ಸುಮಾರು ಅರವತ್ತು ವರ್ಷಗಳ ಹಿಂದಿನ ಮಾತು .ಆಗೆಲ್ಲಾ ಆಟೋಗಳ ಆಟಾಟೋಪ ಇರಲಿಲ್ಲ.ಅದು ಜಟಕಾಗಳ ಜಮಾನ. ನನ್ನ ಪರಿಚಿತ ವಯೋವೃದ್ಧರೊಬ್ಬರು ಮದುವೆಯಾದ ಹೊಸದರಲ್ಲಿ ಜಟಕಾ ಬಂಡಿಯೊಂದರಲ್ಲಿ ತಮ್ಮ ನವ ವಧುವಿನೊಡನೆ ಹೊರಗೆ ಹೊರಟಿದ್ದರು.ಹೆಂಡತಿಗೆ ಆಗಿನ್ನೂ ಹದಿನೇಳುವರ್ಷ.ಇವರಿಗೆ ಇಪ್ಪತ್ತೆರಡು . ಮೊದಲೇ ನಾಚಿಕೆ ಸ್ವಭಾವದ ಹೆಣ್ಣು.ಗಂಡನ ಪಕ್ಕಸಂಕೋಚದಿಂದ ಮುದುರಿಕೊಂಡು ಕುಳಿತಿದ್ದರು.ಗಂಡನಿಗೆ ಸಹಜವಾಗಿ ಅವರ ಪಕ್ಕ ಸರಿದು ಕುಳಿತು ಕೊಳ್ಳಬೇಕೆಂಬ ಬಯಕೆ.ಇವರು ಅವರ ಪಕ್ಕಕ್ಕೆ ಸರಿದಂತೆಲ್ಲಾ ಅವರು ನಾಚಿಕೆಯಿಂದ ಹಿಂದಕ್ಕೆ ಸರಿಯುತ್ತಿದ್ದರು.ಹೀಗೆ ಹಿಂದಕ್ಕೆ ಸರಿದೂ,ಸರಿದೂ ಅವರಿಗೆ ಗೊತ್ತಿಲ್ಲದ ಹಾಗೆ ಜಟಕಾದ ಮುಂಭಾಗದಲ್ಲಿ ಕುಳಿತಿದ್ದ ಜಟಕಾ ಸಾಬಿಯ ಪಕ್ಕಕ್ಕೆ ಬಂದು ಬಿಟ್ಟಿದ್ದರು!ಗಂಡ ಸಿಟ್ಟಿನಿಂದ 'ನನಗಿಂತಾ ನಿನಗೆ ಆ ಜಟಕಾ ಸಾಬೀನೆ ಹೆಚ್ಚಾ?'ಎಂದು ರೇಗಿದರು .ಜಟಕಾ ಸಾಬಿ ತನ್ನ ಉರ್ದು ಮಿಶ್ರಿತ ಕನ್ನಡ ದಲ್ಲಿ "ಏನಮ್ಮಾ....! ನೀವು ನಮ್ದೂಕೆ ಪಕ್ಕ ಯಾಕೆ ಬಂದ್ರಿ ? ಸಾಹೇಬರ ಪಕ್ಕ ಜಾಕೇ ಬೈಟೋ ! 'ಎಂದು ಬೇರೆ ಹೇಳಿಬಿಟ್ಟನಂತೆ. ಪಾಪ ಅವರು ಅಲ್ಲಿಂದ ಸರಿದು ಜಟಕಾದ ಮಧ್ಯ ಭಾಗದಲ್ಲಿ ನಾಚಿಕೆ ಮತ್ತು ಅವಮಾನಗಳಿಂದ ಮೈ ಹಿಡಿಮಾಡಿಕೊಂಡು ಕುಳಿತರು ! ಈಗಲೂ ಅವರು ಆ ಘಟನೆಯನ್ನು ನೆನೆಸಿಕೊಂಡು 'ನನಗಿಂತ ಆ ಜಟಕಾ ಸಾಬಿಯೇ ಇವಳಿಗೆ ಹೆಚ್ಚು ಇಷ್ಟ ಆಗಿದ್ದಾ"ಎಂದು ಹೆಂಡತಿಯನ್ನು ರೇಗಿಸುತ್ತಾರೆ.ಇವರೂ ಸುಮ್ಮನಿರದೆ "ಹೌದು, ನಿಮಗಿಂತಾ ಅವನೇ ಎಷ್ಟೋ ಚೆನ್ನಾಗಿದ್ದಾ !"ಎಂದು,ಸೇಡು ತೀರಿಸಿಕೊಳ್ಳುತ್ತಾರೆ! ಅವರ ಸರಸ,ಇವರ ಹುಸಿ ಮುನಿಸು,ಮಾಗಿದ ಅವರಿಬ್ಬರ ದಾಂಪತ್ಯಕ್ಕೆ ಇನ್ನಷ್ಟು ಮೆರಗನ್ನು ಕೊಡುತ್ತದೆ !!
ಜಟಕಾ ಪ್ರಹಸನ ಸೊಗಸಾಗಿತ್ತು. ನೀವೂ ಯಾವಾಗಲಾದರೂ ಜಟಕಾ ಹತ್ತಿದ್ದರಾ ಸರ್?
ReplyDeleteಬದರಿ;ಹಾ....ಹಾ...ಹಾ.....!ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDelete:-)
ReplyDeleteಹ್ಹಾ..ಹ್ಹಾ.. !!
ReplyDeleteಮಜಾ ಇದೆ... ಜೈ ಹೋ !!
ನಾಚಿಕೆ ಹೋಗೋವರೆಗೂ ಅವಳು ನಿಮ್ಮನ್ನ ಒಲಿಯೋವರೆಗೂ ಸುಮ್ಮನಿರದೆ ಹೆಣ್ಣನ್ನ ಹೆಚ್ಚು ಕಾಡಿದ್ರೆ ಆಗೋದೇ ಇದು...ಇನ್ನೊಬ್ರ ತೆಕ್ಕೆಗೆ ಬೀಳುತ್ತೆ...ಹಹಹ...ಬಹಳ ಚನ್ನಾಗಿತ್ತು...
ReplyDeleteHahaha... Channagide Daktre..
ReplyDeleteಸಧ್ಯ! ಹಿಂದಕ್ಕೆ ಸರಿದೂ,ಸರಿದೂ ಅವರು ಜಟಕಾ ದಿ೦ದಲೆ ಬಿದ್ದುಹೊದರೆನೋ ಎ೦ದುಕೊ೦ಡಿದ್ದೆ! ನೀವು ಕೊಟ್ಟಿರುವ ಆ ಕಾಲದ ದಾ೦ಪತ್ಯದ ಪ್ರಾರ೦ಭಿಕ ದಿನಗಳ ನುಡಿ ಚಿತ್ರಣ ಬಹಳ ಚೆನ್ನಾಗಿದೆ ಸರ್, ಅಭಿನ೦ದನೆಗಳು.
ReplyDeleteಸುಬ್ರಮಣ್ಯ ಮಾಚಿಕೊಪ್ಪ;ಧಯವಾದಗಳು :-)
ReplyDeleteಪ್ರಕಾಶಣ್ಣ;ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಅಜಾದ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteದೀಪಕ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಪ್ರಭಾಮಣಿ ಮೇಡಂ;ಈ ಹಿರಿಯರ ಅನುಭವ ಕೆ.ಎಸ್.ನ.ಅವರ ದಾಂಪತ್ಯ ಗೀತೆಗಳನ್ನು ನೆನಪಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeletevery intersting
ReplyDeleteದಯಾನಂದ ಅವರೆ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeletejataka sabi jagadalli sholey basanti ididre enagtito.ranganna
ReplyDeleteರಂಗಣ್ಣ;ಹ...ಹ..ಹಾ!ಒಳ್ಳೆಯ ಪ್ರಸಂಗ!ಏನಾಗುತಿತ್ತೋ!?
ReplyDeleteha ha ha...
ReplyDeletechennagide!
ಪ್ರದೀಪ್ ರಾವ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಜಟಕಾ ಕುದುರೇ ಏರಿ ಪ್ಯಾಟೆಗೋಗೋಣ ಅಂತ ಹಾಡು ಇದಕ್ಕೆ ಬಂದದ್ದಿರಬೇಕು.. ಈಗ ಮದುವೆಯಾಗುವ ಮೊದಲೆ ಇಂತದ್ದೆಲ್ಲ "ಹಲವಾರು" ಬಾರಿ ಆಗೋದ್ರಿಂದ ಇಂತಹ ನವಿರಾದ ಸರಸ ಇಲ್ಲ ! :( ಸೂಪರ್ ಬರಹ !
ReplyDeleteಈಶ್ವರ್ ಭಟ್;ಹಿರಿಯರ ಇಂತಹ ಅನೇಕ ಅನುಭವಗಳನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನಿಸುತ್ತಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteನೆನಪಿನ ಸಂಚಿಯಿಂದ;-:)ಧನ್ಯವಾದಗಳು.
ReplyDeleteolle baraha sir....
ReplyDeleteಸಿಂಧು ಚಂದ್ರ;ಮೇಡಂ,ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete