Monday, July 19, 2010

'ಶಾಪಗ್ರಸ್ತ -----ಯಕ್ಷರು !'

ಇಲ್ಲೇ ಇದ್ದಾರೆ ----!
ನಮ್ಮ ನಿಮ್ಮ ನಡುವೆ ,
ಗೊತ್ತೇ ಆಗದಂತೆ !
ಶಾಪಗ್ರಸ್ತ  ಯಕ್ಷರು!
ಈ ಅವ್ಯವಸ್ಥೆಯ ಆಗರದ 
ವ್ಯವಸ್ಥೆಯಲ್ಲಿ ಬೇಸತ್ತವರು ! 
ಕಾಡಿನ  ಕತ್ತಲಲ್ಲಿ 
ಮಿಂಚು  ಹುಳುವಾದವರು!
ತಾವೇ  ಬೆಳಕಾದವರು!
ರಾಜ  ಮಾರ್ಗದ  ಮರವಾಗಿ 
ಬೀಗ  ಬೇಕಿದ್ದವರು ,
ಗುಡ್ಡದ  ಕೆಳಗಿನ 
ಗರಿಕೆ  ಹುಲ್ಲಾಗಿ
ತಣ್ಣಗೇ  ಉಳಿದವರು!
ಇಂದ್ರಲೋಕವ  ಇಲ್ಲೂ 
ರಚಿಸ  ಬಲ್ಲಂಥವರು ,
ಅವಕಾಶವೇ  ಸಿಗದೆ
ತೆರೆಯ  ಮರೆಯಲ್ಲೇ 
ತಣ್ಣಗಾದವರು------!
ಕೂಗುವ ಕಾಗೆ ಕತ್ತೆಗಳಿಗೆ 
ರಂಗಸ್ಥಳವ ಬಿಟ್ಟುಕೊಟ್ಟು ,
ನೇಪಥ್ಯಕ್ಕೆ ಸರಿದವರು!
ಇಲ್ಲೇ ಇದ್ದಾರೆ --------!
ಗೊತ್ತೇ ಆಗದಂತೆ!  
ಪತ್ತೆಗೇ ಬಾರದಂತೆ !
ಎಲೆಯ ಹಿಂದಿರುವ 
ವನ ಸುಮದಂತೆ -----!
ಸೌರಭವ ಸೂಸುತ್ತಾ!
ನಮ್ಮೆಲ್ಲರ ನಡುವೆಯೇ 
ಶಾಪಗ್ರಸ್ತ ---ಯಕ್ಷರು !


(ಚಿತ್ರ ಕೃಪೆ;ಅಂತರ್ಜಾಲ)

35 comments:

  1. wow.. tumbaa channaagide..

    olleyavara asahaayakathe shaapagrasta yaksharanteye...!!!!

    ReplyDelete
  2. DVG yavara HULLAGU BETTADI.......nenapaytu. 'Yakshra ' margadarshna namagirali.uttama anisikeya kavana neediddakke dhanyavadagalu.

    ReplyDelete
  3. ತಮ್ಮ ಕವನ ಬಹಳ ಅರ್ಥಗರ್ಭಿತವಾಗಿರುತ್ತದೆ.

    ReplyDelete
  4. ಅವಕಾಶವಂಚಿತರನ್ನು ಮತ್ತು ತ್ಯಾಗಿಗಳನ್ನು ಶಾಪಗ್ರಸ್ತ ಯಕ್ಷರಿಗೆ ಹೋಲಿಸಿ ಬರೆದದ್ದು ಚೆನ್ನಾಗಿದೆ.

    ReplyDelete
  5. ಚೆನ್ನಾಗಿದೆ ಸರ್... ಎಂತೆಂಥ ಪ್ರತಿಭೆ ಇದ್ರೂ ಕೆಲವರಿಗೆ ಪ್ರೋತ್ಸಾಹ ಸಿಗಲ್ಲ... ಅವ್ರು ಎಲೆ ಮರೆಯ ಕಾಯಿಯಾಗಿ ಇರ್ತಾರೆ ಅನ್ನೋದನ್ನ ಸುಂದರವಾಗಿ ಹೇಳಿದ್ದೀರಿ...

    ReplyDelete
  6. ಚುಕ್ಕಿಚಿತ್ತಾರಅವರಿಗೆ ನಮನಗಳು.ಪ್ರತಿಭೆ ಇದ್ದೂ ಗುರುತಿಸಲ್ಪಡದ ಶಾಪ ಗ್ರಸ್ತ ಯಕ್ಷರು ನಮ್ಮ ಸುತ್ತಲೂ ಇದ್ದಾರೆ.ನಾವು ಕಣ್ಣು ತೆರದು ನೋಡಬೇಕಷ್ಟೇ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಹೇಮಚಂದ್ರ;ಡಿ.ವಿ.ಜಿ.ಯವರ 'ಕಾನನದ ಮಲ್ಲಿಗೆ'ಯಂತೆ ನಮ್ಮಲ್ಲಿ ಹಲವಾರು ಪ್ರತಿಭಾವಂತರು ತಮ್ಮ ಪಾಡಿಗೆ ತಾವು ಅರಳುತಿದ್ದಾರೆ!ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಬಾಶೇಯವರೇ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ ,ನಮಸ್ಕಾರ.

    ReplyDelete
  9. ಸಾಗರಿಯವರೇ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.ನಮಸ್ಕಾರ.

    ReplyDelete
  10. ಕೂಸು ಮುಲಿಯಳ ರವರೆ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  11. ಸೀತಾರಾಂಸರ್;ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ನಮಸ್ಕಾರ.ಧನ್ಯವಾದಗಳು.

    ReplyDelete
  12. ಪ್ರಗತಿ ಹೆಗಡೆಯವರೇ;ನಮಸ್ಕಾರ.ಪ್ರತಿಭೆ ಇದ್ದೂ ಅವಕಾಶ ಸಿಗದಂತಹ ಹಲವರನ್ನು ನೋಡಿ ಇವರೆಲ್ಲಾ ಶಾಪಗ್ರಸ್ತ ಗಂಧರ್ವರು ಎನಿಸುತ್ತದೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಕೃಷ್ಣಮೂರ್ತಿಯವರೆ...

    ನಿಮ್ಮ "ಕವಿತೆ" ಓದಿ..
    ದೈತ್ಯ ಪ್ರತಿಭೆಯ ನನ್ನ ಗೆಳೆಯ "ದಿವಾಕರ" ನೆನಪಾದ...
    ಹಾಗೆ ಇನ್ನೂ ಒಂದು ಮಾತಿದೆ..

    "ಪ್ರತಿಭೆಯನ್ನು ಬಹಳ ದಿನ ಮುಚ್ಚಿಡಲಾಗದು"

    ಈ ಮಾತು ನಿಜವಾದಲ್ಲಿ ಎಲ್ಲ ತೆರೆಯಮರೆಯ ಪ್ರತಿಭೆಗಳಿಗೆ ಮನ್ನಣೆ ಸಿಗಲೇ ಬೇಕಲ್ಲವೆ?

    ಚಂದದ ಕವಿತೆಗೆ ಅಭಿನಂದನೆಗಳು...

    ReplyDelete
  14. ಚೆನ್ನಾಗಿದೆ, ಪ್ರಕಾಶ್ ಅವರ ಮಾತು ಸತ್ಯ ಅಲ್ವಾ...??

    ReplyDelete
  15. ಮೂರ್ತಿ ಸರ್ ,
    ಕವನ ಚೆನ್ನಾಗಿದೆ ,, ಅವಕಾಶವಂಚಿತರ ಬಗ್ಗೆ ಚೆನ್ನಾಗಿ ಹೇಳಿದ್ದೀರಿ ..
    ಪ್ರತಿಯೊಂದು ಪ್ರತಿಭೆಗಳಿಗೂ ಸರಿಯಾದ ವೇದಿಕೆ ಸಿಕ್ಕರೆ ಶಾಪಗ್ರಸ್ತರು ಕಮ್ಮಿ ಆಗಬಹುದೇನೊ

    ReplyDelete
  16. ನಿಜ ಸರ್.. ಇಲ್ಲಿ ನೈಜ ಪ್ರತಿಭೆಗಳಿಗೆ ಬೆಲೆಯಿಲ್ಲ... ಉತ್ತಮ ಕವನ...

    ReplyDelete
  17. ನಮಸ್ಕಾರ ಪ್ರಕಾಶಣ್ಣ;ನಿಮ್ಮದೇ ಉದಾಹರಣೆ ತೆಗೆದುಕೊಂಡರೆ ,ವೃತ್ತಿಯಲ್ಲಿ ನೀವು ಎಂಜಿನಿಯರ್ ಆದರೂ ನಿಮ್ಮಲ್ಲೊಬ್ಬ ಅದ್ಭುತ ಲೇಖಕನಿದ್ದಾನೆ ಎಂದು ಬ್ಲಾಗ್ ಬರೆಯುವವರೆಗೂ ಪ್ರಾಯಶಃ ನಿಮಗೇ ಗೊತ್ತಿರಲಿಲ್ಲ.ಪ್ರತಿಭೆ ಯಾರಿಗೊಸ್ಕರವೂ ಕಾಯುವುದಿಲ್ಲ,ಪ್ರಕೃತಿಯ ಹೂವುಗಳಂತೆ.ಅದು ತನ್ನಷ್ಟಕ್ಕೇ ಅರಳುತ್ತದೆ.ಆದರೆ ಈ ದಿನದ ರಾಜಕೀಯದಲ್ಲಿ ಸೂಕ್ಷ್ಮಮತಿಗಳಾದ ಪ್ರತಿಭಾವಂತರಿಗೆ ಸೂಕ್ತ ಅವಕಾಶ ದೊರಕುವುದಿಲ್ಲ.ಅದಕ್ಕಾಗಿ ಅವರು ಯಾವ ವಶೀಲಿ ಹಚ್ಚದೆ ,ಯಾವ ರಾಜಕೀಯ ಮಾಡದೆ ತಮ್ಮಷ್ಟಕ್ಕೇ ಸುಮ್ಮನೇ ಇದ್ದುಬಿದುತ್ತಾರಷ್ಟೇ .ಅಥವಾ ಪ್ರತಿಭೆಗೆ ಮನ್ನಣೆ ನೀಡುವ ಹೊರ ದೇಶಗಳಿಗೆ ಹೋಗ ಬಹುದು.ಆಗ ನಾವೆಲ್ಲಾ ಪ್ರತಿಭಾ ಪಲಾಯನದ ಬಗ್ಗೆ ಬೊಬ್ಬೆ ಹೊಡೆಯುತ್ತೇವೆ!ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  18. ಗುರುಪ್ರಸಾದ್ ಅವರಿಗೆ ನಮಸ್ಕಾರ.ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ.ಅದನ್ನು ಸರಿಯಾಗಿ ಗುರುತಿಸಿ ಅದಕ್ಕೆ ಬೆಲೆ ಕೊಟ್ಟು ಅದನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳುವಲ್ಲಿ ನಾವು ಎಲ್ಲೋ ಎಡವಿದ್ದೇವೆ ಅನಿಸುತ್ತದೆ.ಆದರೆ ಈಗಾಗಲೇ ಸಮಾಜದ ಒಳಿತಿಗಾಗಿ ಕೆಲಸಮಾಡುತ್ತಿರುವ ಅನೇಕ ಪ್ರತಿಭಾವಂತರ ಸೇವೆಯನ್ನೂಕಡೆಗಣಿಸುವಂತಿಲ್ಲ.ಅವರೆಲ್ಲರೂ ನಮ್ಮೆಲ್ಲರಿಗೆ ಪ್ರಾತಃಸ್ಮರಣೀಯರು.ಅಂತಹವರ ಸಂಖ್ಯೆ ಇನ್ನೂ ಹೆಚ್ಚು ಬೆಳೆಯಲಿ ಎಂದು ಹಾರೈಸೋಣ. ಧನ್ಯವಾದಗಳು.

    ReplyDelete
  19. ಶ್ರೀಧರ್;ನಮಸ್ಕಾರ.ನಿಮ್ಮ ಹಾರೈಕೆ ನಿಜವಾಗಲಿ.ಎಲ್ಲಾ ಪ್ರತಿಭಾವಂತರಿಗೂ ಅವಕಾಶ ಸಿಕ್ಕಿ ಎಲ್ಲೆಡೆ ಶಾಂತಿ ,ಸಮೃದ್ಧಿ ನೆಲಸಲಿ ಎಂದು ಹಾರೈಸೋಣ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  20. ದಿಲೀಪ್ ಹೆಗ್ಡೆ;ನಮಸ್ಕಾರ.ನಾವು ನಮ್ಮ ಸುತ್ತ ಮುತ್ತ ಇರುವ ಶಾಪ ಗ್ರಸ್ತ ಯಕ್ಷರನ್ನು ಗುರುತಿಸುವ ಕೆಲಸ ಶುರು ಮಾಡೋಣ.ಪ್ರತಿಭೆಗೆ ತಕ್ಕ ಪುರಸ್ಕಾರ ದೊರಕುವ ಕಾಲ ಬರುತ್ತದ್ದೆ ಎನ್ನುವ ಆಶಾವಾದಿಗಳಾಗೋಣ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  21. tumba chennagide... tumba chennagi moodi bandide..... :)

    ReplyDelete
  22. ಪಲ್ಲವಿ;ಥ್ಯಾಂಕ್ಸ್ ಕಂದಮ್ಮಾ.ನಿನಗೆ ಕವಿತೆ ಹಿಡಿಸಿದ್ದು ತುಂಬಾ,ತುಂಬಾಖುಷಿಯಾಯ್ತು.

    ReplyDelete
  23. ತುಂಬಾ ಚಂದದ ಕವನ. ಅವಕಾಶ ವಂಚಿತರು ಇಂದಿಗೂ ಎಳೆಯ ಮರೆಯಲ್ಲಿಯೇ ಉಳಿಯುತ್ತಾರೆ. ಅವಕಾಶಗಳು ಸಿಕಾಗ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ!

    ReplyDelete
  24. ಸತ್ಯ
    ವಿಷಾದ
    ಅಸಹಾಯಕತೆ
    ಸಿಟ್ಟು
    ಎಲ್ಲವನ್ನ ಸ್ಪುಟವಾಗಿ ಹೇಳಿದ್ದೀರ. ನಾನು ನೋಡಿದ ಹೆಸರು ನೆನಪಿಲ್ಲದ ಕೆಲ ಪ್ರತಿಭೆಗಳು ಸರಿದಾಡಿದರು

    ReplyDelete
  25. ಇಲ್ಲೇ ಇದ್ದಾರೆ, ನಮ್ಮ ನಿಮ್ಮ ನಡುವೆ, ಗೊತ್ತೇ ಆಗದಂತೆ! ಶಾಪಗ್ರಸ್ತ ಯಕ್ಷರು...ಗೊತ್ತಾದ ಮೇಲೆ "ಅವರಿಲ್ಲೇ ಇದ್ದರೂ ನಮಗೇ ಗೊತ್ತೇ ಆಗಿರಲಿಲ್ಲವಲ್ಲ" ಎಂದು ಅಚ್ಚರಿಪಡುತ್ತೇವೆ....ಅಲ್ಲಿಗೆ ಮುಗಿಯಿತು..ನಮ್ಮೂರ ವನಸುಮದ ಸುವಾಸನೆ ಹೊತ್ತ ತಂಗಾಳಿ ನಮ್ಮನ್ನು ತೀಡಿದರೂ ಅಷ್ಟು ವಿಶೇಷವೆನಿಸುವದಿಲ್ಲ!

    ReplyDelete
  26. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  27. ಪ್ರವೀಣ್;ನಮಸ್ಕಾರ.ನಿಮ್ಮ ಅರೋಗ್ಯ ಸುಧಾರಿಸಿದೆ ಎಂದುಕೊಂಡಿದ್ದೇನೆ.ನೀವು ಹೇಳುವುದು ಸರಿ.ಸುಮಾರು ಪ್ರತಿಭಾವಂತರು ಎಲೆ ಮರೆಯ ಕಾಯಾಗಿಯೇ ಉಳಿದುಬಿಡುತ್ತಾರೆ.ಧನ್ಯವಾದಗಳು.

    ReplyDelete
  28. ನಾಗರಾಜ್;ನಮಸ್ಕಾರ.ಪ್ರತಿಭೆಗೆ ಪುರಸ್ಕಾರ ಕೊಡದೆ,ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  29. ನಾರಾಯಣ್ ಭಟ್ ರವರಿಗೆ ನಮಸ್ಕಾರ.ಶಾಪಗ್ರಸ್ತ ಯಕ್ಷರನ್ನು ಗುರುತಿಸದಷ್ಟು ಶಾಪಗ್ರಸ್ತರೇ ನಾವು?ಎಲ್ಲದಕ್ಕೂ ಜಡ್ಡು ಗಟ್ಟಿ ಹೋಗಿರುವುದೂ ಒಂದು ಶಾಪವೋ ಏನೋ!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  30. ಎಷ್ಟೋ ಸಭೆ, ಸಮಾರಂಭ, ಕಾರ್ಯಕ್ರಮಗಳ ಹಿಂದೆ ಹಲವತ್ತುಕೊಂಡು ಅದನ್ನು ಏರ್ಪಡಿಸಲು ದುಡಿಯುವ ಕೈಗಳೇ ಬೇರೆ, ವೇದಿಕೆಯ ಮೇಲೆ ಆರ್ಭಟಿಸುವ ಕಾಗದದ ಹುಲಿಗಳೇ ಬೇರೆ! ಸಿಗುವ ಎಲ್ಲಾ ಹಾರ ತುರಾಯಿ ತಮದಾಗಲೆಂದು ಬಯಸುವ ಜನ ಬಹಳ ಇದ್ದಾರೆ. ಒಂದು ಸತ್ಯ ಹೇಳಲೆ- ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ಪ್ರತಿಭೆಯನ್ನು ಪಡೆದೇ ಹುಟ್ಟಿದ್ದಿರುತ್ತದೆ. ಕೆಲವರು ಅದನ್ನು ಪ್ರಚುರಪದಿಸುತ್ತಾರೆ, ಇನ್ನು ಕೆಲವರು ಹಲವರಿಂದ ಉತ್ತೇಜನ ಪಡೆದು ಪ್ರಕಾಶಕ್ಕೆ ಬರುತ್ತಾರೆ, ಇನ್ನು ಕೆಲವರು ಪ್ರಚಾರದ ಗೋಜೆ ಇಲ್ಲದೇ ಸುಮ್ಮನಿರುತ್ತಾರೆ. ಅವಕಾಶ ವಂಚಿತರು ಎನ್ನುವುದಕ್ಕಿಂತ ಅವರು ಅವಕಾಶವನ್ನು ಹುಡುಕಲಿಲ್ಲ ಎಂದರೆ ಸಮಂಜಸ ಎನಿಸುತ್ತದೆ, ಅವಕಾಶ ತನ್ನಿಂದ ತಾನೇ ಬರುವ ಕಾಲ ಇದಲ್ಲ , ಜನಸಂಖ್ಯೆ ಬೆಳೆದಿದೆ-ಪಕ್ಕದಲ್ಲೇ ಗಣ್ಯ ವ್ಯಕ್ತಿ ಇದ್ದರೂ ನಮಗೇ ತಿಳಿದಿರುವುದಿಲ್ಲ ಅಲ್ಲವೇ ? ಎಲ್ಲೋ ಒಂದಿಬ್ಬರು ನಿಸರ್ಗದ ಪ್ರತಿಕೂಲ ಪರಿಸ್ಥಿತಿಯಿಂದ ಅವಕಾಶವಂಚಿತರಾಗಿರಬಹುದು, ಆದರೆ ಇಂದಿನ ದಿನಗಳಲ್ಲಿ ಸ್ವಲ್ಪ ಬುದ್ಧಿ ಉಪಯೋಗಿಸಿದರೂ ಅವಕಾಶ ಸಿಗುತ್ತದೆ, ತಮ್ಮ ಕವನ ಸುಂದರವಾಗಿದೆ, ಕವನಕ್ಕೆ ವಸ್ತುವಿಷಯ ಕೂಡ ತಕ್ಕುದೇ-ವೈರುಧ್ಯವೆನಿಲ್ಲ, ಆದರೆ ನನಗನಿಸಿದ್ದು ಅವಕಾಶ ಸಿಗಲಿಲ್ಲ ಎಂದು ನಿರಾಶಾ ಭಾವನೆ ತಾಳುವವರು ಅವಕಾಶವನ್ನು ಹುಡುಕಲಿ-ಹುಡುಕುವ ಮುನ್ನ ತಾವು ಯಾವುದರಲ್ಲಿ ಹೆಚ್ಚನ ಆಸಕ್ತಿಯುಳ್ಳವರು-ಏನನ್ನು ಕೊಡಬಲ್ಲೆವು ಎಂಬುದನ್ನು ಗಣನೆಗೆ ತೆಗೆದುಕೊಂಡು ಸರಿಯಾದ ಅವರವರು ಮಾಡಬಹುದಾದ ರಂಗದಲ್ಲಿ ಪ್ರಯತ್ನಿಸಲಿ ತನ್ಮೂಲಕ ಶಾಪಗ್ರಸ್ತರಾಗಬಹುದಾದ ಗಂಧರ್ವ-ಯಕ್ಷರು ಸಿಗುವ ಅವಕಾಶ ಪಡೆದು, ಹಕ್ಕಿಯ ಹಿಕ್ಕೆಯಲ್ಲೇ ಬೀಜರೂಪದಲ್ಲಿ ಪಸರಿಸಲ್ಪಟ್ಟರೂ ಮಹಾನ್ ವೃಕ್ಷವಾಗುವ
    ಅರಳೀ ಮರದಂತೆ, ಆಲದ ಮರದಂತೆ ಬೆಳೆಯಲಿ ಎಂದು ಹಾರೈಸುತ್ತೇನೆ, ಅಂದಹಾಗೆ ನಮಗೇ ನಿಮಗೆ ಇಲ್ಲಿ ಅವಕಾಶವಿದೆ ಎಂದು ಯಾರೂ ಹೇಳಿರಲಿಲ್ಲವಲ್ಲ, ನಾವಾಗಿ ಪ್ರಯತ್ನಿಸಿದೆವು-ಬರೆಯಬೇಕೆಂಬ ನಮ್ಮ ಬಯಕೆ ಚಿಗಿತು ಬ್ಲಾಗೆಂಬ ಸಸ್ಯ ಬೆಳೆಯಿತು,ಇನ್ನೂ ಬೆಳೆಯಲಿ-ಹೆಮ್ಮರವಾಗಲಿ, ಸ್ಥಿರವಾಗಿ ಹಲವರಿಗೆ ಆಶ್ರಯ ನೀಡಲಿ, ಅಲ್ಲೊಬ್ಬ ಮುರಳಿ ತನ್ನ ಗೋವುಗಳನ್ನು ಮೆಯಿಸಲಿ, 'ಕೊಳಲಿ'ನ ಗಾನಸುಧೆ ಹರಿಸಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ, ಅಭಿನಂದನೆಗಳು-ಅಭಿವಂದನೆಗಳು

    ReplyDelete
  31. ನಮಸ್ಕಾರ ಭಟ್ ಸರ್.ಕವನದ ವಿಶ್ಲೇಷಣೆ ಅರ್ಥಪೂರ್ಣವಾಗಿದೆ.ಕೆಲವು ಪ್ರತಿಭಾವಂತರು ಎಷ್ಟೇ ಪ್ರಯತ್ನ ಪಟ್ಟರೂ ಬೆಳಕಿಗೆ ಬರುವುದಿಲ್ಲ.ಆ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರು.ಕೆಲವರಿಗೆ ಬೆಳಕಿಗೆ ಬರುವುದು ಬೇಕಿಲ್ಲ.ಕಾಡ ಬೆಳದಿಂಗಳಿನಂತೆ ತಂಪು ಸುರಿಸುತ್ತಾ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ.ಅದೂ ಒಂದು ಶಾಪವೇ?
    ನಿಮ್ಮ ವಿಸ್ತೃತ ಪ್ರತಿಕ್ರಿಯೆ ಒಂದು ಹೊಸ ಯೋಚನಾ ಲಹರಿಯನ್ನು ಹುಟ್ಟುಹಾಕುತ್ತದೆ.ಧನ್ಯವಾದಗಳು.

    ReplyDelete
  32. Murthy Sir,

    Tumbaa sundara, artapurna kavana....

    ReplyDelete

Note: Only a member of this blog may post a comment.