ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ
ಸಣ್ಣದೊಂದು ಮೂದಲಿಕೆ!
ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!
ಓಹ್, ಚ೦ದದ ಕವನ ಸರ್, ನಿಮ್ಮನ್ನು ನೀವೇ ಹಾಸ್ಯ ಮಾಡಿಕೊಳ್ಳುತ್ತಾ ಸ೦ಸಾರದ ಸು೦ದರ ಚಿತ್ರಣವನ್ನೇ ನೀಡಿದ್ದೀರಿ! ಅಭಿನ೦ದನೆಗಳು.
ReplyDeleteGADIYARAVANNU SAMSARAKKE ESTU CHENNAGI HONDISIDDEERI
ReplyDeleteDHADIYA PRADHANIGE SHISTINA SIPAYI-WAH!
ಮುಂಗಡ ಅಭಿನಂದನೆಗಳು ಡಾಕ್ಟ್ರೇ... ಅದಕ್ಕೆ ಮಿಂಚಿದೆ ಕವನ....
ReplyDeleteಸು೦ದರವಾಗಿದೆ.. ಸ೦ಸಾರ..:))
ReplyDeleteಸರ್,
ReplyDeleteಕವನ ತುಂಬಾ ಇಷ್ಟವಾಯ್ತು..ಹೀಗೇ ಯಾವತ್ತೂ ಬರೆಯುತ್ತಿರಿ
Doc!!!!
ReplyDeleteWah.. Sundara Comparision
ಪ್ರೀತಿಯ ಬ್ಯಾಟರಿ ಮುಗಿದಾಗ.....
ಮತ್ತಾಗಲೇಬೇಕು ಪ್ರೀತಿಯಿಂದಲೇ ರೀಚಾರ್ಜು
kavana super doctre...
ReplyDeletePretty nice. Liked it immensely...
ReplyDeleteಚೇತೋಹಾರಿ ಕವನ.
ReplyDeleteಪ್ರತಿಮೆ ಮತ್ತು ಬಳಕೆಯಾಗಿರುವ ಭಾಷೆ, ಎರಡೂ ಸರಳ. ಲಾಲಿತ್ಯವಾಗಿ ಕಾವ್ಯ ಕಟ್ಟಿಕೊಡುವುದು, ಪುಟ್ಟ ಪಾಪುವನ್ನು ಮುದ್ದುಗೆರೆಯುವಂತೆ! ನೀವು ಬಳಸುವ ಶೈಲಿಯಲ್ಲೇ ಅಂತ ಅಕ್ಕರೆಯಿದೆ.
ಸಂಸಾರ ಮತ್ತು ಗಡಿಯಾರ, ನಿಜವಾಗಲೂ ಒಳ್ಳೆಯ ಹೋಲಿಕೆ. ನೀವೆ ಪ್ರಧಾನಿ ಇದಂತೂ ಸೂಪರ್ರು!
beautiful :)
ReplyDeletesooperb Doctre....
ReplyDeleteತುಂಬಾ ಚಂದದ ಹೋಲಿಕೆ ..ಗಡಿಯಾರ ಮತ್ತು ಸಂಸಾರಕೆ :) ಚಂದದ ಕವನ ಸರ್ :)
ReplyDeletewonderful kavana sir...
ReplyDeleteelliya holike saar idu.....
hats off....
tumbaa naija kavana.... eshTu chennaagi holisi barediddiraa sir....
tumbaa chennaagide sir....
tumbaa chennagide
ReplyDeleteಡಾಕ್ಟ್ರೆ..
ReplyDelete"ಗಂಟೆಯ ನೆಂಟನೆ ಓ ಗಡಿಯಾರ" ಎನ್ನುವ ಹಾಡಿನಷ್ಟೆ ಸೊಗಸಾಗಿದೆ...
ಸರಳತೆ... ನಿಮ್ಮ ಕವನದ ಜೀವಾಳ..
ಅಭಿನಂದನೆಗಳು ಸುಂದರ ಸಾಲುಗಳಿಗೆ..
wow, enthaha kalpane sir
ReplyDeleteshabda jodane adbhuta
kadalike, moodalike anta praasa balasi gadiyaaravannu badukige holisi sundara chittaara moodisiddiraa
masthaagi kavanisiddiri doctre...
ReplyDeleteಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಿದ ಎಲ್ಲಾ ಬ್ಲಾಗ್ ಬಾಂಧವರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteThis comment has been removed by the author.
ReplyDeleteನೀವು ಗಡಿಯಾರದ ಬಗ್ಗೆ ಒಂದು ದಿನ ತುಂಬಾ ಆಲೋಚಿಸಿದ್ದೀರಿ.ಈಗಲೂ ಅದು ನಿಮ್ಮ ಕೆಲಸವನ್ನು ಮಾಡುತ್ತಲೇ ಇದೆ. ಪ್ರತಿಮೆ ಎತ್ತಿ ಎದೆಗೆ ಕುಕ್ಕರಿಸಿದಂತೆ ಭಾಸವಾಯಿತು. ತುಂಬಾ ಸುಂದರ ಲಾಸ್ಯದ ಕವಿತೆ.ಮಡದಿ ಮಕ್ಕಳು ನಿಮ್ಮ ಕುಟುಂಬದ ಗಡಿಯಾರಕ್ಕೆ ಜೊತೆಯಾಗಿದ್ದು ಇನ್ನೂ ಶ್ರೇಷ್ಠ ಅನ್ನಿಸಿತು. ಕವಿ ಒಳಗಣ್ಣನ್ನು ತೆರೆದುಕೊಳ್ಳುವುದು ಹೀಗೆ " ಟಿಕ್ ಟಿಕ್ ಟಿಕ್" ಶಬ್ಧದೊಳಗೆ , ಲಯಬದ್ದ ಎದೆಬಡಿತ ಕಂಡು ಹಿಡಿದ ಹಾಗೆ. ಅದು ಬದುಕು ಮತ್ತು ಕವಿಗೆ ಕವಿತೆ.
ReplyDelete