Wednesday, October 5, 2011

"ನಕ್ಕು ಬಿಡಿ"

ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
3) ಮುಲ್ಲಾ ನಾಸಿರುದ್ದೀನ್  ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.

8 comments:

  1. haha.
    ಮೂರ್ಖ andaaga ee joke gnaapaka bantu:

    ಟೀಚರ್ : ಸೀನ, ಖ ಖ ಖ , ಎಷ್ತು "ಖ" ನೋ?
    ಸೀನ: ಮೂರ್ಖ (ಮೂರು-ಖ) ಸಾರ್
    ಟೀಚರ್: ಅದು ನೀನೇ,ಕೂತ್ಕೋ.. :-)

    ReplyDelete
  2. ಮೊದಲಿಗೆ ಡಾಕ್ಟರ್ರಿಗೂ ಮತ್ತವರ ವಿಶ್ವಕೋಶ 'ಕೊಳಲು' ಬ್ಲಾಗಿಗೂ ದಸರಾ / ಆಯುಧ ಪೂಜೆ / ವಿಜಯದಶಮಿಯ ಹೋಲ್ಸೇಲ್ ಶುಭಾಶಯಗಳು.

    ೩ ಹಾಸ್ಯದ ಬಾಂಬುಗಳು ಸಿಡಿಸಿದ ನಗೆ ಹೊನಲು, ಹಬ್ಬದ ಖುಷಿಯನ್ನ ರಂಗೀನ್ ಮಾಡಿತು. ಒಳ್ಳೇ ಚೇತೋಹಾರಿ ಚುಚ್ಚುಮದ್ದಿಗಾಗಿ ಧನ್ಯವಾದಗಳು.

    ReplyDelete
  3. ಹಹಹಹಹ....ಹಾಸ್ಯದ ಹೊನಲು ದೀಪಾಲಂಕೃತ ನವರಾತ್ರಿ ದಸರಾ ಉತ್ಸವ...ಸೂಪರ್ ಡಾಕ್ಟ್ರೇ ಹಳೆತನ್ನು ನೆನಪಿಸಿ ಆ ದಿನಗಳನ್ನು ಮೆಲುಕುಹಾಕೋಹಾಗೆ ಮಾಡಿದ್ದಕ್ಕೆ...

    ReplyDelete
  4. ಡಾಕ್ಟ್ರೆ..
    ನಿಮಗೂ ದಸರಾ ಹಬ್ಬದ ಶುಭಾಶಯಗಳು..

    ಒಳ್ಳೆ ಹನಿ ಚಟಾಕಿಗಳು... ಹ್ಹಾ..ಹ್ಹಾ..ಹ್ಹಾ.. !!

    ReplyDelete
  5. ಗ೦ಭೀರ ಹಾಸ್ಯಗಳು. ಅಭಿನ೦ದನೆಗಳು ಡಾ.ಸರ್. ತಮಗೂ ಮತ್ತು ಕುಟು೦ಬವರ್ಗದವರಿಗೂ ವಿಜಯದಶಮಿಯ ಶುಭಾಶಯಗಳು.

    ಅನ೦ತ್

    ReplyDelete
  6. ಹ್ಹ ಹ್ಹ್ಹ ಹ್ಹ್, ಇದೇ ಚೆನ್ನಾಗಿರುವ ಪ್ರತಿಕ್ರಿಯೆ ಅಲ್ವಾ ಸರ್ :) :)

    ReplyDelete
  7. ಹ್ಹ ಹ್ಹ್ಹ ಹ್ಹ ಹ್ಹ daktre...

    ReplyDelete

Note: Only a member of this blog may post a comment.