಪ್ರಭುತ್ವವೇ ಇವರ ಜೀವನದ ಪರಮ ಧ್ಯೇಯ..!
    ಉತ್ತಮ ವಿಚಾರಧಾರೆಗೆ ವ೦ದನೆಗಳು.

    ಅನ೦ತ್

    ReplyDelete
  15. ಭಟ್ ಸರ್;ಒಂದು ಸಲ ಫೇಲಾದರೆ,ಅಥವಾ ಕಡಿಮೆ ಅಂಕಗಳಿಸಿದರೆ ಅದರಿಂದ ನೊಂದು ಅನಾಹುತ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ.ಅಂತಹವರ ಅಥವಾ ಅವರ ತಂದೆ ತಾಯಿಯರ ಮುಂದೆ ಸಾಧನೆ ಗೈದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಸಾಧನೆಗಳ ಬಗ್ಗೆ ಮಾತಾಡುವಾಗ ಸೂಕ್ಷ್ಮತೆಯನ್ನರಿತು ಮಾತಾಡಬೇಕೆನ್ನುವುದು ಕವಿತೆಯ ಆಶಯ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ದಿನಕರ್ ಮೊಗೇರ ಸರ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.ಬರುತ್ತಿರಿ.

    ReplyDelete
  17. ಗುರುಪ್ರಸಾದ್ ಸರ್;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  18. ಅನಂತರಾಜ್ ಸರ್;ಕವಿತೆ ನಿಮಗೆ ಹೊಸದೊಂದು ಅರ್ಥ ಕೊಟ್ಟಿದೆ.ಓದಿನಲ್ಲಿ ಕಡಿಮೆ ಸಾಧನೆ ಗೈದ ವಿದ್ಯಾರ್ಥಿಗಳ ಅಥವಾ ಅವರ ಪೋಷಕರ ಮುಂದೆ ಅವರ ಮನಸ್ಸಿಗೆ ನೋವಾಗುವುದನ್ನೂ ಗಮನಿಸದೆ ತಮ್ಮ ಮಕ್ಕಳ ಸಾಧನೆಯ ಬಗ್ಗೆಯೇ ಕೊಚ್ಚಿಕೊಳ್ಳುವ ಮಹಾಶಯರನ್ನು ಕುರಿತು ಬರೆದ ಕವನವಿದು.People are so self centered that they are not bothered about what others feel.ಒಂದು ಕವಿತೆ ಇನ್ನೊಂದು ಹೊಸದಾದ ಹೊಳಹನ್ನು ಕೊಡುವುದು ಸಂತೋಷದ ವಿಷಯ.ಧನ್ಯವಾದಗಳು.

    ReplyDelete
  19. ಕವನ ಮಾರ್ಮಿಕವಾಗಿದೆ. ತುತ್ತೂರಿ ಊದುವರೆದುರಿಗೆ ನಾವು ನಮ್ಮ ಕಹಳೆ ಮೊಳಗಿಸದಿದ್ದರೆ, ಸಹಿಸಿಕೊಳ್ಳುವದು ಕಷ್ಟವಾದೀತೇನೋ!

    ReplyDelete
  20. ಸತ್ಯವಾದ ಮಾತು ಸರ್ ....ಚುಚ್ಚಿ ಮನಕೆಡಿಸುವವರ ಮನ ಕೆಡವುವಂತೆ ಬರೆದಿದ್ದಿರ
    -- Day dreamer

    ReplyDelete
  21. ನಮಸ್ಕಾರ ಶ್ರೀಕಾಂತ.ತಮ್ಮ ಪುಂಗಿ ಊದುತ್ತಾ ಬೇರೆಯವರಿಗೆ ನೋವು ಉಂಟುಮಾಡುವವರು ನಮ್ಮ ಸುತ್ತಲೂ ಇದ್ದಾರೆ.ಅವರಿಗೆ ಉತ್ತರಕೊಡುವಂತೆ ನಾವು ಅವರಿಗಿಂತಲೂ ಎತ್ತರಕ್ಕೆ ಬೆಳೆದು ತೋರಿಸಬೇಕು.ಧನ್ಯವಾದಗಳು.

    ReplyDelete

Note: Only a member of this blog may post a comment.