Tuesday, July 13, 2010

'ನಾಯಿ ಪಾಡು '

ಪಾಪ ,ರಸ್ತೆಯ ಮೇಲೇ
ಮಲಗಿದೆ  ನಾಯಿ ----!
ಸುತ್ತಲಿನವರು  ತನಗೆ 
ಬೊಗಳಲು ಅವಕಾಶವನ್ನೇ 
ಕೊಡದಿರುವುದಕ್ಕಾಗಿ-----,
ತೆಪ್ಪಗಾಗಿದೆ ಅದರ ಬಾಯಿ !
ತಂಗಳು ಪೆಟ್ಟಿಗೆಯಲ್ಲಿ 
ಮೂರು ದಿನದ ತಂಗಳಿಟ್ಟು 
ತಿನ್ನುವವರು ಹೆಚ್ಚಾಗಿ ,
ತಿಪ್ಪೆ ಕೆದಕಿ ಪೆಚ್ಚಾಗಿ ,
ಹೊಟ್ಟೆಗೆ ಹಿಟ್ಟಿಲ್ಲದೇ ,
ರಸ್ತೆಯ ಮೇಲೆಯೇ ,
ಸಪ್ಪಗೆ ಮಲಗಿದೆ ನಾಯಿ !
ಇರದೆ ಬೇರೆ ದಾರಿ!
ಹರಿದು ಹೋದರೆ ಹೋಗಲಿ 
ದೊಡ್ಡದೊಂದು ಲಾರಿ 
ಎಂದು ಬೇಸರಗೊಂಡಂತೆ!
ಪ್ರಾಮಾಣಿಕತೆಯೇ ಸೊರಗಿ 
ಮೈ ಮುದುರಿಕೊಂಡಂತೆ !
ಬೆಪ್ಪಾಗಿ ಮಲಗಿದೆ ನಾಯಿ !

23 comments:

  1. ಸರ್,
    ನಾಯಿಪಾಡು - ಪ್ರಾಮಾಣಿಕತೆಯೇ ಮೈ ಮುದುರಿ ಮಲಗಿದಂತೆ.. ಸಾಮಾನ್ಯ ವಸ್ತುವಿಗೆ (ದೃಶ್ಯಕ್ಕೆ) ಅಸಾಮಾನ್ಯ ಚಿತ್ರಣ ನೀಡಿದ್ದೀರಿ. ತುಂಬಾ ಚೆನ್ನಾಗಿದೆ.

    ReplyDelete
  2. ಇಂತಹ ನಾಯಿಪಾಡನ್ನು ಗುರುತಿಸಿ ಕವನದ ಟಚ್ ನೀಡಿದ್ದು ಸೊಗಸಾಗಿದೆ

    ReplyDelete
  3. ನಾರಾಯಣ್ ಭಟ್ ಸರ್;ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಸುಬ್ರಮಣ್ಯ ಸರ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಮುಂದೆಯೂ ಹೀಗೇ ಸಿಗುತ್ತಿರಲಿ.ನಮಸ್ಕಾರ.

    ReplyDelete
  5. PRAMANIKATHEYA PAADU ,UTTAMA KABBAVAGIDE.NIDRE KALEDA MELE MUNDE? ENNONDU KAVANADA NIREEKSHEYALLIRUVE. DHANYAVADAGALU.

    ReplyDelete
  6. ಅದ್ಭುತ ಕವನ... ಸುಮ್ಮನೆ ರಸ್ತೆಯ ಮೇಲೆ ಮಲಗಿರುವ ನಾಯಿ ನೋಡಿ ನಿಮಗದೆಷ್ಟು ಯೋಚನೆ ಬಂದಿದೆ.
    creativity ಗೆ ನಮಸ್ಕಾರ.

    ReplyDelete
  7. ಹೇಮಚಂದ್ರ;ಪ್ರಾಮಾಣಿಕತೆಯ ಪಾಡು ಸುಧಾರಿಸುತ್ತದೆ ಎನ್ನುವ ನಿಮ್ಮ ಆಶಾವಾದ
    ನಿಜವಾಗಲಿ ಎಂದು ಹಾರೈಸುತ್ತೇನೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನಮಸ್ಕಾರ.

    ReplyDelete
  8. ಭಾಶೆ ಮೇಡಂ;ನಿಮ್ಮ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  9. ಸರ್ ನಿಮ್ಮ ಹೋಲಿಕೆ ತುಂಬಾ ಅದ್ಭುತ
    ಬಡಪಾಯಿ ಮನುಜನಿಗೆ ಒಮ್ಮೊಮ್ಮೆ ನಾಯಿಪಾಡು
    ಹೇಳುವವರಿಲ್ಲ, ಕೆಳುವವರಿಲ್ಲದಂತೆ ಆಗುತ್ತದೆ ಜೀವನ

    ReplyDelete
  10. ಗುರು ಸರ್;ನಿಮ್ಮ ಬ್ಲಾಗಿನ ವ್ಯಥೆಯಕಥೆಯ ಹೆಂಗಸಿನ ಕರುಣಾಜನಕ ಸ್ಥಿತಿಯೂ ಹಾಗೇ ಇಲ್ಲವೇ?ಮನಸ್ಸು ಇನ್ನೂ ಅದೇ ಗುಂಗಿನಲ್ಲಿದೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  11. ಬಹಳ ಚೆನ್ನಾಗಿದೆ ಸರ್.

    ReplyDelete
  12. Creativity madame;Thanks for your kind comments. regards.

    ReplyDelete
  13. hats off to u sir...mundae yenu heloku matu bertilla tumba channagi mudi bandidae

    ReplyDelete
  14. ನಮ್ಮಲ್ಲಿ ಉಂಡ ಎಲೆಯನ್ನು ಹೊರಗೆ ಎಸೆಯುತ್ತಿದ್ದರು-ಮಿಕ್ಕುಳಿದದ್ದನ್ನು ಪ್ರಾಣಿ-ಪಕ್ಷಿ ತಿನ್ನಲಿ ಎಂದು. ಕೈಯ್ಯನ್ನು ಹೊರಗೆ ತೊಳೆಯುತ್ತಿದ್ದರು- ಅದೂ ಅದೇ ಕಾರಣಕ್ಕೆ-ಇರುವೆ ಮುಂತಾದುವು ತಿನ್ನಲಿ ಎಂದು , ಅಂದರೆ ನಾವು ಉಣ್ಣುವ ಪದಾರ್ಥ ಇತರ ಜೀವಗಳಿಗೂ ಒಂದು ಚಿಕ್ಕ ಪ್ರಮಾಣದಲ್ಲಾದರೂ ಸಿಗಲಿ ಎಂದು. ಇದೇ ತತ್ವಕ್ಕೆ ನಮ್ಮ ವೆಅದ ನೀಡಿದ್ದು ಒಂದು ಕಟ್ಟು ಪಾಡು-ಅದು ಊಟಕ್ಕೂ ಮುನ್ನ ಚಿತ್ರ ಇಡುವುದು. ಇನ್ನು ಕೆಲವರು ಗೋವು, ನಾಯಿ-ಬೆಕ್ಕು-ಕಾಗೆ ಇವಕ್ಕೆಲ್ಲ ಅನ್ನಹಾಕಿದ ನಂತರ ತಾವು ಉಣ್ಣುತ್ತಿದ್ದರು. ಇವತ್ತು ಚಿತ್ರವೂ ಇಲ್ಲ ಚಾವಡಿಯೂ ಇಲ್ಲ! ನೀವೇ ಹೇಳಿದ ಹಾಗೇ ತಂಗಳ ಪೆಟ್ಟಿಗೆ ಜಾಸ್ತಿ ಆಗಿ ಮನುಷ್ಯ ಯಾವಾಗ ಮಾಡಿದ್ದನ್ನೋ ಇನ್ಯಾವಾಗಲೋ ತಿನ್ನುತ್ತಿದ್ದಾನೆ, ಇದರಿಂದಲೇ ಅರ್ಧ ಕಾಯಿಲೆ! ನಾಯಿ ಪಾಡು ಪರಮ ಸತ್ಯಗಳಲ್ಲೊಂದು, ಹೇಳಲಾಗದೆ- ಕೇಳಲೂ ಆಗದೇ ಮಲಗೇ ಅನುಭವಿಸಬೇಕಾದ ಪಾಡು. ಹುಟ್ಟಿಸಿದ ದೇವರು ಹೊಟ್ಟೆಗೆ ಹಿಟ್ಟಿಲ್ಲದಲ್ಲಿಟ್ಟು ಬದುಕು ಎಂದಾಗ ಇನ್ನೇನಾಗಬೇಕು? ತಮ್ಮ ಕವನ ಪೂರಕವಾಗಿದೆ, ನಮಸ್ಕಾರ

    ReplyDelete
  15. ಸುತ್ತಲಿನವರು ಬೊಗಳಲು ಅವಕಾಶ ಕೊಡ್ತಿಲ್ಲಾ ಅಂತಾದ್ರೆ ಖಂಡಿತಾ ಈ ನಾಯಿ ವಿಧಾನ ಸೌಧದ ಆಸು ಪಾಸಿನಲ್ಲೇ ಎಲ್ಲೋ ಮಲಗಿರಬೇಕು...
    ಕವನ ಸೂಪರ್..

    ReplyDelete
  16. ನಮಸ್ಕಾರ ಶ್ರೀಕಾಂತ್.ಕವನ ನಿಮಗೆ ಹಿಡಿಸಿದ್ದು ಸತೋಷ .ತಪ್ಪದೆ ಬ್ಲಾಗಿಗೆ ಬನ್ನಿ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ನಮಸ್ಕಾರ ಭಟ್ ಸರ್;ಅರ್ಥಸಹಿತ ನಿಮ್ಮ ವಿವರಣೆ ಸೂಕ್ತ ಮತ್ತು ಸಮಯೋಚಿತ.ನಿಮ್ಮ ಜ್ಞಾನವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  18. ದಿಲೀಪ್ ಹೆಗ್ಡೆಯವರಿಗೆ ನಮಸ್ಕಾರ.ಆ ನಾಯಿ ಅಷ್ಟೊಂದು ಡಲ್ಲಾಗಿ ಮಲಗಿರುವುದು ನೋಡಿದರೆ ನೀವು ಹೇಳಿದ್ದು ನಿಜ ಎನಿಸುತ್ತದೆ.ನಿಮ್ಮ ಕಾಮೆಂಟ್ ನಗು ತರಿಸಿತು.ಹೀಗೇ ಬರುತ್ತಿರಿ.ಅನಂತ ಧನ್ಯವಾದಗಳು.

    ReplyDelete
  19. ಧನ್ಯವಾದಗಳು ವಸಂತ್.ನಮಸ್ಕಾರ

    ReplyDelete
  20. ಸರ್,
    ನಾಯಿಯ ಪಾಡು ಏನು ಅಂತ ಕವನದಲ್ಲಿ ಸುಂದರವಾಗಿ ಹೇಳಿದ್ದೀರಾ.
    ತುಂಬಾ ಚೆನ್ನಾಗಿದೆ ಕವನದ ಪ್ರಾಸಗಳು.

    Ravi

    ReplyDelete
  21. ರವಿ ಹೆಗ್ಡೆಯವರೇ;ನಿಮಗೆ ಕವನ ಹಿಡಿಸಿದ್ದು ಸಂತೋಷ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  22. ಶುನಕವೊಂದು ಆಶನವಿಲ್ಲದೆ ವ್ಯಸನದಿಂದ ವಾಹನದಡೀ ಜೀವ ತ್ಯಜಿಸಲು ರಸ್ತೆಯಲ್ಲಿ ಡಿಂಬವರೆಗಿಸಿ ಮಲಗಿದಾಗ ಕವಿಯ ಮನದ ಕಕ್ಕುಲತೆ ಹರಿದ ಪರಿಯ ನೋಡಿ ಮನವು ಮುದದಿ ಕುಣಿಯಿತು!
    ಚಿತ್ರವೊಂದರ ಮೇಲೆ ಹರಿದ ತಮ್ಮ ಕ್ರಿಯಾಶೀಲತೆಗೆ, ಮಾನವಿಯ ಅ೦ತಕರಣದ ಕಾಳಜಿಗೆ, ನನ್ನ ನಮನಗಳು.
    ತುಂಬಾ ನೈಜ್ಯ ಪರಿಸ್ತಿತಿಯ ವಿಡಂಬನೆ ತಮ್ಮ ಕವನ.

    ReplyDelete
  23. ಸೀತಾರಾಂ ಸರ್;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಸರ್.ನಮಸ್ಕಾರ.

    ReplyDelete

Note: Only a member of this blog may post a comment.