ದಾರಿಗಳಲ್ಲಿ ಹಲವು ದಾರಿ !
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ ದಾರಿ!
ಬಡವನಿಗೆ ಪಾಪ
ಎಲ್ಲವೂ ದುಬಾರಿ !
ಬಡವನಿಗೆ ಪಾಪ
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ
ಅವರವರು ನಡೆದೂ ನಡೆದೂ
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ ಅಲ್ಲವೇ
ದಾಸರು ದಾರಿ ಕಾಣದೇ
ಕೊನೆಗೆ ................,
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!
ಬೇರೆ ದಾರಿಯೇ ಕಾಣುತ್ತಿಲ್ಲ ಡಾಕ್ಟ್ರೇ, ಈ ಕವನ ಸೂಪರ್ರೂ ಅಂತ ಯಾವ ಪದಗಳಿಂದ ವರ್ಣಿಸೋದು ಅಂತ ದಾರಿ ಕಾಣುತ್ತಿಲ್ಲ!
ReplyDeleteಹಲ ದಾರಿಗಳನ್ನ ಹಲ ದಾರಿಗಳು ಬಳಸಿ ವಿಶ್ಲೇಷಿಸುವ ನಿಮ್ಮ ಮನೋಧರ್ಮವು ಹರಿಕಥೆ ಶೈಲಿಯದ್ದು. ಎಷ್ಟಾದರೂ ನಿಮ್ಮದು ಚಿಕಿತ್ಸಕ ದೃಷ್ಠಿ!
ಸೂಪರ್!
ಬದರಿ;ನಿಮ್ಮ ಆತ್ಮೀಯ ಹಿತನುಡಿಗಳಿಗೆ ಶರಣು.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಡಾಕ್ಟ್ರೇ...ದಾರಿಯ ಬಗ್ಗೆ ಸಕ್ಕತ್ ಅರ್ಥಗರ್ಭಿತವಾಗಿ ಕವನ ಬರೆದಿದ್ದೀರಿ. ಹುಡುಕುಕೊಂಡವನಿಗೆ ದಾರಿ ಇಲ್ಲದಿರುವುವವನಿಗೆ ದಾರಿಯಾವುದಯ್ಯ...
ReplyDeleteತುಂಬಾ ಇಷ್ಟವಾಯಿತು.
ಶಿವು ಸರ್;ಹಾಗೆ ನೋಡಿದರೆ ನಾವೆಲ್ಲರೂ ಬದುಕಿನಲ್ಲಿ ಯಾವುದೋ ಒಂದು ದಾರಿಯಲ್ಲಿ ಸಾಗುತ್ತಾ ಮತ್ತೊಂದು ದಾರಿಯನ್ನು ಹುಡುಕುತ್ತಿರುವಂತಿಲ್ಲವೇ? ಈ ಹುಡುಕಾಟವೇ ಬದುಕೆನೋ!ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಕವನಕ್ಕೊಂದು ಕಾಮೆಂಟ್ ಮಾಡೋದಿಕ್ಕೆ ದಾರಿ ಯಾವುದಯ್ಯ.???!! ದಾರಿ ಕಾಣುತ್ತಿಲ್ಲವಲ್ಲ... superb ಡಾಕ್ಟ್ರೆ ...
ReplyDeleteಮೌನ ರಾಗ ಮೇಡಂ;ನಿಮ್ಮ ಪ್ರೋತ್ಸಾಹವೇ ನನ್ನ ಮುಂದಿನ ಬರಹಗಳಿಗೆ ದಾರಿ!ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete`ದಾರಿ'ಯ ವಿವಿಧ ಪರಿಗಳನ್ನು ವಿವರಿಸುತ್ತಾ ಪ್ರತಿಕ್ರಿಯಿಸಲು ದಾರಿ ಕಾಣದ೦ತೆ ಮಾಡಿರುವ ವೈದ್ಯ ಶ್ರೆಷ್ಟರೆ, ನಿಮಗಿದೋ ವ೦ದನೆಗಳು! `ದಾರಿ'ಯನ್ನು ವಿವಿಧ ಕೋನ ಗಳಿ೦ದ ಕ್ರಮಿಸಿದ್ದೀರಿ ಸರ್, ಧನ್ಯವಾದಗಳು.
ReplyDeleteಪ್ರಭಾಮಣಿ ಮೇಡಂ;ನನ್ನ ಬ್ಲಾಗಿನ ದಾರಿಯಲ್ಲಿ ನಿಮ್ಮಂತಹ ಸಹೃದಯಿ ಸಹ ಬ್ಲಾಗಿಗರ ಪ್ರೋತ್ಸಾಹಕ ನೆರಳು!ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteನೀವೇ ದಾರಿ ತೋರಿಸಬೇಕು ... :) ಚೆನ್ನಾಗಿದೆ ಸರ್ .
ReplyDeleteಈಶ್ವರ್ ಭಟ್ ;ನಮ್ಮೆಲ್ಲರಿಗೂ ದಾರಿ ತೋರಿಸುವ 'ಈಶ್ವರ'ನಮ್ಮೊಳಗೇ ಇದ್ದಾನೆ.ನಾವು ಅವನ ಮಾತು ಕೇಳಬೇಕಷ್ಟೇ.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
ReplyDeleteಕವನ.. ಹಾಗೂ ಅದರಲ್ಲಿರುವ ವಿಡಂಬನೆ ತುಂಬಾ ಇಷ್ಟವಾಯಿತು...
ReplyDeleteಜೈ ಹೋ !
ಪ್ರಕಾಶಣ್ಣ;ಬ್ಲಾಗಿನ ದಾರಿಯಲ್ಲಿ ಮುನ್ನಡೆಸಿದ್ದು ನಿಮ್ಮೆಲ್ಲರ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆ.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.ಜೈ ಹೋ.
ReplyDeleteಡಾಕ್ಟ್ರೇ...ದಾರಿ ಇಲ್ಲದಿರೆ ದಾರಿ ಹುಡುಕುವ ದಾರಿ ನಿಮಗೆ ತಿಳಿದಿರುವ ಉತ್ತಮ ದಾರಿ. ನೀವು ದಾರಿ ತೋರುವುದರಲ್ಲಿ ಉದಾರಿ, ಹಾಗಾಗಿ ದಾರಿ ಇಲ್ಲದಿದ್ದರೂ ನಿಮಗೆ ತೋರುವುದು ದಾರಿ.
ReplyDeleteಹಹಹಹ್ ಒಳ್ಳೆ ದಾರಿ ತೋರಿಸಿದ್ದೀರಿ.... ನಿಮ್ಮ ಮಾತು ನಿಜ ನಾವು ಸ್ಪಷ್ಠ, ನಮ್ಮ ನಿಲುವು ಸ್ಪಷ್ಠ ಎಂದಾಗ ದಾರಿಯೂ ಸ್ಪಷ್ಠ..ಅಲ್ಲ್ವಾ.??
ಅಜಾದ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಏಳ್ಗೆಯ ದಾರಿ ಸುಗಮವಾಗಲಿ ಎನ್ನುವುದೇ ನನ್ನ ಹಾರೈಕೆ.ಬರುತ್ತಿರಿ.ನಮಸ್ಕಾರ.
ReplyDeleteಜೈ ಹೋ!!೧ಎಲ್ಲ ದಾರಿಗಳ ತಿಳಿಸಿದ ತಮಗೆ ನಾವು ಅಭಾರಿ.
ReplyDeleteದಾರಿ ಹೆದ್ದಾರಿ ದುಬಾರಿ ರಹದಾರಿ,
ನೀವೊಬ್ಬರು ಪ್ರಭಾರಿ
ಸೀತಾರಾಮ್ ಸರ್;ಬ್ಲಾಗಿನ ದಾರಿ ನಿಮ್ಮಂತಹ ಒಳ್ಳೆಯ ಸ್ನೇಹಿತರು ಸಿಕ್ಕ ದಾರಿ.ಈ ದಾರಿಯಲ್ಲಿ ಸಿಗುತ್ತಿರಿ.ಜೈ ಹೋ.
ReplyDeleteಎಲ್ಲವೂ ...............ಬಯಲು.... ದಾರಿ!!! (ಸೂಪರ್)
ReplyDeleteಬಯಲಲ್ಲಿ ದಾರಿ ಹುಡುಕಿದರೆ ಹೇಗೆ ಇರುತ್ತೆ
ಅಂತ ಒಂದು ಸಣ್ಣ ಯೋಚನೆ ಬಂತು..
ಕಳೆದು ಹೋದೆ ...
ದೀಪಕ್;ಬಯಲಿನಲ್ಲಿ ಕಳೆದು ಹೋಗುವುದು ಧ್ಯಾನದ ದಾರಿ.ಮುಂದುವರಿಸಿ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDelete