Sunday, October 23, 2011

"ಅಪ್ಪಾ ....ಹಂಗಂದ್ರೆ ಏನಪ್ಪಾ ? "

ಮಕ್ಕಳು ಮುಗ್ಧರು.ಸ್ವಾಭಾವಿಕವಾಗಿ ಅವರಿಗೆ ಕುತೂಹಲ ಹೆಚ್ಚು.ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಂದಿರನ್ನು ಏನು ?ಎತ್ತ?ಯಾಕೆ ?ಎಲ್ಲಿ ?ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿರುತ್ತಾರೆ.ಕೆಲವೊಮ್ಮೆ ಅವರ ಅಭಾಸವಾಗುಂತಹ ಪ್ರಶ್ನೆಗಳಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಪೋಷಕರು ಕಣ್ಣು ಕಣ್ಣು ಬಿಡುತ್ತಿರುತ್ತಾರೆ.ನನ್ನ ಮಗನೂ ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದ.ಯಾವುದೋ ಕನ್ನಡ ಸಿನಿಮಾ ಒಂದಕ್ಕೆ ಹೋಗಿದ್ದೆವು.ಹೀರೋ ಮತ್ತು ಹೀರೋಯಿನ್ 'ಮದುವೆಯ ನಂತರ ಹನಿ ಮೂನಿಗೆ ಎಲ್ಲಿಗೆ ಹೋಗುವುದು' ಎನ್ನುವ ಅತೀ ಗಹನವಾದ ವಿಷಯದ ಬಗ್ಗೆ ಚರ್ಚೆನಡೆಸುತ್ತಿದ್ದರು.ಸುತ್ತಮುತ್ತ ಇದ್ದ ನಿಶ್ಯಬ್ಧದ ನಡುವೆ "ಅಪ್ಪಾ ಹನಿ ಮೂನೆಂದರೆ ಏನಪ್ಪಾ?"ಎನ್ನುವ ನನ್ನ ಮಗನ ಜೋರು ಗಂಟಲಿನ ಪ್ರಶ್ನೆ ತೂರಿಬಂತು!ಸುತ್ತಮುತ್ತಲಿದ್ದವರೆಲ್ಲಾ ಸಿನಿಮಾ ನೋಡುವುದು ಬಿಟ್ಟು ನಮ್ಮತ್ತ ನೋಡಿ ಜೋರಾಗಿ ನಗಲು ಶುರುಮಾಡಿದರು.ಮಗ ಅಷ್ಟಕ್ಕೇ ಬಿಡದೆ"ಅಪ್ಪಾ ಹೇಳಪ್ಪಾ, ಅಪ್ಪಾ ಹೇಳಪ್ಪಾ"ಎಂದು ಪೀಡಿಸತೊಡಗಿದ.ಮುಂದೆ ಇನ್ನೂ ಹೆಚ್ಚಿನ ಆಭಾಸದ ಪ್ರಶ್ನೆಗಳನ್ನು ಕೇಳಬಹುದೆಂದು ಹೆದರಿ, 'ಹೇಳುತ್ತೇನೆ ಬಾ' ಎಂದು ಹೊರಗೆ ಕರೆದುಕೊಂಡು ಹೋದೆ.ನಂತರ ಅವನಿಗೆ ಏನು ಸಮಜಾಯಿಷಿ ನೀಡಿದೆನೋ ನೆನಪಿಲ್ಲ.ಈಗಿನ ತಂದೆ ತಾಯಂದಿರು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋದಾಗ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದೋಎನ್ನುವುದನ್ನು  ನೆನೆಸಿಕೊಂಡರೇ ಭಯವಾಗುತ್ತದೆ. ನಿಮಗೂ ಇಂತಹ ಅನುಭವಗಳಾಗಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.

21 comments:

 1. ಹಹಹ ಚೆನ್ನಾಗಿದೆ ಮಗನ ಪ್ರಶ್ನೆ... ಎಷ್ಟೋ ಸರಿ ಹೀಗೆ ಆಗೋದು ಮಕ್ಕಳಿಗೆ ಉತ್ತರಿಸಲು ಕಷ್ಟವಾಗುತ್ತೆ... ಇಂದಿನ ಲೇಖನ ನಿಮ್ಮ ಮಗ ನೋಡಿದರ ಇಲ್ಲವಾ.. ಸರ್...

  ReplyDelete
 2. ಮನಸು ಮೇಡಂ;ಮಗ ನ್ಯೂಯಾರ್ಕಿನಲ್ಲಿದ್ದಾನೆ.ಬಹುಷಃ ನನ್ನ ಬ್ಲಾಗ್ ನೋಡುವಷ್ಟು ಪುರುಸೊತ್ತು ಸಿಗುವುದಿಲ್ಲಾ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 3. ಡಾಕ್ಟ್ರೆ..

  ಮಕ್ಕಳ ಕೆಲವು ಪ್ರಶ್ನೆಗಳು ಪೇಚಿಗೆ ಸಿಗಿಸುತ್ತವೆ..

  ನನ್ನ ಮಗ ಕೇಳಿದ್ದ..

  "ಶ್ರೀರಾಮಚಂದ್ರ ಯಾಕೆ ಷರ್ಟ್ ಹಾಕ್ಕೊಳಲ್ಲ...

  ಹನುಮಂತ ಚಡ್ಡಿ ಹೇಗೆ ಹಾಕ್ಕೊಳ್ತಾನೆ?"
  ಹ್ಹಾ... ಹ್ಹಾ..!

  ReplyDelete
 4. ಪ್ರಕಾಶಣ್ಣ;ನಿಮ್ಮ ಮಗ ಕೇಳಿದ ಪ್ರಶ್ನೆಗಳು ಸೂಪರ್ !
  ಹ...ಹ..ಹಾ....ಹಂಚಿಕೊಂಡಿದ್ದಕ್ಕೆ ಮತ್ತು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

  ReplyDelete
 5. hha hha...

  nimma kaalada film nalli "honey moon" anta baayallashTe heLuttiddaru....

  eegina filmnalli ellaatoristaare...
  haagidre eegina makkaLu enenu keLuttaaro....

  ReplyDelete
 6. ಡಾಕ್ಟರೆ,
  ಪ್ರಶ್ನೆ ತುಂಬಾ ಸರಳ; ಉತ್ತರ ತುಂಬಾ ಕಠಿಣ!

  ReplyDelete
 7. ದಿನಕರ್;ಹ...ಹ..ಹ..!ಹೀಗೆಯೇ ಬಹಳ ಪ್ರಶ್ನೆ ಕೇಳುತ್ತಿದ್ದ ಒಬ್ಬ ಹುಡುಗನಿಗೆ ಅವರಪ್ಪ'ನಾಳೆ ಊಟಕ್ಕೆ ಬರುವ ಅಂಕಲ್ಲಿನ ಮೂಗಿನ ವಿಷಯ ಮಾತ್ರ ಕೇಳಬಾರದು'ಎಂದು ತಾಕೀತು ಮಾಡಿದರಂತೆ.ಮಾರನೆ ದಿನ ಹುಡುಗ ಬಂದ ಅತಿಥಿ ಎದುರು'ಏನಪ್ಪಾ ಮೂಗಿನ ವಿಷಯ ಮಾತನಾಡಕೂಡದು ಎಂದೆ!ಈ ಅಂಕಲ್ ಗೆ ಮೂಗೇ ಇಲ್ಲಾ!!'ಎಂದನಂತೆ.ಹುಡುಗರು ಕೇಳುವ ಪ್ರಶ್ನೆಗಳು ಕೆಲವೊಮ್ಮೆ ದೊಡ್ಡವರನ್ನು ಪೇಚಿಗೆ ಸಿಲುಕಿಸುತ್ತವೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. ಸುನಾತ್ ಸರ್;ನೀವು ಹೇಳುವುದು ಸರಿ.ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದಂತೂ ಬಲು ಕಠಿಣ!ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 9. ಹನಿಮೂನ್ ಅಂದರೆ ಚಂದ್ರನನ್ನ ನೋಡುತ್ತಾ ಜೇನುತುಪ್ಪ ಕುಡಿಯುವುದು ಎಂದಿರಬಹುದು ನೀವು!!!

  ReplyDelete
 10. ಸುಬ್ರಮಣ್ಯ ಮಾಚಿಕೊಪ್ಪ :-) ಹ ....ಹ...ಹಾ!ಚೆನ್ನಾಗಿದೆ ನಿಮ್ಮ ಗೆಸ್ ವರ್ಕ್!ಸುಮಾರಾಗಿ ಅಂತಹದ್ದೇ ಏನೋ ಉತ್ತರ ಕೊಟ್ಟಿರಬಹುದು.ನೆನಪಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 11. ಡಾಕ್ಟ್ರೇ......,
  ನಂಗೂ ಡೌಟಿತ್ತು, ರಾವಣನಿಗೆ ನೆಗಡಿ ಆದರೆ ವಿಕ್ಸೆಷ್ಟು ಬೇಕು ಅಂತ!

  ReplyDelete
 12. ಮಕ್ಕಳ ಪ್ರಶ್ನಾವಳಿಗಳು ದೊಡ್ಡವರನ್ನು ಮುಜಗರಕ್ಕೆ ಈಡುಮಾಡುತ್ತವೆ. ಬಹು ತಮಾಷೆಯ ಆದರೆ, ಮಾರ್ಮಿಕವಾದ ಲೇಖನ ದೀಪಾವಳಿಗೂ ಮುನ್ನದ ಪಟಾಕಿ ಸರದಂತೆ ಸ್ಫೋಟಿಸಿದ್ದೀರಿ.

  ಸಂಪೂರ್ಣ ರಾಮಾಯಣ ಸಿನಿಮಾಕ್ಕೆ ನನ್ನ ಚಿಕ್ಕಪ್ಪ ಅವರ ಮಕ್ಕಳನ್ನು ಕರೆದುಕೊಂಡು ಹೋದಾಗ, ಸೀತೆಯನ್ನು ಕಾಡಿಗಟ್ಟುವ ಸನ್ನಿವೇಶದಲ್ಲಿ ಅವರ ಮಗ ಹೆಂಡತಿಯನ್ನು ಕಾಡಿಗೆ ಕಳ್ಸುಹಿಸಿದ ರಾಮ, ದೇವರಾ? ಅಂತ ಕೇಳಿದ್ದನಂತೆ. ಮತ್ತೊಮ್ಮೆ ಹತ್ತು ತಲೆಯ ರಾವಣನನ್ನು ಕಂಡು ಅವನಿಗೆ ನೆಗಡಿಯಾದರೆ, ಹೇಗೆ ಒರಸಿಕೊಳ್ಳುತ್ತಾನೆ ಅಂತ ಆಶ್ಚರ್ಯಪಟ್ಟನಂತೆ.

  ನಿಮ್ಮಿಂದ ಇನ್ನೂ ಹಲವು ನೈಜ ಸನ್ನಿವೇಶಗಳು ನಮ್ಮ ಓದಿಗೆ ಸಿಗಲಿ ಎನ್ನುವುದು ನಮ್ಮ ಆಶಯ.

  ReplyDelete
 13. ಶಾನಿಯವರೇ;ನನ್ನಬ್ಲಾಗಿಗೆ ಸ್ವಾಗತ.ಹ...ಹ..!ನಿಮ್ಮ ಡೌಟು ಚೆನ್ನಾಗಿದೆ.
  ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 14. ಬದರಿ;ಈ ಘಟನೆ ನಡೆದು ಸುಮಾರು ಇಪ್ಪತ್ತು ವರುಷಗಳ ಮೇಲೇ ಆಗಿದ್ದಾದರಿಂದ ನನಗೆ ಸಂಪೂರ್ಣ ಮರೆತು ಹೋಗಿತ್ತು.ಹೀಗೇ ಯಾವುದೋ ವಿಷಯ ಮಾತನಾಡುವಾಗ ಈ ಘಟನೆಯನ್ನು ಹೆಂಡತಿ ನೆನಪಿಸಿ ಬ್ಲಾಗಿಗೆ ಹಾಕಿ ಎಂದದ್ದು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 15. ಚೆನ್ನಾಗಿದೆ... ನನ್ನ ಮಗನ ಪ್ರಶ್ನೆ ಸಧ್ಯದಲ್ಲಿ ಪ್ರಾರ೦ಭವಾಗಲಿವೆ... ನಾನು ತಯಾರಿ ಮಾಡಿಕೊಳ್ಳಬೇಕು.

  ReplyDelete
 16. ಸೀತಾರಂ ಸರ್;ಹ...!ಹ..!ಖಂಡಿತ ಈಗಿನಿಂದಲೇ ತಯಾರಾಗಿ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 17. ಡಾಕ್ಟ್ರೇ...ಇದು ಬಹಳ ಮಜವಾದ ಪ್ರಶ್ನೆ....ನನ್ನ ಮಗಳು ೩-೪ ವರ್ಷದವಳಿದ್ದಾಗ ಕೇಳಿದ್ದಳು...ಇಬ್ಬರು ಬೆಳೆದ ಹೆಣ್ಣುಮಕ್ಕಳು...ಈಗ ನನಗೆ ಹೊರಗಡೆ ಹೋಗೋಕೆ ಟೆನ್ಶನ್ನೇ ಇಲ್ಲ ಅಂತ ..ಹೇಳ್ತಾ ಇರೋವಾಗ ಸ್ಯಾನಿಟರಿ ನ್ಯಾಪ್ ತೋರ್ಸೋ ಆಡ್...ಅವಳು ಕೇಳಿದ್ದು...
  ಅಪ್ಪಾ...ಛೀ...ಇಷ್ಟು ದೊಡ್ದವರೂ ಸುಸು ಮಾಡ್ಕೋತಾರಾ...???
  ಈಗ ಹೇಳಿ....ಏನು ಉತ್ತರ ಕೊಡೋದು...ಹಹಹಹ....
  ಚನ್ನಾಗಿದೆ...

  ReplyDelete
 18. ಅಜಾದ್ ಸರ್;ಹ...ಹ...ಹಾ...!!ತುಂಬಾ ಚೆನ್ನಾಗಿದೆ!ಏನು ತಾನೇ ಹೇಳೋದು ಇಂತಹ ಪ್ರಶ್ನೆಗಳನ್ನು ಕೇಳಿದರೆ!ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 19. sir olleyalekhana,
  makkala prashnege
  makkala riitiyalle
  uttarisuvudu ikkattige
  sikkisuttade.

  ReplyDelete
 20. ಕಲರವ ಮೇಡಂ;ಮಕ್ಕಳಿಗೆ ಎಲ್ಲವನ್ನೂ ಪ್ರಶ್ನಿಸುವ ಮನಸ್ಸು.ಸಮಾಧಾನಕರ ಉತ್ತರ ಕೊಡದೆ ಹೋದರೆ ಮತ್ತೆ ಮತ್ತೆ ಪ್ರಶ್ನಿಸುತ್ತಾ ಹೋಗುತ್ತಾರೆ.ಉತರ ಕೊಡದೆಸುಮ್ಮನಿರು ಎಂದು ಗದರಿದರೆ ಅವರ ಕುತೂಹಲವನ್ನೇ ಚಿವುಟಿ ಹಾಕಿದಂತಾಗುತ್ತದೆ!ಈ ಸಮಯದಲ್ಲಿ ದೊಡ್ಡವರು ಹೆಚ್ಚಿನ ತಾಳ್ಮೆಯಿಂದ ಮತ್ತು ಜಾಣ್ಮೆಯಿಂದ ವರ್ತಿಸಬೇಕಾಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 21. Sir I remember I had asked similar kind of question when I was a kid and still remember my Dad's hitting :).

  But I feel things are changing around. Now a days kids know more than us. Happy Deepavali.

  ReplyDelete