ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)
ಸಾವಿರ ಸತ್ಯಗಳು ಅಡಗಿರುವ ಕಥೆ. ಇನ್ನು ಮೇಲೆ ನೀವು ಹೇಳಿಕೊಟ್ಟಂತೆ ಅಂತಹ 'ಗುರು'ಗಳ ಮುಂದೆ ನಾನು ಮೌನಿ!
ReplyDeleteಬದರಿ;ನಿಮ್ಮ ಮಾತು ಸತ್ಯ.ಇನ್ನು ಮೇಲೇ ನಾನೂ ಅದನ್ನೇ ಮಾಡುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteನಿಮ್ಮ ಮಾತು ನಿಜ... ನೀವು ಹೇಳಿದಂತೆ ಪಾಲಿಸುತ್ತೇವೆ..
ReplyDeleteಮನಸು ಮೇಡಂ;ನಮ್ಮ ಮನಸ್ಸೂ ಗಲಿಬಿಲಿಗೊಂಡಾಗ ಮಾತನಾಡದೆ ಇರುವುದೇ ಲೇಸಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteನಿಜನುಡಿ...ಸುಮ್ಮನೆ ಅವಿರಿವರ ಮಾತಿಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ನಮ್ಮ ಕೆಲಸಗಳತ್ತ ಗಮನಕೊಡುವುದೇ ಒಳ್ಳೆಯದು
ReplyDeletesatya sir
ReplyDeletekelavaru kooguttale iruttaare
avara jote naavu koogidare dodda galaateye horatu prayojana yarigoo illa
olleya sandesha
ಚಿನ್ಮಯ್;ನೀವು ಹೇಳುವುದು ಸತ್ಯ.ಅವರಿವರ ಮಾತಿಗೆ,ಕೂಗಾಟಕ್ಕೆ ನಮ್ಮ ನೆಮ್ಮದಿ ಬಲಿಯಾಗಬಾರದು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಗುರು ಸರ್;ಬೇರೆಯವರ ಮಾನಸಿಕ ಅಸ್ವಸ್ಥತೆಗೆ ನಮ್ಮ ನೆಮ್ಮದಿ ಬಲಿಯಾಗಬೇಕಿಲ್ಲ. The choice to react or not is ours.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಬಹಳ ಸತ್ಯದ ಮಾತು, ಆದರೆ ನಿಜಜೀವನ ಹಾಗಿರಲು ಬಿಡುವುದಿಲ್ಲ :) ಈ ಹೊರಗಿನ ಗುರುಗಳಿರಲಿ, ಬಹಳಷ್ಟುಸಾರಿ ನಮಗೆ ನಾವೇ ’ಗುರು’ಗಳಾಗಿರಬಹುದು, ತಿಳಿಯುವುದಿಲ್ಲವಷ್ಟೇ.
ReplyDeleteಬರಹ ಚೆನ್ನಾಗಿದೆ.
ಮಂಜುನಾಥ್;ಬ್ಲಾಗಿಗೆ ಸ್ವಾಗತ.ನೀವು ಹೇಳುವಂತೆ ನಿಜ ಜೀವನದಲ್ಲಿ ಹಾಗಿರುವುದು ಕಷ್ಟ ಆದರೆ ಅಸಾಧ್ಯವಲ್ಲ.ನಮ್ಮ ಪ್ರಯತ್ನ ನಾವು ಮುಂದುವರಿಸೋಣ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಚಿಕ್ಕ ಮತ್ತು ಚೊಕ್ಕ ಲೇಖನದಲ್ಲಿ ಅಮೂಲ್ಯ ಜೀವನ ಮೌಲ್ಯವನ್ನು ತಿಳಿಸಿದ್ದೀರಿ ಡಾಕ್ಟರೇ... ನನಗೆ ಬೀರಬಲ್ಲನ ಕಥೆಯ ಸನ್ನಿವೇಶ ನೆನಪಾಯ್ತು...ಅಕ್ಬರನಿಗೆ ಈ ಪ್ರಶ್ನೆ ಕಾಡಿತಂತೆ - ಮೂರ್ಖನ ಜೊತೆ ಹೇಗಿರಬೇಕು..?? ಸರಿ.. ಇಂತಹವುಗಳಿಗೆಲ್ಲಾ ಸಿದ್ಧ ಉತ್ತರ ಸಿಗೋದು...ಬೀರಬಲ್ಲನಲ್ಲಿ ಅಲ್ವೇ...? ಬೀರಬಲ್ಲನ ಉತ್ತರ ಏನಾಗಿತ್ತು ಗೊತ್ತೇ......"ಚುಪ್ ರಹನಾ ಚಾಹಿಯೇ"....
ReplyDeletesuper sir..... chikkadaagi doDDa vishayavannE heLiddiri sir...
ReplyDeletehats off to you.....
ಹೌದು ಸರ್. ಚೆನ್ನಾಗಿದೆ :)
ReplyDeletehttp://ishwaratatva.blogspot.com/
ಅಜಾದ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬೀರಬಲ್ಲನ ಕಥೆ ನನಗೆ ಗೊತ್ತಿರಲಿಲ್ಲ.ನೀವು ಹೇಳಿದ ಮೇಲೆಗಾದೆಯೊಂದು ನೆನಪಾಯಿತು;'ಸುಮ್ಮನಿದ್ದವನನ್ನು ಬ್ರಮ್ಹನೂ ಗೆಲ್ಲ'ಅಂತ.ಬರುತ್ತಿರಿ.ನಮಸ್ಕಾರ.
ReplyDeleteದಿನಕರ್;ತುಂಬಾ ಧನ್ಯವಾದಗಳು.ನಿಮ್ಮ ಪ್ರೀತಿಪೂರ್ವಕ ಕಾಮೆಂಟ್ಸ್ ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ಕೊಡುತ್ತವೆ.ಬರುತ್ತಿರಿ.ನಮಸ್ಕಾರ.
ReplyDeleteಈಶ್ವರ್ ಭಟ್;ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteತಾಳಿದವನು ಬಾಳಿಯಾನು ಇದು ನನ್ನ ತಾಯಿ ಹೇಳಿಕೊಟ್ಟ ಮಂತ್ರ , ಅದಕ್ಕೆ ಪೂರಕವಾಗಿ ನಿಮ್ಮ ಲೇಖನ ಜೈ ಹೋ ಸರ್.ಹೌದು ನಿಮ್ಮ ಲೇಖನದ ಮಾತು ಅಕ್ಷರಸಹ ಸತ್ಯ.
ReplyDeleteಬಾಲಣ್ಣ;ನಿಮ್ಮ ತಾಯಿ ಎಂತಹ ಅದ್ಭುತ ಮಂತ್ರವನ್ನು ಹೇಳಿಕೊಟ್ಟಿದ್ದಾರೆ!ಅವರಿಗೆ ನನ್ನ ನಮನಗಳು.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ಬರುತ್ತಿರಿ.ನಮಸ್ಕಾರ.
ReplyDeleteಉತ್ತಮ ವಿಚಾರವನ್ನು ಹ೦ಚಿಕೊ೦ಡಿದ್ದೀರಿ..ಧನ್ಯವಾದಗಳು ಸರ್. "ಮೌನ೦ ಸಮ್ಮತಿ ಲಕ್ಷಣ೦" ಅ೦ತ ಕೂಡ ಉಧ್ಧೃತ ವಾಕ್ಯ ಇದೆ ಅಲ್ಲವೆ..;).. (ಮಾಜಿ ಪ್ರಧಾನಿ ನರಸಿ೦ಹರಾಯರು ಐದು ವರ್ಷ ಸುಮ್ಮನಿದ್ದೇ ರಾಜ್ಯಭಾರ ಮಾಡಿದರು - ಸಮಸ್ಯೆಗಳು ತಾವೇ ಪರಿಹಾರವಾಗುತ್ತಿದ್ದವು..!) :):)....
ReplyDeleteಅನ೦ತ್
ಅನಂತ್ ಸರ್;ಅನಂತ ಧನ್ಯವಾದಗಳು.ಮಾಜಿ ಪ್ರಧಾನಿಗಳ ವಿಷಯ ಚೆನ್ನಾಗಿದೆ.ಮೌನಂ ಕೆಲವೊಮ್ಮೆ ಅಸಮ್ಮತಿ ಲಕ್ಷಣಂ ಕೂಡ ಆಗಿರಬಹುದು.ಬರುತ್ತಿರಿ.ನಮಸ್ಕಾರ.
ReplyDeleteಡಾಕ್ಟ್ರೇ,
ReplyDeleteಈ ಲೇಖನದಲ್ಲಿ ಅನೇಕ ಸೂಕ್ಷ್ಮಗಳಿಗೆ ಅರ್ಥಮಾಡಿಕೊಳ್ಳಬೇಕು. ಯಾಕೋ ಇತ್ತೀಚಿಗೆ ಇಂಥ ಲೇಖನಗಳೇ ನಿಮ್ಮಿಂದ ಬರುತ್ತಿವೆಯಲ್ಲ...ಏನ್ ಸಮಚಾರ?
ಉತ್ತಮ ನೀತಿ ಹೊಂದಿರುವ ಲೇಖನ ಸರ್...ಚೆನ್ನಾಗಿದೆ...
ReplyDeleteಸಂಗದಂತೆ ಸಹವಾಸ ಅಲ್ಲವೇ ??ಸರ್ ಒಳ್ಳೆ ಅರ್ಥ ಇದೆ ಈ ಲೇಖನದಲ್ಲಿ ....
ReplyDeleteಶಿವೂ ಸರ್;ಇತೀಚಿಗೆ ಸ್ವಲ್ಪ ಆಧ್ಯಾತ್ಮದ ಕಡೆ ಒಲವು ಹೆಚ್ಚಿದೆ.ಆದ್ದರಿಂದ ಅದರ ತಿರುಳಿರುವ ಲೇಖನಗಳು ಕಾಣಿಸಿಕೊಳ್ಳುತ್ತಿರಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಗಿರೀಶ್ ಸರ್;ನೀವು ಹೇಳುವುದು ಸರಿ.ಸಂಗದಂತೆ ಸಹವಾಸ.ಬರುತ್ತಿರಿ.ನಮಸ್ಕಾರ.
ReplyDeleteಸರ್ ಚೆನ್ನಾಗಿದೆ !:)
ReplyDeleteಅನುಸರಿಸಲು ಯೋಗ್ಯವಾದ ಉತ್ತಮ ಮಾರ್ಗದರ್ಶಕ ಲೇಖನ ಸರ್, ಧನ್ಯವಾದಗಳು.
ReplyDeleteಕೃತ್ತಿವಾಸಪ್ರಿಯ ಮೇಡಂ;ನನ್ನ ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಪ್ರಭಾಮಣಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeletemounavoo ondu bhashe allave?
ReplyDeletehemu;thanks kano.
ReplyDeletetumba chennagide doctre...
ReplyDeleteಉತ್ತಮ ಪಾಠವಿದೆ ಕಥೆಯಲ್ಲಿ..
ReplyDelete