Sunday, October 17, 2010

"ಅಧಿಕ ರಕ್ತದೊತ್ತಡ "

ವೈದ್ಯಲೋಕದ ವಿಚಿತ್ರಗಳು ,ಹೇಳಿದಷ್ಟೂ ಇದೆ .ಎಷ್ಟೊಂದು ರೋಗಗಳು!ಎಷ್ಟೊಂದು ವೈವಿಧ್ಯತೆ !ಒಂದೇ ರೋಗ ಒಬ್ಬೊಬ್ಬ ರೋಗಿಯಲ್ಲೂ ಒಂದೊಂದು ತರಹ !ಕೆಲವರಿಗೆ ರಕ್ತದ ಒತ್ತಡ ಸ್ವಲ್ಪ ಹೆಚ್ಚಾದರೂ, ತಲೆ ತಿರುಗುವುದು,ತಲೆ ವಿಪರೀತ ನೋಯುವುದೂ ಕಾಣಿಸಿಕೊಳ್ಳುತ್ತವೆ. ಕೆಲವರ ಬಿ.ಪಿ.ಯನ್ನು ಚೆಕ್ ಮಾಡಿ, ವೈದ್ಯರಾದ  ನಮ್ಮ ಬಿ.ಪಿ.ಹೆಚ್ಚಾದರೂ ಅವರಿಗೆ ಯಾವ ರೀತಿಯ ತೊಂದರೆಯೂ  ಇಲ್ಲದೆ,'ಅರ್ಜೆಂಟ್ ಕೆಲಸವಿದೆ ಸಾರ್ ,ಇನ್ನೊಮ್ಮೆಬಂದು ಔಷಧಿ ತೆಗೆದುಕೊಳ್ಳುತ್ತೇನೆ' ಎಂದುಹೇಳಿ ಏನೂ ಆಗದವರಂತೆ ಝಾಡಿಸಿಕೊಂಡು ಎದ್ದು ಹೊರಟುಬಿಡುತ್ತಾರೆ. ಬಿ.ಪಿ.ಹೆಚ್ಚಾಗಿರುವುದರಿಂದ ಅವನಿಗೇನಾಗುತ್ತೋ ಎಂದು ನಾವು ವೈದ್ಯರು ಗಾಭರಿಯಾಗಬೇಕಷ್ಟೇ! ಕೆಲವರು ಖಾಯಿಲೆ ಬಗ್ಗೆ ಅಷ್ಟು ಕೇರ್ ಲೆಸ್ ಆಗಿದ್ದರೆ,ಮತ್ತೆ ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಡಾಕ್ಟರ್ ಗಳನ್ನು ಬದಲಾಯಿಸುತ್ತಾ ,ಖಾಯಿಲೆಯನ್ನೇ ಒಂದು  ಹಾಬಿಯನ್ನಾಗಿ ಮಾಡಿಕೊಂಡು ತಮಗೂ,ತಮ್ಮ ಮನೆಯವರಿಗೂ ದೊಡ್ಡ ತಲೆ ನೋವಾಗುತ್ತಾರೆ!
ಆ ದಿನ ಸಂಜೆ ಸುಮಾರು ಐದು ಗಂಟೆ. ಓ.ಪಿ.ಡಿ.ಯಲ್ಲಿ ಸುಮಾರು  ರೋಗಿಗಳು ನನ್ನ ಪರೀಕ್ಷಾ ಕೊಠಡಿಯ ಹೊರಗೆ ಕಾಯುತ್ತಿದ್ದರು.ಆ ವ್ಯಕ್ತಿಗೆ ಸುಮಾರು ಮೂವತ್ತೈದು ವರ್ಷ ವಯಸ್ಸು.ಅವರು ನಮ್ಮ ರಾಯಚೂರು ಥರ್ಮಲ್ ಪವರ್ ಸ್ಟೇಶನ್ ನ ಯೂನಿಯನ್ ಒಂದರ  ಲೀಡರ್ ಆಗಿದ್ದರು. ಸುಮಾರಾಗಿ ಪರಿಚಯವಿತ್ತು. 'ಸ್ವಲ್ಪ ತಲೆ ನೋವಿದೆ  ಸಾರ್ ,ಏನಾದರು ಮಾತ್ರೆ ಕೊಡಿ 'ಎಂದರು.ನಾನು 'ಒಂದು ಸಲ ಬಿ.ಪಿ.ಚೆಕ್ ಮಾಡಿಬಿಡೋಣ'ಎಂದೆ.'ಈಗ ಅದೇನೂ ಬೇಡ ಸಾರ್.ಸ್ವಲ್ಪ ತಲೆನೋವಿದೆ,ಏನಾದರೂ ಮಾತ್ರೆ ಕೊಡಿ .ಇನ್ನೊಂದು ಸಲ ಬಂದು ಬಿ.ಪಿ.ಚೆಕ್ ಮಾಡಿಸಿ ಕೊಳ್ಳುತ್ತೇನೆ,ಅರ್ಜೆಂಟಾಗಿ ಐದೂವರೆ ಬಸ್ಸಿಗೆ ಬೆಂಗಳೂರಿಗೆ ಹೋಗಬೇಕಿದೆ 'ಎಂದರು.ಒಂದೇ ನಿಮಿಷದಲ್ಲಿ ನೋಡಿಬಿಡುತ್ತೇನೆ ಎಂದು ಬಲವಂತ ಮಾಡಿ  ಬಿ.ಪಿ.ಚೆಕ್ ಮಾಡಿದೆ.ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ.ಅಷ್ಟು ಹೆಚ್ಚಿನ ರಕ್ತದ ಒತ್ತಡವನ್ನು ಅದಕ್ಕೂ ಮುಂಚೆ ನಾನು ನೋಡಿರಲೇ ಇಲ್ಲ!ಬಿ.ಪಿ.260/140 mm hg.ಇತ್ತು !ಈ ಆಸಾಮಿ ನೋಡಿದರೆ ಸ್ವಲ್ಪ ಮಾತ್ರ  ತಲೆ ನೋವು ಎನ್ನುತ್ತಿದ್ದಾನೆ!ಅಷ್ಟು ಹೆಚ್ಚು ರಕ್ತದ ಒತ್ತಡಕ್ಕೆ,ರಕ್ತ ನಾಳಗಳು ಬರ್ಸ್ಟ್ ಆಗಿ ಎಲ್ಲಿ ಬೇಕಾದರೂ ರಕ್ತ ಸ್ರಾವವಾಗಬಹುದು!ಈ ವ್ಯಕ್ತಿ ದೇಹದೊಳಗೊಂದು time bomb ಇಟ್ಟುಕೊಂಡು ಓಡಾಡುತ್ತಿದ್ದಾನೆ ಎನಿಸಿ ಅಚ್ಚರಿಯಾಯಿತು! ರೋಗಿಗಿಂತ ಡಾಕ್ಟರ್ ಆದ ನನಗೇ ಹೆಚ್ಚು ಗಾಭರಿ  ಆಗಿತ್ತು!ಮೇಲೆ ಮಾತ್ರ ಏನೂ ಆಗದವನಂತೆ ಇರಬೇಕಾದ ಅನಿವಾರ್ಯತೆ !ಮತ್ತೆ ನಾಲಕ್ಕು ಸಲ ಬೇರೆ ,ಬೇರೆ ಬಿ.ಪಿ.ಉಪಕರಣಗಳಲ್ಲಿ ,ಬೇರೆಯವರ ಹತ್ತಿರ ಚೆಕ್ ಮಾಡಿಸಿದರೂ ಬಿ.ಪಿ.ಅಷ್ಟೇ ಇತ್ತು .ಹೆಚ್ಚಿನ ವ್ಯತ್ಯಾಸವೇನೂ ಕಂಡು ಬರಲಿಲ್ಲ.ಅವರನ್ನು ತಕ್ಷಣ ಅಡ್ಮಿಟ್ ಮಾಡಿಕೊಂಡು ಅವರ ಮನೆಯವರನ್ನು ಕರೆಸಿದೆ.ಎರಡು ದಿನ ಗಳಲ್ಲಿ ಬಿ.ಪಿ.150/90 mm hg ಗೆ ಇಳಿಯಿತು.ಕೆಲವೊಮ್ಮೆ ಕಿಡ್ನಿಯಲ್ಲಿ ಏನಾದರೂ ತೊಂದರೆ ಇದ್ದರೆ ಅಷ್ಟೊಂದು ಸಣ್ಣ ವಯಸ್ಸಿಗೆ ಅಷ್ಟು ಹೆಚ್ಚಿನ ರಕ್ತದ ಒತ್ತಡ ವಿರುತ್ತದೆ.ಅದಕ್ಕೆ 'ಸೆಕೆಂಡರಿ ಹೈಪರ್ ಟೆನ್ಶನ್',ಎನ್ನುತ್ತಾರೆ.(ಮಾಮೂಲಾಗಿ ಕಾಣಿಸಿಕೊಳ್ಳುವ ಬಿ.ಪಿ.ಗೆ ,'ಪ್ರೈಮರಿ ಹೈಪರ್ ಟೆನ್ಶನ್',ಎನ್ನುತ್ತಾರೆ.)ಅವರನ್ನು ಮತ್ತೆ ಮುಂದಿನ ತಪಾಸಣೆ ಗಳಿಗಾಗಿ ,ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ರೆಫರ್ ಮಾಡಲಾಯಿತು. ಮತ್ತೆ ಮುಂದೇನಾಯಿತು ಎಂದು ನನಗೆತಿಳಿಯಲಿಲ್ಲ,ಏಕೆಂದರೆ ನನಗೆ ಬೇರೆ ಜಾಗಕ್ಕೆ ವರ್ಗವಾಯಿತು.ಐದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಅಂಬಿಕಾ ನಗರದಲ್ಲಿ ಆ ವ್ಯಕ್ತಿಯ ಭೇಟಿಯಾಯಿತು.ಆ ವ್ಯಕ್ತಿ ನನ್ನನ್ನು ನೋಡಿದ ತಕ್ಷಣ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು.ನನ್ನಿಂದ ಏನು ಎಡವಟ್ಟು  ಆಯಿತೋ ಎಂದು ಗಾಭರಿಯಾಯಿತು.ಆಮೇಲೆ ಸಮಾಧಾನ ಮಾಡಿಕೊಂಡು ಹೇಳತೊಡಗಿದರು 'ಸಾರ್,ನೀವು ನನ್ನನ್ನು ಕಿಡ್ನಿ ಫೌಂಡೆಶನ್ ಗೆ ಕಳಿಸಿದಿರಿ.ಅಲ್ಲಿ ನನಗೆ ಕಿಡ್ನಿ ಫೈಲ್ಯೂರ್ ಆಗಿದ್ದು ಗೊತ್ತಾಯಿತು .ನನಗೆ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಮಾಡಿದರು.ನನ್ನ ಹೆಂಡತಿಯೇ ನನಗೆ ಕಿಡ್ನಿ ಡೊನೇಟ್ ಮಾಡಿದಳು .ಆ ದಿನ ನೀವು ಬಲವಂತದಿಂದ ನನ್ನ  ಬಿ.ಪಿ.ಚೆಕ್ ಮಾಡದಿದ್ದರೆ ನಾನು ಬದುಕುತ್ತಿರಲಿಲ್ಲಾ ಸಾರ್.ನಿಮ್ಮ ಉಪಕಾರ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲಾ' ಎಂದು ನನ್ನ ಕೈ ಹಿಡಿದು ಮತ್ತೆ ಕಣ್ಣಲ್ಲಿ ನೀರು ತುಂಬಿಕೊಂಡರು .ನಾನು ಮಾತು ಹೊರಡದೆ ಮೂಕ ವಿಸ್ಮಿತನಾಗಿದ್ದೆ.

32 comments:

  1. ನಿಮ್ಮ ಬತ್ತಳಿಕೆಯಲ್ಲಿ ಎಷ್ಟೊಂದು ಮಾನವೀಯ ಅನುಭವಗಳ ಸರಮಾಲೆ ಇವೆ !!!! ನಿಮ್ಮ ಸೇವೆ ಇಂದ ದೂರ ದರ್ಶಿತ್ವದಿಂದ ಆ ಜೀವ ಉಳಿದಿದೆ ಅಂದ್ರೆ ಹೆಮ್ಮೆಯ ವಿಚಾರ . ನಿಮ್ಮ ವೃತ್ತಿಗೆ ನಿಮ್ಮ ಮಾನವೀಯ ಗುಣಕ್ಕೆ ನನ್ನ ಹೃದಯ ಪೂರ್ವಕ ನಮನಗಳು.ನೀವು ಉಳಿಸಿದ ಎಷ್ಟೋ ಜೀವಗಳ ಶುಭ ಹಾರೈಕೆ ನಿಮಗೆ ಶ್ರೀ ರಕ್ಷೆಯಾಗಲಿ.

    ReplyDelete
  2. WOW!! KrishnaMurthy, you have not only given us some tips as to what should be done during headaches, but surely, any patient with the best doctor is the luckiest one.. I am glad to have known you atleast through blogging world..

    My father too had severe hypertension. When I was about 15, his ears and nose started to bleed. Then our doctor had told him that he was lucky that it bleeded through his nose and ears, otherwise it would had been a brain clot..
    I am sure, I too have this tendency to get high blood pressure.I am taking all precautions. Good breathing, healthy food, workout. Sometimes even if you have all these, if you have lots of pressure and worries, nothing can save, thats what atleast I think so.. :-)
    Regards,
    Bhavana

    ReplyDelete
  3. You should have witnessed several situations, please do share more instances like this...

    ReplyDelete
  4. NANAGE EDE ROGAVIDE, EDE MATRE KODI,EDE INJECTION KODI ENDU VAIDYARIGE HELUVA JANA NAMMLLI SAKASHTIDDARE, VAIDYARA KELASAVANNU VAIDY
    RIGE BITTARE BITTARE CHENNAGIRUVADENO.

    ReplyDelete
  5. ಬಾಲೂ ಸರ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಕೆಲವೊಮ್ಮೆ ಸಣ್ಣ ,ಸಣ್ಣ ವಿಷಯಗಳೂ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯವಾಗುತ್ತವೆ ಎನ್ನುವುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ.ನನ್ನ ಮೂವತ್ತನಾಲ್ಕು ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ನಡೆದಿರುವ ಹಲವಾರು ಘಟನೆಗಳಲ್ಲಿ ನೆನಪಿನ ಉಗ್ರಾಣದಿಂದ ಕೆಲವನ್ನು ಹೆಕ್ಕಿ ನಿಮ್ಮ ಮುಂದಿಡಲು ಪ್ರಯತ್ನಿಸುತಿದ್ದೇನೆ.ಇದರಲ್ಲಿ ಚರ್ಚೆಯಾಗುವ ವಿಷಯಗಳಿಂದ ಹಲವಾರು ಮಂದಿಗೆ ಉಪಯುಕ್ತ ಮಾಹಿತಿ ದೊರಕಬಹುದು ಎನ್ನುವುದು ನನ್ನ ಅನಿಸಿಕೆ.ನಮಸ್ಕಾರ.

    ReplyDelete
  6. ghaTane bagge heLuttale, oLLeya tips kottiri sir....... tumbaa thanks............ nimma kartavyavishTege salaam.......

    ReplyDelete
  7. BHAAVANA;welcome to my blog.There is no need to panic.A head ache now and then is a part of today's hectic,stress ridden life style.Most of the headaches are harmless,and the case I have mentioned here is a rarity.But if some one who is above thirty five years of age has been getting frequent ,persistent head aches,it is better he seeks medical advise.salt restriction is the main stay in blood pressure control.one should have a knowledge of the hidden salt.A relaxed life style with regular meditation and 'praanaayaama'can prevent hypertension.Regards.

    ReplyDelete
  8. ಹೇಮಚಂದ್ರ;ನಮ್ಮ ಬಳಿ ಬರುವ ಹೆಚ್ಚು ರೋಗಿಗಳು ನೀವು ಹೇಳಿದ ರೀತಿಯ ರೋಗಿಗಳೇ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ದಿನಕರ್;ಆಸ್ಥೆಯಿಂದ ಓದಿ ನಲ್ಮೆಯಿಂದ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು.ನಮಸ್ಕಾರ.

    ReplyDelete
  10. ವೈದ್ಯ ವೃತ್ತಿಯ ನಿಮ್ಮ ಅನುಭವಗಳನ್ನು ನಮ್ಮೊಡನೆ ಹ೦ಚಿಕೊಳ್ಳುವುದರ ಜೊತೆಗೆ ವೈದ್ಯಕೀಯ ತಪಾಸಣೆ ಕ್ರಮ ಮತ್ತು ಕೆಲ ಸ೦ದರ್ಭಗಳ ಲ್ಲಿ ನಾವೆಲ್ಲಾ ತೆಗೆದುಕೊಳ್ಳ ಬೇಕಾದ ಮು೦ಜಾಗ್ರತೆ ಬಗ್ಗೆ ಸೂಕ್ಷ್ಮವಾಗಿ ತಿಳಿ ಹೇಳುತ್ತಿದ್ದೀರಿ. ನಿಮ್ಮ ಅನುಭವ ಸಾಮ್ರಾಜ್ಯ ಬಹಳ ವಿಸ್ತಾರವಾಗಿದೆ . ಇನ್ನಷ್ಟು ಇ೦ತಹ ಅನುಭವ ಗಳನ್ನು ನಮ್ಮೊ೦ದಿಗೆ ಹ೦ಚಿ ಕೊಳ್ಳಿ.

    ReplyDelete
  11. abha enta kelasa.... andu neevu balavanta maadi avara BP check maadiddakke mattomme bhetti haago haage aytu..... oLLe kelasa maaDiddeeri sir..

    ReplyDelete
  12. ಸರ್ ಒಳ್ಳೆ ಕೆಲಸ ಮಾಡಿದ್ರಿ.ನಿಮ್ಮ ಬಲವಂತ ಎಷ್ಟು ಒಳ್ಳೆ ಕೆಲಸ ಮಾಡಿಸಿತು ನೋಡಿ.ಆಲ್ವಾ!!
    ಕೆಲವೊಮ್ಮೆ ಸಣ್ಣದು ಅಂತ ಕೇವಲವಾಗಿ ಯಾವುದನ್ನೂ ಭಾವಿಸ ಬಾರದಲ್ಲ. !

    ReplyDelete
  13. ಸರ್

    ನಿಮ್ಮ ವ್ರತ್ತಿಯ ವಿಶೇಷತೆಯೇ ಅದು

    ಜನರ ಬದುಕನ್ನು ಅರಳಿಸುತ್ತಿರಿ

    ನಿಮ್ಮ ಸೇವೆಗೆ ಒಂದು ನಮನ

    ReplyDelete
  14. ಪರಾಂಜಪೆ ಸರ್,ಗುರು ಸರ್,ಮನಸು ಮೇಡಂ,ಶಶಿ ಜೋಯಿಸ್ ಮೇಡಂ;ನಲ್ಮೆ ಯಿಂದ ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಇದೇ ರೀತಿ ಮುಂದುವರೆಯಲೆಂದು ಹಾರೈಸುತ್ತೇನೆ.ಎಲ್ಲರಿಗೂ ನನ್ನ ನಮಸ್ಕಾರಗಳು.

    ReplyDelete
  15. ಬಿ.ಪಿ ಬಗ್ಗೆ ನೀವು ಹೇಳಿದ್ದು ಸತ್ಯ. ನನ್ನ ಅನುಭವಕ್ಕೆ ಅನೇಕ ಸಾರಿ ಬಂದಿದೆ. ಒಮ್ಮೆ ೬೫ ವರ್ಷದ ಮಹಿಳೆ-ಒಂದೂವರೆ ದಿನದಿಂದ ವಾಂತಿ, ತಲೆಸುತ್ತೆಂದು ನನ್ನ (ಅರೆಕಾಲಿಕ ಸಂಜೆ) ಕ್ಲಿನಿಕ್ಕಿಗೆ ಬಂದಾಗ-ಬಿ.ಪಿ.ಕಡಿಮೆಯಾಗಿರಬಹುದು ಎಂದು ಆಲೋಚನೆ ಮಾಡಿ ಬಿ.ಪಿ. ಅಳೆದಾಗ-ನನಗೇ ಗಾಬರಿ-೨೭೦/೧೬೦. ಅಡ್ಮಿಟ್ ಎಲ್ಲಿ ಆ ಚಿಕ್ಕ ಹಳ್ಳಿಲಿ? ಡಿಪಿನ್ ಸಾಫ್ಟ್ ಜೆಲ್ ಕ್ಯಾಪ್ಸುಲ್-ಸಬ್ ಲಿಂಗುಅಲಿ ಇಟ್ಟಾಗ ನಿರೀಕ್ಷಿತ ಕೆಲಸ ಮಾಡಿತು-೧೬೦ ಕ್ಕೆ ಇಳಿಯಿತು!!! (ಈಗಲೂ ಅವರಿಗೆ ಬಿ.ಪಿ. ಮಾತ್ರೆ ಕೊಡುತ್ತಿದ್ದೇನೆ-ಕಿಡ್ನಿ ಪ್ರಾಬ್ಲಂ ಇಲ್ಲ)

    ReplyDelete
  16. ಸುಬ್ರಮಣ್ಯಮಾಚಿಕೊಪ್ಪ;ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ 'ಪ್ರೈಮರಿ'ಅಥವಾ 'ಎಸೆನ್ಷಿಯಲ್' ಹೈಪರ್ಟೆನ್ಶನ್.ಅಷ್ಟೊಂದು ಜಾಸ್ತಿ ರಕ್ತದ ಒತ್ತಡ ಇರುವವರಿಗೆ ಅದನ್ನು ತಕ್ಷಣಕ್ಕೆ ಕಮ್ಮಿ ಮಾಡಿದ ಮೇಲೆ,'ಎಂಡ್ ಆರ್ಗನ್ ಡ್ಯಾಮೇಜ್'(kidney,eye,heart and brain ಗಳಿಗೆ)ಏನಾದರೂ ಆಗಿದೆಯಾ ಎಂದು ಖಾತ್ರಿ ಪಡಿಸಿಕೊಳ್ಳಲು higher centreಗೆ ರೆಫರ್ ಮಾಡುವುದು ಒಳ್ಳೆಯದು.ಕೆಲವೊಮ್ಮೆ,ವಿಶೇಷವಾಗಿ ಸಣ್ಣ ವಯಸ್ಸಿನಲ್ಲೇ ಬಿ.ಪಿ.ಕಾಣಿಸಿಕೊಂಡಾಗ 'renal artery stenosis pheochromo cytoma'ಅಥವಾ ಬೇರೆ ಏನಾದರೂ ಕಾರಣಗಳಿಂದ(ಸೆಕೆಂಡರಿ ಹೈಪರ್ ಟೆನ್ಶನ್) ಬಂದಿದೆಯಾ ಎಂದು investigate ಮಾಡಬೇಕಾಗುತ್ತೆ.ಬಹಳಷ್ಟು ಬಿ.ಪಿ.ಪೇಶಂಟ್ ಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ they land up
    in complications.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ಡಾಕ್ಟರ್ ಸಾಬ್ ಮತ್ತೊಂದು ಸೊಗಸಾದ ಲೇಖನ. ನಿಮ್ಮ ಅನುಭವದ ಮೂಸೆಯಿಂದ.
    ಈ ಒತ್ತಡದ ಜೀವನದಲಿ ನೀವು ಹೇಳಿದ ಪ್ರಾಣಾಯಾಮ,ಧ್ಯಾನ ಉಪಕಾರಿಗಳು. ಆದರೆ ನನ್ನಂತಹ
    ಸೋಮಾರಿಗಳು ಏನು ಮಾಡೋದು ಗುಳಿಗೆಅವಲಂಬಿತರು....!

    ReplyDelete
  18. ದೇಸಾಯ್ ಸರ್;ನಮಸ್ಕಾರ.ನಿಮಗೆ ಲೇಖನ ಇಷ್ಟವಾದದ್ದು ಸಂತೋಷವಾಯಿತು.ಮಾಮೂಲಾಗಿ ಎಲ್ಲರೂ ತೆಗೆದುಕೊಳ್ಳುವ ಗುಳಿಗೆಗಳಲ್ಲಿ ಅಂತಹ ಸೈಡ್ಎಫೆಕ್ಟ್ ಇರುವುದಿಲ್ಲ.ಹೇಗೋ ಒಟ್ಟಿನಲ್ಲಿ ರಕ್ತದಒತ್ತಡ ಹಿಡಿತದಿಲ್ಲಿದ್ದರೆ ಸಾಕು.ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  19. ಸರ್,
    ನಿಜಕ್ಕೂ ನಿಮ್ಮ ಅನುಭವ ದೊಡ್ಡದು..
    ಹೃದಯಕ್ಕೆ ಹತ್ತಿರವಾಗುವ ಅನೇಕ ಘಟನೆಗಳನ್ನು ನೀವು ನೀಡಿದ್ದೀರಿ..
    ಹೀಗೆ ನಿಮ್ಮ ಅನುಭವಾಮೃತ ಬಡಿಸುತ್ತಿರಿ..

    ReplyDelete
  20. ಡಾಕ್ಟರ್ ಜಿ ತಡವಾಗಿದೆ ಕ್ಷಮಿಸಿ .ನಾವು ಫೋನ್ ನಲ್ಲಿ ಮಾತಾಡಿಕೊಂಡಂತೆ ಕಾರ್ಯಗತ ಗೊಳಿಸಿದ್ದೇನೆ. ಕಂಪ್ಯೂಟರ್ ಕೈ ಕೊಟ್ಟು ವಿಳಂಭ ಆಯಿತು ಸಾರಿ

    ReplyDelete
  21. ವಸಂತ್;ನಿಮ್ಮ ನಲ್ಮೆಯ ಪ್ರತಿಕ್ರಿಯೆಗೆ ಧನ್ಯವಾದಗಳು.ಮುಂದೆಯೂ ನಿಮ್ಮ ಪ್ರೋತ್ಸಾಹ ಪೂರಕ ಪ್ರತಿಕ್ರಿಯೆಗಳು ಬರುತ್ತಿರಲಿ.

    ReplyDelete
  22. ಅಪ್ಪ ಅಮ್ಮ;ನಿಮ್ಮ ಬ್ಲಾಗಿನ ಹೆಸರಿನಂತೆ ನಿಮ್ಮ ಪ್ರೀತಿಯೂ ದೊಡ್ಡದು.ನಿಮ್ಮ 'ಸಾನ್ವಿಯ ಜೊತೆಯಲ್ಲಿ' ಲೇಖನ ನನ್ನ ನೆಚ್ಚಿನ ಲೇಖನಗಳಲ್ಲಿ ಒಂದು.ಮುಂದೆಯೂ ಬ್ಲಾಗಿಗೆ ತಪ್ಪದೆ ಬರುತ್ತಿರಿ.ನಮಸ್ಕಾರ.

    ReplyDelete
  23. ಬಾಲೂ ಸರ್;ನಿಮ್ಮ ಸ್ನೇಹಕ್ಕೆ,ನಿಮ್ಮ ಪ್ರೀತಿಗೆ ಧನ್ಯವಾದಗಳು.ನಮಸ್ಕಾರ.

    ReplyDelete
  24. ತುಂಬಾ ದಿವಸಗಳಿಂದ ಬ್ಲಾಗ ಲೋಕದಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಇವತ್ತು ನಿಮ್ಮ ಹಳೆಯ ಲೇಖನಗಳನ್ನೂ ಓದಿದೆ. ತುಂಬಾ ಚನ್ನಾಗಿದೆ. ನೀವ್ಯಾಕೆ ಒಂದು ಪುಸ್ತಕ ತರಬಾರದು?

    ReplyDelete
  25. ನಿಮ್ಮ ಬ್ಲಾಗ್ ನ್ನು ಪ್ರಥಮ ಬಾರಿ ಓದಿದೆ ಇಂದು. ಪರಿಚಯಿಸಿದ್ದು ಶಿವು ಬ್ಲಾಗ್. ಸಂತೋಷವಾಯಿತು.

    ReplyDelete
  26. ನಾವು ಬರಿದೇ ಹೇಳಲಿಲ್ಲ "ಸರ್ಜನರ ಸಹವಾಸ ಹೆಜ್ಜೇನು ಸೇವಿದಂತೆ" ಎಂದು, ಲೇಖನ ತಮ್ಮೊಳಗಿನ ಮಾನವೀಯ ಆದರ್ಶ, ಅನುಕಂಪ, ಸಹಾಯ, ಕರ್ತವ್ಯ, ಮಾಹಿತಿ ಎಲ್ಲವನ್ನೂ ಒಳಗೊಂಡಿದೆ, ಧನ್ಯವಾದಗಳು

    ReplyDelete
  27. ಬಾಲೂ ಸಾಯಿಮನೆ ಸರ್;ಸಧ್ಯಕ್ಕೆ ಪುಸ್ತಕ ಪ್ರಕಟಿಸುವ ಯೋಚನೆ ಇಲ್ಲ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವೂ ನಿಮ್ಮ ವಿಶಿಷ್ಟ ವಿದೇಶದ ಅನುಭವಗಳ ಬಗ್ಗೆ ಪುಸ್ತಕ ಪ್ರಕಟಿಸಿ.ನಮಸ್ಕಾರ.

    ReplyDelete
  28. ಮಾಲಾ ಲಹರಿಯವರಿಗೆ ; ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  29. ಭಟ್ ಸರ್;ವೈದ್ಯ ಲೋಕದ ವಿಸ್ಮಯಗಳನ್ನು ನಾನು ಕಂಡಂತೆ ದಾಖಲಿಸುವ ಪ್ರಯತ್ನ ಮಾಡಿದ್ದೇನೆ.ಇದು ನನ್ನ ಅನುಭವಕ್ಕೆ ಬಂದ ಪ್ರಪಂಚದ ಒಂದು ಚಿತ್ರಣ.ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ.ನಿಮ್ಮ ಸ್ನೇಹಕ್ಕೆ,ನಿಮ್ಮ ಪ್ರೀತಿಗೆ ನಮಸ್ಕಾರ.

    ReplyDelete
  30. ನನಗೆ ೩೨ ನೇ ವರ್ಷದಲ್ಲಿ ಪದೇ ಪದೇ ತಲೆನೋವು ಕಂಡಾಗ ಡಾಕ್ಟರೊಬ್ಬರು ರಕ್ತದೊತ್ತಡ ಪರೀಕ್ಷಿಸಿ (೧೧೦-೧೫೦) ಇದ್ದುದ್ದು ನೋಡಿ ಮಾತ್ರೆ ಸತತ ತೆಗೆದುಕೊಳ್ಳಲು ಹೇಳಿದರು. ನಾನು ಉಪೆಕ್ಷಿಸಿದ್ದೆ. ಆದರೆ ನಿರಂತರ ತೊಂದರೆ ಇದ್ದುದರಿಂದ ಹಲವರು ವೈಧ್ಯರ ಅಭಿಪ್ರಾಯ ಒಂದೇ ಆದ್ದರಿಂದ ಅ೦ದಿನಿಂದ ಇ೦ದಿನವರೆಗೆ ತಪ್ಪದೆ ಮಾತ್ರೆ ತೆಗೆದುಕೊಳ್ಳುತ್ತಿರುವೆ.
    ಪ್ರಾಣಾಯಾಮ ಯೋಗ ಮಾಡುವದರಿಂದ ಕಡಿಮೆಯಾಗಿರುವದೋ ಎಂದುಕೊಂಡು ಸ್ವಲ್ಪ ದಿನ ಮಾತ್ರೆ ಬಿಟ್ಟಿದ್ದೆ. ಆದರೆ ತಲೆನೋವು ಮರುಕಳಿಸಿತು. ಈಗ ಮಾತ್ರೆ ಜೊತೆಗೆ ಮನೆಯಲ್ಲೇ ನಿರಂತರ ನಾನೇ ರಕ್ತದೊತ್ತಡ ಪರೀಕ್ಷಿಸುತ್ತೇನೆ.
    ತಮ್ಮ ಲೇಖನ ನನ್ನನ್ನು ಇನ್ನು ಜಾಗೃತನನ್ನಾಗಿಸಿದೆ.
    ಇಂತಹ ಉಪಯುಕ್ತ ಲೇಖನಗಳು ಇನ್ನು ಬರಲಿ.

    ReplyDelete
  31. ವೈದ್ಯಲೋಕದ ಮಾಹಿತಿಯನ್ನೂ ಕಥೆಯಾಗಿ ಹೇಳುತ್ತ ಹೋಗುವ ನಿಮ್ಮ ಬರಹಗಳು ಇಷ್ಟವಾಗುತ್ತವೆ, ತನ್ನ ಸುತ್ತಮುತ್ತ ಆಗುವುದನ್ನೇ ಬರೆದಾಗ ಬರಹ ಸಾರ್ಥಕ್ಯವಾಗುತ್ತದೆ, ನಿಮ್ಮ ಜನಪ್ರೀತಿ ಕುಶಿಕೊಡುತ್ತದೆ..

    "ಕೆಲವರು ಖಾಯಿಲೆ ಬಗ್ಗೆ ಅಷ್ಟು ಕೇರ್ ಲೆಸ್ ಆಗಿದ್ದರೆ,ಮತ್ತೆ ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಡಾಕ್ಟರ್ ಗಳನ್ನು ಬದಲಾಯಿಸುತ್ತಾ ,ಖಾಯಿಲೆಯನ್ನೇ ಒಂದು ಹಾಬಿಯನ್ನಾಗಿ ಮಾಡಿಕೊಂಡು ತಮಗೂ,ತಮ್ಮ ಮನೆಯವರಿಗೂ ದೊಡ್ಡ ತಲೆ ನೋವಾಗುತ್ತಾರೆ!" ಎಷ್ಟು ನಿಜ ಅಲ್ಲವೇ..?

    ReplyDelete
  32. ಒಬ್ಬ ವೈದ್ಯ ನಿರ್ವಹಿಸಬೇಕಾದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿರುವಿರಿ ತುಂಬಾ ತುಂಬಾ ಅಭಿನಂದನೆಗಳು :)

    ReplyDelete

Note: Only a member of this blog may post a comment.