Saturday, October 1, 2011

"ಮರೆವಿನಲ್ಲೂ ...ಸುಖವಿದೆ !!"

ವೃದ್ಧ ದಂಪತಿಗಳಿಬ್ಬರೇ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರೆ.ಮಕ್ಕಳಿಬ್ಬರೂ ಅಮೇರಿಕಾ ಸೇರಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ  ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ  ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ  ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ  ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು. 'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ  ಜಂಬ ಕೊಚ್ಚಿಕೊಂಡ !!! 
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ  ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!

20 comments:

 1. "ಮರೆವೆ .....ಜೀವನ ..ಸಾಕ್ಷಾತ್ಕಾರ"

  ಇಲ್ಲಿ ಮರೆವೇ ಒಲವು...ಚೆನ್ನಾಗಿದೆ ಸರ್..

  ReplyDelete
 2. ha chennagide sir..ಮರೆವೆ ಜೀವನ ಸಾಕ್ಷಾತ್ಕಾರ

  ReplyDelete
 3. ಮರೆವೇ ಜೀವನ ಸಾಕ್ಷಾತ್ಕಾರ...

  ಎಷ್ಟು ಮುದ್ದಾಗಿ ಬರೆದಿದ್ದೀರಾ ಡಾಕ್ಟ್ರೇ! ಆ ವೃದ್ಧ ದಂಪತಿಗಳ ಇಂತಹ ಮರೆವಿನಲ್ಲೇ ದೊರೆಯುವ ಸಾಂಗತ್ಯ ಸದಾ ಉಳಿಯಲಿ.

  ಬರವಣಿಗೆಯಲ್ಲಿ ನೀವು ಬಳಸುವ ಸುಲಭ ಜೀರ್ಣಕಾರಕ ಭಾಷಾ ಪ್ರಯೋಗ, ಬರಹವು ಮೆದುಳಿನಲ್ಲಿ ಅಚ್ಚೊತ್ತುವಂತೆ ಮಾಡುತ್ತದೆ.

  ಅಂದ ಹಾಗೆ ತಾತ ಬೇಧಿ ನಿಲ್ಲಲು ಔಷಧಿ ಕೇಳಿದರೆ ತಾತ ಮರೆತು ಜಾಪಾಳ ಮಾತ್ರೆ ತಂದು ಕೊಟ್ಟರೇ, ಏನು ಗತಿ ಮಹಾಸ್ವಾಮಿ?

  ReplyDelete
 4. ಸುಖ ಸಂಸಾರದ ಏಕಮೇವ ಸೂತ್ರ ಅಂದರೆ ಮರೆವು!

  ReplyDelete
 5. ಮೌನ ರಾಗ ಮೇಡಂ;ಇಲ್ಲಿ ಮರೆವು ಕೂಡ ವರವೇ ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. Sir, its good :-) & i think Sunaath sir statement is result of experience :-) :-)

  ReplyDelete
 7. ಮನಸು ಮೇಡಂ;ಹೌದು!ಇಲ್ಲಿ'ಮರೆವೇ ಜೀವನ ಸಾಕ್ಷಾತ್ಕಾರ!'ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. ಬದರಿ;ನೀವು ಹೇಳುವ ಹಾಗೆ ಅಜ್ಜಿ ಬೇದಿ ನಿಲ್ಲೋಕೆ ಮಾತ್ರೆ ಕೇಳಿ,ಅಜ್ಜ ಜಾಪಾಳ ಮಾತ್ರೆ ಕೊಟ್ಟರೆ ನಿಜಕ್ಕೂಕಷ್ಟವೇ!ಅದನ್ನು ಹೇಗೆ ನಿಭಾಯಿಸುತ್ತಾರೋ ಅವರನ್ನೇ ಕೇಳಬೇಕು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 9. ಸುನಾತ್ ಸರ್;ನೀವು ಹೇಳುವುದು ಸರಿ.ಇಲ್ಲಿ ಮರೆವೆ ಸುಖ ಸಂಸಾರದ ಸೂತ್ರ!

  ReplyDelete
 10. NRK;ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 11. maretare jeevana sukha.....

  satyavaada maatu...
  tumbaa saraLavaagi heLiddIraa sir...

  thank you....

  ReplyDelete
 12. ಮರೆವಿನ ಪ್ರಹಸನ ತುಂಬಾ ಚೆನ್ನಾಗಿದೆ.

  ನನಗೂ ಇತ್ತೀಚೆಗೆ ಮರೆವು ತುಂಬಾ ಹೆಚ್ಚಾಗ್ತಾ ಇದೆ...ಇದನ್ನು ಮೇಲಿಂದ ಮೇಲೆ ಜ್ನಾಪಿಸಿಕೊಳ್ಳುವುದರಲ್ಲೇ ಏನೋ ಸುಖ ಸಿಗ್ತಾ ಇದೆ!

  ReplyDelete
 13. ದಿನಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಜಕ್ಕೂ ಕೆಲವು ವಿಷಯಗಳನ್ನು ಮರೆತುಬಿಡುವುದೇ ಲೇಸವಲ್ಲವೇ?

  ReplyDelete
 14. ಭಟ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಮರೆವು ಕೆಲವು ಸಲ ವರವಲ್ಲವೇ?ಬರುತ್ತಿರಿ.

  ReplyDelete
 15. ಡಾಕ್ಟ್ರೆ...
  ಮರೆವು ಹೆಚ್ಚಾಗಿ ತಾವು "ಗಂಡ, ಹೆಂಡತಿ" ಅಂತ ಮರೆಯಲಿಲ್ಲವಲ್ಲ ಸಧ್ಯ !!

  ಗೆಳೆಯ ,ಗೆಳತಿ ಅಂದು ಕೊಂಡರೆ ಓಕೆ...

  ಮರೆವು ನಮಗೆ ದೇವರು ಕೊಟ್ಟ ವರ...
  ಬದುಕಲ್ಲಿ ನಡೆದ ನೋವನ್ನು ಮರೆತು ಹೊಸ ಆಸೆ, ಚಿಗುರು "ಮರೆವು" ಹುಟ್ಟಿಸುತ್ತದೆ..

  ReplyDelete
 16. ಪ್ರಕಾಶಣ್ಣ ;ನಿಮ್ಮ ಕಾಮೆಂಟ್ ಸೂಪರ್,ನಿಮ್ಮ ಕವನಗಳ ಹಾಗೆ!

  ReplyDelete
 17. ಅಯ್ಯೋ ಸಾರ್ ಆ ಅಜ್ಜ-ಅಜ್ಜಿ ಕಥೆ ಬಿಡಿ ನಾನು ಒಮ್ಮೆ -
  ನನ್ನ ಅಮ್ಮ ಕರ್ಜಿಕಾಯಿ ಮಾಡ್ಲಿಕ್ಕೆ ಸಕ್ಕರೆ ಸಾಲದ ಇದೆ ತಗೊಂಡ್ ಬಾ ಅಂದ್ರು ನಾನು ಹೋಗಿ ಮೈದಾ ಹಿಟ್ಟು ತಂದು ಕೊಟ್ಟೆ!!
  ಕಡೆಗೆ ಸಮರ್ಥಿಸಿ ಕೊಳ್ಳೋಕೆ ಅಮ್ಮ ಹೇಳಿದ್ದೆ ಇದು ಅಂತ ವಾದ ಮಾಡಿದ್ದೆ !!
  ಹೀಗೆ ಶೀಗೆಕಾಯಿ ಪುಡಿ ತಾ ಅಂದಾಗ ಮೈ ಸೋಪು ತಂದ್ ಕೊಟ್ಟು ಕಡೆಗೆ ಒಂದ್ ದಿವಸ ಸಿಕ್ ಬಿದ್ದೆ .

  ನಂಗೆ ಮರೆವು ಅನ್ನೋದಕ್ಕಿಂತ ಅಮ್ಮ ಹೇಳಿದ್ದು ಸರಿಯಾಗಿ ನಾ ಕೇಳಿಸಿ ಕೊಂಡಿರಲಿಲ್ಲ ಅಂತ ನಾ ಅನ್ಕೊಂಡಿದೀನಿ
  ಅಂದ ಹಾಗೆ I am just 25!!

  ReplyDelete
 18. marevee vara.mareyadiddare medulu crash aaguvadu khandita

  ReplyDelete
 19. ಮರೆವು ದೇವರಿತ್ತ ವರ....

  ReplyDelete
 20. ಎಲ್ಲರಿಗು ಮರೆವಿದ್ದರೆ ಅದೇ ವರ !!!೧

  ReplyDelete